ಸದಾ ಆನಂದವಾಗಿರೋಕೆ, ಹಣ ಗಳಿಸೋಕೆ ಶ್ರೀರಾಮನ ಈ ಮಂತ್ರಗಳನ್ನು ಪಠಿಸಿ!

By Suvarna NewsFirst Published Jan 20, 2024, 1:32 PM IST
Highlights

ಶ್ರೀರಾಮ ಹಿಂದೂಗಳ ಮನದಲ್ಲಿ ಅಚ್ಚಳಿಯದಂತಿರುವ ದೇವರು. ಅಯೋಧ್ಯೆಯಲ್ಲಿ ಶ್ರೀರಾಮ ದೇವಾಲಯ ಲೋಕಾರ್ಪಣೆ ಹಿನ್ನೆಲೆಯಲ್ಲಿ ಬದುಕಿಗೆ ಹೊಸ ಶಕ್ತಿ ಕೊಡುವ, ಆರ್ಥಿಕವಾಗಿ ಚೈತನ್ಯ ತರುವ ರಾಮ ಮಂತ್ರಗಳು ಇಲ್ಲಿವೆ.

ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮ ದೇವಾಲಯ ಲೋಕಾರ್ಪಣೆಗೊಳ್ಳುತ್ತಿದೆ. ಶ್ರೀರಾಮ ನಮ್ಮ ಸಂಕಷ್ಟಗಳನ್ನು ದೂರ ಮಾಡುವ ದೇವರು. ಯಾವುದೇ ಸಂಕಷ್ಟ ಬಂದಾಗಲೂ ʼರಾಮ ರಾಮʼ ಎಂದು ಹಿರಿಯರು ಹೇಳುತ್ತಿದ್ದುದನ್ನು ನೀವು ಕೇಳಿರಬಹುದು. ಜೀವನದಲ್ಲಿ ಸದಾ ಆನಂದವಾಗಿರಲು, ವೃತ್ತಿಜೀವನದಲ್ಲಿ ಯಶಸ್ಸು ಗಳಿಸಲು, ಸಂಕಷ್ಟಗಳನ್ನು ದೂರ ಮಾಡಲು ಜಾನಕೀವಲ್ಲಭನ ಹಲವು ಮಂತ್ರಗಳು ನೆರವಾಗುತ್ತವೆ. ರಾಮನ ಮಂತ್ರಗಳನ್ನು ಪಠಿಸುವವನು ದುಷ್ಟರಿಂದ ರಕ್ಷಿಸಲ್ಪಡುತ್ತಾನೆ. ರಾಮ ಮಂತ್ರದ ಮಹಿಮೆ ಅದ್ಭುತ. ವಿಶೇಷವೆಂದರೆ, ರಾಮನ ಮಂತ್ರಗಳನ್ನು ಪಠಿಸುವ ಮೂಲಕ ರಾಮನ ಜೊತೆಗೆ ಹನುಮನ ಆಶೀರ್ವಾದವನ್ನೂ ಪಡೆಯಬಹುದು. ಹಾಗಾದರೆ ನಾವು ಯಾವ ರಾಮ ಮಂತ್ರಗಳನ್ನು, ಯಾವಾಗ, ಯಾಕೆ ಪಠಿಸಬೇಕು?

1) ಸಂಕಷ್ಟಗಳಿಂದ ಮುಕ್ತಿ ಪಡೆಯಲು ನೆರವಾಗುವ ಮಂತ್ರ :

Latest Videos

ಲೋಕಾಭಿರಾಮಂ ರಣರಂಗಧೀರಂ

ರಾಜೀವನೇತ್ರಂ ರಘುವಂಶನಾಥಂ

ಕಾರುಣ್ಯರೂಪಂ ಕರುಣಾಕರಂ ತಂ

ಶ್ರೀರಾಮಚಂದ್ರಂ ಶರಣಂ ಪ್ರಪದ್ಯೇ

ಆಪದಾಮಪಹರ್ತಾರಂ ದಾತಾರಂ ಸರ್ವಸಂಪದಾಂ

ಲೋಕಾಭಿರಾಮಂ ಶ್ರೀರಾಮಂ ಭೂಯೋ ಭೂಯೋ ನಮಾಮ್ಯಹಂ

2) ವೃತ್ತಿ ಜೀವನದಲ್ಲಿ ಅಪಾರ ಯಶಸ್ಸು ಪಡೆಯಲು ನೆರವಾಗುವ ಮಂತ್ರ:

ಓಂ ರಾಮ ಓಂ ರಾಮ ಓಂ ರಾಮಾಯ

ಹ್ರೀಂ ರಾಮ ಹ್ರೀಂ ರಾಮ ಶ್ರೀಂ ರಾಮ ಶ್ರೀಂ ರಾಮ

ಕ್ಲೀಂ ರಾಮ ಕ್ಲೀಂ ರಾಮ ಫಟ್ ರಾಮ ಫಟ್ ರಾಮಾಯ ನಮಃ

3) ಮನಸ್ಸಿನಲ್ಲಿ ಸದಾ ಆನಂದ ತುಂಬಿರುವಂತೆ ಮಾಡುವ ಶ್ರೀರಾಮ ಮಂತ್ರ :

