ಈ ರಾಶಿಯವರ ಶತ್ರುತ್ವ ಡೇಂಜರ್; ಇವರು ನಿಮಗೆ ನರಕ ತೋರಿಸುತ್ತಾರೆ..!

By Sushma HegdeFirst Published Jul 6, 2023, 3:29 PM IST
Highlights

ಜೀವನದಲ್ಲಿ ಕೆಲವರ ಶತ್ರುತ್ವವನ್ನು ಬೆಳೆ‌ಸಿಕೊಳ್ಳುವುದು ಅಪಾಯ. ಇದರಿಂದ ನಿಮಗೆ ತುಂಬಾ ತೊಂದರೆ ಆಗಲಿದೆ. ಆ ರಾಶಿಯವರು ಯಾರು ಎಂಬ ಮಾಹಿತಿ ಇಲ್ಲಿದೆ.

ಜೀವನದಲ್ಲಿ ಕೆಲವರ ಶತ್ರುತ್ವವನ್ನು ಬೆಳೆ‌ಸಿಕೊಳ್ಳುವುದು ಅಪಾಯ. ಇದರಿಂದ ನಿಮಗೆ ತುಂಬಾ ತೊಂದರೆ ಆಗಲಿದೆ. ಆ ರಾಶಿಯವರು ಯಾರು ಎಂಬ ಮಾಹಿತಿ ಇಲ್ಲಿದೆ.

ಎಲ್ಲರೂ ನಮ್ಮೊಂದಿಗೆ ಗೆಳೆಯರಾಗಿ ಇರಲ್ಲ, ಕೆಲವೊಮ್ಮೆ ಕೆಲವರು ನಮಗೆ ಶತ್ರು (enemy) ಗಳು ಆಗುವುದು ಸಹಜ. ಆದರೆ ಕೆಲವೊಂದು ರಾಶಿಯ ವ್ಯಕ್ತಿಗಳೊಂದಿಗೆ ಎಂದಿಗೂ ದ್ವೇಷವನ್ನೂ ಕಟ್ಟಿಕೊಳ್ಳಬಾರದಂತೆ. ಯಾಕೆಂದರೆ ಅವರು ನಮ್ಮ ಮೇಲೆ ಭಯಂಕರ ದ್ವೇಷ (Hate) ಸಾಧಿಸುತ್ತಾರೆ.

Latest Videos

ಮೇಷ ರಾಶಿ (Aries) 

ಈ ರಾಶಿಯವರು ತುಂಬಾ ಅಹಂ ಸ್ವಭಾವದವರು. ಇವರು ಯಾವಾಗಲೂ ತಮ್ಮನ್ನು ತಾವು ಇತರರಿಗಿಂತ ಉತ್ತಮರೆಂದು ಜಂಭ ಕೊಚ್ಚಿಕೊಳ್ಳುತ್ತಾರೆ. ಇವರ ಜೊತೆಗೆ ಶತ್ರುತ್ವ ಬೆಳೆಸಿಕೊಳ್ಳುವುದು ಒಳ್ಳೆಯದಲ್ಲ. ಇವರು ತಮ್ಮ ಮನಸ್ಸಿನಲ್ಲಿ ದ್ವೇಷವನ್ನು ಇಟ್ಟುಕೊಳ್ಳುತ್ತಾರೆ. ಮತ್ತು ಸೇಡು (Revenge)  ತೀರಿಸಿಕೊಳ್ಳುವ ಮನೋಭಾವ ಹೊಂದಿರುತ್ತಾರೆ.

ಕಟಕ ರಾಶಿ (Cancer )

ಕಟಕ ರಾಶಿಯವರು ಜೊತೆ ಎಂದಿಗೂ ಶತ್ರುತ್ವ ಕಟ್ಟಿಕೊಳ್ಳಬೇಡಿ. ಇವರು ಭಾವನಾತ್ಮಕ (Emotional) ವಾಗಿ ನಿಮಗೆ ತೊಂದರೆ ಕೊಡುತ್ತಾರೆ. ಅವರು ನಿಮ್ಮ ಬಗ್ಗೆ ಇಲ್ಲ ಸಲ್ಲದ ಸುದ್ದಿ ಹರಡಿಸಿ ನಿಮ್ಮ ಮಾನ ಕಳೆಯುತ್ತಾರೆ. ಇದು ನಿಮಗೆ ತುಂಬಾ ಮಾನಸಿಕ  (mental) ಕಿರಿಕಿರಿ ಉಂಟು ಮಾಡುತ್ತದೆ.

