ಮನಶ್ಶಾಂತಿಗೆ ಮಂತ್ರ ಪರಿಹಾರ, ಅನುಸರಿಸಿ ಈ ಸರಳ ಟಿಪ್ಸ್!

By Suvarna News  |  First Published May 31, 2022, 6:19 PM IST

ಮನಶ್ಶಾಂತಿ ಇಲ್ಲದಿದ್ದರೆ, ಕಷ್ಟಗಳು ಎದುರಾಗುತ್ತಲೇ ಇದ್ದರೆ, ಸುಖಾ ಸುಮ್ಮನೆ ಕೋರ್ಟ್ ಕೇಸ್‌ಗಳಿಗೆ ಅಲೆಯುತ್ತಿದ್ದರೆ ಹಲವು ಕಾರಣಗಳು ಇರುತ್ತವೆ. ಅಲ್ಲದೆ, ನೆಗೆಟಿವ್ ಎನರ್ಜಿಗಳು ಆವರಿಸಿಕೊಂಡು ಅಂದುಕೊಂಡಿದ್ದು ಯಾವುದೂ ಕೈಗೂಡದೇ ಇರಬಹುದು. ಕೋರ್ಟ್ ಕಲಹ ಇತ್ಯಾದಿಗಳಿಗೆ ಸಿಲುಕಿ ಮಾನಸಿಕ ನೆಮ್ಮದಿ ಹಾಳಾಗಿರಬಹುದು, ಹೀಗೆ ಹಲವಾರು ಸಂಕಷ್ಟಗಳು ಎದುರಾಗಿರಬಹುದು. ಇವುಗಳಿಗೆ ಕೆಲವು ಮಂತ್ರ ಪರಿಹಾರಗಳಿದ್ದು, ಅವುಗಳ ಬಗ್ಗೆ ತಿಳಿಯೋಣ.


ಯಾರಿಗೇ ಆದರೂ ಜೀವನವು (Life) ನಿರಾಂತಕವಾಗಿ ಸಾಗಬೇಕು. ಯಾವುದೇ ಸಮಸ್ಯೆಗಳು (Problems), ದೂರು – ದುಮ್ಮಾನಗಳು ಎದುರಾಗುವುದು ಬೇಡ ಎಂದೇ ಇರುತ್ತದೆ. ದೇವರಲ್ಲಿ (God) ಪ್ರಾರ್ಥನೆ (Prayer) ಮಾಡಬೇಕಿದ್ದಲ್ಲೂ ಸಹ ದೇವರ ಆಯಸ್ಸು (life span), ಆರೋಗ್ಯ (Health), ಐಶ್ವರ್ಯಗಳ (Rich) ಜೊತೆಗೆ ಸುಖ – ಶಾಂತಿ – ನೆಮ್ಮದಿಯನ್ನು ದಯಪಾಲಿಸು ಎಂದು ಕೇಳಿಕೊಳ್ಳುತ್ತೇವೆ. ಅಂದರೆ, ಎಷ್ಟೇ ಐಶ್ವರ್ಯಗಳಿದ್ದರೂ ಮನಸ್ಸಿಗೆ ಶಾಂತಿ, ನೆಮ್ಮದಿ ಇಲ್ಲದಿದ್ದರೆ ಪ್ರಯೋಜನ ಇಲ್ಲ ಎಂಬ ಸತ್ಯವನ್ನು ನಾವು ಕಂಡುಕೊಂಡಿದ್ದೇವೆ. ಇದಕ್ಕಾಗಿ ದೇವರ ಆರಾಧನೆ, ಪೂಜೆ ಇತ್ಯಾದಿಗಳನ್ನು ಮಾಡುತ್ತಿರುತ್ತೇವೆ. 

ಆದರೆ, ಮನಸ್ಸಿನಲ್ಲಿ (Mind) ದುಃಖಗಳು (Grief) ತುಂಬಿಕೊಂಡಿದ್ದರೆ, ಏನೇ ಮಾಡಿದರೂ ಮನಃಶಾಂತಿ ದೊರೆಯದಿದ್ದರೆ ಮನೆ – ಮನದಲ್ಲಿ ನೆಮ್ಮದಿ ನೆಲೆಸದು. ಇದಕ್ಕೆ ಹಲವಾರು ಕಾರಣಗಳು ಸಹ ಇರಬಹುದು. ಇಂಥ ಸಮಸ್ಯೆಗಳಿಗೆ ಕೆಲವು ಮಂತ್ರಗಳಿಂದ (Mantra) ಪರಿಹಾರ (Solution) ಸಿಗುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ (Astrology) ಇವುಗಳ ಬಗ್ಗೆ ಏನೆಲ್ಲಾ ಹೇಳಲಾಗಿದೆ ಎಂಬುದನ್ನು ನೋಡೋಣ...

