ಋಷಿ ಪಂಚಮಿಯಿಂದ ನವರಾತ್ರಿವರೆಗೆ.. ಸೆಪ್ಟೆಂಬರ್‌ನ ವ್ರತ, ಹಬ್ಬಹರಿದಿನಗಳು ಯಾವೆಲ್ಲ?

By Suvarna News  |  First Published Aug 24, 2022, 11:10 AM IST

10 ದಿನಗಳ ಹಬ್ಬ ಗಣೇಶ ಮುಂದುವರಿಯುತ್ತಿರುವಂತೆಯೇ ಸೆಪ್ಟೆಂಬರ್‌ನಲ್ಲಿ ಬರುವ ಮೊದಲ ಹಬ್ಬ ಋಷಿ ಪಂಚಮಿ. ಅದಾದ ಬಳಿಕ ಹಲವು ವಿಶೇಷ ವ್ರತ, ಆಚರಣೆಗಳು ಬರುತ್ತವೆ. ಅವು ಯಾವೆಲ್ಲ ನೋಡೋಣ. 


ಸೆಪ್ಟೆಂಬರ್ ತಿಂಗಳು ಸನ್ನಿಹಿತವಾಗಿದೆ. ಇಂಗ್ಲಿಷ್ ಕ್ಯಾಲೆಂಡರ್ ಪ್ರಕಾರ ಸೆಪ್ಟೆಂಬರ್ ವರ್ಷದ ಒಂಬತ್ತನೇ ತಿಂಗಳು. ಚಾತುರ್ಮಾಸದಲ್ಲಿ ಎರಡನೇ ಮಾಸ. ಈ ವರ್ಷ ಸೆಪ್ಟೆಂಬರ್‌ನಲ್ಲಿ ಅನೇಕ ದೊಡ್ಡ ಹಬ್ಬಗಳು ಮತ್ತು ಉಪವಾಸಗಳು ಬರಲಿವೆ. ಈ ತಿಂಗಳಾಂತ್ಯಕ್ಕೆ ಭಾದ್ರಪದ ಮಾಸ ಆರಂಭವಾಗಿ ಸೆಪ್ಟೆಂಬರ್ ತಿಂಗಳ ಬಹುತೇಕ ಅದೇ ನಡೆಯಲಿದೆ.  ಭಾದ್ರಪದ ಆರಂಭದಲ್ಲಿಯೇ ಗೌರಿ, ಗಣೇಶ ಹಬ್ಬ ಇರಲಿದೆ. ಅದು ಆಗಸ್ಟ್‌ನ ಕೊನೆಯಲ್ಲಿ ಬರಲಿದೆ. ಆದರೂ ಗಣೇಶ ಚತುರ್ಥಿಯನ್ನು 10 ದಿನಗಳ ಕಾಲ ಆಚರಿಸುವುದರಿಂದ ಸೆಪ್ಟೆಂಬರ್‌ನ ಮೊದಲ ವಾರದುದ್ದಕ್ಕೂ ಗಣೇಶನ ಹಬ್ಬದ ಸಂಭ್ರಮ ಮುಂದುವರಿಯಲಿದೆ. ಇದಲ್ಲದೆ, ಸೆಪ್ಟೆಂಬರ್ 1ರಂದು  ಋಷಿ ಪಂಚಮಿ ಆಚರಿಸಲಾಗುತ್ತದೆ. ಅಲ್ಲಿಂದ ಆರಂಭವಾಗುವ ವ್ರತಗಳು, ಉಪವಾಸ ಆಚರಣೆಗಳು, ಹಬ್ಬಗಳ ಸಂಪೂರ್ಣ ಪಟ್ಟಿ ಇಲ್ಲಿದೆ. 

ಸೆಪ್ಟೆಂಬರ್ 2022ರ ಹಬ್ಬದ ಪಟ್ಟಿ 

Tap to resize

Latest Videos

1 ಸೆಪ್ಟೆಂಬರ್ (ಗುರುವಾರ) - ಋಷಿ ಪಂಚಮಿ, ಲಲಿತಾ ಷಷ್ಠಿ
2 ಸೆಪ್ಟೆಂಬರ್ (ಶುಕ್ರವಾರ) - ಸೂರ್ಯ ಷಷ್ಟಿ, ಸಂತಾನ ಸಪ್ತಮಿ, ಬಡಿ ಸತಮ್
4 ಸೆಪ್ಟೆಂಬರ್ (ಭಾನುವಾರ) - ಶ್ರೀ ರಾಧಾಷ್ಟಮಿ, ಸ್ವಾಮಿ ಹರಿದಾಸ್ ಜಯಂತಿ
5 ಸೆಪ್ಟೆಂಬರ್ (ಸೋಮವಾರ) - ಶಿಕ್ಷಕರ ದಿನ
6 ಸೆಪ್ಟೆಂಬರ್ (ಮಂಗಳವಾರ) - ಪರಿವರ್ತಿನಿ ಏಕಾದಶಿ
7 ಸೆಪ್ಟೆಂಬರ್ (ಬುಧವಾರ) - ಜಲ್ಜುಲ್ನಿ ಏಕಾದಶಿ (ವೈಷ್ಣವ)

