ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳ ರಾಜ ಎಂದೇ ಕರೆಯಲಾಗುವ ಸೂರ್ಯ ದೇವ ಆಶ್ಲೇಷಾ ನಕ್ಷತ್ರದಲ್ಲಿ ಪ್ರವೇಶಿಸಿದ್ದಾನೆ. ಇದರಿಂದ ಅನೇಕ ರಾಶಿಯವರ ಅದೃಷ್ಟವು ಬೆಳಗಬಹುದು. ಈ ಕುರಿತು ಇಲ್ಲಿದೆ ಮಾಹಿತಿ.
ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳ ರಾಜ ಎಂದೇ ಕರೆಯಲಾಗುವ ಸೂರ್ಯ ದೇವ ಆಶ್ಲೇಷಾ ನಕ್ಷತ್ರದಲ್ಲಿ ಪ್ರವೇಶಿಸಿದ್ದಾನೆ. ಇದರಿಂದ ಅನೇಕ ರಾಶಿಯವರ ಅದೃಷ್ಟವು ಬೆಳಗಬಹುದು. ಈ ಕುರಿತು ಇಲ್ಲಿದೆ ಮಾಹಿತಿ.
ಜ್ಯೋತಿಷ್ಯದಲ್ಲಿ ಗ್ರಹಗಳ ರಾಜ ಎಂದು ಕರೆಯಲ್ಪಡುವ ಸೂರ್ಯ (sun) ನು ಪ್ರಮುಖ ಪಾತ್ರವನ್ನು ವಹಿಸುತ್ತಾನೆ. ತಂದೆ, ಆತ್ಮ ಮತ್ತು ಧೈರ್ಯದ ಅಂಶವಾಗಿರುವ ಸೂರ್ಯನು, ಎಲ್ಲಾ 12 ರಾಶಿಚಕ್ರ (Zodiac) ದ ಚಿಹ್ನೆಗಳ ಮೇಲೆ ಪ್ರಭಾವ ಬೀರುತ್ತಾನೆ. ಸೂರ್ಯ ಆಗಸ್ಟ್ 3ರಂದು ಆಶ್ಲೇಷಾ ನಕ್ಷತ್ರವನ್ನು ಪ್ರವೇಶಿಸಿದ್ದಾನೆ ಮತ್ತು ಆಗಸ್ಟ್ 17ರವರೆಗೆ ಅಲ್ಲಿಯೇ ಇರುತ್ತಾನೆ. ಈ ಸಮಯದಲ್ಲಿ ಕೆಲವು ರಾಶಿಚಕ್ರ ಚಿಹ್ನೆಗಳು ಗರಿಷ್ಠ ಪ್ರಯೋಜನಗಳನ್ನು ಪಡೆಯುವ ಸಾಧ್ಯತೆಯಿದೆ. ಆ ಅದೃಷ್ಟ (good luck) ದ ರಾಶಿಗಳು ಯಾವುವು ಎಂದು ತಿಳಿಯೋಣ.
ಮೇಷ ರಾಶಿ (Aries)
ಮೇಷ ರಾಶಿ ಆಶ್ಲೇಷಾ ನಕ್ಷತ್ರದಲ್ಲಿ ಸೂರ್ಯನ ಸಂಚಾರವು ಮೇಷ ರಾಶಿಯವರಿಗೆ ಮಂಗಳಕರವೆಂದು ಪರಿಗಣಿಸಲಾಗಿದೆ. ಈ ಸಮಯದಲ್ಲಿ ನೀವು ಸರ್ಕಾರಿ ವಲಯದಲ್ಲಿ ಪ್ರಯೋಜನಗಳನ್ನು ಅನುಭವಿಸಬಹುದು. ಇದರಿಂದಾಗಿ ಬಡ್ತಿ ಸಾಧ್ಯ. ನಿಮ್ಮ ವೃತ್ತಿ ಜೀವನವೂ ಸುಧಾರಿಸಬಹುದು. ನೀವು ವ್ಯಾಪಾರಸ್ಥರಾಗಿದ್ದರೆ ನಿಮ್ಮ ಆರ್ಥಿಕ ಸ್ಥಿತಿ (Financial status) ಯು ಸುಧಾರಿಸುವ ಸಾಧ್ಯತೆಯಿದೆ. ಈ ಅವಧಿಯಲ್ಲಿ ನೀವು ಭೂಮಿ, ಕಟ್ಟಡ ಮತ್ತು ವಾಹನವನ್ನು ಖರೀದಿಸಬಹುದು.
ಸ್ಯಾಂಡಲ್ ವುಡ್‌ಗೆ ಸಾವಿನ ಕಂಟಕ; ಕಾರಣ ಹೇಳುತ್ತಿದೆ ಜ್ಯೋತಿಷ್ಯ..!
