ಶನಿವಾರ ಹುಟ್ಟಿದವರ ಮೇಲೆ ಶನಿದೇವರಿಗೆ ಬಹಳ ಪ್ರೀತಿ. ಆದ್ದರಿಂದ ಶನಿದೇವರ ಕೃಪೆಯೂ ಇವರ ಮೇಲಿರುತ್ತೆ, ಅವಕೃಪೆಯೂ ಇರುತ್ತೆ.
ಶನಿವಾರ ಜನಿಸಿದವರಿಗೆ ಹುಟ್ಟಿನಿಂದಲೇ ಶನಿಯು ಬೆಂಬತ್ತಿರುವುದರಿಂದ ಇವರ ಜೀವನ ಸುಖ- ದುಃಖಗಳ ಸಮಭಾವದಿಂದ ಕೂಡಿರುತ್ತದೆ. ಸಾಡೇಸಾತ್ ಶನಿ ಆವರಿಸಿದ ಸಮಯದಲ್ಲಿ ತಾನು ಯಾರನ್ನು ಆವರಿಸಿದ್ದೇನೋ ಅವರನ್ನು ಆತ ಸಾಯಲು ಬಿಡುವುದೇ ಇಲ್ಲ ಎಂಬ ಮಾತನ್ನು ನೀವು ಕೇಳಿರುತ್ತೀರಿ. ಯಾಕೆಂದರೆ ಆತನನ್ನು ಸಾಯಲು ಬಿಟ್ಟರೆ ಶನಿಯು ಕಾಡುವುದು ಯಾರನ್ನು? ಹೀಗಾಗಿ ಯಮನನ್ನು ಆ ಜಾತಕನ ಬಳಿ ಬರಲು ಬಿಡುವುದಿಲ್ಲ ಶನಿ. ಶನಿವಾರ ಹುಟ್ಟಿದವರನ್ನೂ ಹಾಗೆಯೇ. ಇವರು ಶನಿಯ ಕೃಪೆಗೂ ಪಾತ್ರರಾದವರು. ಹಾಗೆಯೇ ತಪ್ಪಿ ನಡೆದಾಗ ಇವರನ್ನು ಶಿಕ್ಷಿಸುವವನೂ ಶನಿಯೇ. ಒಂದು ರೀತಿಯಲ್ಲಿ ಈ ವಾರ ಹುಟ್ಟಿದವರಿಗೆ ಶನಿ ಟಫ್ ಬಾಸ್.
ಇವರು ವೃತ್ತಿ ಕ್ಷೇತ್ರದಲ್ಲಿ ಯಾವಾಗಲೂ ಕಷ್ಟದ ದಿನಗಳನ್ನು ದೂಡುತ್ತಿರುತ್ತಾರೆ. ಈ ಕೆಲಸ ಬಿಡಬೇಕು, ಇದು ತನಗೆ ಸರಿಹೋಗೋಲ್ಲ. ಇದನ್ನು ಬಿಟ್ಟು ಬೇರೆ ಬ್ಯುಸಿನೆಸ್ ಮಾಡ್ತೀನಿ ಎಂದೆಲ್ಲ ಇವರು ಹೇಳಬಹುದು. ಆದರೆ ದಿನ ಬೆಳಗಾದರೆ ಮತ್ತೆ ಎದ್ದು ಅದೇ ಕೆಲಸಕ್ಕೆ ಹೋಗುತ್ತಿರುತ್ತಾರೆ. ತಲೆತಿರುಕ ಬಾಸ್‌ಗಳ ಕೈಯಲ್ಲಿ ದಿನ ದೂಡುವುದು ಇವರ ಹಣೆಬರಹ. ಹಾಗಂತ ಪ್ರತಿಭಟಿಸಲಾರರು. ಪ್ರತಿಭಟಿಸಿದರೆ ಕೆಲಸ ಹೋದೀತು ಎಂಬ ಭಯದಲ್ಲಿ ಬದುಕುತ್ತಿರುತ್ತಾರೆ. ಆದರೆ ಪ್ರತಿಭಟಿಸುವ ದಿನವೂ ಬಂದೇ ಬರುತ್ತದೆ. ಆಗ ಇವರ ರೋಷಾವೇಶಕ್ಕೆ ಇವರ ಬಾಸ್ ಮಾತ್ರವಲ್ಲ ಎಲ್ಲರೂ ಬೆಚ್ಚುವರು. ಇವರ ತಾಕತ್ತು ಒಂದಲ್ಲ ಒಂದು ದಿನ ಎಲ್ಲರಿಗೂ ಗೊತ್ತಾಗಿಯೇ ಆಗುವುದು.
