Budh Vakri 2022: ಮುಂದಿನ ಮೂರು ವಾರ ಈ ರಾಶಿಗಳಿಗೆ ಕಂಟಕ! ಎಚ್ಚರ..

By Suvarna NewsFirst Published Sep 5, 2022, 11:14 AM IST
Highlights

ಗ್ರಹಗಳ ರಾಜಕುಮಾರ ಎನಿಸಿಕೊಂಡಿರುವ ಬುಧವು ಸೆಪ್ಟೆಂಬರ್ 10ರಂದು ಕನ್ಯಾ ರಾಶಿಯಲ್ಲಿ ಹಿಮ್ಮುಖ ಚಲನೆ ಆರಂಭಿಸಲಿದೆ. ಬುಧನ ಈ ವಕ್ರಿಯಿಂದಾಗಿ ಈ ರಾಶಿಚಕ್ರ ಚಿಹ್ನೆಗಳು ಜಾಗರೂಕರಾಗಿರಬೇಕು.

ಇನ್ನೈದು ದಿನಗಳಲ್ಲಿ ಅಂದರೆ ಸೆಪ್ಟೆಂಬರ್ 10ರಂದು ಗ್ರಹಗಳ ರಾಜಕುಮಾರ ಎನಿಸಿಕೊಂಡಿರುವ, ಸೂರ್ಯನಿಗೆ ಸಮೀಪದಲ್ಲಿರುವ ಬುಧನು ತನ್ನ ಸ್ವರಾಶಿಯಾದ ಕನ್ಯಾ ರಾಶಿಯಲ್ಲಿ ವಕ್ರಿಯಾಗಲಿದ್ದಾನೆ. ಸಾಮಾನ್ಯವಾಗಿ ಶುಭ ಗ್ರಹವೇ ಆಗಿರುವು ಬುಧವು ವಕ್ರಿಯಾದಾಗ ಮಾತ್ರ ಕೆಲ ರಾಶಿಗಳು ಕೊಂಚ ಹೆಚ್ಚು ಜಾಗರೂಕತೆಯಿಂದಿರಬೇಕು. 
ಬುದ್ಧಿವಂತಿಕೆ, ವ್ಯಾಪಾರ, ವ್ಯವಹಾರ, ಮಾತು ಮತ್ತು ಕೌಶಲ್ಯಗಳ ಅಧಿಪತಿಯಾದ ಬುಧನು ಸೆಪ್ಟೆಂಬರ್ 10ರಂದು ಬೆಳಿಗ್ಗೆ 8:42 ಕ್ಕೆ ಕನ್ಯಾರಾಶಿ(Virgo)ಯಲ್ಲಿ ಹಿಮ್ಮೆಟ್ಟುತ್ತಾನೆ. ಇದರ ನಂತರ, ಅಕ್ಟೋಬರ್ 2ರಂದು, ಕನ್ಯಾ ರಾಶಿಯಲ್ಲಿಯೇ ನೇರ ಚಲನೆ ಆರಂಭಿಸುತ್ತಾನೆ.  ಬುಧ ಅಕ್ಟೋಬರ್ 26ರವರೆಗೆ ಕನ್ಯಾರಾಶಿಯಲ್ಲಿರುತ್ತಾನೆ. ಅಕ್ಟೋಬರ್ 26ರಂದು,ತುಲಾ ರಾಶಿಗೆ ಸಾಗುತ್ತಾನೆ. ಪಂಚಾಂಗದ ಪ್ರಕಾರ, ಬುಧವು ಕನ್ಯಾರಾಶಿಯಲ್ಲಿ  ಹಿನ್ನಡೆ ಆರಂಭಿಸುವುದರಿಂದ ಕೆಲವು ರಾಶಿಚಕ್ರದ ಚಿಹ್ನೆಗಳು ಪ್ರಯೋಜನವನ್ನು ಪಡೆಯುತ್ತವೆ, ಆದರೆ ಕೆಲವು ರಾಶಿಚಕ್ರದ ಚಿಹ್ನೆಗಳು ಹೆಚ್ಚು ಜಾಗರೂಕರಾಗಿರಬೇಕು. ಅವರು ಸಾಕಷ್ಟು ಕಷ್ಟನಷ್ಟಗಳನ್ನು, ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಬುಧವು ಹಿಮ್ಮೆಟ್ಟುವಿಕೆಯಲ್ಲಿರುವುದರಿಂದ ವಂಚನೆ, ದ್ರೋಹ ಅಥವಾ ಅನ್ಯೋನ್ಯತೆಯ ನಷ್ಟದಂತಹ ದೊಡ್ಡ ಸಂಬಂಧದ ಸವಾಲುಗಳನ್ನು ಉಂಟು ಮಾಡಬಹುದು.  ಹಿಂದಿನ ಸಮಸ್ಯೆಗಳು ಮತ್ತು ವಾದಗಳನ್ನು ಎಳೆದು ತರುವುದರಿಂದ ನಿಮ್ಮ ಪ್ರೀತಿಯ ಜೀವನದಲ್ಲಿ ಎಲ್ಲವೂ ತಪ್ಪಾಗಿದೆ ಎಂದು ಅನಿಸಬಹುದು.

