ಈ ನಾಲ್ಕು ರಾಶಿಗಳು ಮದ್ವೆಯ ನಂತ್ರನೂ ತಮ್ಮ ಎಕ್ಸ್ ಬಗ್ಗೆ ಕನಸು ಕಾಣ್ತಾರೆ!

By Suvarna News  |  First Published May 31, 2022, 4:19 PM IST

ಕೆಲವರು ಹಳೆಯ ಪ್ರೇಮ ಮರೆತು ಉತ್ತಮ ವೈವಾಹಿಕ ಜೀವನ ನಡೆಸ್ತಾರೆ. ಮತ್ತೆ ಕೆಲವರು ವಿವಾಹದ ಬಳಿಕವೂ ಎಕ್ಸ್ ಬಗ್ಗೆ ಹಗಲುಗನಸು ಕಾಣುತ್ತಾರೆ. ಅಂಥ ರಾಶಿಚಕ್ರಗಳು ಯಾವುವು ಗೊತ್ತಾ?


ಬಹಳಷ್ಟು ಜನರು ಪ್ರೀತಿಸುತ್ತಿರುತ್ತಾರೆ. ಕಡೆಗೆ ಬ್ರೇಕಪ್ ಆಗೋದಕ್ಕೆ ಅವರದೇ ಆದ ಕಾರಣಗಳಿರುತ್ತವೆ. ಈ ಸಂಬಂಧ ಮುಂದುವರೆಸೋದು ಸಾಧ್ಯವೇ ಇಲ್ಲ ಎಂಬ ಅನಿವಾರ್ಯತೆ ಉಂಟಾದಾಗ ಕಡೆಗೂ ಆರೇಂಜ್ಡ್ ಮ್ಯಾರೇಜ್ ಕಡೆ ವಾಲುತ್ತಾರೆ. ಕೆಲವರು ಪೋಷಕರ ಒತ್ತಾಯಕ್ಕೆ ಆದರೆ, ಮತ್ತೆ ಕೆಲವರು ಪಾರ್ಟ್‌ನರ್ ಇಲ್ಲದೆ ಇರಲಾಗೋಲ್ಲ ಎಂಬ ಕಾರಣಕ್ಕೆ ಆಗುತ್ತಾರೆ. ಹೀಗೆ ವಿವಾಹದ ಬಳಿಕ ಕೆಲವರಿಗೆ ಹಳೆಯದೆಲ್ಲ ಮರೆತು ಸಂತೋಷವಾಗಿ ಮುಂದಿನ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ. ಮತ್ತೆ ಕೆಲವರಿಗೆ ಹಳೆ ಪ್ರೇಮಿಯ ನೆನಪು ಕಾಡುತ್ತಲೇ ಇರುತ್ತದೆ. ಅದರಲ್ಲೂ ತಮಗೆ ಸಿಕ್ಕ ಸಂಗಾತಿ ಎಕ್ಸ್‌ನಷ್ಟು ಚೆನ್ನಾಗಿ ತಮ್ಮನ್ನು ನೋಡಿಕೊಳ್ಳುವುದಿಲ್ಲ ಎಂದಾಗ ಎಕ್ಸ್ ನೆನಪು ಹೆಚ್ಚಾಗಿ ಕಾಡುತ್ತದೆ. ವಿವಾಹದ ಬಳಿಕವೂ ಎಕ್ಸ್‌ನನ್ನೇ ಮದುವೆಯಾಗಿದ್ದರೆ ಹೇಗೆಲ್ಲ ಇರುತ್ತಿತ್ತು ಎಂದು ಅವರ ಬಗ್ಗೆ ಹಗಲುಗನಸು ಕಾಣೋರು ತುಂಬಾ ಮಂದಿ. ಸಾಮಾನ್ಯವಾಗಿ ಈ ನಾಲ್ಕು ರಾಶಿಗಳಿಗೆ ಈ ಚಾಳಿ ಹೆಚ್ಚು. 