ಅಪಾಯಕಾರಿ ವಿಷಯೋಗದ ಬಗ್ಗೆ ನಿಮಗೆಷ್ಟು ಗೊತ್ತು? ...
ಹಾಗೆಯೇ ಇವರು ಕುಟುಂಬದಲ್ಲಿ ಕೂಡ ತುಂಬ ಯಾತನೆಯನ್ನು ಸಹಿಸಿಕೊಳ್ಳುವವರು. ಒಳ್ಳೆಯ ಗಂಡ ಅಥವಾ ಹೆಂಡತಿ ಸಿಕ್ಕಿದರೆ ಇವರು ಅದೃಷ್ಟವಂತರು. ಆದರೆ ಹೆಚ್ಚಾಗಿ ಇವರಿಗೆ ಪೀಡಿಸುವ ಗಂಡ, ಕಾಟ ಕೊಡುವ ಹೆಂಡತಿ ಸಿಗುತ್ತಾರೆ. ಹೀಗಾಗಿ ಇವರ ಕುಟುಂಬ ಸಂಕಷ್ಟಮಯವಾಗಿರುತ್ತದೆ. ಇನ್ನು ಮಕ್ಕಳು ಕೂಡ ಚೆನ್ನಾಗಿ ವಿದ್ಯೆ ಕಲಿತು ಒಳ್ಳೆಯ ಕೆಲಸಕ್ಕೆ ಹೋಗಿ ಹಣ- ಹೆಸರು ಮಾಡಲಿ ಎಂದು ಇವರು ಬಯಸಿದರೆ, ಮಕ್ಕಳು ಅದನ್ನೇನೂ ಮಾಡದೆ ಇನ್ನೇನೋ ಮಾಡುತ್ತಿರುತ್ತಾರೆ. ಇದು ಇವರನ್ನು ತುಂಬಾ ಹರ್ಟ್ ಮಾಡುತ್ತದೆ. ಕೌಟುಂಬಿಕವಾಗಿ ಇವರು ಮಾನಸಿಕವಾಗಿ ತುಂಭಾ ನೊಂದುಕೊಳ್ಳುವ ಸಾಧ್ಯತೆಗಳಿವೆ. ದಾಯಾದಿಗಳು ಮೋಸ ಮಾಡಬಹುದು. ಸಿಗಬೇಕಾದ ಆಸ್ತಿಯ ಪಾಲು ಸಿಗದೆ ಹೋಗಬಹುದು. ಆಗ ಅನ್ಯಾಯವನ್ನು ನುಂಗಿಕೊಂಡು ನೀರು ಕುಡಿ ವಾಪಸ್ ಬರುತ್ತಾರೆಯೇ ಹೊರತು ನ್ಯಾಯವಾಗಿ ನನಗೆ ಸಿಗಬೇಕಾದ್ದು ಸಿಗುತ್ತಿಲ್ಲವಲ್ಲ ಯಾಕೆ ಎಂಬಂಥ ಪ್ರಶ್ನೆಗಳನ್ನು ಇವರು ಕೇಳಲಾರರು. ಆದ್ದರಿಂದ ಇವರು ಕೌಟುಂಬಿಕವಾಗಿಯೂ ಸಫರರ್ಸ್.
ಕುಲದೇವತೆಯನ್ನು ಆರಾಧಿಸಿ, ನಿಮ್ಮನ್ನು ಕಾಪಾಡಲು ಅದೇ ಸಾಕು! ...
ಆದರೆ ಇವರು ತಮಗೆ ಒದಗಿಸಿದ ಕೆಲಸಕ್ಕೆ ನ್ಯಾಯ ಸಲ್ಲಿಸುವವರು. ಇವರಿಗೆ ಹೇಳಿದ ಕೆಲಸ ಆಯಿತೆಂದೇ ಲೆಕ್ಕ. ಆದ್ದರಿಂದ ಇವರನ್ನು ಯಾವ ಕಾಲಕ್ಕೂ ನಂಬಬಹುದು. ಇವರಲ್ಲಿ ಗುಟ್ಟು ಉಳಿಯುತ್ತದೆ. ಆದ್ದರಿಂದ ಗುಟ್ಟುಗಳನ್ನು ಹೇಳಿಕೊಳ್ಳಬಹುದು. ಇವರು ತಮ್ಮನ್ನು ನಂಬಿದವರಿಗೆ ಪ್ರಾಣ ಕೊಡಬಲ್ಲರು. ತಮ್ಮ ಪ್ರಾಣ ಕೊಟ್ಟಾದರೂ ಅವರನ್ನು ರಕ್ಷಿಸಬಲ್ಲರು. ಆದ್ದರಿಂದ ಇವರನ್ನು ಸಂಗಾತಿಯಾಗಿ ಹೊಂದುವವರು ತುಂಬಾ ಅದೃಷ್ಟವಂತರು. ಆದರೆ ಇವರನ್ನು ದುರ್ಬಳಕೆ ಮಾಡಿಕೊಳ್ಳಬಾರದು ಅಷ್ಟೇ.