ವೃಷಭ ರಾಶಿ (Taurus)
ಆಶ್ಲೇಷ ನಕ್ಷತ್ರದಲ್ಲಿ ಸೂರ್ಯನ ಸಂಚಾರವು ವೃಷಭ ರಾಶಿಯವರಿಗೆ ಅನುಕೂಲಕರವೆಂದು ಪರಿಗಣಿಸಲಾಗಿದೆ. ನೀವು ಅದೃಷ್ಟದ ಬೆಂಬಲವನ್ನು ಪಡೆಯಬಹುದು. ಇದರಿಂದಾಗಿ ನಿಮ್ಮ ಜೀವನದಲ್ಲಿ ಸಕಾರಾತ್ಮಕ (Positive) ಘಟನೆಗಳು ಸಂಭವಿಸುತ್ತವೆ. ನಿಮ್ಮ ವ್ಯಾಪಾರ ಮತ್ತು ಉದ್ಯೋಗ ಎರಡರಲ್ಲಿಯೂ ಪ್ರಗತಿ ಮತ್ತು ಯಶಸ್ಸಿನ ಸಾಧ್ಯತೆಗಳಿವೆ. ಆದರೂ ಈ ಸಮಯದಲ್ಲಿ ನೀವು ನಿಮ್ಮ ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಹಳೆಯ ಸ್ನೇಹಿತ (friend) ರನ್ನು ಭೇಟಿಯಾಗುವ ಮತ್ತು ಮರು ಸಂಪರ್ಕಿಸುವ ಸಾಧ್ಯತೆಯೂ ಇದೆ.
ಕಟಕ ರಾಶಿ (Cancer)
ಆಶ್ಲೇಷಾ ನಕ್ಷತ್ರಕ್ಕೆ ಸೂರ್ಯನ ಪ್ರವೇಶವು ಕಟಕ ರಾಶಿಯವರಿಗೆ ಮಂಗಳಕರವೆಂದು ಪರಿಗಣಿಸಲಾಗಿದೆ. ಈ ಸಮಯದಲ್ಲಿ ಅದೃಷ್ಟವು ನಿಮ್ಮನ್ನು ಬೆಂಬಲಿಸುತ್ತದೆ. ಈ ಕಾರಣದಿಂದಾಗಿ ನಿಮ್ಮ ಜೀವನದಲ್ಲಿ ಧನಾತ್ಮಕ (Positive) ಬೆಳವಣಿಗೆ ಉಂಟಾಗಬಹುದು. ನಿಮ್ಮ ವ್ಯಾಪಾರ ಮತ್ತು ಉದ್ಯೋಗದಲ್ಲಿ ಯೋಗವನ್ನು ಮಾಡಲಾಗುವುದು. ಈ ಅವಧಿಯಲ್ಲಿ ಮುರಿದ ಸಂಬಂಧಗಳನ್ನು ಸರಿಪಡಿಸಲು ಅಥವಾ ಹಿಂದಿನ ಸಮಸ್ಯೆಗಳನ್ನು ಪರಿಹರಿಸಲು ಅವಕಾಶಗಳು ಸಿಗಲಿದೆ.
ಸಿಂಹ ರಾಶಿ (Leo)
ಆಶ್ಲೇಷಾ ನಕ್ಷತ್ರದಲ್ಲಿ ಸೂರ್ಯನ ಸಂಚಾರವು ಸಿಂಹ ರಾಶಿಯವರಿಗೆ ಲಾಭವನ್ನು ನೀಡುತ್ತದೆ. ಈ ಅವಧಿಯಲ್ಲಿ ನಿಮ್ಮ ಆತ್ಮವಿಶ್ವಾಸ (Confidence) ಹೆಚ್ಚಾಗುವ ಸಾಧ್ಯತೆಯಿದೆ. ನಿಮ್ಮ ಕೆಲಸದಲ್ಲಿ ಲಾಭದ ಸಾಧ್ಯತೆಗಳಿವೆ ಮತ್ತು ಸ್ಥಗಿತಗೊಂಡ ಕೆಲಸವನ್ನು ಪುರ್ಣಗೊಳಿಸಬಹುದು. ಹಣಕಾಸಿನ ಸುಧಾರಣೆಗಳನ್ನು ನಿರೀಕ್ಷಿಸಲಾಗಿದೆ ಮತ್ತು ನಿಮ್ಮ ವ್ಯವಹಾರದಲ್ಲಿ ನೀವು ಬೆಳವಣಿಗೆಯನ್ನು ಅನುಭವಿಸಬಹುದು.
ಈ ರಾಶಿಯ ಹುಡುಗಿಯನ್ನು ಮದುವೆಯಾಗಲು ಪುಣ್ಯ ಮಾಡಿರಬೇಕು; ಇವರಿಗೆ ಪತಿಯೇ ದೈವ..!
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.