ಏನಿದು ರಾಹು ದೋಷ? ಬುದ್ಧಿಭ್ರಮಣೆಗೂ ಕಾರಣವಾಗೋ ಈ ದೋಷಕ್ಕೇನು ಪರಿಹಾರ?

By Suvarna NewsFirst Published Jun 23, 2023, 3:39 PM IST
Highlights

ಈ ರಾಹು ಜಾತಕದಲ್ಲಿ ಮಹಾಪೀಡೆಯಾಗಿ ಕಾಡುತ್ತಾನೆ. ಜನರಿಗೆ ನಗಕಾಟವಾಗಿ ಈ ರಾಹು ಕಾಡುತ್ತಾನೆ. ಇದರಿಂದ ಆಗೋ ತೊಂದರೆ ಒಂದೆರಡಲ್ಲ. ಅದರಲ್ಲೂ ಮನಸ್ಸಿಗೆ ಸಂಬಂಧಿಸಿದ ಸಮಸ್ಯೆಗಳು ಕಾಡುತ್ತೆ. ಈ ದೋಷಕ್ಕೇನು ಪರಿಹಾರ?

- ಶ್ರೀಕಂಠ ಶಾಸ್ತ್ರಿ, ಜ್ಯೋತಿಷಿಗಳು

ಸಾಮಾನ್ಯವಾಗಿ ರಾಹು ದೋಷ ಎನ್ನುವುದು ಜನಮಾನಸದಲ್ಲಿ ಅಸ್ಪಷ್ಟವಾಗಿ ಕಾಡುವ ಯಕ್ಷಪ್ರಶ್ನೆಯಾಗಿ ಉಳಿಳು ಬಿಟ್ಟಿದೆ. ಒಂದು ಆಕಾರವೇ ಇಲ್ಲದ ರಾಹು ಜಾತಕದಲ್ಲಿ ಮಾತ್ರ ಮಹಾ ಪೀಡೆಯಾಗಿ ಕಾಡುವುದು ಸುಳ್ಳಲ್ಲ. ರಾಹು ದೋಷವೆಂದರೆ ಜನರಿಗೆ ಮಹಾಭಯ. ರಾಹುವೆಂದರೆ ಅದು ನಾಗಕಾಟ, ರಾಹುವೆಂದರೆ ವಿಷ ಭಯ, ರಾಹುವೆಂದರೆ ಬುದ್ಧಿಭ್ರಮಣೆ, ರಾಹುವೆಂದರೆ ಮಾಟಮಂತ್ರಗಳ ಪ್ರಯೋಗ ಭಯ, ರಾಹುವೆಂದರೆ ಚರ್ಮ ವ್ಯಾಧಿ ಭಯ, ರಾಹುವೆಂದರೆ ಸಂತಾನ ಪ್ರತಿಬಂಧಕ ದೋಷ, ರಾಹುವೆಂದರೆ ವಿಷ ಜಂತುಗಳ ಭಯ ಹೀಗೆ ಒಂದಲ್ಲ, ಎರಡಲ್ಲ ಹಲವು ಬಗೆಗಳಲ್ಲಿ ಈ ರಾಹು ತಲೆಕೆಡಿಸುವ ಮಹಾ ಉಗ್ರ ಗ್ರಹವಾಗಿ ಬಿಟ್ಟಿದೆ. ಅಸಲಿಗೆ ಈ ರಾಹು ಯಾರು? ರಾಹು ದೋಷ ಎಂದರೇನು? ಯಾಕೆ ಇದು ಮನುಷ್ಯರನ್ನು ಕಾಡುತ್ತದೆ? ಇದಕ್ಕೆ ಪರಿಹಾರವೇನು?  ಶಾಸ್ತ್ರಗಳು ಸೂಚಿಸುವ ಮಾರ್ಗ ಏನು? ಇತ್ಯಾದಿಗಳ ವಿಚಾರವಾಗಿ ತಿಳಿಯುವ ಪ್ರಯತ್ನ ಮಾಡೋಣ.

