ಶನಿದೇವರ ಎಂಟು ಹೆಂಡತಿಯರ ಕತೆ ನಿಮಗೆ ಗೊತ್ತೇ?

By Suvarna News  |  First Published Mar 22, 2021, 1:06 PM IST

ಶನಿದೇವರ ದೃಷ್ಟಿ ಭಯಕಾರಕ ಎಂದು ನಿಮಗೆ ಗೊತ್ತೇ ಇದೆ. ಅದರ ಕಾರಣ ಸ್ಥಾನದಲ್ಲಿರುವವಳು ಆತನ ಹೆಂಡತಿ ಎಂಬುದು ನಿಮಗೆ ಗೊತ್ತೇ?


ಭಾರತೀಯ ಜ್ಯೋತಿಷ್ಯಶಾಸ್ತ್ರದ ಪ್ರಕಾರ ರವಿ ಪುತ್ರನಾದ ಶನಿಯು ಚಿಕ್ಕಂದಿನಿಂದಲೇ ಬಹಳ ಕಷ್ಟ ಪಟ್ಟು ಬೆಳೆದು ದೊಡ್ಡವನಾದ ಮೇಲೂ ಸಹ ಅನೇಕ ಅವಮಾನ, ಅಪಮಾನಗಳನ್ನು ಅನುಭವಿಸಿ ಎಲ್ಲರಿಂದ ಶಾಪಕ್ಕೆ ಗುರಿಯಾದ ವ್ಯಕ್ತಿ. ಆದರೆ ಎಷ್ಟೇ ಕಷ್ಟ ಬಂದರೂ ಸತ್ಯ ನಿಷ್ಠೆಯನ್ನು ಬಿಡದ ಛಲಗಾರ. ಹಾಗಾಗಿ ಇತರರು ಕೂಡ ನನ್ನ ಹಾಗೆ ಯಾವುದೇ ಕಾರಣಕ್ಕೂ ಸತ್ಯದ ದಾರಿಯಿಂದ ಬೇರೆಡೆಗೆ ಹೋಗಬಾರದೆಂದು ಬಯಸುತ್ತಾನೆ. ಒಂದು ವೇಳೆ ಇದನ್ನು ಮೀರಿ ನಡೆದರೆ ಶನಿ ದೆಶೆಯ ಅಥವಾ ಸಾಡೇಸಾತ್ ಸಮಯದಲ್ಲಿ ಆ ವ್ಯಕ್ತಿ ಬಹಳಷ್ಟು ಕಷ್ಟಗಳನ್ನು ಶನಿಯ ಕಡೆಯಿಂದ ಎದುರು ನೋಡಬೇಕಾಗುತ್ತದೆ.

ಶನಿ ನಿಜವಾಗಿಯೂ ಕೆಟ್ಟ ದೇವರಲ್ಲ. ಕೇವಲ ಒಳ್ಳೆಯ ಕೆಲಸಗಳನ್ನು ಮಾಡಿ ಸತ್ಯದ ಹಾದಿಯಲ್ಲಿ ನಡೆದಂತಹ ವ್ಯಕ್ತಿಗಳಿಗೆ ಶನಿ ದಶೆಯಲ್ಲಿ ಅಥವಾ ಸಾಡೆಸಾತ್ ಸಮಯದಲ್ಲಿ ಬಹಳಷ್ಟು ಅಂದರೆ ಅವರ ನಿರೀಕ್ಷೆಗೂ ಮೀರಿ ಒಳ್ಳೆಯ ಪ್ರತಿಫಲಗಳನ್ನು ಕೊಡುತ್ತಾನೆ. ಶನಿಯ ಪ್ರೀತಿಗೆ ನಾವು ಪಾತ್ರರಾಗಬೇಕಾದರೆ ಮೊದಲು ಶನಿಯ ಹೆಂಡತಿಯರನ್ನು ಭಕ್ತಿಯಿಂದ ಪೂಜಿಸಬೇಕು.

