
ಹಿಂದೂ ಧರ್ಮದಲ್ಲಿ (Hindu Religion) ತಾಯಿ ಲಕ್ಷ್ಮಿ (Laxmi) ಗೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ತಾಯಿ ಲಕ್ಷ್ಮಿಯನ್ನು ಸಂತೋಷ (Happiness) , ಸಂಪತ್ತು, ವೈಭವ, ಐಶ್ವರ್ಯ ಮತ್ತು ಸಂಪತ್ತಿನ ದೇವತೆ (Goddess) ಎಂದು ಹೇಳಲಾಗುತ್ತದೆ. ಪುರಾಣಗಳ ಪ್ರಕಾರ, ತಾಯಿ ಲಕ್ಷ್ಮಿಯು ಜಗತ್ತನ್ನು ಕಾಪಾಡುವ ಭಗವಾನ್ ವಿಷ್ಣುವನ್ನು (Lord Vishnu) ಮದುವೆ (Marriage) ಯಾಗಿದ್ದಾಳೆ. ಲಕ್ಷ್ಮಿ ದೇವಿಯ ಆಶೀರ್ವಾದ (Blessings) ಸಿಕ್ಕರೆ ಜೀವನ (Life) ದಲ್ಲಿ ಎಂದಿಗೂ ಸಂಪತ್ತು ಮತ್ತು ಐಷಾರಾಮಿ ಜೀವನಕ್ಕೆ ಯಾವುದೇ ಕೊರತೆ ಇರುವುದಿಲ್ಲ. ಈ ಕಾರಣಕ್ಕಾಗಿ ಪ್ರತಿಯೊಬ್ಬ ವ್ಯಕ್ತಿಯು ಲಕ್ಷ್ಮಿ ದೇವಿಯನ್ನು ಮೆಚ್ಚಿಸಲು ತನ್ನ ಕೈಲಾದಷ್ಟು ಪ್ರಯತ್ನಿಸುತ್ತಾನೆ. ಪ್ರತಿ ದಿನ ತಾಯಿ ಲಕ್ಷ್ಮಿ ಪೂಜೆ ಮಾಡ್ತಾರೆ. ಉಪವಾಸ (Fasting), ವೃತ ಸೇರಿದಂತೆ ಅನೇಕ ಪೂಜಾ ಕಾರ್ಯಗಳನ್ನು ಮಾಡ್ತಾರೆ. ಆದ್ರೆ ಎಲ್ಲರಿಗೂ ಲಕ್ಷ್ಮಿ ಒಲಿಯುವುದಿಲ್ಲ. ತಾಯಿ ಲಕ್ಷ್ಮಿ ಮನೆಗೆ ಬಂದ್ರೂ ಮನೆಯಲ್ಲಿ ನೆಲೆಸೋದು ಬಹಳ ಅಪರೂಪ. ತಾಯಿ ಲಕ್ಷ್ಮಿ ಯಾರದೇ ಮನೆಯಲ್ಲಿ ವಾಸಿಸುವ ಮೊದಲು ಕೆಲವು ಸೂಚನೆಗಳನ್ನು ನೀಡುತ್ತಾಳೆ ಎಂದು ನಂಬಲಾಗಿದೆ. ಇಂದು ಲಕ್ಷ್ಮಿ ಯಾವ ಸಂಕೇತ ನೀಡ್ತಾಳೆ ಎಂಬುದನ್ನು ನಾವು ಹೇಳ್ತೇವೆ.
ಮುಂಜಾನೆ ಏಳ್ತಿದ್ದಂತೆ ಪೊರಕೆ ಕಂಡ್ರೆ : ನಂಬಿಕೆಗಳ ಪ್ರಕಾರ, ಪೊರಕೆಯನ್ನು ಲಕ್ಷ್ಮಿ ದೇವಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಒಬ್ಬ ವ್ಯಕ್ತಿಯು ಬೆಳಿಗ್ಗೆ ಎದ್ದ ತಕ್ಷಣ ಮನೆಯ ಮುಂದೆ ಅಥವಾ ಮನೆ ಸುತ್ತ ಯಾರಾದ್ರೂ ಗುಡಿಸುವುದನ್ನು ನೋಡಿದರೆ ಅದನ್ನು ಮಂಗಳಕರ ಚಿಹ್ನೆ ಎಂದು ಪರಿಗಣಿಸಲಾಗುತ್ತದೆ. ಒಂದ್ವೇಳೆ ನಿಮ್ಮ ಕಣ್ಣಿಗೆ ಇದು ಬಿದ್ದರೆ ಶೀಘ್ರದಲ್ಲೇ ನಿಮ್ಮ ಜೀವನದಲ್ಲಿ ಹಣದ ಮಳೆ ಬೀಳಲಿದೆ ಮತ್ತು ಎಲ್ಲಾ ರೀತಿಯ ಐಷಾರಾಮಿ ಸೌಲಭ್ಯ ನಿಮಗೆ ಸಿಗುತ್ತದೆ ಎಂಬುದನ್ನು ನೀವು ತಿಳಿಯಬಹುದು.
VAT SAVITRI VRAT 2022: ಆಚರಣೆ ಹೇಗೆ? ಪೂಜಾ ಮುಹೂರ್ತ ಮತ್ತು ವಿಧಾನವೇನು?
