ನಿಮ್ಮ ರಾಶಿಗೆ ಅನುಗುಣವಾಗಿ ಗುರು ವಂದನೆ ಸಲ್ಲಿಸಿ, ಬದುಕಿಕೊಂದು ದಾರಿ ಕಾಣಿಸುತ್ತೆ!

By Suvarna News  |  First Published Sep 7, 2021, 5:12 PM IST

ವಿದ್ಯೆ ಕಲಿಸಿದ ಗುರುಗಳಿಗೆ ವಂದನೆ ಸಲ್ಲಿಸುವುದು ವಿದ್ಯಾರ್ಥಿಗಳ ಕರ್ತವ್ಯವಾಗಿರುತ್ತದೆ. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಗುರುವಿಗೆ ವಂದನೆ ಸಲ್ಲಿಸಿ ಆಶೀರ್ವಾದ ಪಡೆಯುತ್ತಾರೆ. ಆಯಾ ರಾಶಿಚಕ್ರದವರ ಹೇಗೆ ಗುರುಗಳಿಗೆ ವಂದನೆಯನ್ನು ತಿಳಿಸಬಹುದು ಎಂಬುದರ ಬಗ್ಗೆ ತಿಳಿಯೋಣ....
 


ಮನೆಯೇ ಮೊದಲ ಪಾಠಶಾಲೆ ತಾಯಿಯೇ ಮೊದಲ ಗುರು ಎಂಬ ಮಾತಿದೆ. ಹುಟ್ಟಿನಿಂದ ಕೈಹಿಡಿದು ನಡೆಸುವ ತಾಯಿ ಮೊದಲ ಗುರುವಾದರೆ, ನಂತರದ ದಿನಗಳಲ್ಲಿ ಪ್ರತಿ ವಿಷಯವನ್ನು ಹೇಳಿಕೊಡುವವರು ಗುರುವಾಗುತ್ತಾರೆ. 

ಪುರಾತನ ಕಾಲದಲ್ಲಿ ಗುರುಕುಲ ರೀತಿಯ ಶಿಕ್ಷಣ ಜಾರಿಯಲ್ಲಿತ್ತು. ಮಕ್ಕಳು ಚಿಕ್ಕವರಿರುವಾಗಲೇ ಗುರುಕುಲಕ್ಕೆ ಹೋಗಿ ಎಲ್ಲ ರೀತಿಯ ಶಿಕ್ಷಣಗಳನ್ನು ಪೂರೈಸುವುದು ರೂಢಿಯಲ್ಲಿತ್ತು. ಆ ಸಂದರ್ಭದಲ್ಲಿ  ಗುರುದಕ್ಷಿಣೆ ನೀಡಿ ನಂತರ ಗುರುವಿನ ಆಶೀರ್ವಾದ ಪಡೆದು ಹಿಂತಿರುಗುವ ಸಂಪ್ರದಾಯವಿತ್ತು. 

ಜೀವನದಲ್ಲಿ ಯಶಸ್ಸು ಗಳಿಸಲು ಮುಖ್ಯ ಪಾತ್ರ ವಹಿಸಿರುವ ಗುರುಗಳಿಗೆ ವಂದನೆ ಸಲ್ಲಿಸುವುದು ಆಶೀರ್ವಾದ ಪಡೆಯುವುದು ಪ್ರತಿಯೊಬ್ಬ ಶಿಕ್ಷಣಾರ್ಥಿಯ ಕರ್ತವ್ಯವಾಗಿರುತ್ತದೆ. 

ಅಷ್ಟೇ ಅಲ್ಲದೆ ಜ್ಞಾನವನ್ನು ಧಾರೆ ಎರೆದ ಗುರುವಿಗೆ ವಂದನೆ ಸಲ್ಲಿಸುವ ಪರಿ ಬೇರೆ ಬೇರೆಯಾಗಿದೆ. ಪ್ರತಿ ರಾಶಿ ಚಕ್ರದವರು ಭಿನ್ನರಾಗಿರುವಂತೆ ಗುರುವಿಗೆ ವಂದನೆ ಸಲ್ಲಿಸುವ ರೀತಿಯೂ ವಿಭಿನ್ನ. ಹಾಗಾಗಿ ಯಾವ ರಾಶಿಯವರು ಯಾವ ರೀತಿ ಗುರುವಿಗೆ ವಂದನೆ ಸಲ್ಲಿಸಬೇಕು? ಎಂಬುದನ್ನು ತಿಳಿಯೋಣ....