Tap to resize

Latest Videos

undefined

ಶನಿಗೆ ಎಂಟು ಜನ ಹೆಂಡತಿಯರಿದ್ದಾರೆ. ದ್ವಾಜಿನಿ, ಧಾಮಿನಿ, ಕಂಕಲಿ, ಕಲಹಪ್ರಿಯ, ಕಂಟಕಿ, ತುರಂಗಿ, ಮಹಿಷಿ ಮತ್ತು ಅಜ. ಮನುಷ್ಯರಾದ ನಾವು ಶನಿ ದೇವನ ಕೃಪೆಗೆ ಪಾತ್ರರಾಗಲು ಈ ಹೆಸರುಗಳನ್ನು ಭಯ ಭಕ್ತಿಯಿಂದ ಪಠಿಸಬೇಕು. ಮುಖ್ಯವಾಗಿ ಶನಿವಾರದ ದಿನ ಶುಚಿರ್ಭೂತರಾಗಿ ಈ ಕೆಲಸ ಮಾಡಬೇಕು. ಶನಿದೇವನ ದೃಷ್ಟಿ ಕೆಟ್ಟದ್ದು ಎಂಬ ಭಾವನೆ ಇಂದಿಗೆ ಜನರಲ್ಲಿ ಬರಬೇಕಾದರೆ ಅದಕ್ಕೆ ಆತನ ಹೆಂಡತಿ ಧಾಮಿನಿಯೇ ಕಾರಣ ಎಂದು ಪುರಾಣಗಳು ಹೇಳುತ್ತವೆ.

ನಿಮ್ಮ ಕೆಲಸ ಆಗಬೇಕೆ? ಈ ರಾಶಿಯವರು ಈ ಬಣ್ಣದ ಬಟ್ಟೆ ಧರಿಸಿ! ...

ಪುರಾಣಗಳಲ್ಲಿ ಉಲ್ಲೇಖವಿರುವ ಹಾಗೆ ಶನಿದೇವನು ಸೂರ್ಯ ಮತ್ತು ಛಾಯಾ ದೇವಿಯ ಮಗ. ನೋಡಲು ಕಪ್ಪಗಿದ್ದು, ಕಬ್ಬಿಣದಿಂದ ಮಾಡಿದ ತನ್ನ ಸಾರೋಟಿನ ಮುಂಭಾಗದಲ್ಲಿ ರಣ ಹದ್ದಿನ ಪ್ರತಿಮೆಯೊಂದಿಗೆ ಸಾಗುತ್ತಾನೆ. ಚಿಕ್ಕ ವಯಸ್ಸಿನಿಂದಲೂ ಶನಿಗೆ ಶ್ರೀಕೃಷ್ಣ ದೇವರೆಂದರೆ ಬಹಳ ಅಚ್ಚು ಮೆಚ್ಚು ಮತ್ತು ಭಕ್ತಿ ಕೂಡ.

ಆಗಾಗ ಶನಿಯು ಶ್ರೀಕೃಷ್ಣನನ್ನು ಜಪಿಸುತ್ತಾ ಧ್ಯಾನಕ್ಕೆ ಕೂರುತ್ತಾ ಇದ್ದದ್ದೇ, ಇದಕ್ಕೆ ಉದಾಹರಣೆ. ದೊಡ್ಡವನಾದ ಮೇಲೂ ಸಹ ಇದೇ ರೀತಿ ಮುಂದುವರೆಸುತ್ತಾನೆ. ಪ್ರೌಢಾವಸ್ಥೆಗೆ ಬಂದ ಮೇಲೆ ಚಿತ್ರರಥನ ಮಗಳಾದ ಧಾಮಿನಿಯನ್ನು ಮದುವೆಯಾಗುತ್ತಾನೆ. ಧಾಮಿನಿಗೆ ಕೆಲವು ದೈವೀಶಕ್ತಿಗಳು ಹುಟ್ಟಿನಿಂದಲೇ ಬಂದಿದ್ದವು. ಬಹಳಷ್ಟು ಸುಂದರವಾಗಿದ್ದ ಅವಳು ಬುದ್ಧಿವಂತೆಯೂ ಆಗಿದ್ದಳು.