ಮಂತ್ರ ಮಾರ್ಗದಿಂದ ಸಮಸ್ಯೆಗೆ ಮುಕ್ತಿ
ಜೀವನದಲ್ಲಿ (Life) ಹಲವು ಸಮಸ್ಯೆಗಳು ಎದುರಾಗುತ್ತಲೇ ಇರಲಿದ್ದು, ಕೆಲವು ಸಣ್ಣವಾದರೆ ಮತ್ತೆ ಕೆಲವು ಗಂಭೀರ ಆಗಿರುತ್ತದೆ. ಇವುಗಳಿಂದ ಹೊರಬರಲು ಹೊರಬರಲಾರದೆ ಚಡಪಡಿಸುತ್ತಲೇ ಇದ್ದರೆ ಜೀವನದಲ್ಲಿ ಮುಂದೆ ಸಾಗುವುದು ಬಹಳವೇ ಕಷ್ಟವಾಗುತ್ತದೆ. ಇದಕ್ಕಾಗಿ ದೇವರ ಕೃಪಾಶೀರ್ವಾದ ಬೇಕೇ ಬೇಕು. ದೇವರ ಆಶೀರ್ವಾದ ಸಿಗಬೇಕೆಂದರೆ ಒಂದೋ ಪೂಜೆ, ಧ್ಯಾನ ಮಾಡುವುದು, ಇಲ್ಲವೇ ಮಂತ್ರಗಳನ್ನು ಪಠಿಸುವ ಮೂಲಕ ಕೃಪೆಗೆ ಪಾತ್ರರಾಗಬಹುದು. ಬಹಳ ಕಷ್ಟದಲ್ಲಿದ್ದರೆ ಈ ಮಂತ್ರಗಳ ಜಪಿಸಿದರೆ (Chant) ಕಷ್ಟವು ದೂರಾಗುತ್ತದೆ.  ಜೊತೆಗೆ ನರಸಿಂಹ (Narasihma) ದೇವರ ಕೃಪೆ ನಿಮ್ಮದಾಗಲಿದೆ. 
ಮಂತ್ರಗಳು ಹೀಗಿವೆ: “ಸರ್ವೇಶ್ವರೇಶ್ವರಾಯ ಸರ್ವ ವಿಘ್ನ ವಿನಾಶಿನೇ ಮಧುಸೂದನಾಯ ಸ್ವಾಹಾ”.  
“ಉಗ್ರ ವೀರ ಮಹಾವಿಷ್ಣು ಜ್ವಲಂತಂ ಸರ್ವತೋ ಮುಖಮ್/ ನೃಸಿಂಹ ಭೀಷಣಂ ಭಂದ್ರಂ ಮೃತ್ಯುಂ ಮೃತ್ಯುಂ ನಮಾಮ್ಯಹಮ್//” 

ಕಷ್ಟಗಳಿಂದ ಮುಕ್ತಿಗೆ
ಸದಾ ಕಷ್ಟಗಳ ಜೊತೆಜೊತೆಗೆ ಜಗಳಗಳು (Quarrels) ಎದುರಾಗುತ್ತಿದ್ದರೆ ಮನಸ್ಸು ಕೆಡುತ್ತದೆ. ಮನೋ ಒತ್ತಡವನ್ನು (Stress) ಕಡಿಮೆ ಮಾಡಿಕೊಳ್ಳಲು, ನೆಮ್ಮದಿಯನ್ನು ಕಾಣಲು ಭಗವಾನ್ ಶ್ರೀಕೃಷ್ಣನಿಗೆ (Lord Shreekrishna) ಸಂಬಂಧಿಸಿದ ಈ ಮಂತ್ರವನ್ನು ಪಠಿಸಿದರೆ ಕಷ್ಟಗಳಿಂದ ಮುಕ್ತಿ ಸಿಗುತ್ತದೆ. 
ಮಂತ್ರ ಹೀಗಿದೆ: “ಕೃಷ್ಣಾಯ ವಾಸುದೇವಾಯ ಹರಯೇ ಪರಮಾತ್ಮನೆ/ ಪ್ರಣತ ಕ್ಲೇಶ ನಾಶಾಯ ಗೋವಿಂದಾಯ ನಮೋ ನಮಃ”.
ಅಷ್ಟೇ ಅಲ್ಲದೆ ಶ್ರೀ ಕೃಷ್ಣನ ಕೃಪೆ ಪಡೆಯಲು ಮತ್ತು ಜೀವನದಲ್ಲಿ ಕಲಹಗಳು ಎದುರಾಗದಿರಲು “ಶ್ರೀ ಕೃಷ್ಣಾಯ ನಮಃ” ಎಂಬ ಮಂತ್ರವನ್ನು ಸಹ ಪಠಿಸಬೇಕು. 

