ತಿರುಪತಿ ಭಕ್ತರಿಗೆ ಹ್ಯಾಪಿ ನ್ಯೂಸ್; ಮೂರು ತಿಂಗಳು ಸಿಗಲಿವೆ 300 ರೂ.ನ ವಿಶೇಷ ದರ್ಶನ ಟೋಕನ್'ಗಳು..!

By Sushma Hegde  |  First Published Jul 22, 2023, 4:01 PM IST

ತಿರುಪತಿ ವೆಂಕಟೇಶ್ವರ ಭಕ್ತರಿಗಾಗಿ ಅಲ್ಲಿನ ಟಿಟಿಡಿ ಮತ್ತೊಂದು ಮುಖ್ಯವಾದ ನಿರ್ಧಾರ ಕೈಗೊಂಡಿದೆ, ಇದರಿಂದ ತಿಮ್ಮಪ್ಪನ ಭಕ್ತರಿಗೆ ತುಂಬಾ ಅನುಕೂಲ ಆಗಲಿದೆ. ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಿಗೆ ಹೆಚ್ಚುವರಿಯಾಗಿ 4 ಸಾವಿರ ದರ್ಶನ ಟಿಕೆಟ್ ಬಿಡುಗಡೆ ಮಾಡಲಾಗುವುದು ಎಂದು ತಿಳಿದು ಬಂದಿದೆ. ಈ ಕುರಿತು ಇಲ್ಲಿದೆ ಮಾಹಿತಿ.


ತಿರುಪತಿ ವೆಂಕಟೇಶ್ವರ ಭಕ್ತರಿಗಾಗಿ ಅಲ್ಲಿನ ಟಿಟಿಡಿ ಮತ್ತೊಂದು ಮುಖ್ಯವಾದ ನಿರ್ಧಾರ ಕೈಗೊಂಡಿದೆ, ಇದರಿಂದ ತಿಮ್ಮಪ್ಪನ ಭಕ್ತರಿಗೆ ತುಂಬಾ ಅನುಕೂಲ ಆಗಲಿದೆ. ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಿಗೆ ಹೆಚ್ಚುವರಿಯಾಗಿ 4 ಸಾವಿರ ದರ್ಶನ ಟಿಕೆಟ್ ಬಿಡುಗಡೆ ಮಾಡಲಾಗುವುದು ಎಂದು ತಿಳಿದು ಬಂದಿದೆ. ಈ ಕುರಿತು ಇಲ್ಲಿದೆ ಮಾಹಿತಿ.

ತಿರುಪತಿ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯವು ಹಿಂದೂಗಳ ಪ್ರಮುಖ ದೇವಾಲಯಗಳಲ್ಲಿ ಒಂದು. ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ಈ ಅದ್ಭುತವಾದ ಹಾಗೂ ಪ್ರಭಾವಶಾಲಿಯಾದ ದೇವಾಲಯವಿದ್ದು, ಇದು ಹೆಚ್ಚು ಭಕ್ತ ಸಮೂಹವನ್ನು ಹೊಂದಿರುವ ದೇವಾಲಯ . ಆರ್ಥಿಕವಾಗಿ ಕೂಡ ಈ ದೇವಾಲಯವು ಸದೃಢವಾಗಿದ್ದು, ಪ್ರತಿ ವರ್ಷ ಲಕ್ಷಾಂತರ ಭಕ್ತರು ಈ ದೇವಾಲಯಕ್ಕೆ ಬರುತ್ತಾರೆ.

Tap to resize

Latest Videos

ಭಕ್ತರಿಗೆ ಗುಡ್ ನ್ಯೂಸ್ ಕೊಟ್ಟ ಟಿಟಿಡಿ 

ತಿರುಮಲ ತಿರುಪತಿ ದೇವಸ್ಥಾನಂ ಸಮಿತಿಯು ಆಗಸ್ಟ್, ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳ ವಿಶೇಷ ಪ್ರವೇಶ ದರ್ಶನಕ್ಕೆ 300 ರೂಪಾಯಿಗಳ ಆನ್‌ಲೈನ್ ಟಿಕೆಟ್ ಬುಕ್ಕಿಂಗ್ ಆರಂಭಿಸಲಿದೆ. ಶ್ರೀನಿವಾಸನ ಭಕ್ತರು ಈ ಮೂರು ತಿಂಗಳಿಗೆ ವಿಶೇಷ ಪ್ರವೇಶ ದರ್ಶನ ಮತ್ತು ಉಚಿತ ದರ್ಶನಕ್ಕಾಗಿ ಟಿಟಿಡಿ ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಬುಕ್ ಮಾಡಬಹುದು. ವಿಶೇಷ ಪ್ರವೇಶ ದರ್ಶನಂ ಇರಲಿದ್ದು, ಹಾಗೂ ವಿಐಪಿ ಟಿಕೆಟ್‌ಗಳು ಮತ್ತು ಉಚಿತ ಟಿಕೆಟ್‌ಗಳು ಟಿಟಿಡಿ ಆನ್‌ಲೈನ್ ಪೋರ್ಟಲ್‌ನಲ್ಲಿ ಲಭ್ಯವಿದೆ.