ಧಾಮಿನಿ ಒಮ್ಮೆ ಹೀಗೆ ಯೋಚಿಸುತ್ತಾ ಕುಳಿತಿರಬೇಕಾದರೆ ಆಕೆಯ ಮನಸ್ಸಿನಲ್ಲಿ ಒಂದು ಬಲವಾದ ಆಲೋಚನೆ ಬಂತು. ಅದೇನೆಂದರೆ ನಾನೇಕೆ ಗಂಡು ಮಗುವಿನ ತಾಯಿ ಆಗಬಾರದು ಎಂದು. ತಕ್ಷಣ ಸ್ವಲ್ಪವೂ ತಡ ಮಾಡದೆ ಶನಿ ದೇವನ ಬಳಿ ಬಂದು ತನ್ನ ಮನಸ್ಸಿನ ಬಯಕೆಯನ್ನು ತಿಳಿಸಿ ಹೇಳಿದಳು. ಆದರೆ ಆ ಕ್ಷಣದಲ್ಲಿ ಶನಿ ದೇವನು ಶ್ರೀಕೃಷ್ಣನ ಜಪ ಮಾಡುತ್ತಾ ಧ್ಯಾನದಲ್ಲಿ ಮಗ್ನನಾಗಿದ್ದನು. ಯಾರೂ ತನ್ನನ್ನು ಎಚ್ಚರ ಪಡಿಸಬಾರದು ಎಂಬ ಇಚ್ಛೆಯಿಂದ ಧ್ಯಾನದಲ್ಲಿ ಕುಳಿತಿದ್ದನು. ಧಾಮಿನಿಯು ಎಷ್ಟೇ ಬಾರಿ ಶನಿಯನ್ನು ಎಚ್ಚರಿಸಲು ಪ್ರಯತ್ನ ಪಟ್ಟರೂ ಸಾಧ್ಯವಾಗಲಿಲ್ಲ. ಅವೆಲ್ಲವೂ ವ್ಯರ್ಥ ಪ್ರಯತ್ನ ಆದವು.

ಕ, ಕೆಯಿಂದ ಆರಂಭವಾಗೋ ಹೆಸರಿನವರು ಹೇಗಿರ್ತಾರೆ ಗೊತ್ತೆ? ...

ತನ್ನ ಮನಸ್ಸಿನ ಆಸೆಯನ್ನು ತನ್ನ ಗಂಡನಾದ ಶನಿಯ ಬಳಿ ಪ್ರೀತಿಯಿಂದ ಹೇಳಿಕೊಳ್ಳಲು ಬಹಳ ಉತ್ಸುಕಳಾಗಿ ಬಂದ ಧಾಮಿನಿಗೆ ದೊಡ್ಡ ಆಘಾತವಾಯಿತು. ಮೊದಲೇ ದೈವೀಶಕ್ತಿಯನ್ನು ಪಡೆದಿದ್ದ ಆಕೆ ತಾನು ಇಷ್ಟೆಲ್ಲಾ ಎಚ್ಚರ ಪಡಿಸಿದರೂ ನನ್ನ ಕಡೆ ತಿರುಗಿಯೂ ನೋಡದ ಶನಿ ಇನ್ನು ಮುಂದೆ ತನ್ನ ದೃಷ್ಟಿಯಿಂದ ಯಾರನ್ನಾದರೂ ಸ್ವಲ್ಪ ಕಣ್ಣೆತ್ತಿ ನೋಡಿದರೂ ಸಹ ಅವರು ನಾಶವಾಗಿ ಹೋಗಲಿ ಎಂದು ಶಾಪವಿತ್ತಳು. ಆದ್ದರಿಂದಲೇ ಇಂದಿಗೂ ಕೂಡ ಶನಿಯ ವಕ್ರ ದೃಷ್ಟಿ ಬಹಳ ಕೆಟ್ಟದ್ದು ಎಂದು ಜನ ನಂಬಿದ್ದಾರೆ. ಶನಿಯ ದೃಷ್ಟಿ ಒಬ್ಬರ ಮೇಲೆ ಬಿದ್ದರೆ ಮುಗಿಯಿತು. ಆ ವ್ಯಕ್ತಿ ಕಷ್ಟದ ಸರಪಳಿಯಲ್ಲಿ ಸಿಲುಕಿ ಪೇಚಾಡುವಂತೆ ಜೀವನ ಆತನ ವಿರುದ್ಧವೇ ತಿರುಗಿ ಬೀಳುತ್ತದೆ. ಆದ್ದರಿಂದಲೇ ಶನಿ ದೇವ ಕೆಟ್ಟವನಾಗಿರದಿದ್ದರೂ ಆತನ ದೃಷ್ಟಿ ಮಾತ್ರ ಬಹಳ ಕೆಟ್ಟದ್ದು ಎಂದು ಪುರಾಣಗಳು ಸಹ ಹೇಳಿವೆ.