ಯಾವ ರಾಶಿಚಕ್ರಗಳು ಹಿಮ್ಮುಖ ಬುಧದ ನಕಾರಾತ್ಮಕ ಪ್ರಭಾವಕ್ಕೆ ಒಳಗಾಗುತ್ತವೆ ತಿಳಿಯೋಣ. 

Latest Videos

Mercury Retrograde 2022: ಕನ್ಯಾ ರಾಶಿಯಲ್ಲಿ ಬುಧ ವಕ್ರಿ, ಈ ರಾಶಿಗಳಿಗೆ ಲಾಟ್ರಿ!

ತುಲಾ ರಾಶಿ(Libra): ಕನ್ಯಾ ರಾಶಿಯಲ್ಲಿ ಬುಧ ಗ್ರಹದ ಹಿನ್ನಡೆಯು ತುಲಾ ರಾಶಿಯವರ ಮೇಲೆ ಅಶುಭ ಪರಿಣಾಮವನ್ನು ಬೀರುತ್ತದೆ. ಇವರಲ್ಲಿ ಮಾನಸಿಕ ಒತ್ತಡದಿಂದಾಗಿ ಮನಸ್ಸು ಚಂಚಲವಾಗಿರುತ್ತದೆ. ವ್ಯವಹಾರದಲ್ಲಿ ಬದಲಾವಣೆಯ ಸಾಧ್ಯತೆಗಳಿವೆ. ನೀವು ವ್ಯವಹಾರದಲ್ಲಿ ಪ್ರತಿಕೂಲತೆಯನ್ನು ಎದುರಿಸಬೇಕಾಗಬಹುದು. ತಾಳ್ಮೆ ಕಡಿಮೆಯಾಗಲಿದೆ. ಜೀವನ ಸಂಗಾತಿಯೊಂದಿಗೆ ವೈಮನಸ್ಸು ಉಂಟಾಗಬಹುದು. ಈ ಸಂದರ್ಭದಲ್ಲಿ ಯಾವುದೇ ಪ್ರಮುಖ ದಾಖಲೆಗೆ ಸಹಿ ಮಾಡಬೇಡಿ. ದೊಡ್ಡ ನಿರ್ಧಾರಗಳನ್ನು ತಗೆದುಕೊಳ್ಳಬೇಡಿ.

