ಮಳೆಯ ನಡುವೆ ಗಣೇಶೋತ್ಸವ ಆಚರಿಸಿದ ಕೊಡಗಿನ ಜನತೆ: ಈಡುಗಾಯಿ ಅರ್ಪಿಸಿ ಹರಕೆ ತೀರಿಸಿದ ಭಕ್ತರು

By Govindaraj S  |  First Published Sep 7, 2024, 7:26 PM IST

ಇಂದು ನಾಡಿನ್ನೆಲ್ಲೆಡೆ ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯಲ್ಲೂ ಗಣೇಶೋತ್ಸವದ ಸಂಭ್ರಮ ಮನೆ ಮಾಡಿದೆ. ಎಲ್ಲೆಡೆ ವಿಘ್ನವಿನಾಯಕನನ್ನು ಕೂರಿಸಿ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. 


ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು (ಸೆ.07): ಇಂದು ನಾಡಿನ್ನೆಲ್ಲೆಡೆ ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯಲ್ಲೂ ಗಣೇಶೋತ್ಸವದ ಸಂಭ್ರಮ ಮನೆ ಮಾಡಿದೆ. ಎಲ್ಲೆಡೆ ವಿಘ್ನವಿನಾಯಕನನ್ನು ಕೂರಿಸಿ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ಹಾಗೆಯೇ ಮಡಿಕೇರಿಯ ಐತಿಹಾಸಿಕ ಕೋಟೆ ಮಹಾಗಣಪತಿ ದೇವಾಲಯದಲ್ಲೂ ವಕ್ರತುಂಡನಿಗೆ ವಿಶೇಷ ಪೂಜೆ ಸಲ್ಲಿಸಲಾಗಿದೆ. ಕೊಡಗಿನ ರಾಜರು ಪ್ರತಿಷ್ಠಾಪಿಸಿದ್ದ ಈ ಗಣೇಶನಿಗೆ ಜನರು ಹಿಂದಿನಿಂದಲೂ ಈಡುಗಾಯಿ ಅರ್ಪಿಸಿ ಹರಕೆ ತೀರಿಸುತ್ತಾರೆ. ಈಡುಗಾಯಿ ಅರ್ಪಿಸಿದರೆ ಇಷ್ಟಾರ್ಥ ಸಿದ್ದಿಸುವುದು ಎನ್ನುವ ನಂಬಿಕೆ ಇರುವುದರಿಂದ ಪ್ರತೀ ವರ್ಷ ಗಣೇಶ ಚತುರ್ಥಿಯಂದು ಸಾವಿರಾರು ಭಕ್ತರು ಲಕ್ಷಾಂತರ ತೆಂಗಿನ ಕಾಯಿಯನ್ನು ತಮ್ಮ ಶಕ್ತಾನುಸಾರ ಈಡುಗಾಯಿ ಹಾಕಿ ಒಳಿತು ಮಾಡು ಎಂದು ಬೇಡಿ ಪ್ರಾರ್ಥಿಸುತ್ತಾರೆ. 

Latest Videos

undefined

ಅಂತೆಯೇ ಶನಿವಾರವೂ ಬೆಳಿಗ್ಗೆ ಐದು ಗಂಟೆಯಿಂದಲೇ ಸರದಿಯಲ್ಲಿ ನಿಂತು ಭಕ್ತರು ವಿಘ್ನ ವಿನಾಶಕನಿಗೆ ಕೈಮುಗಿದು ನಮಿಸಿ ಬೇಡಿದರು. ಬೆಳಿಗ್ಗೆ ಐದು ಗಂಟೆಯಿಂದ ನಿರಂತರ ಪೂಜಾ ಕೈಂಕರ್ಯ ನೆರವೇರಿದವು. ದೇವಾಲಯಕ್ಕೆ ಆಗಮಿಸಿದ ಭಕ್ತರು ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿ ತೆರಳುತ್ತಿದರು. ಈ ಸಂದರ್ಭ ಮಾತನಾಡಿದ ದೇವಾಲಯದ ಅರ್ಚಕ ಪ್ರಕಾಶ್ ಅವರ ನೇತೃತ್ವದಲ್ಲಿ ವಿಶೇಷ ಪೂಜಾ ವಿಧಿ ವಿಧಾನಗಳು ನೆರವೇರಿದವು. ಈ ಸಂದರ್ಭ ಮಾತನಾಡಿದ ಅವರು ನಾಲ್ಕು ತಲೆಮಾರುಗಳಿಂದ ನಮ್ಮ ಕುಟುಂಬ ಇಲ್ಲಿ ಪೂಜೆ ಸಲ್ಲಿಸುತ್ತಿದೆ. ತಮ್ಮ ಮುತ್ತಾತನ ಕಾಲದಲ್ಲಿ ಅವರು ಇಲ್ಲಿ ಪೂಜೆ ಮಾಡುತ್ತಿದ್ದಾಗ ಯಾವುದೇ ಕಾರ್ಯಕ್ಕೆ ಹೊರಟಾಗ ಜಾಗ ಇಲ್ಲಿ ಬಂದು ನಮಿಸಿ ಹೋಗುತ್ತಿದ್ದರು ಎಂದು ನಮ್ಮ ತಾತ ಹೇಳುತ್ತಿದ್ದರು. 