ಮಕರ(Capricorn)
ಮಕರ ರಾಶಿಯವರನ್ನು ಪೋಷಕರು ಒತ್ತಾಯಿಸಿ ಮದುವೆ ಮಾಡಿಸಲು ಸಾಧ್ಯವಿಲ್ಲ. ಅವರು ತಮ್ಮ ಜೀವನ ಸಂಗಾತಿಯನ್ನು ತಾವೇ ಆಯ್ಕೆ ಮಾಡಿಕೊಳ್ಳುತ್ತಾರೆ. ಇವರು ಸಾಮಾನ್ಯವಾಗಿ ಶ್ರೀಮಂತಿಕೆ ನೋಡಿ ಸಂಗಾತಿಯನ್ನು ಆಯ್ಕೆ ಮಾಡುತ್ತಾರೆ. ವಿವಾಹದ ಬಳಿಕ ಸಂಗಾತಿಯ ಎದುರು ಏನೂ ತೋರಿಸಿಕೊಳ್ಳದಿದ್ದರೂ ತಮ್ಮ ಮಾಜಿ ಪ್ರೇಮಿಗಾಗಿ ಹಂಬಲಿಸುತ್ತಾರೆ. ಅವರನ್ನು ನೋಡಲು ಸಿಗುವ ಯಾವುದೇ ಅವಕಾಶವನ್ನೂ ಮಿಸ್ ಮಾಡಿಕೊಳ್ಳುವುದಿಲ್ಲ. ಮಾಜಿಯ ಬಗ್ಗೆ ಸಾಕಷ್ಟು ಕಲ್ಪನೆ, ಕನಸುಗಳನ್ನು ಹೊಂದುತ್ತಾರೆ. 

Tap to resize

Latest Videos

ಮಿಥುನ ರಾಶಿ(Gemini)
ಅವರು ಫ್ಲರ್ಟೇಟಿವ್ ಆಗಿದ್ದರೂ, ಮಿಥುನ ರಾಶಿಯವರು ತಮ್ಮ ಕುಟುಂಬದ ಇಚ್ಛೆಗೆ ವಿರುದ್ಧವಾಗಿ ಮದುವೆಯಾಗುವ ಸಾಧ್ಯತೆ ಕಡಿಮೆ. ಅವರು ತಮ್ಮ ಪೋಷಕರ ಆಯ್ಕೆಯ ಯಾರನ್ನಾದರೂ ಮದುವೆಯಾಗಲು ಮನವರಿಕೆ ಮಾಡುತ್ತಾರೆ. ಆದರೆ ಅವರ ಹೃದಯವು ಅವರು ಮದುವೆಯಾಗಲು ಆಶಿಸಿದ ಅವರ ಮಾಜಿ ಸಂಗಾತಿಯೊಂದಿಗೆ ಉಳಿಯುತ್ತದೆ. ಹಾಗಾಗಿ ಅವರು ಆಗಾಗ್ಗೆ ಅವರ ಬಗ್ಗೆ ಮತ್ತು ಅವರು ಒಟ್ಟಿಗೆ ಬದುಕಬಹುದಾದ ಜೀವನದ ಬಗ್ಗೆ ಹಗಲುಗನಸು ಕಾಣುತ್ತಿರುತ್ತಾರೆ. 

ಸಿಕ್ಕಾಪಟ್ಟೆ ಕೋಪ ಬರುತ್ತಾ? ಈ ಜ್ಯೋತಿಷ್ಯ ಪರಿಹಾರ ನಿಮ್ಮನ್ನು ಶಾಂತವಾಗಿಸುತ್ತೆ!