ವೃಶ್ಚಿಕ ರಾಶಿ(Scorpio): ವೃಶ್ಚಿಕ ರಾಶಿಯವರು ಬುಧ ಗ್ರಹದ ಹಿನ್ನಡೆಯಿಂದಾಗಿ ಹೆಚ್ಚು ಜಾಗರೂಕರಾಗಿರಬೇಕು. ಅವರು ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಹತಾಶೆಯ ಭಾವನೆಗಳು ಮನಸ್ಸಿನಲ್ಲಿ ಉಳಿಯುತ್ತವೆ. ಮನಸ್ಸಿನಲ್ಲಿ ನಕಾರಾತ್ಮಕ ಆಲೋಚನೆಗಳಿಂದ ತಂದೆಯೊಂದಿಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿರಬಹುದು. ವಿವಾಹ ಕಾರ್ಯಗಳು ಮುಂದೆ ಹೋಗದೆ ಕಂಗಾಲಾಗುವಿರಿ. ಕುಟುಂಬಸ್ಥರ ನಕಾರಾತ್ಮಕ ಧೋರಣೆ ನಿಮ್ಮ ವಿರುದ್ಧ ಹೆಚ್ಚಾಗುವುದು. ಸಂಬಂಧದಲ್ಲಿ ಹಳೆಯ ವಿಷಯವನ್ನು ಕೆದಕಬೇಡಿ.

ಧನು ರಾಶಿ(Sagittarius): ಮನಸ್ಸಿನಲ್ಲಿ ನಕಾರಾತ್ಮಕ ಆಲೋಚನೆಗಳ ಪರಿಣಾಮವಿರುತ್ತದೆ. ಅಂಥ ಪರಿಸ್ಥಿತಿಯಲ್ಲಿ, ಮಾನಸಿಕ ಶಾಂತಿಯನ್ನು ಕಾಪಾಡಿಕೊಳ್ಳಬೇಕು. ಎಲ್ಲಿ ಆದಾಯ ಹೆಚ್ಚುತ್ತದೆಯೋ ಅಲ್ಲಿ ವೆಚ್ಚವೂ ಹೆಚ್ಚಾಗುತ್ತದೆ. ನಿಮ್ಮ ಆತ್ಮವಿಶ್ವಾಸವನ್ನು ಕುಸಿಯಲು ಬಿಡಬೇಡಿ ಮತ್ತು ನಿಮ್ಮ ಭಾವನೆಗಳನ್ನು ನಿಮ್ಮ ನಿಯಂತ್ರಣದಲ್ಲಿ ಇರಿಸಿ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ದೈನಂದಿನ ಚಟುವಟಿಕೆಗಳಲ್ಲಿ ಸಮಸ್ಯೆಗಳಿರಬಹುದು. ಮಿತ್ರರ ಸಹಕಾರದಿಂದ ಉದ್ಯೋಗಾವಕಾಶಗಳು ಸಿಗಲಿವೆ. ಸಹೋದರರ ಸಹಕಾರವಿರುತ್ತದೆ.

ಎಲ್ಲರಿಗಿಂತ ಹೆಚ್ಚು ಸ್ವಾರ್ಥ, ನೀಚತನ ಈ ರಾಶಿಯವರಲ್ಲಿ.. they are MEAN

ಕುಂಭ ರಾಶಿ(Aquarius): ಅವರಲ್ಲಿ ಆತ್ಮವಿಶ್ವಾಸದ ಕೊರತೆ ಇರುವುದಿಲ್ಲ, ಆದರೆ ಮನಸ್ಸಿಗೆ ತೊಂದರೆಯಾಗಬಹುದು. ಕೆಲಸದ ಕ್ಷೇತ್ರದಲ್ಲಿ ಬದಲಾವಣೆಯಾಗಬಹುದು. ಆದಾಯ ಕಡಿಮೆಯಾಗುತ್ತದೆ, ಆದರೆ ಖರ್ಚು ಹೆಚ್ಚಾಗುತ್ತದೆ, ಇದರಿಂದ ತೊಂದರೆ ಉಂಟಾಗುತ್ತದೆ. ಅನಗತ್ಯ ವಾದಗಳಿಂದ ದೂರವಿರಿ. ಎಲ್ಲರಿಗಾಗಿ ದುಡಿದ ನೀವೇ ಕಡೆಗಣನೆಯಾಗುತ್ತಿರುವ ಭಾವ ಆವರಿಸಬಹುದು. ಸರಿಯಾದ ನಿರ್ಧಾರ ತೆಗೆದುಕೊಳ್ಳಲಾಗದೆ ಒದ್ದಾಡುವಿರಿ. 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ರಾಶಿಯ ಸ್ವಭಾವಗಳು, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!