ಇಂದಿಗೂ ಜನರು ತಮ್ಮ ಇಷ್ಟಾರ್ಥಗಳು ಈಡೇರಲೆಂದು ಪ್ರಾರ್ಥಿಸಿ ಹರಕೆ ಹೊರುತ್ತಾರೆ. ಅವುಗಳು ಈಡೇರುತ್ತವೆ. ಬಳಿಕ ಭಕ್ತರು ಬಂದು ಹೀಗೆ ಗಣೇಶ ಚತುರ್ಥಿಯಂದು ಬಂದು ಈಡುಗಾಯಿ ಅರ್ಪಿಸಿ ಪೂಜೆ ಸಲ್ಲಿಸುತ್ತಾರೆ. ಕೆಲವರು ಐದು ಈಡುಗಾಯಿ ಅರ್ಪಿಸಿದರೆ ಎನ್ನು ಕೆಲವರು ನೂರು, ಮತ್ತೆ ಕೆಲವರು ಸಾವಿರಾರು ತೆಂಗಿನಕಾಯಿಗಳನ್ನು ಈಡುಗಾಯಿ ಅರ್ಪಿಸುತ್ತಾರೆ ಎಂದಿದ್ದಾರೆ. ಕಳೆದ ಐದು ತಿಂಗಳಿನಿಂದ ಕೊಡಗು ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆ ಇತ್ತೀಚೆಗೆ ಒಂದಿಷ್ಟು ಬಿಡುವು ನೀಡಿತ್ತು. ಆದರೆ ಮತ್ತೆ ಐದು ದಿನಗಳಿಂದ ಸುರಿಯುತ್ತಿರುವ ವರುಣ ಶನಿವಾರ ಬೆಳಿಗ್ಗೆಯಿಂದ ಮತ್ತಷ್ಟು ತೀವ್ರಗೊಂಡಿದೆ. ಇದು ಗಣೇಶ ಪ್ರತಿಷ್ಠಾಪನಾ ಸಂಭ್ರಮಕ್ಕೆ ತಣ್ಣೀರು ಎರಚಿದಂತೆ ಆಗಿದೆ. ಕೊಡಗು ಜಿಲ್ಲೆಯಲ್ಲಿ ಹುಬ್ಬ ಮಳೆ ಅಬ್ಬರಿಸುತ್ತಿದ್ದು ಜನರು ಹೊರಗೆ ಬರದಂತೆ ಆಗಿದೆ. 

ಅಪ್ಪನಾದ ಖುಷಿಯಲ್ಲಿ ಟಾಲಿವುಡ್ ಸ್ಟಾರ್ ನಿತಿನ್... ಆದರೆ ನಟಿ ಸಮಂತಾ ರಿಯಾಕ್ಷನ್ ಹೇಗಿತ್ತು ಗೊತ್ತಾ?

ಮಡಿಕೇರಿ ಸೇರಿದಂತೆ ಸುತ್ತಮುತ್ತಲ ವ್ಯಾಪ್ತಿಯಲ್ಲಿ ಸಾಕಷ್ಟು ಮಳೆ ಸುರಿಯುತ್ತಿರುವುದರಿಂದ ಜನರು ಮನೆಯೊಳಗೆ ಇರುವಂತೆ ಆಗಿದೆ. ಸಾರ್ವಜನಿಕ ಗಣೇಶೋತ್ಸವ ಸಮಿತಿಗಳು, ಯುವಕ ಮಂಡಳಿಗಳು ಹಲವೆಡೆ ಗಣೇಶನನ್ನು ಪ್ರತಿಷ್ಠಾಪಿಸಿ ಹಬ್ಬ ಆಚರಿಸುತ್ತಿದ್ದರೂ ಸಾರ್ವಜನಿಕರು ಗಣೇಶನ ಪೂಜೆಗೆ ಸಾರ್ವಜನಿಕ ಸ್ಥಳಗಳಿಗೆ ಬಾರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಗಣೇಶ ಪೆಂಡಾಲ್ ಗಳ ಬಳಿ ಸಾರ್ವಜನಿಕರೇ ಇಲ್ಲದೆ ಬಿಕೋ ಎನ್ನುತ್ತಿವೆ. ಶುಕ್ರವಾರ ವರುಣ ಒಂದಿಷ್ಟು ಬಿಡುವು ಕೊಟ್ಟಿದ್ದ. ಆದರೆ ಶನಿವಾರ ಮಳೆ ತೀವ್ರಗೊಂಡಿರುವುದು ಸಾರ್ವಜನಿಕರು ಮತ್ತು ಗಣೇಶ ಪ್ರತಿಷ್ಠಾಪನಾ ಸಮಿತಿಗಳಿಗೆ ಬೇಸರ ತರಿಸಿದೆ. ಕಳೆದ ಕೆಲವು ವರ್ಷಗಳಲ್ಲಿ ಗೌರಿ ಗಣೇಶೋತ್ಸದ ವೇಳೆ ಮಳೆ ಕಡಿಮೆ ಇರುತಿತ್ತು. ಸಾಕಷ್ಟು ಖುಷಿ ಸಂಭ್ರಮದಿಂದ ಎಲ್ಲರೂ ಒಂದೆಡೆ ಸೇರಿ ಉತ್ಸವ ಆಚರಿಸುತ್ತಿದ್ದೆವು. ಈಗಲೂ ಒಂದಿಷ್ಟು ಮಳೆ ಕಡಿಮೆ ಇದ್ದರೆ ಒಳಿತಿತ್ತು ಎನ್ನುತ್ತಿದ್ದಾರೆ. ಏನೇ ಆದರೂ ಮಳೆಯ ನಡುವೆಯೇ ಜನರು ಗಣೇಶೋತ್ಸವ ಆಚರಿಸಿದ್ದಾರೆ.

click me!