ನಾಳೆಯಿಂದ ಶುಕ್ರ ಹಿಮ್ಮುಖ ಚಲನೆ; ಈ ರಾಶಿಯವರಿಗೆ ಇನ್ಮುಂದೆ ಬಿಂದಾಸ್ ಲೈಫ್

 

300 ರೂಪಾಯಿ ವಿಶೇಷ ಪ್ರವೇಶ ಟಿಕೆಟ್‌ ನೀಡಲು ನಿರ್ಧಾರ

ಇದೀಗ ಅನೇಕ ಭಕ್ತರು ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕೆ ಬರುತ್ತಿದ್ದು, ಹೆಚ್ಚುವರಿಯಾಗಿ 300 ರೂಪಾಯಿ ವಿಶೇಷ ಪ್ರವೇಶ ಟಿಕೆಟ್‌ ನೀಡಲು ನಿರ್ಧರಿಸಲಾಗಿದೆ. ದಿನಕ್ಕೆ 20,000 ಟಿಕೆಟ್‌ಗಳನ್ನು ಈಗಾಗಲೇ ನಿಗದಿಪಡಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಟಿಕೆಟ್ ಹೇಗೆ ಪಡೆಯಬಹುದು?

1. ಶ್ರೀವಾರಿ ಆರ್ಜಿತ ಸೇವಾ ಟಿಕೆಟ್‌ಗಳು ಅಕ್ಟೋಬರ್ ಒಂದರಿಂದ ರಿಂದ 31 ರವರೆಗೆ ಲಭ್ಯವಿರುತ್ತದೆ. ಇದಕ್ಕೆ ಜುಲೈ 18 ರಿಂದ 20ರವೆಗೆ ಆನ್‌ಲೈನ್ ಬುಕ್ಕಿಂಗ್ ನಡೆಯುತ್ತದೆ.

2. ಅಕ್ಟೋಬರ್ 1 ರಿಂದ 31ರವರೆಗಿನ ಕಲ್ಯಾಣಂ, ಉಂಜಲ್ ಸೇವೆ, ಆರ್ಜಿತ ಬ್ರಹ್ಮೋತ್ಸವ, ಮತ್ತು ಸಹಸ್ರ ದೀಪಾಲಂಕಾರ ಸೇವೆಯಂತಹ ಸೇವೆಗಳಿಗೆ ಶ್ರೀವಾರಿ ಆರ್ಜಿತ ಸೇವಾ ಟಿಕೆಟ್‌ಗಳು ಬುಕಿಂಗ್‌ಗೆ ಲಭ್ಯವಿರುತ್ತದೆ. ಇವುಗಳ ಬುಕ್ಕಿಂಗ್ ಜುಲೈ 21ರ ಬೆಳಗ್ಗೆ 10 ಗಂಟೆಯಿಂದ ಆರಂಭವಾಗುತ್ತವೆ.

3. ಅಕ್ಟೋಬರ್ ತಿಂಗಳ ತಿರುಮಲ ಅಂಗಪ್ರದಕ್ಷಿಣಂ ಟಿಕೆಟ್‌ಗಳು ಬುಕಿಂಗ್‌ಗೆ ಲಭ್ಯವಿರುತ್ತವೆ. ಇವುಗಳ ಬುಕ್ಕಿಂಗ್ ಜುಲೈ 24 ರ ಬೆಳಗ್ಗೆ 10 ಗಂಟೆಯಿಂದ ಆರಂಭವಾಗುತ್ತವೆ. ಹೀಗೆ ಹೆಚ್ಚಿನ ವಿವರಗಳು ಟಿಟಿಡಿ ವೆಬ್ ಸೈಟ್'ನಲ್ಲಿ ಲಭ್ಯ ಇವೆ.

ಇಸ್ಲಾಮಿಕ್‌ ದೇಶಗಳಲ್ಲಿವೆ 5 ಪ್ರಸಿದ್ಧ ಶಿವನ ಪುರಾತನ ದೇವಾಲಯಗಳು  

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!