ತುಳಸಿ ಗಿಡದ ಬಳಿ ಹಲ್ಲಿ : ತುಳಸಿ ಗಿಡದ ಬಳಿ ಹಲ್ಲಿ ನಡೆಯುವುದನ್ನು ನೀವು ಎಂದಾದರೂ ಕಂಡರೆ, ಅದನ್ನು ಮಂಗಳಕರ ಸಂಕೇತವೆಂದು ಪರಿಗಣಿಸಲಾಗುತ್ತದೆ. ತುಳಸಿ ಗಿಡದ ಬಳಿ ಹಲ್ಲಿ ಕಂಡರೆ ಆ ವ್ಯಕ್ತಿ ಜೀವನದ ಪ್ರತಿಯೊಂದು ಕಾರ್ಯದಲ್ಲೂ ಯಶಸ್ಸನ್ನು ಪಡೆಯುತ್ತಾನೆ ಎಂಬ ಸೂಚನೆಯಾಗಿದೆ.
ಶಂಖದ ನಾದ : ಮುಂಜಾನೆ ಕೆಲಸಕ್ಕೆ ಹೋಗುವಾಗ ಶಂಖದ ಸದ್ದು ಕೇಳಿದರೆ ಶುಭಕರ. ಶಂಖದ ಧ್ವನಿ ಕೇಳಿದ್ರೆ ಲಕ್ಷ್ಮಿ ದೇವಿಯ ಆಶೀರ್ವಾದ ನಿಮಗೆ ಸಿಗುತ್ತದೆ ಎಂದರ್ಥ. ಸದಾ ನೀವು ಹೋಗುವ ಕೆಲಸ ಮಂಗಳಕರವಾಗುತ್ತದೆ ಎಂಬ ಸೂಚನೆ.
ಕನಸಿನಲ್ಲಿ ಇದು ಕಾಣಿಸಿದ್ರೆ ಶುಭ ಸಂಕೇತ : ಒಬ್ಬ ವ್ಯಕ್ತಿಯು ರಾತ್ರಿ ಕನಸಿನಲ್ಲಿ ಪೊರಕೆ, ಚಿತಾಭಸ್ಮ, ಗೂಬೆ, ಶಂಖ, ಆನೆ, ಹಾವು ಮತ್ತು ಗುಲಾಬಿ ಹೂವುಗಳನ್ನು ನೋಡಿದರೆ, ಅದು ಜೀವನದಲ್ಲಿ ಸಂಪತ್ತು ಮತ್ತು ವೈಭವದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಶೀಘ್ರದಲ್ಲೇ ಲಕ್ಷ್ಮಿ ನಿಮಗೆ ಸಂಪತ್ತು ನೀಡ್ತಾಳೆ ಎಂಬ ಸೂಚನೆಯಾಗಿದೆ.
ಹಕ್ಕಿಯ ಗೂಡು : ನಿಮ್ಮ ಮನೆಯ ಗೋಡೆಗಳು ಅಥವಾ ಚಾವಣಿಯ ಮೂಲೆಯಲ್ಲಿ ಹಕ್ಕಿ ಗೂಡುಕಟ್ಟಿದರೆ, ಅದನ್ನು ಅತ್ಯಂತ ಮಂಗಳಕರ ಚಿಹ್ನೆ ಎಂದು ಪರಿಗಣಿಸಲಾಗುತ್ತದೆ. ವ್ಯಕ್ತಿಯ ಪ್ರತಿಯೊಂದು ಕಾರ್ಯವೂ ತ್ವರಿತವಾಗಿ ಮತ್ತು ಯಾವುದೇ ಅಡೆತಡೆಗಳಿಲ್ಲದೆ ಪೂರ್ಣಗೊಳ್ಳುತ್ತದೆ ಮತ್ತು ವ್ಯಕ್ತಿಯು ಅಪಾರ ಸಂಪತ್ತನ್ನು ಪಡೆಯುತ್ತಾನೆ ಎಂದು ನಂಬಲಾಗಿದೆ.
ಕ್ರೂರ ಗ್ರಹ ರಾಹು 2023ರವರೆಗೆ ಈ 3 ರಾಶಿಗಳ ಮೇಲೆ ಕೃಪೆ ತೋರುತ್ತಾನೆ!
ಮೂರು ಹಲ್ಲಿಗಳು ಒಟ್ಟಿಗೆ ಕಾಣಿಸಿಕೊಂಡ್ರೆ ಶುಭ : ಒಬ್ಬ ವ್ಯಕ್ತಿಯು ಮನೆಯಲ್ಲಿ ಮೂರು ಹಲ್ಲಿಗಳನ್ನು ಒಟ್ಟಿಗೆ ನೋಡಿದರೆ ಅದು ಮಂಗಳಕರ ಎನ್ನಲಾಗುತ್ತದೆ. ಲಕ್ಷ್ಮಿ ಶೀಘ್ರದಲ್ಲೇ ನಿಮ್ಮ ಮೇಲೆ ವಿಶೇಷ ಆಶೀರ್ವಾದವನ್ನು ನೀಡುತ್ತಾಳೆ ಎಂಬ ಸೂಚನೆ. ಇದ್ದಕ್ಕಿದ್ದಂತೆ ಅನೇಕ ಮೂಲಗಳಿಂದ ಹಣ ಪ್ರಾಪ್ತಿಯಾಗುತ್ತದೆ ಎಂದು ಅರ್ಥೈಸಿಕೊಳ್ಳಿ.