ಶನಿಯು ಚಿಕ್ಕ ವಯಸ್ಸಿನಿಂದ ಬಹಳ ಹಠಮಾರಿ ಸ್ವಭಾವವನ್ನು ಹೊಂದಿರುವ ಕಾರಣ ತನ್ನ ಧ್ಯಾನ ಮುಗಿಯುವವರೆಗೆ ಮೇಲೆ ಏಳಲೇ ಇಲ್ಲ. ನಂತರ ಕಣ್ಣು ಬಿಟ್ಟು ನೋಡಿದಾಗ ಆತನ ಹೆಂಡತಿ ಧಾಮಿನಿ ಕಣ್ಣೆದುರಿಗಿದ್ದಳು. ನೋಡಿದ ತಕ್ಷಣ ವಿಷಯ ತಿಳಿದು ಆಕೆಗೆ ಕ್ಷಮೆ ಕೇಳಿದನು ಮತ್ತು ತನ್ನ ಧ್ಯಾನದ ಬಗ್ಗೆ ವಿವರಿಸಿ ಹೇಳಿದನು. ಆಗ ಅರ್ಥ ಮಾಡಿಕೊಂಡ ಧಾಮಿನಿ ಬಹಳ ನೊಂದುಕೊಂಡಳು ಮತ್ತು ತನ್ನ ಶಾಪವನ್ನು ಹಿಂಪಡೆಯಲು ಏನೆಲ್ಲ ಪ್ರಯತ್ನ ಪಟ್ಟಳು. ಆದರೆ ಅವಳಿಗೆ ಶಾಪವನ್ನು ನೀಡುವ ಶಕ್ತಿ ಇತ್ತೇ ವಿನಃ ಅದನ್ನು ಹಿಂಪಡೆಯುವ ಯಾವುದೇ ಶಕ್ತಿ ಇರಲಿಲ್ಲ. ಆದ್ದರಿಂದ ಶನಿಯು ಇನ್ನು ಮುಂದೆ ತನ್ನನ್ನು ಭಯ ಭಕ್ತಿಯಿಂದ ಮತ್ತು ನಿಷ್ಠೆಯಿಂದ ಪೂಜಿಸುವವರನ್ನು ಎಂದಿಗೂ ತಾನು ನೋಡುವುದಿಲ್ಲ ಮತ್ತು ಅವರ ವಿಷಯ ಬಂದಾಗ ನಾನು ತಲೆ ತಗ್ಗಿಸಿ ನಿಲ್ಲುತ್ತೇನೆ ಎಂದು ಶಪಥ ಮಾಡಿದ.

ಮನೆಯಲ್ಲಿ ಸಕಾರಾತ್ಮಕ ಶಕ್ತಿ ತುಂಬಲು ತುಳಸಿಯನ್ನು ಎಲ್ಲಿ ನೆಡಬೇಕು? 

click me!