ಶ್ರೀ ರಾಮ್ ಜೈ ರಾಮ್ ಜೈ ಜೈ ರಾಮ್

2 ತಿಂಗಳ ರಥಯಾತ್ರೆ ಮೂಲಕ ಅಯೋಧ್ಯೆ ತಲುಪಿದ ಕರ್ನಾಟಕದ ಕಿಷ್ಕಿಂಧೆ ಹನುಮರಥ

4) ಕೈಗೊಂಡ ಕಾರ್ಯಗಳಲ್ಲಿ ಗೆಲುವು (victory) ಸಾಧಿಸಲು ನೆರವಾಗುವ ರಾಮ ಮಂತ್ರ :

ಪವನ ತನಯ ಬಲ ಪವನ ಸಮಾನಾ

ಜನಕಸುತ ರಘುವೀರ ವಿಬಾಹು

5) ಕೆಲಸ ಪಡೆಯುವಲ್ಲಿ ಅಡೆತಡೆ ನಿವಾರಣೆಗೆ :

ಬಿಸ್ವ ಭರಣ ಪೋಷನ ಕರ ಜೋಯೀ

ತಾಕರ ನಾಮ ಭರತ ಅಸ ಹೋಯಿ

6) ಮಂಗಳಕಾರ್ಯಗಳು ಸುಸೂತ್ರವಾಗಿ ನೆರವೇರಲು :

ಮಂಗಲ ಭವನ ಅಮಂಗಲಹಾರಿ

ದ್ರವಹು ಸೋ ದಶರಥ ಅಜೀರ ವಿಹಾರಿ

7) ಜೀವನದ ಎಲ್ಲ ದುಃಖಗಳಿಂದ ಪಾರಾಗಿ ಮುಕ್ತಿ ಪಡೆಯಲು ತಾರಕ ಮಂತ್ರ :

ರಾಮ ರಾಮೇತಿ ರಾಮೇತಿ, ರಾಮೇ ರಾಮೇ ಮನೋರಮೇ

ಸಹಸ್ರನಾಮ ತತ್ತುಲ್ಯಂ, ರಾಮನಾಮಂ ವರಾನನೇ

ರಾಮ ಮಂತ್ರದ ಪ್ರಯೋಜನಗಳು:

ಧರ್ಮಗ್ರಂಥಗಳಲ್ಲಿ ರಾಮನ (Sri Ram) ಹೆಸರನ್ನು ಶ್ರೇಷ್ಠವೆಂದು ಹೇಳಲಾಗಿದೆ. ರಾಮನ ಹೆಸರನ್ನು ಸ್ಮರಿಸುವುದರಿಂದ ವ್ಯಕ್ತಿ ಜೀವನದ (Life) ಸಾಗರದಿಂದ ಮುಕ್ತನಾಗುತ್ತಾನೆ. ಪ್ರತಿದಿನ ರಾಮ ಮಂತ್ರಗಳನ್ನು ಪಠಿಸುವುದರಿಂದ ಭಕ್ತನ ಎಲ್ಲಾ ಕಾರ್ಯಗಳು ಯಶಸ್ವಿಯಾಗುತ್ತವೆ. ಯಾವುದೇ ಮಂತ್ರದಲ್ಲಿ "ಶ್ರೀರಾಮ" ಪದವನ್ನು ಬಳಸುವುದರಿಂದ ಆ ಮಂತ್ರದ ಪರಿಣಾಮ ಹೆಚ್ಚಾಗುತ್ತದೆ. ರಾಮ ಮಂತ್ರವನ್ನು ಪಠಿಸುವುದರಿಂದ, ಸಾಧಕನು ಮಾನಸಿಕ ಶಾಂತಿಯನ್ನು ಪಡೆಯುತ್ತಾನೆ ಮತ್ತು ಆರ್ಥಿಕ ಲಾಭವನ್ನೂ ಪಡೆಯುತ್ತಾನೆ.

ಹಾಗೆ ನೋಡಿದರೆ ರಾಮನಾಮ ಜಪವನ್ನು ನಿರ್ದಿಷ್ಟ ಕಾರಣಗಳಿಲ್ಲದೆಯೂ ಮಾಡಬಹುದು. ಬದುಕಿಗೆ ಹೊಸ ಅರ್ಥವನ್ನು, ಚೈತನ್ಯವನ್ನು ಈ ಅವತಾರ ಪುರುಷ ನೀಡುತ್ತಾನೆ. ಬದುಕಿನ ಹಲವು ಶುಭಗಳಿಗೆ ಶ್ರೀರಾಮ ಈ ಮೂಲಕ ಕಾರಣವಾಗುತ್ತಾನೆ. ತನ್ನ ಬದುಕನ್ನೇ ಸರ್ವರಿಗೂ ಆದರ್ಶವಾಗಿಸಿದ ರಾಮ ಸರ್ವರಿಗೂ ಸನ್ಮಂಗಳವನ್ನು ಉಂಡು ಮಾಡಲಿ.

ಅಕ್ಷಯ್ ಕುಮಾರ್‌ - ಪವನ್ ಕಲ್ಯಾಣ್: ಅಯೋಧ್ಯೆ ರಾಮಮಂದಿರಕ್ಕೆ ದೇಣಿಗೆ ನೀಡಿದ ಸೆಲೆಬ್ರಿಟಿ ರಾಮ ಭಕ್ತರು!

click me!