Vat Savitri Vrat 2022: ಆಚರಣೆ ಹೇಗೆ? ಪೂಜಾ ಮುಹೂರ್ತ ಮತ್ತು ವಿಧಾನವೇನು?

By Suvarna News  |  First Published May 25, 2022, 2:29 PM IST

ವಟ ಸಾವಿತ್ರಿ ವ್ರತದ ದಿನ ಸೋಮಾವತಿ ಅಮಾವಾಸ್ಯೆಯಾಗಿದ್ದು, ಈ ದಿನ ನಡೆಸುವ ಉಪವಾಸ, ಪೂಜೆ, ಸ್ನಾನ, ದಾನಗಳು ಅತ್ಯುತ್ತಮ ಫಲಗಳನ್ನು ನೀಡುತ್ತವೆ. ವಟಸಾವಿತ್ರಿ ವ್ರತ ಆಚರಣೆ ಹೇಗೆ?


ಸಾವಿತ್ರಿಯು ಯಮರಾಜನಿಂದ ತನ್ನ ಪತಿ ಸತ್ಯವಾನ್ ಜೀವವನ್ನು ಮರಳಿ ತಂದ ದಿನದ ಸ್ಮರಣಾರ್ಥ ವಟ ಸಾವಿತ್ರಿ(Vat Savitri) ವ್ರತ ಆಚರಿಸಲಾಗುತ್ತದೆ. ಈ ದಿನ ಮಹಿಳೆಯರು ತಮ್ಮ ಗಂಡನ ದೀರ್ಘಾಯುಷ್ಯ ಕೋರಿ ಉಪವಾಸ ಆಚರಿಸುತ್ತಾರೆ. ಜೊತೆಗೆ ಆಲದ ಮರವನ್ನು ಪೂಜಿಸುತ್ತಾರೆ. ಇದರಿಂದ ದೀರ್ಘಾಯುಷ್ಯದ ಫಲ, ಸಂತೋಷ ಮತ್ತು ಸಮೃದ್ಧಿ ಮತ್ತು ಅಖಂಡ ಸೌಭಾಗ್ಯ ಲಭಿಸುತ್ತದೆ ಎಂಬ ನಂಬಿಕೆ ಇದೆ. 

ಪ್ರತಿ ವರ್ಷ ಕೃಷ್ಣ ಪಕ್ಷದ ಅಮಾವಾಸ್ಯೆ(new moon day)ಯಂದು ವಟ ಸಾವಿತ್ರಿ ವ್ರತವನ್ನು ಆಚರಿಸಲಾಗುತ್ತದೆ. ಈ ವರ್ಷ ಈ ದಿನಾಂಕವು ಬಹಳ ಮಹತ್ವದ್ದಾಗಿದೆ. ಏಕೆಂದರೆ ಹಲವು ವರ್ಷಗಳ ನಂತರ, ಸೋಮಾವತಿ ಅಮವಾಸ್ಯೆಯ ಶುಭ ದಿನದಂದೇ ವಟ ಸಾವಿತ್ರಿ ವ್ರತ ಬರುತ್ತಿದೆ. ಅಂದರೆ ಈ ಕಾಕತಾಳೀಯ ಮೇ 30ರಂದು ಸಂಭವಿಸುತ್ತಿದೆ. ಸೋಮಾವತಿ ಅಮವಾಸ್ಯೆಯ ದಿನ ಮಾಡುವ ಉಪವಾಸ, ಪೂಜೆ-ಪುನಸ್ಕಾರ, ಸ್ನಾನ ಮತ್ತು ದಾನ ಇತ್ಯಾದಿಗಳು ಅಕ್ಷಯ ಫಲ ನೀಡುತ್ತದೆ. ವಟ ಸಾವಿತ್ರಿ ವ್ರತವನ್ನು ಅತ್ಯಂತ ಕಷ್ಟಕರವಾದ ಉಪವಾಸವೆಂದು ಪರಿಗಣಿಸಲಾಗಿದೆ. ಈ ದಿನ, ವಿವಾಹಿತ ಮಹಿಳೆಯರು ತಮ್ಮ ಗಂಡನ ದೀರ್ಘಾಯುಷ್ಯ ಕೋರಿ ಉಪವಾಸವನ್ನು ಆಚರಿಸುತ್ತಾರೆ. ವಟ ಸಾವಿತ್ರಿ ವ್ರತದ ಸಮಯದಲ್ಲಿ ಸಂಪ್ರದಾಯದ ಪ್ರಕಾರ ಪೂಜೆ ಮಾಡುವುದರಿಂದ ಪೂಜೆಯು ಸಂಪೂರ್ಣ ಫಲಿತಾಂಶವನ್ನು ನೀಡುತ್ತದೆ ಎಂದು ನಂಬಲಾಗಿದೆ.