Latest Videos

ಯಾರು ಈ ರಾಹು..?
ದೇವ-ದಾನವರು ಸೇರಿ ಯೋಜಿಸಿದ್ದ ಸಮುದ್ರ ಮಂಥನ ಕಾಲದಲ್ಲಿ ಉತ್ಪತ್ತಿಯಾದ ಅಮೃತವನ್ನು ವಿಭಾಗಿಸಲಾಯಿತು. ಅಮೃತ ಸ್ವೀಕಾರಕ್ಕೆ ದೇವತೆಗಳು ಒಂದು ಕಡೆ, ದಾನವರು ಒಂದು ಕಡೆ ಕೂತಿದ್ದರು. ಮೊದಲು ದೇವತೆಗಳ ಸಾಲಿಗೆ ಅಮೃತ ಹಂಚಿಕೆಯಾಗುತ್ತಿತ್ತು. ಆ ಸಂದರ್ಭದಲ್ಲಿ ಸಿಂಹಿಕೇಯ ಎಂಬ ರಾಕ್ಷಸನ ಮಗನೊಬ್ಬ ದೇವತೆಗಳಿಗೆ ಕಾಣದಂತೆ ಸೂರ್ಯ-ಚಂದ್ರರ ಮಧ್ಯೆ ಬಂದು ಕೂತುಬಿಟ್ಟ. ಅಮೃತ ಬಡಿಸುತ್ತಿದ್ದ ಮೋಹಿನಿ ರೂಪದ ವಿಷ್ಣುವಿಗೆ ಸೂರ್ಯ-ಚಂದ್ರರು ಈ ರಾಕ್ಷಸ ಮಧ್ಯೆ ಪ್ರವೇಶಿಸಿ ಕೂತ ವಿಷಯವನ್ನು ತಿಳಿಸಿದರು. ಅಷ್ಟರಲ್ಲಿ ಅವರು ಎಚ್ಚೆತ್ತುಕೊಂಡು, ಅಮೃತವನ್ನು ಸೇವಿಸಿಬಿಟ್ಟರು. ಕ್ರಮವನ್ನು ತಪ್ಪಿಸಿ, ಮಧ್ಯ ಪ್ರವೇಶಿಸಿ ಬಂದು ಕುಳಿತ ತಪ್ಪಿಗೆ  ತಕ್ಷಣವೇ ವಿಷ್ಣು ತನ್ನ ಸುದರ್ಶನ ಚಕ್ರದಿಂದ ಆ ರಾಕ್ಷಸನನ್ನು ಕತ್ತರಿಸಿಬಿಟ್ಟ. ಆದರೆ ಅಮೃತ ಸೇವಿಸಿದ್ದರಿಂದ ಆ ರಾಕ್ಷಸ ಜೀವಂತವಾಗಿಯೇ ಎರಡು ಹೋಳಾಗಿಬಿಟ್ಟ. ಹೋಳಾದ ಮೇಲಿನ ಭಾಗವೇ ರಾಹುವೆಂದೂ ಕೆಳಭಾಗವೇ ಕೇತು ಗ್ರಹವೆಂದು ಇಂದು ಪೂಜಿಸಲಾಗುತ್ತಿದೆ. ದಾನವನೋರ್ವ ಅಮೃತ ಸೇವನೆಯಿಂದ ದೇವತೆಯಾಗಿಬಿಟ್ಟ.

ಕರಾಳ ಅಮಾವಾಸ್ಯೆಯಲ್ಲಿ ಹುಟ್ಟೋ ಮಕ್ಕಳಿಗೆ ಮನೋ ದೌರ್ಬಲ್ಯವೇಕೆ?

ರಾಹು ದೋಷಕಾರಿ ಯಾಕೆ?
ನವಗ್ರಹಗಳಲ್ಲಿ ರಾಹು-ಕೇತು ಎರಡನ್ನೂ ಗ್ರಹಗಳೆಂದೆ ಪೂಜಿಸುವುದುಂಟು. ಆದರೆ ಈ ಗ್ರಹಗಳಿಗೆ ಆಕಾರವಿಲ್ಲ. ವರ್ತುಲದಲ್ಲಿ ಸದಾ 180 ಡಿಗ್ರಿ ಅಂತರದಲ್ಲಿರುವ ಛಾಯಾ ಬಿಂದುಗಳೇ ಈ ರಾಹು ಕೇತು. ಜಾತಕದಲ್ಲೂ ನಾವು ರಾಹುವಿನಿಂದ 180 ಡಿಗ್ರಿ ಅಂತರದಲ್ಲಿ ಕೇತುವನ್ನು ಕಾಣುತ್ತೇವೆ. ಇಂಥ ರಾಹು ಕೇತುಗಳು ಜಾತಕದಲ್ಲಿ ದು:ಸ್ಥಾನದಲ್ಲಿದ್ದರೆ ಮಹಾ ಕಂಟಕ ಫಲವನ್ನು ತರುತ್ತಾರೆ.