ಮುಂಬೈನ ಅತೀ ಶ್ರೀಮಂತ ಗಣೇಶನಿಗೆ ಬಹುಕೋಟಿ ಮೊತ್ತದ ವಿಮೆ

9 ಸೆಪ್ಟೆಂಬರ್ (ಶುಕ್ರವಾರ) - ಅನಂತ ಚತುರ್ದಶಿ, ಗಣಪತಿ ಬಪ್ಪ ವಿಸರ್ಜನೆ
ಸೆಪ್ಟೆಂಬರ್ 10 (ಶನಿವಾರ) - ಪಿತೃ ಪಕ್ಷ ಪ್ರಾರಂಭವಾಗುತ್ತದೆ, ಶ್ರಾದ್ಧ ಪ್ರಾರಂಭವಾಗುತ್ತದೆ, ಪೂರ್ಣಿಮಾ ಉಪವಾಸ
17 ಸೆಪ್ಟೆಂಬರ್ (ಶನಿವಾರ) - ಅಶೋಕಾಷ್ಟಮಿ
21 ಸೆಪ್ಟೆಂಬರ್ (ಬುಧವಾರ) - ಇಂದಿರಾ ಏಕಾದಶಿ
25 ಸೆಪ್ಟೆಂಬರ್ (ಭಾನುವಾರ) - ಸರ್ವ ಪಿತೃ ಅಮಾವಾಸ್ಯೆ, ಶ್ರಾದ್ಧ ಕೊನೆಗೊಳ್ಳುತ್ತದೆ
26 ಸೆಪ್ಟೆಂಬರ್ (ಶುಕ್ರವಾರ) - ಶರದ್ ನವರಾತ್ರಿ ಆರಂಭ, ಘಟಸ್ಥಾಪನೆ, ಮಹಾರಾಜ ಅಗ್ರಸೇನ್ ಜಯಂತಿ

ವಿವರ ನೋಡೋಣ..
ಗಣೇಶ ಉತ್ಸವ 2022 - 10 ದಿನಗಳ ಗಣಪತಿ ಹಬ್ಬವು 31 ಆಗಸ್ಟ್ 2022 ರಿಂದ ಪ್ರಾರಂಭವಾಗುತ್ತಿದೆ ಮತ್ತು 9 ಸೆಪ್ಟೆಂಬರ್ 2022ರಂದು ಮುಕ್ತಾಯಗೊಳ್ಳಲಿದೆ. ಅಲ್ಲಿಯವರೆಗೆ ಗಣಪತಿ ಪ್ರತಿಷ್ಠಾಪನೆ ಮಾಡಿದವರು ಪ್ರತಿ ದಿನ ಗಣೇಶನಿಗೆ ಪೂಜೆ ಮಾಡುತ್ತಾ ಜನರ ದರ್ಶನಕ್ಕಾಗಿ ಇಡಬಹುದು. 

ಪಿತೃ ಪಕ್ಷ 2022 - ಪ್ರತಿ ವರ್ಷ ಪಿತೃ ಪಕ್ಷವು ಭಾದ್ರಪದ ಮಾಸದ ಹುಣ್ಣಿಮೆಯಿಂದ ಪ್ರಾರಂಭವಾಗುತ್ತದೆ ಮತ್ತು ಅಶ್ವಯುಜ ಮಾಸದ ಅಮಾವಾಸ್ಯೆಯವರೆಗೆ ಇರುತ್ತದೆ. ಈ ವರ್ಷ ಪಿತೃ ಪಕ್ಷವು 10ನೇ ಸೆಪ್ಟೆಂಬರ್ 2022ರಿಂದ ಪ್ರಾರಂಭವಾಗುತ್ತದೆ ಮತ್ತು 25ನೇ ಸೆಪ್ಟೆಂಬರ್ 2022ರಂದು ಕೊನೆಗೊಳ್ಳುತ್ತದೆ. ಈ ಸಮಯವು ಪಿತೃ ದೋಷವನ್ನು ತೆಗೆದುಹಾಕಲು ಉತ್ತಮ ಸಮಯವಾಗಿದೆ. ಹಾಗಾಗಿ, ಜನರು ಹೆಚ್ಚಾಗಿ ದಾನ, ಪಿತೃಗಳ ಆತ್ಮಕ್ಕೆ ಸಂತೋಷ ಕೊಡುವ ಕೆಲಸದಲ್ಲಿ ತೊಡಗುತ್ತಾರೆ.

ಗಣೇಶ ಚತುರ್ಥಿ 2022: ಇಲ್ಲಿ ಮಾತ್ರ ನೀವು ನರ ಮುಖ ಗಣೇಶನ ದರ್ಶನ ಮಾಡ್ಬೋದು!

ನವರಾತ್ರಿ 2022 - ಹಿಂದೂಗಳ ದೊಡ್ಡ ಹಬ್ಬವಾದ ನವರಾತ್ರಿ ಸೆಪ್ಟೆಂಬರ್ 26ರಿಂದ ಪ್ರಾರಂಭವಾಗುತ್ತದೆ. ನವರಾತ್ರಿಯಲ್ಲಿ ಒಂಬತ್ತು ದಿನಗಳ ಕಾಲ ಮಾ ದುರ್ಗೆಯ ಒಂಬತ್ತು ರೂಪಗಳನ್ನು ಪೂಜಿಸಲಾಗುತ್ತದೆ. ಶರತ್ಕಾಲದಲ್ಲಿ ಬರುವ ಈ ನವರಾತ್ರಿ ದೇಶಾದ್ಯಂತ ದೊಡ್ಡ ಆಚರಣೆ ಕಾಣುತ್ತದೆ. 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!