2023ರ ವರ್ಷದ ಮೊದಲ ಸೋಮಾವತಿ ಅಮಾವಾಸ್ಯೆ ಸೋಮವಾರ, ಫೆಬ್ರವರಿ 20ರಂದು ಬರುತ್ತಿದೆ. ಈ ದಿನದ ಸ್ನಾನ ಮತ್ತು ದಾನದ ವಿಶೇಷ ಮಹತ್ವವನ್ನು ಇಲ್ಲಿ ತಿಳಿಸಲಾಗಿದೆ. ಈ ದಿನ ನಿಮ್ಮ ವಿವಿಧ ಸಮಸ್ಯೆಗಳಿಗೆ ಮಾಡಿಕೊಳ್ಳಬಹುದಾದ ವಿವಿಧ ಪರಿಹಾರಗಳೂ ಇಲ್ಲಿವೆ..
20 ಫೆಬ್ರವರಿ 2023, ವರ್ಷದ ಮೊದಲ ಸೋಮಾವತಿ ಅಮವಾಸ್ಯೆಯನ್ನು ಸೋಮವಾರ ಆಚರಿಸಲಾಗುತ್ತದೆ. ಈ ದಿನ ಗಂಗಾ ನದಿ ಅಥವಾ ಇನ್ನಾವುದೇ ಪವಿತ್ರ ನದಿಯಲ್ಲಿ ಸ್ನಾನ ಮಾಡುವುದಕ್ಕೆ ವಿಶೇಷ ಮಹತ್ವವಿದೆ. ಈ ದಿನ, ಪೂರ್ವಜರಿಗೆ ನೈವೇದ್ಯ ಮತ್ತು ದಾನಗಳನ್ನು ಸಹ ನೀಡಲಾಗುತ್ತದೆ. ಈ ದಿನದಂದು ವಿವಾಹಿತ ಮಹಿಳೆಯರು ತಮ್ಮ ಗಂಡನ ದೀರ್ಘಾಯುಷ್ಯಕ್ಕಾಗಿ ಉಪವಾಸವನ್ನು ಆಚರಿಸುತ್ತಾರೆ ಮತ್ತು ಅಶ್ವತ್ಥ ಮರವನ್ನು ಪ್ರದಕ್ಷಿಣೆ ಮಾಡುತ್ತಾರೆ. ಈ ದಿನಾಂಕದ ಅಧಿಪತಿಯನ್ನು ಪಿತೃ ಎಂದು ಪರಿಗಣಿಸಲಾಗುತ್ತದೆ. ಈ ದಿನ ಸ್ನಾನ ಮಾಡುವುದರಿಂದ ಪಿತ್ರಾದೋಷ, ಕಲಸರ್ಪ ದೋಷಗಳಿಂದ ಮುಕ್ತಿ ದೊರೆಯುತ್ತದೆ.ಪೂರ್ವಜರ ಕೃಪೆಯಿಂದ ಕುಟುಂಬದಲ್ಲಿ ಸುಖ-ಸಮೃದ್ಧಿ ನೆಲೆಸುತ್ತದೆ.
2023ರಲ್ಲಿ ಮೂರು ಸೋಮಾವತಿ ಅಮವಾಸ್ಯೆಗಳು ರೂಪುಗೊಳ್ಳುತ್ತವೆ..
ಫೆಬ್ರವರಿ 20 ರಂದು ಮೊದಲ ಯೋಗ
ಜುಲೈ 17 ರಂದು ಎರಡನೇ ಯೋಗ
ನವೆಂಬರ್ 13 ರಂದು ಮೂರನೇ ಯೋಗ.
ಭಾನುವಾರ ಅಶ್ವತ್ಥ ಮರವನ್ನು ಪೂಜಿಸಿದ್ರೆ ಮನೆಗೆ ಬರ್ತಾಳೆ ದರಿದ್ರ ಲಕ್ಷ್ಮೀ! ಯಾಕೆ ಗೊತ್ತಾ?
ಸೋಮಾವತಿ ಅಮವಾಸ್ಯೆ ಮುಹೂರ್ತ
ಪ್ರಾರಂಭ ದಿನಾಂಕ - 19 ಫೆಬ್ರವರಿ 2023, ಸಮಯ - 04.18 pm
ತಿಥಿ ಮುಕ್ತಾಯ - 20 ಫೆಬ್ರವರಿ 2023, ಸಮಯ - 12.35 pm
ದಾನ ಮುಹೂರ್ತ - ಫೆಬ್ರವರಿ 20 ಬೆಳಿಗ್ಗೆ 07.00 - 08.25 ರವರೆಗೆ
ಪೂಜಾ ಮುಹೂರ್ತ - ಫೆಬ್ರವರಿ 20 ಬೆಳಿಗ್ಗೆ 09.50 - 11.15 ರವರೆಗೆ
ಶಿವಯೋಗ - 20 ಫೆಬ್ರವರಿ 2023 ಬೆಳಿಗ್ಗೆ 11.03 ರಿಂದ 21 ಫೆಬ್ರವರಿ 2023 ರವರೆಗೆ ಬೆಳಿಗ್ಗೆ 06.57 ರವರೆಗೆ
ಅಮಾವಾಸ್ಯೆಯಂದು ತರ್ಪಣ ಬಿಡಿ