ರಾಹು ಓರ್ವ ಪಾಪಗ್ರಹನಾದ್ದರಿಂದ ಕಂಟಕಗಳು ಹೆಚ್ಚು. ಶನಿಯ ಹಾಗೆಯೇ ರಾಹುವನ್ನು ದುಷ್ಟ ಗ್ರಹ ಎಂದು ಶಾಸ್ತ್ರಕಾರರು ಗುರ್ತಿಸಿದ್ದಾರೆ. ರಾಹುವಿನಿಂದಲೇ ಸರ್ಪ ದೋಷವನ್ನು ಗುರ್ತಿಸುವುದು. ಈ ಸರ್ಪ ದೋಷ ಮನುಷ್ಯರ ಏಳಿಗೆಗೆ ಮಹಾ ಅಡ್ಡಿಯಾಗಿದೆ. ಹಲವು ಬಗೆಯ ಸರ್ಪ ದೋಷಗಳಿದ್ದರೂ ಪ್ರಧಾನವಾಗಿ ಎರಡು ರೀತಿಯಲ್ಲಿ ಗುರ್ತಿಸುತ್ತಾರೆ.

1. ಎಲ್ಲಾ ಗ್ರಹಗಳು ರಾಹು-ಕೇತುಗಳ ಮಧ್ಯೆ ಇದ್ದರೆ ಅದನ್ನು ಕಾಲಸರ್ಪ ದೋಷವೆಂದು ಹೇಳುತ್ತಾರೆ. ರಾಹುವಿನಿಂದ ಕೇತು ಇರುವ ರಾಶಿಗಳ ಮಧ್ಯದಲ್ಲಿ ಎಲ್ಲಾ ಗ್ರಹಗಳು ಬಂದರೆ ಅದನ್ನು ಅಪಸವ್ಯ ಕಾಳಸರ್ಪ ದೋಷ ಎನ್ನುತ್ತಾರೆ.

2.ಕೇತುವಿನಿಂದ ರಾಹುವಿನ ಮಧ್ಯದಲ್ಲಿ ಗ್ರಹಗಳಿದ್ದರೆ, ಅದನ್ನು ಸವ್ಯ ಕಾಲ ಸರ್ಪದೋಷ ಎನ್ನುತ್ತಾರೆ. ಹೀಗಿರುವಾಗ ಬರುವ ತೊಂದರೆಗಳು ಅಷ್ಟಿಷ್ಟಲ್ಲ. ಇದಲ್ಲದೆ ಲಗ್ನ ಭಾವದಿಂದ 12 ನೇ ಭಾವದ ವರೆಗೆ ರಾಹು - ಕೇತುಗಳು ಇರುವ ಸ್ಥಾನಗಳ ಆಧಾರದ ಮೇಲೂ ತೊಂದರೆಗಳು ಇರಲಿವೆ.

ರಾಹು ಕಂಟಕಗಳು
ರಾಹು-ಕೇತುಗಳು ಲಗ್ನ ಹಾಗೂ 7 ನೇ ಸ್ಥಾನದಲ್ಲಿರುವತಾಗ ದಾಂಪತ್ಯ ಸಮಸ್ಯೆಗಳನ್ನೂ
2 - 8 ಸ್ಥಾನಗಳಲ್ಲಿ ಆರ್ಥಿಕ ಮುಗ್ಗಟ್ಟು, ಪಿತ್ರಾರ್ಜಿತ ಆಸ್ತಿ ಸಮಸ್ಯೆಗಳನ್ನೂ, ಆಸ್ತಿ ವಿವಾದಗಳನ್ನೂ
3 - 9 ನೇ ಮನೆಯಲ್ಲಿ ದಾಯಾದಿ ಕಲಹವನ್ನೂ, ಆಗಂತುಕ ಸಮಸ್ಯೆಗಳನ್ನೂ
4 - 10 ನೇ ಮನೆಗಳಲ್ಲಿರುವಾಗ ಕೌಟುಂಬಿಕ ಹಾಗೂ ಗೃಹ ನಿರ್ಮಾಣ, ಭೂಮಿ, ವಾಹನ ಸಂವಬಂಧಿ ತೊಡಕುಗಳನ್ನೂ
5 - 11 ನೇ ಮನೆಯಲ್ಲಿರುವಾಗ ಸಂತಾನ ಸಮಸ್ಯೆಗಳು, ಅನಾರೋಗ್ಯ, ಉದರ ಬಾಧೆ ಇತ್ಯಾದಿ ಸಮಸ್ಯೆಗಳನ್ನೂ
6 - 12 ದುಷ್ಟರ ಸಹವಾಸ, ಶತ್ರುಗಳ ಹಿಂಸೆ, ಕೃತ್ರಿಮತೆಗಳು, ಭರಿಸಲಾರದ ನಷ್ಟಗಳಂಥ ಕಷ್ಟಗಳನ್ನು ಕೊಡುತ್ತಾರೆ.