Tap to resize

Latest Videos

ಶನಿ, ಮಂಗಳ ಗ್ರಹಗಳನ್ನು ಶಾಂತಗೊಳಿಸಲು ದುರಭ್ಯಾಸ ಬಿಟ್ಟು ಬಿಡಿ

ವಟ ಸಾವಿತ್ರಿ ವ್ರತ ಮುಹೂರ್ತ(Muhurt)
ಅಮವಾಸ್ಯೆ ತಿಥಿ ಪ್ರಾರಂಭ - ಮೇ 29, 2022 ಮಧ್ಯಾಹ್ನ 02:54 
ಅಮವಾಸ್ಯೆಯ ತಿಥಿ ಅಂತ್ಯ - ಮೇ 30, 2022 ರಂದು ಸಂಜೆ 04:59

ವಟ ಸಾವಿತ್ರಿ ಉಪವಾಸದ ಪೂಜಾ ಸಾಮಗ್ರಿ(pooja materials)
ವಟ ಸಾವಿತ್ರಿ ಉಪವಾಸದ ಪೂಜಾ ಸಾಮಗ್ರಿಗಳಿವು; ಸಾವಿತ್ರಿ-ಸತ್ಯವಾನನ ವಿಗ್ರಹಗಳು, ಧೂಪ, ದೀಪ, ತುಪ್ಪ, ಬಿದಿರಿನ ಬೀಸಣಿಗೆ, ಕೆಂಪು ರಕ್ಷಾದಾರ, ಜೇನುಗೂಡು, ಹಸಿ ಹತ್ತಿ, ಆಲದ ಹಣ್ಣು, ನೀರು ತುಂಬಿದ ಕಲಶ ಇತ್ಯಾದಿ.

ಬರಲಿರುವ ಜ್ಯೇಷ್ಠ ಮಾಸದ ಹಬ್ಬ, ವ್ರತ, ಉಪವಾಸ ಆಚರಣೆಗಳಿವು..

ವಟ ಸಾವಿತ್ರಿ ವ್ರತ ಪೂಜಾ ವಿಧಾನ(pooja method)

  • ವ್ರತದ ದಿನ ಬೆಳಿಗ್ಗೆ ಮನೆಯನ್ನು ಸ್ವಚ್ಛಗೊಳಿಸಿದ ನಂತರ, ಸ್ನಾನ ಮಾಡಿ.
  • ಇದರ ನಂತರ ಪವಿತ್ರ ಜಲವನ್ನು ಇಲ್ಲವೇ ಗೋ ಮೂತ್ರವನ್ನು ಮನೆಯಾದ್ಯಂತ ಸಿಂಪಡಿಸಿ.
  • ಬಿದಿರಿನ ಬುಟ್ಟಿಯಲ್ಲಿ ಏಳು ರೀತಿಯ ಕಾಳುಗಳನ್ನು ತುಂಬಿ ಬ್ರಹ್ಮನ ವಿಗ್ರಹವನ್ನು ಸ್ಥಾಪಿಸಿ.
  • ಬ್ರಹ್ಮನ ಎಡಭಾಗದಲ್ಲಿ ಸಾವಿತ್ರಿಯ ವಿಗ್ರಹವನ್ನು ಇಡಿ.
  • ಹಾಗೆಯೇ ಎರಡನೇ ಬುಟ್ಟಿಯಲ್ಲಿ ಸತ್ಯವಾನ್ ಮತ್ತು ಸಾವಿತ್ರಿಯ ವಿಗ್ರಹಗಳನ್ನು ಇಡಿ. ಈ ಬುಟ್ಟಿಗಳನ್ನು ಆಲದ ಮರದ ಕೆಳಗೆ ತೆಗೆದುಕೊಂಡು ಹೋಗಿ.
  • ಇದರ ನಂತರ ಬ್ರಹ್ಮ ಮತ್ತು ಸಾವಿತ್ರಿಯನ್ನು ಆರಾಧಿಸಿ.
  • ಪೂಜೆಯಲ್ಲಿ ನೀರು, ಹಸಿ ಹತ್ತಿ, ನೆನೆಸಿದ ಬೇಳೆ, ಹೂವುಗಳು ಮತ್ತು ಧೂಪವನ್ನು ಬಳಸಿ.
  • ನಂತರ ಹತ್ತಿರದಲ್ಲಿರುವ ಆಲದ ಮರಕ್ಕೆ ನೀರೆರೆಯಿರಿ. ಬಳಿಕ, ಅದರ ಕಾಂಡದ ಸುತ್ತಲೂ ಕೇಸರಿ ಅಥವಾ ಕೆಂಪು ದಾರವನ್ನು ಸುತ್ತಿ ಮೂರು ಬಾರಿ ಪ್ರದಕ್ಷಿಣೆ ಹಾಕಿ.
  • ನಂತರ ಎಲೆಗಳ ಆಭರಣಗಳನ್ನು ಧರಿಸಿದ ವಟ ಸಾವಿತ್ರಿಯ ವ್ರತ ಕಥೆಯನ್ನು ಶ್ರವಣ ಮಾಡಿ ಇಲ್ಲವೇ ಓದಿರಿ.
  • ನಂತರ ಅತ್ತೆಯ ಪಾದ ಮುಟ್ಟಿ ಆಶೀರ್ವಾದ ಪಡೆಯಿರಿ.
  • ಪೂಜೆಯ ಕೊನೆಯಲ್ಲಿ ಬಿದಿರಿನ ಪಾತ್ರೆಯಲ್ಲಿ ವಸ್ತ್ರ, ಹಣ್ಣು ಇತ್ಯಾದಿಗಳನ್ನು ಇಟ್ಟು ಬ್ರಾಹ್ಮಣರಿಗೆ ದಾನ ಮಾಡಿ.
  • ಈ ಉಪವಾಸ(fast)ದಲ್ಲಿ ಸಾವಿತ್ರಿ-ಸತ್ಯವಾನರ ಪುಣ್ಯ ಕಥೆಯನ್ನು ಕೇಳಲು ಮರೆಯದಿರಿ. ಪೂಜೆ ಮಾಡುವಾಗ ಈ ಕಥೆಯನ್ನು ಇತರರಿಗೆ ಹೇಳಿ.
     
click me!