ಇದನ್ನು ಓದಿ: ವಾಸ್ತು ದೋಷ ನಿವಾರಣೆಗೆ ಕರ್ಪೂರದ ಪರಿಹಾರ

ಮೇಷ ರಾಶಿ
ಈ ರಾಶಿಯಲ್ಲಿ ಜನಿಸಿದವರು ಕಲಿಸಿದ ಗುರುವಿಗೆ ಯಾವ ವಿಷಯಕ್ಕೆ ಖುಷಿಯಾಗುತ್ತದೆ ಎಂಬುದನ್ನು ಗಮನಿಸಬೇಕು. ಒಮ್ಮೆ ತಿಳಿದ ಬಳಿಕ ನೀವು ಅವರ ಖುಷಿಯ ಸಂಗತಿಯನ್ನು ಅವರಿಗೆ ಸಪ್ರೈಸ್ ರೀತಿಯಲ್ಲಿ ನೀಡುವ ಮೂಲಕ ಗುರುವಂದನೆಯನ್ನು ಸಲ್ಲಿಸಬೇಕು. ಯಶಸ್ಸಿಗೆ ಕಾರಣವಾದ ಗುರುವನ್ನು ನೆನೆದು ಅವರಿಗೆ ಧನ್ಯವಾದಗಳನ್ನು ತಿಳಿಸಿದಲ್ಲಿ ಸಾರ್ಥಕ ಭಾವ ನಿಮ್ಮದಾಗುತ್ತದೆ. ಗುರುವಿನ ಆಶೀರ್ವಾದ ಲಭ್ಯವಾಗುತ್ತದೆ.

ವೃಷಭ ರಾಶಿ
ಈ ರಾಶಿಯವರು ತಮ್ಮ ನೆಚ್ಚಿನ ಶಿಕ್ಷಕರಿಗೆ ವಿಶೇಷವಾಗಿ ಧನ್ಯವಾದಗಳನ್ನು ಸಲ್ಲಿಸಬಹುದಾಗಿದೆ. ಯಾವ ರೀತಿ ಎಂಬುದನ್ನು ನೀವು ನಿರ್ಧರಿಸಿಕೊಳ್ಳಿ. ಆದರೆ, ಗುರುಗಳಿಗೆ ಭೋಜನ ಕೂಟವನ್ನು ಏರ್ಪಡಿಸಿ ಧನ್ಯವಾದಗಳನ್ನು ಸಲ್ಲಿಸಿದರೆ ಉತ್ತಮ ಎಂದು ಹೇಳಲಾಗುತ್ತದೆ.

ಮಿಥುನ ರಾಶಿ
ಈ ರಾಶಿಯವರು ಗುರುಗಳಿಗೆ ಹೂವಿನ ಗುಚ್ಛವನ್ನು ಅಥವಾ ಪರಿಮಳಯುಕ್ತವಾದ ವಸ್ತುಗಳನ್ನು ನೀಡಬಹುದು. ಇದರಿಂದ ಅವರಿಗೆ ಸಕಾರಾತ್ಮಕ ಭಾವ ಮೂಡುವುದಲ್ಲದೇ, ಸಂತಸವು ಉಂಟಾಗುತ್ತದೆ.


ಕರ್ಕಾಟಕ ರಾಶಿ
ಈ ರಾಶಿಯವರಿಗೆ ಶಿಕ್ಷಕರ ಬಗ್ಗೆ ಅಪಾರ ಗೌರವ ಇರುತ್ತದೆ. ಆದರೆ, ಅದನ್ನು ವ್ಯಕ್ತಪಡಿಸುವುದು ಹೇಗೆ ಎಂಬ ಬಗ್ಗೆ ಗೊಂದಲ ಇರುತ್ತದೆ. ಇವರು ಶಿಕ್ಷಕರಿಂದ ಕಲಿತ ದಿನಗಳನ್ನು ನೆನೆಯುವ ಹಾಗೂ ಅದಕ್ಕೆ ವೇದಿಕೆ ಸೃಷ್ಟಿಸಿ ಎಲ್ಲರಿಗೂ ಕಣ್ಣಿಗೆ ಕಟ್ಟುವಂತೆ ವಿವರಿಸುವ ಮೂಲಕ ಗುರುವಂದನೆ ಸಲ್ಲಿಸಬಹುದಾಗಿದೆ. ಇದರಿಂದ ಗುರುಗಳ ಮನಸ್ಸಿಗೆ ಸಂತಸವಾಗುವುದಲ್ಲದೆ, ಮುಂದಿನ ಜೀವನಕ್ಕೆ ಮಾರ್ಗದರ್ಶನ, ಗುರುವಿನ ಆಶೀರ್ವಾದ ದೊರೆಯುತ್ತದೆ. 

ಸಿಂಹ ರಾಶಿ
ಈ ರಾಶಿಯವರು ಶಿಕ್ಷಕರೊಂದಿಗೆ ಸ್ನೇಹಿತರಂತೆ ಇರಲು ಪ್ರಯತ್ನಿಸಬೇಕು. ನಿಮ್ಮ ಜೀವನದಲ್ಲಿ ಶಿಕ್ಷಕರ ಮಹತ್ವದ ಪಾತ್ರ ಏನು..? ಅದರಿಂದಾದ ಪ್ರಯೋಜನ ಏನು ಎಂಬ ಬಗ್ಗೆ ಗುರುಗಳಿಗೆ ತಿಳಿಸಿ ಅವರ ಆಶೀರ್ವಾದವನ್ನು ಪಡೆಯಬಹುದಾಗಿದೆ.