ಪಿತೃ ದೋಷಕ್ಕೇನು ಪರಿಹಾರ?

ಇದಲ್ಲದೆ ದು:ಸ್ಥಾನಗಳಿದ್ದಾಗ ಹೃದಯ ರೋಗವನ್ನೂ, ಕುಷ್ಠರೋಗದಂಥ ಬಾಧೆಯನ್ನೂ, ಬುದ್ಧಿ ಭ್ರಮಣೆಯನ್ನೂ, ವಿಷ ಭಯವನ್ನೂ, ಕೃತ್ರಿಮ ಬಾಧೆಗಳನ್ನೂ, ಮಾಟ-ಮದ್ದು ಇತ್ಯಾದಿ ದೃಷ್ಟಿ ದೋಷಗಳನ್ನೂ, ನಾಗ ಸರ್ಪ ಬಾಧೆಗಳನ್ನೂ ಸಂತಾನ ದೋಷಗಳನ್ನೂ ತಂದು ಮನುಷ್ಯರನ್ನು ಕಾಡಿಸುತ್ತದೆ.

ರಾಹು ದೋಷಕ್ಕೆ ಪರಿಹಾರವೇನು..?
ವಸ್ತುತ: ರಾಹು ದೋಷಪ್ರದ ಗ್ರಹವಷ್ಟೇ ಅಲ್ಲ. ರಾಹುವಿನಿಂದ ಬಾಹುಬಲ ಬರಲಿದೆ. ಧೈರ್ಯ ಸಾಹಸಗಳನ್ನು ತಂದುಕೊಡುವ ಗ್ರಹ. ಜಾತಕದಲ್ಲಿ 3ನೇ ಸ್ಥಾನದಲ್ಲಿ ಹಾಗೂ 11 ನೇಸ್ಥಾನದಲ್ಲಿದ್ದಾಗ ಹೆಚ್ಚು ತೊಂದರೆಯಾಗಲಾರದು. ಮತ್ತು ರಾಹು ಮಿಥುನ ಹಾಗೂ ವೃಷಭ ರಾಶಿಗಳಲ್ಲಿ ಹಾಗೂ ಧನಸ್ಸು ರಾಶಿಯಲ್ಲಿರುವಾಗ ಹೆಚ್ಚು ಕಾಡಲಾರ. ಈ ರಾಹು ದೋಷಕ್ಕೆ ಶಾಸ್ತ್ರ ಸೂಚಿಸುವ ಮುಖ್ಯ ಪರಿಹಾರವೆಂದರೆ ಆಶ್ಲೇಷಾ ಬಲಿ. ಇದೊಂದು ವಿಶಿಷ್ಟ ಪರಿಹಾರ ಕ್ರಮ. ನಾಗಪೂಜೆ. ನಾಗ ಪ್ರತಿಷ್ಠೆ. ರಾಹು ಗ್ರಹ ಹೋಮ. ಸುಬ್ರಹ್ಮಣ್ಯ ದರ್ಶನ. ಗೋಮಿಧಿಕಾ ರತ್ನ ಧಾರಣೆ. ಕಪ್ಪು ಕಂಬಳಿ ದಾನ ಮಾಡುವುದರಿಂದ ನಾಗ ದೋಷವನ್ನು ಪರಿಹರಿಸಿಕೊಳ್ಳಬಹುದು.

click me!