ಇದನ್ನು ಓದಿ: ಕನಸಲ್ಲಿ ಈ ರೂಪದ ನೀರು ಕಂಡರೆ ಶುಭವೋ – ಅಶುಭವೋ..?

ನೆಗಟಿವ್ ಎನರ್ಜಿಯಿಂದ (Negative Energy) ಹೊರಬರಲು
ನಾವು ಯಾವುದೇ ಕೆಲಸ ಮಾಡಬೇಕೆಂದರೂ ಧನಾತ್ಮಕ (Positive) ಶಕ್ತಿ ನಮ್ಮಲ್ಲಿರಬೇಕು. ಆದರೆ, ನಮ್ಮ ಸುತ್ತ ನೆಗೆಟಿವ್ ಎನರ್ಜಿ ತುಂಬಿಕೊಂಡರೆ ಮಾಡಲು ಹೊರಡುವ ಕೆಲಸಗಳು ಕೈಗೂಡವು, ಇದರಿಂದ ಮಾನಸಿಕವಾಗಿಯೂ ಕುಗ್ಗುವುದರ ಜೊತೆಗೆ ಕೆಲಸದಲ್ಲಿ ಸಹ ಆಸಕ್ತಿಯನ್ನು ಕಳೆದುಕೊಳ್ಳಬೇಕಾಗುತ್ತದೆ. ಸಕಾರಾತ್ಮಕ ಶಕ್ತಿ ನಮ್ಮಲ್ಲಿ ಮೂಡಲು ಈ ಮಂತ್ರವು ಉಪಯುಕ್ತವಾಗಿದೆ.

“ಸ್ಥಾನೇ ಹೃಷೀಕೇಶ ತವ ಪ್ರಕೀರ್ತ್ಯಾ ಜಗತ್ ಪ್ರಹೃದ್ಯ ತ್ಯನುರಜ್ಯತೆ ಚ/ ರಕ್ಷಾಂಸಿ ಭೀತಾನಿ ದಿಶೋ ದ್ರವಂತಿ ಸರ್ವೇ ನಮಸ್ಯಂತಿ ಚ ಸಿದ್ಧ ಸಂಘಾಃ//” ಈ ಮಂತ್ರವನ್ನು ಮೂರು ಸಾವಿರ ಬಾರಿ ಜಪಿಸಿದಲ್ಲಿ ಪಾಸಿಟಿವ್ ಎನರ್ಜಿ ನಿಮ್ಮದಾಗಲಿದೆ.

ಇದನ್ನು ಓದಿ: ನೋಡೋದಾದ್ರೆ ಈ ವಸ್ತುಗಳನ್ನೇ ನೋಡಿ, ನಿಮಗೆ ಒಲಿಯತ್ತೆ ಅದೃಷ್ಟ..!

ಕೋರ್ಟ್ (Court) ಕಲಹದಿಂದ ಪಾರಾಗಲು 
ಕೋರ್ಟ್ ಕಲಹಗಳು ಎದುರಾಗಿದ್ದರೆ, ಎದುರಾಗುವ ಭಯಗಳು ಇದ್ದರೆ, ಇದರಿಂದ ಹೊರಬರಲು ಹನುಮಂತನ ಈ ಮಂತ್ರವನ್ನು ಜಪಿಸಬೇಕು. ಅಲ್ಲದೆ, ಹೀಗೆ ಮಾಡುವುದರಿಂದ ಅರ್ಧಕ್ಕೆ ನಿಂತಿರುವ ಕೆಲಸಗಳು (Incomplete work) ಪೂರ್ಣಗೊಳ್ಳುತ್ತವೆ.
ಈ ಮಂತ್ರ ಪಠಿಸಿ: “ಹಂ ಹನುಮತೆ ರುದ್ರಾತ್ಮಕಾಯ ಹುಂ ಫಟ್” ಮಂತ್ರವನ್ನು 1 ಲಕ್ಷ ಬಾರಿ ಜಪಿಸಬೇಕು. ಈ ಸಮಯದಲ್ಲಿ ಶ್ರೀರಾಮ ಮತ್ತು ಸೀತಾ ಮಾತೆಯ ಸ್ಮರಣೆಯನ್ನು ಮಾಡಬೇಕು. 

click me!