ನಿಮ್ಮಿಷ್ಟದ ಬಣ್ಣದಲ್ಲಿದೆ ವ್ಯಕ್ತಿತ್ವದ ರಹಸ್ಯ !!

By Suvarna NewsFirst Published Nov 6, 2021, 9:38 AM IST
Highlights

ಬಣ್ಣಗಳು ಹೇಳಲಿವೆ ವ್ಯಕ್ತಿಯ ವ್ಯಕ್ತಿತ್ವವನ್ನು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ರಾಶಿಯ ಪ್ರಭಾವವು ವ್ಯಕ್ತಿಯ ಸ್ವಭಾವಗಳ ಮೇಲಾಗುತ್ತದೆ. ಹಾಗೆಯೇ ಇಷ್ಟ ಪಡುವ ಬಣ್ಣದಿಂದ ಸಹ ವ್ಯಕ್ತಿಗಳ ಗುಣ ಸ್ವಭಾವವನ್ನು ತಿಳಿಯಬಹುದಾಗಿದೆ. ಹಾಗಾದರೆ ಇಷ್ಟವಾದ ಬಣ್ಣದ ಹಿಂದಿರುವ ವ್ಯಕ್ತಿತ್ವವೇನು ಎಂಬುದನ್ನು ತಿಳಿಯೋಣ...

ವ್ಯಕ್ತಿಗಳ (Person ) ಸ್ವಭಾವ ಹೇಗೆ ಬೇರೆ ಬೇರೆ ಆಗಿರುತ್ತದೆಯೋ ಹಾಗೆಯೇ ಅವರು ಇಷ್ಟಪಡುವ (Like) ವಸ್ತುಗಳು ಭಿನ್ನವಾಗಿರುತ್ತವೆ. ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರ ಇಷ್ಟಪಡುವ ಬಣ್ಣದ (Colour ) ಆಧಾರದ ಮೇಲೆ ವ್ಯಕ್ತಿಗಳ ಸ್ವಭಾವಗಳ ಬಗ್ಗೆ ತಿಳಿಯಬಹುದಾಗಿದೆ. ಆಯಾ ರಾಶಿಗಳ (zodiac sign) ಸ್ವಭಾವ ಗುಣಗಳು  ಭಿನ್ನವಾಗಿರುತ್ತವೆ. ಅದು ವ್ಯಕ್ತಿಗಳ ಮೇಲೂ ಪ್ರಭಾವ (Effect) ಬೀರುತ್ತದೆ. ಹಾಗಾಗಿ ವ್ಯಕ್ತಿಗಳು ಇಷ್ಟಪಡುವ ವಸ್ತುಗಳು (things) ಬೇರೆ (Different) ಬೇರೆಯಾಗಿರುತ್ತದೆ. ಅವುಗಳ ಆಧಾರದ (Basis) ಮೇಲೆ ವ್ಯಕ್ತಿಯ ವ್ಯಕ್ತಿತ್ವವನ್ನು ತಿಳಿಯಬಹುದಾಗಿದೆ. ಹಾಗಾದರೆ ಯಾರಿಗೆ ಯಾವ ಬಣ್ಣ ಇಷ್ಟ ಎಂಬುದು ತಿಳಿದರೆ ವ್ಯಕ್ತಿತ್ವವನ್ನು ತಿಳಿಯುವುದು ಕಷ್ಟವಾಗುವುದಿಲ್ಲ (Difficult) ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ. ಹಾಗಾದರೆ ಇಷ್ಟಪಡುವ ಬಣ್ಣಗಳ ಆಧಾರದ ಮೇಲೆ ವ್ಯಕ್ತಿಗಳ ವ್ಯಕ್ತಿತ್ವವನ್ನು ತಿಳಿಯೋಣ.....