ಇವರು ಪ್ರೀತಿಯ ವಿಷಯದಲ್ಲಿ ಬಹಳ ಆಸಕ್ತರು, ತಮ್ಮ ಕುಟುಂಬದವರನ್ನು ತುಂಬ ಪ್ರೀತಿಸುತ್ತಾರೆ . ಹಾಗೆ ತಮ್ಮ ಪ್ರೇಮಿಗಳನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳಬಲ್ಲಂಥವರು. ಆದ್ದರಿಂದ ಇವರನ್ನು ಪ್ರೇಮಿಯಾಗಿ ಪಡೆದವರೂ ಅದೃಷ್ಟವಂತರು. ತಮ್ಮ ಸಂಗಾತಿಗಾಗಿ ಏಳು ಸಮುದ್ರ ದಾಟಿ ಹೋಗಿ ಮಲ್ಲಿಗೆ ಹೂವು ತಂದು ಕೊಡುವಂಥ ಆರಾಧಕರು. ಇವರು ದೇವಭಕ್ತರು ಕೂಡ ಹೌದು. ಇವರ ಜೀವನದ ಅನುಭವಗಳು ಇವರನ್ನು ಆಸ್ತಿಕರನ್ನಾಗಿ ಮಾಡುತ್ತವೆ. ಇವರು ಉತ್ತಮ ಸಂಸ್ಕಾರ ಪಡೆದಿರುತ್ತಾರೆ. ಆದ್ದರಿಂದ ಇವರು ಇರುವ ಮನೆಯಲ್ಲಿ ಭಜನೆ ಪೂಜೆ ಆರಾಧನೆಗಳನ್ನು ನಿರೀಕ್ಷಿಸಬಹುದು.
ಇವರು ಮುಖ್ಯವಾಗಿ ಆಂಜನೇಯನ ಆರಾಧನೆಯನ್ನು ಮಾಡಬೇಕು. ಆಂಜನೇಯನು ಶನಿಯ ಅವಕೃಪೆಯಿಂದ ಎಲ್ಲರನ್ನೂ ರಕ್ಷಿಸುವವನು. ಆಂಜನೇಯನ ಆರಾಧನೆಯಿಂದ ಶ್ರೀರಾಮನೂ ಪ್ರಸನ್ನನಾಗುತ್ತಾನೆ. ಆಂಜನೇಯನು ರುದ್ರಾಂಶ ಸಂಭೂತನಾಗಿರುವುದರಿಂದ, ಈಶ್ವರನೂ ಪ್ರಸನ್ನನಾಗುತ್ತಾನೆ. ಹನುಮಾನ್ ಚಾಲೀಸ್ ಪಠಿಸುವುದು ಇವರಿಗೆ ಶ್ರೇಯಸ್ಕರ. ಹಾಗೆ ನರಸಿಂಹ ದೇವರ ಆರಾಧನೆಯನ್ನೂ ಮಾಡಬಹುದು. ಶನಿದೇವರ ದೇವಸ್ಥಾನ ಹಾಗೂ ಆಂಜನೇಯನ ದೇವಸ್ಥಾನಗಳಿಗೆ ಆಗಾಗ ಭೇಟಿ ಕೊಡುವುದು ಹಾಗೂ ಪೂಜೆಯನ್ನು ಸಲ್ಲಿಸುವುದರಿಂದ ದೇವರ ಕೃಪೆಗೆ ಪಾತ್ರರಾಗಬಹುದು.
ಈ ನಾಲ್ಕು ರಾಶಿಯವರದ್ದು ಆಕರ್ಷಕ ವ್ಯಕ್ತಿತ್ವ.... ನಿಮ್ಮ-ನಿಮ್ಮವರ ರಾಶಿ ಇದರಲ್ಲಿದೆಯಾ? ...