ಸಿಂಹ ರಾಶಿ (Leo) 

ಸಿಂಹ ರಾಶಿಯವರನ್ನು ಯಾವುದೇ ಕಾರಣಕ್ಕೂ ಎದುರು ಹಾಕಿಕೊಳ್ಳಬೇಡಿ. ಯಾಕೆಂದರೆ ಇವರು ಯಾರ ಮೇಲೂ ಕೋಪ (anger)  ಮಾಡಿಕೊಳ್ಳುವುದಿಲ್ಲ. ಹಾಗೂ ಸುಖಾಸುಮ್ಮನೆ ಜಗಳವಾಡುವುದಿಲ್ಲ. ಆದರೆ ಇವರ ವಿಷಯದಲ್ಲಿ ಯಾರಾದರೂ ಅಡ್ಡ ಬಂದರೆ ಇವರು ಸುಮ್ಮನೆ ಇರಲ್ಲ. ತುಂಬಾ ಕೋಪಗೊಂಡು, ಶತೃತ್ವ ಸಾಧಿಸುತ್ತಾರೆ. ಅವರನ್ನು ಎಂದಿಗೂ ಕ್ಷಮಿಸದೇ ವಿಷ ಕಾರುತ್ತಾರೆ.

ರಾಮಾಯಣದಲ್ಲಿ ಲಕ್ಷ್ಮಣ ರೇಖೆ ಎಳೆದಿರಲಿಲ್ಲವೇ?; ನಾವು ಓದಿದ್ದು ಸುಳ್ಳಾ..?

 

ವೃಶ್ಚಿಕ ರಾಶಿ (Scorpio) 

ಈ ರಾಶಿಯವರಿಗೆ ತುಂಬಾ ಕೋಪ ಇರುತ್ತದೆ. ಇವರನ್ನು ಯಾವುದೇ ಕಾರಣಕ್ಕೂ ಎದುರು ಹಾಕಿಕೊಳ್ಳಬೇಡಿ. ಇವರು ನಿಮ್ಮನ್ನು ಎಲ್ಲಿ ಇದ್ದರೂ ಎಲ್ಲರ ನಡುವೆ ನಿಂದಿಸು (abuse)ತ್ತಾರೆ. ಹಾಗಾಗಿ ಇವರ ಜೊತೆಗಿನ ಶತೃತ್ವ ಒಳ್ಳೆಯದಲ್ಲ.

ಧನು ರಾಶಿ (Sagittarius) 

ಈ ರಾಶಿಯವರು ತುಂಬಾ ಸೂಕ್ಷ್ಮ ಸ್ವಭಾವ (Sensitive nature) ದವರು. ಇವರಿಗೆ ಯಾರು ಬೇಕಾದರೂ ಸುಲಭವಾಗಿ ನೋಯಿಸಬಹುದು. ಆದರೆ ಇದು ಅವರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಇದರಿಂದ ಅವರು ದ್ವೇಷವನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುತ್ತಾರೆ.  ಹಾಗಾಗಿ ಅವರ ಶತ್ರುತ್ವ ಒಳ್ಳೆಯದಲ್ಲ. ಹಾಗೂ ಧನು ರಾಶಿಯವರು ಯಾರ ಮೇಲಾದರೂ ಸೇಡು ತೀರಿಸಿಕೊಳ್ಳಬಹುದು. ಇವರು ಕೆಲವೊಮ್ಮೆ ಸುಖಾ-ಸುಮ್ಮನೇ ಕೋಪಗೊಳ್ಳುತ್ತಾರೆ. ಇದರಿಂದ ತಕ್ಷಣವೇ ಸೇಡು ತೀರಿಸಿಕೊಳ್ಳುವ ತೀರ್ಮಾನ ಮಾಡುತ್ತಾರೆ. ಹಾಗೂ ಇವರ ಸ್ನೇಹಿತರ ಸಂಖ್ಯೆಯು ಕೂಡ ಕಮ್ಮಿ. ಇವರಿಗೆ ಕೆಲವೇ ಜನರು ಸ್ನೇಹಿತರು  (friends) ಇರುತ್ತಾರೆ. ಈ ವೇಳೆ ಮನಸ್ತಾಪ ಉಂಟಾದರೆ ಶತೃತ್ವ ಸಾಧಿಸುತ್ತಾರೆ.

ಚಾರ್ ಧಾಮ್ ಯಾತ್ರೆಯಿಂದ ಪಾಪ ನಾಶ; ಹಿಂದೂಗಳಿಗೆ ಇದು ಏಕೆ ಮಹತ್ವ?

 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!