ಕಪ್ಪು ಬಣ್ಣ (Black color)
ಕಪ್ಪು ಬಣ್ಣವನ್ನು ಹೆಚ್ಚು ಇಷ್ಟಪಡುವ ವ್ಯಕ್ತಿಗಳು ನಾಚಿಕೆ (Shy) ಸ್ವಭಾವವನ್ನು ಹೊಂದಿರುತ್ತಾರೆ. ಆದರೆ, ಸಮಯ (Time) ಬಂದಾಗ ಮನಸ್ಸಿನ ಮಾತನ್ನು ಹೇಳಿಕೊಳ್ಳಲು ಅಂಜುವುದಿಲ್ಲ. ಅಂದುಕೊಂಡದ್ದು ಆಗಲಿಲ್ಲವೆಂದು ಬೇಸರ (Sad) ಮಾಡಿಕೊಳ್ಳದೆ, ಅದನ್ನು ಪರಿಹರಿಸಿಕೊಳ್ಳುವ (Solution) ಬಗೆಯನ್ನು ಕಂಡುಕೊಳ್ಳುತ್ತಾರೆ. ತಮ್ಮ ವಿಷಯಗಳನ್ನು ರಹಸ್ಯವಾಗಿಡಲು (Secret) ಹೆಚ್ಚು ಪ್ರಯತ್ನಿಸುತ್ತಾರೆ (Try). ಇವರ ಅತ್ಯಂತ ಹತ್ತಿರದವರು (Nearest) ಮಾತ್ರ ಇವರ ಹೆಚ್ಚಿನ ವಿಷಯಗಳನ್ನು ತಿಳಿದುಕೊಂಡಿರುತ್ತಾರೆ. ಉಳಿದವರು ಈ ವ್ಯಕ್ತಿಗಳನ್ನು ಹೆಚ್ಚು ಅರ್ಥೈಸಿಕೊಳ್ಳುವುದು (Understand) ಕಷ್ಟ.

ಇದನ್ನು ಓದಿ: ಕನಸಲ್ಲಿ ಈ ವಸ್ತುಗಳ ಕಂಡರೆ ಸೌಭಾಗ್ಯ...!!!

ಕೆಂಪು ಬಣ್ಣ (Red colour) 
ಕೆಂಪು ಬಣ್ಣವು ಅಪಾಯದ (Danger) ಸಂಕೇತವೆಂದು (Sign) ಹೇಳಲಾಗುತ್ತದೆ. ಬಣ್ಣವು ಬೇರೆ ಬೇರೆ ವಿಚಾರಗಳಿಗೆ ಬೇರೆ ಬೇರೆ ರೀತಿಯ ಅರ್ಥವನ್ನು ನೀಡುತ್ತದೆ.  ಕೆಂಪು ಬಣ್ಣವನ್ನು ಇಷ್ಟಪಡುವ ವ್ಯಕ್ತಿಗಳು ಹೊರ ಜಗತ್ತನ್ನು ಇಷ್ಟಪಡುವ ಸ್ವಭಾವವನ್ನು ಹೊಂದಿರುತ್ತಾರೆ. ಈ ವ್ಯಕ್ತಿಗಳು ಬಹುಬೇಗ ಸ್ನೇಹ (Friendship) ಸಂಪಾದಿಸಿಕೊಳ್ಳುತ್ತಾರೆ. ಅಷ್ಟೇ ಅಲ್ಲದೆ ಅಪರಿಚಿತರನ್ನು (Stranger) ಸಹ ಚೆನ್ನಾಗಿ ಮಾತನಾಡಿಸುತ್ತಾರೆ. ಐಷಾರಾಮಿ (Luxury) ಜೀವನವನ್ನು (Life ) ನಡೆಸಲು ಇಷ್ಟಪಡುತ್ತಾರೆ. ಕನಸನ್ನು (Dream) ಈಡೇರಿಸಿಕೊಳ್ಳುವ ಗುರಿ (Aim) ಹೊಂದಿರುವ ಈ ವ್ಯಕ್ತಿಗಳು, ಅದು ಸಾಕಾರಗೊಳ್ಳುವವರೆಗೂ ಪ್ರಯತ್ನಿಸುತ್ತಾ ಇರುತ್ತಾರೆ. ಯಶಸ್ಸು (Success) ಸಿಗುವವರೆಗೂ ಕಷ್ಟಪಡುತ್ತಾರೆ.