ಮೀನ ರಾಶಿ(Pisces)
ಮೀನ ರಾಶಿಯವರು ಆಗಾಗ್ಗೆ ಆತುರದ ನಿರ್ಧಾರಗಳನ್ನು ಮಾಡುತ್ತಾರೆ. ಮತ್ತು ನಂತರ ವಿಷಾದವನ್ನು ಅನುಭವಿಸುತ್ತಾರೆ. ಹೃದಯದ ವಿಷಯಕ್ಕೆ ಬಂದರೆ ಮೀನವು ಸಿಕ್ಕಾಪಟ್ಟೆ ಭಾವನಾತ್ಮಕವಾಗಿದೆ. ಪ್ರೇಮಿಯನ್ನು ಸಿಕ್ಕಾಪಟ್ಟೆ ಪ್ರೀತಿಸುತ್ತಾರೆ. ಆದರೆ, ಇವರ ಭಾವುಕತೆ ಜೊತೆ ಹೆಚ್ಚಿನವರು ಆಟವಾಡುವುದೇ ಹೆಚ್ಚು. ಆದ್ದರಿಂದ, ಅವರು ಕಡೆಗೂ ಅನಿವಾರ್ಯವಾಗಿ ವಿಷಕಾರಿ ಪ್ರೀತಿಯನ್ನು ಕೊನೆಗೊಳಿಸುತ್ತಾರೆ. ಆದರೆ ಉತ್ತಮ ವ್ಯಕ್ತಿಯನ್ನು ಮದುವೆಯಾಗುತ್ತಾರೆಯಾದರೂ, ಅವರಿಗೆ ಭಾವನಾತ್ಮಕವಾಗಿ ಸಾಕಷ್ಟು ಎನರ್ಜಿ ವ್ಯಯಿಸಿದ ಹಳೆಯ ಪ್ರೇಮಿಯನ್ನು ಮರೆಯಲಾಗುವುದಿಲ್ಲ. 

ಸೃಜನಶೀಲರು, ಸ್ವತಂತ್ರಪ್ರಿಯರು, ಬುದ್ಧಿವಂತರು.. ಕುಂಭ ರಾಶಿಯ ಸ್ವಭಾವ ಬಲ್ಲಿರಾ?

ಕರ್ಕಾಟಕ(Cancer)
ಕರ್ಕಾಟಕ ರಾಶಿಯವರು ತಮ್ಮ ವೈಯಕ್ತಿಕ ಜೀವನದಲ್ಲಿ ಯಾವುದೇ ಇತರ ಚಿಹ್ನೆಗಳಿಗಿಂತ ಭಿನ್ನವಾಗಿ ನಂಬಿಕೆಯ ಏರಿಳಿತವನ್ನು ಅನುಭವಿಸುತ್ತಾರೆ. ತಮ್ಮ ದಾಂಪತ್ಯದಲ್ಲಿ ಸಮತೋಲನ ತಪ್ಪಿದ ಕ್ಷಣದಲ್ಲಿ ಅವರು ತಮ್ಮ ಮಾಜಿಯ ಬಗ್ಗೆ ಕನಸು ಕಾಣುತ್ತಾರೆ. ಆದರೆ ಅವರು ನಿಷ್ಠಾವಂತ ಜೀವಿಗಳು, ಅವರು ತಮ್ಮ ಸಂಗಾತಿಗೆ ಮೋಸ ಮಾಡುವುದಿಲ್ಲ. ಆದರೆ, ತಮ್ಮ ಮಾಜಿ ಬಗ್ಗೆ ಕನಸು ಕಾಣುವುದನ್ನು ಬೇಡವೆಂದರೂ ಅವರಿಂದ ತಪ್ಪಿಸಿಕೊಳ್ಳಲಾಗುವುದಿಲ್ಲ. ಆದರೆ ಈ ನಡವಳಿಕೆಯು ಕಾಲಾನಂತರದಲ್ಲಿ ಬದಲಾಗುತ್ತದೆ. ಸಾಮಾನ್ಯವಾಗಿ ಅವರು ಮಕ್ಕಳನ್ನು ಹೊಂದಿದ ನಂತರ ಸಂಗಾತಿಯ ಜೊತೆಗೆ ಹೊಸ ಬದುಕನ್ನು ಕಂಡುಕೊಳ್ಳುತ್ತಾರೆ. 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!