ಇದನ್ನು ಓದಿ: ನಿಮ್ಮ ಪಾದಾಂಕಕ್ಕೆ ಹೊಂದುವ ಉದ್ಯೋಗ ಕ್ಷೇತ್ರಗಳಿವು..!

ಕನ್ಯಾ ರಾಶಿ 
ಈ ರಾಶಿಯವರು ನೆಚ್ಚಿನ ಶಿಕ್ಷಕರಿಂದ ಕಲಿತ ವಿಷಯಗಳು ಜೀವನಕ್ಕೆ ಹೆಚ್ಚಿನ ಲಾಭವನ್ನುಂಟು ಮಾಡಿದೆ ಎಂಬುದನ್ನು ಅವರಿಗೆ ತಿಳಿಸುವುದು. ಇದು ಅವರಿಗೆ ಖುಷಿ ನೀಡುತ್ತದೆ.


ತುಲಾ ರಾಶಿ
ನಿಮ್ಮ ಗುರುಗಳು ಪಾಠ ಮಾಡುವ ಶೈಲಿ ಮತ್ತು ಅವರ ಜ್ಞಾನಕ್ಕೆ ವಂದಿಸಿ, ಅವರಿಗೆ ಧನ್ಯವಾದಗಳನ್ನು ತಿಳಿಸುವುದರಿಂದ ತುಲಾ ರಾಶಿಯವರಿಗೆ ಒಳಿತಾಗುವುದು.

ವೃಶ್ಚಿಕ ರಾಶಿ
ಈ ರಾಶಿಯವರು ತಮ್ಮ ನೆಚ್ಚಿನ ಶಿಕ್ಷಕರಿಗೆ ವಂದನೆಗಳನ್ನು ಸಲ್ಲಿಸುವುದು. ಅದರ ಜೊತೆಗೆ ಪ್ರೇಕ್ಷಣೀಯ ಸ್ಥಳಗಳ ಬಗ್ಗೆ ವಿಚಾರಗಳನ್ನು ತಿಳಿಸುವುದರಿಂದ ನಿಮ್ಮ ಗುರುಗಳಿಗೆ ಸಂತಸವಾಗುವುದು.

ಧನು ರಾಶಿ
ಗುರುಗಳು ಕಲಿಸಿದ  ವಿಷಯಗಳನ್ನು ಅವರೊಂದಿಗೆ ಹಂಚಿಕೊಳ್ಳುತ್ತಾ, ಅವರಿಗೆ ವಂದನೆಗಳನ್ನು ತಿಳಿಸುವುದು. ಶಿಕ್ಷಕರಿಂದ ಜೀವನದಲ್ಲಿ ಆದ ಬದಲಾವಣೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುವುದು.

ಮಕರ ರಾಶಿ
ಗುರುಗಳಿಂದ ಕಲಿತ ವಿಷಯಗಳು ಜೀವನಕ್ಕೆ ಹೆಚ್ಚಿನ ರೀತಿಯಲ್ಲಿ ಸಹಾಯಕವಾಗಿದೆ ಎಂಬುದನ್ನು ಅವರಿಗೆ ತಿಳಿಸುವುದು. ಯಶಸ್ಸಿಗೆ ಕಾರಣರಾದ ಗುರುಗಳಿಗೆ ವಂದನೆಗಳನ್ನು ಸಲ್ಲಿಸುವುದು.

ಇದನ್ನು ಓದಿ: ಹುಡುಗಿಯರ ಹಸ್ತದಲ್ಲಿ ಈ ರೇಖೆಗಳಿದ್ದರೆ ಯಶಸ್ಸು ಖಚಿತ..!

ಕುಂಭ ರಾಶಿ
ಈ ರಾಶಿಯವರು ತಮ್ಮ ಗುರುಗಳಿಗೆ ವಂದನೆಗಳನ್ನು ಸಲ್ಲಿಸಲು ಬಯಸಿದಲ್ಲಿ , ಪತ್ರದಲ್ಲಿ ವಂದನೆಗಳನ್ನು ತಿಳಿಸಬಹುದು ಅಥವಾ ಹೂಗುಚ್ಛ ನೀಡಬಹುದು.

ಮೀನ ರಾಶಿ 
ಮೀನ ರಾಶಿಯವರು ತನ್ನ ನೆಚ್ಚಿನ ಶಿಕ್ಷಕರಿಗೆ ಅಥವಾ ಗುರುಗಳಿಗೆ ಅವಶ್ಯಕತೆ ಇದ್ದಾಗ ಸಹಾಯಹಸ್ತವನ್ನು ನೀಡುವುದರ ಮೂಲಕ ವಂದನೆಗಳನ್ನು ಸಲ್ಲಿಸಬಹುದಾಗಿದೆ.

Tap to resize

Latest Videos

click me!