ಗುಲಾಬಿ ಬಣ್ಣ (Pink colour)
ಗುಲಾಬಿ ಬಣ್ಣವನ್ನು ಇಷ್ಟಪಡುವ ವ್ಯಕ್ತಿಗಳ ವ್ಯಕ್ತಿತ್ವ ಆಕರ್ಷಕವಾಗಿರುತ್ತದೆ (Attractive). ಜತೆಗಿರುವ ವ್ಯಕ್ತಿಗಳು ಇವರ ಸರಳ (Simple) ವ್ಯಕ್ತಿತ್ವವನ್ನು ಇಷ್ಟಪಡುತ್ತಾರೆ. ಸೂಕ್ಷ್ಮ (Emotional ) ಸ್ವಭಾವದ  ವ್ಯಕ್ತಿತ್ವ ಇವರದ್ದಾಗಿರುತ್ತದೆ. ಖಾಸಗಿ (Personel) ಮತ್ತು ಔದ್ಯೋಗಿಕ (Career) ಜೀವನಕ್ಕೆ ಸಮಾನ ಪ್ರಾಶಸ್ತ್ಯ ನೀಡುವುದಲ್ಲದೆ, ಎರಡರಲ್ಲೂ ಸಮತೋಲನವನ್ನು (Balance) ಕಾಪಾಡಿಕೊಳ್ಳುವಲ್ಲಿ ಸಫಲರಾಗುತ್ತಾರೆ (Success). ಕನಸು ಕಾಣುವ, ಸ್ವತಂತ್ರವಾಗಿ (Independent) ನಿರ್ಧರಿಸುವ (Decide) ಉತ್ಸಾಹಿ (Enthusiastic) ವ್ಯಕ್ತಿತ್ವ ಇವರದ್ದು ಆಗಿರುತ್ತದೆ.

ನೀಲಿ ಬಣ್ಣ (Blue colour)
ನೀಲಿ ಬಣ್ಣವನ್ನು ಇಷ್ಟಪಡುವ ವ್ಯಕ್ತಿಗಳು ಮೃದು (Smooth) ಮತ್ತು ಮಿತಭಾಷಿಗಳಾಗಿರುತ್ತಾರೆ (Less talktative). ಯಾರೇ ಕಷ್ಟದಲ್ಲಿದ್ದರೂ ಅವರಿಗೆ ಸಹಾಯ ಹಸ್ತ (Helping hand ) ಚಾಚುತ್ತಾರೆ. ಈ ವ್ಯಕ್ತಿಗಳು ಪ್ರಾಮಾಣಿಕರು (Prompt). ಸ್ನೇಹಿತರು (Friend ) ಮತ್ತು ಸಂಬಂಧಿಗಳಿಗೆ (Relative) ಹತ್ತಿರವಾಗಿರುತ್ತಾರೆ. ಈ ವ್ಯಕ್ತಿಗಳು ಸೂಕ್ಷ್ಮ ಸ್ವಭಾವವನ್ನು ಹೊಂದಿದ್ದು, ಸಂವೇದನಾಶೀಲರಾಗಿರುತ್ತಾರೆ.

ಇದನ್ನು ಓದಿ: ದೀಪಾವಳಿಯಲ್ಲಿ ಜೇಡಿಮಣ್ಣಿನ ಈ ವಸ್ತುಗಳನ್ನು ಮನೆಗೆ ತನ್ನಿ, ಅದೃಷ್ಟವಂತರಾಗಿ...!

ಹಸಿರು ಬಣ್ಣ (Green colour)
ಹಸಿರು ಬಣ್ಣವನ್ನು ಇಷ್ಟಪಡುವ ವ್ಯಕ್ತಿಗಳು 
ಸ್ವತಂತ್ರರಾಗಿರಲು (Independent)  ಬಯಸುತ್ತಾರೆ. ಉತ್ಸಾಹಿ (Enthusiastic) ವ್ಯಕ್ತಿತ್ವವನ್ನು ಹೊಂದಿರುವ ಈ ವ್ಯಕ್ತಿಗಳು , ಜೀವನದ ಖುಷಿಗಳನ್ನು (Happiness) ಆನಂದಿಸುತ್ತಾರೆ.  ಅಷ್ಟೆ ಅಲ್ಲದೆ ವ್ಯಾಪಾರ- (Business) ವ್ಯವಹಾರವನ್ನು ಉತ್ತಮವಾಗಿ ಅರ್ಥೈಸಿಕೊಳ್ಳುತ್ತಾರೆ.

click me!