Chandra Dosha: ಕುಜದೋಷದಂತೆ ಚಂದ್ರದೋಷವೂ ಇದೆ: ಅದೇಕೆ ಬರುತ್ತೆ? ನಿವಾರಣೆ ಹೇಗೆ?

By Suvarna NewsFirst Published Feb 19, 2023, 11:28 AM IST
Highlights

ಕೆಲಸವಿದೆ, ಸಂಸಾರ ಚೆನ್ನಾಗಿದೆ, ಹಣಕಾಸಿಗೆ ತೊಂದರೆಯಿಲ್ಲ, ಆದ್ರೂ ಮನಸ್ಸಿಗೆ ನೆಮ್ಮದಿಯಿಲ್ಲ ಅನ್ನೋ ಪರಿಸ್ಥಿತಿ ಇದೆಯಾ? ಹಾಗಾದರೆ ನಿಮಗೆ ಚಂದ್ರದೋಷ ಇರಬಹುದು. ಅದೇಕೆ ಬರುತ್ತೆ? ಅದರ ನಿವಾರಣೆ ಹೇಗೆ?

ಕುಜದೋಷದಂತೆಯೇ (kuja dosha) ಚಂದ್ರದೋಷವೂ (chandra dosha) ಪ್ರತಿಯೊಬ್ಬ ಜಾತಕನನ್ನೂ (horoscope) ಕಾಡುತ್ತದೆ. ನವಗ್ರಹಗಳಲ್ಲಿ (Navagraha) ಎಲ್ಲಾ ಗ್ರಹಗಳು ಶುಭ ಮತ್ತು ಅಶುಭ ಫಲ ಎರಡನ್ನೂ ನೀಡುತ್ತವೆ. ಶುಭ ಮತ್ತು ಅಶುಭ ಫಲಿತಾಂಶಗಳು ಆ ವ್ಯಕ್ತಿಯ ಜಾತಕ ಮತ್ತು ಕುಂಡಲಿಯ ಮೇಲೆ ಅವಲಂಬಿತವಾಗಿರುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಚಂದ್ರನನ್ನು ಜಲತತ್ವ ಗ್ರಹ ಎಂದು ಪರಿಗಣಿಸಲಾಗಿದೆ. ಚಂದ್ರನಿಂದಲೇ ಭೂಮಿಯ ಮೇಲೆ ಸಮುದ್ರದಲ್ಲಿ ನೀರಿನ ಅಲೆಗಳು, ಏರಿಳಿತಗಳು ಉಂಟಾಗುತ್ತವೆ. ಸಂಖ್ಯಾಶಾಸ್ತ್ರದಲ್ಲಿ ಚಂದ್ರನ ಸಂಖ್ಯೆ ಎರಡು. ಅಂದರೆ ಚಂದ್ರನು ಮಾತೃಕಾರಕ ಗ್ರಹ ಎಂದು ಪರಿಗಣಿಸಲಾಗಿದೆ. ಅದೇ ರೀತಿ ಚಂದ್ರನು ಮನಸ್ಸಿನ ಕಾರಕನೂ ಹೌದು.

"ಚಂದ್ರಮಾ ಮನಸೋ ಜಾತಃ" ಎಂದು ಜ್ಯೋತಿಷ್ಯದಲ್ಲಿ ಚಂದ್ರನಿಗೆ ಹೇಳುತ್ತಾರೆ. ಅಂದರೆ ಚಂದ್ರ ಮನಸ್ಸಿಗೆ ಕಾರಕನು. ಚಂದ್ರ ಗ್ರಹ ಮನಸ್ಸಿಗೆ ಸಂಬಂಧಿಸಿದ ಗ್ರಹವಾಗಿದ್ದು, ನಮ್ಮ ಮನಸ್ಸು ಪ್ರಶಾಂತತೆಯಿಂದ ಇರಬೇಕೆಂದರೆ, ಅದಕ್ಕೆ ಚಂದ್ರನ ಅನುಗ್ರಹ ಬೇಕೇ ಬೇಕು. ಚಂದ್ರನಿಗೆ ಗುರು, ಕುಜ, ರವಿ, ಕೇತು ಮಿತ್ರ ಗ್ರಹಗಳು. ಚಂದ್ರನಿಗೆ ಶನಿ, ಶುಕ್ರ, ರಾಹು, ಬುಧ ಶತ್ರು ಗ್ರಹಗಳು. ಚಂದ್ರನು ವೃಶ್ಚಿಕ ರಾಶಿಯಲ್ಲಿ ನೀಚನಾಗಿದ್ದಾಗ ಅಥವಾ ರಾಹುವಿನ ಜೊತೆ ಸೇರಿದ್ದಾಗ ಅಥವಾ ಅಮಾವಾಸ್ಯೆಯ ದಿನ ಒಬ್ಬ ವ್ಯಕ್ತಿ ಜನಿಸಿದಾಗ, ಶನಿ, ಕುಜ, ರಾಹು, ಕೇತುವಿನ ದೃಷ್ಟಿಗೆ ಒಳಗಾದಾಗ ಚಂದ್ರ ಮಹಾದೆಸೆ ಅಥವಾ ಚಂದ್ರ ಅಂತರ ದೆಸೆ ಬರುತ್ತದೆ. ಇದನ್ನೇ ಚಂದ್ರ ದೋಷ ಎನ್ನಲಾಗುತ್ತದೆ.

Latest Videos

ಚಂದ್ರದೋಷದಿಂದ ಆಗಬಹುದಾದ ಕೆಟ್ಟ ಫಲಿತಾಂಶಗಳಿಂದ ಉಪಶಮನ ಪಡೆಯಬೇಕಾದರೆ ಇಂತಹ ಸಮಯದಲ್ಲಿ ಗ್ರಹ ಶಾಂತಿಗಳನ್ನು ಮಾಡಿಸಬೇಕು. ಚಂದ್ರಗ್ರಹದ ಅನುಕೂಲ ಇಲ್ಲದಿದ್ದರೆ ಮನಸ್ಸು ಚಂಚಲತೆಯಿಂದ ಕೂಡಿರುತ್ತದೆ, ಮನಃಶಾಂತಿ ಮತ್ತು ಮಾನಸಿಕವಾಗಿ ಮನಸ್ಸಿಗೆ ನೆಮ್ಮದಿ ಇರುವುದಿಲ್ಲ. ಏನೋ ಒಂದು ರೀತಿಯ ಗೊಂದಲ, ಮನಸ್ಸಿನಲ್ಲಿ ತಳಮಳ, ಭಯದ ವಾತಾವರಣ ಉಂಟಾಗುತ್ತದೆ.

Mahashivratri 2023: ಕರ್ನಾಟಕದ ಅತಿ ಪ್ರಸಿದ್ಧ ಶಿವ ದೇವಾಲಯಗಳಿವು..

ಹಾಗಾದರೆ ಚಂದ್ರದೋಷದಿಂದ ಪಾರಾಗಲು ಏನು ಮಾಡಬಹುದು?: ಚಂದ್ರನು ಅನುಕೂಲಕರನಾಗಿ ಆಗಬೇಕೆಂದರೆ ಶ್ರೀ ದುರ್ಗಾ ದೇವಿಯ ಸ್ತೋತ್ರ, ದೇವಿ ಕಂಠಮಾಲೆಯನ್ನು ಪಠಿಸುವುದರಿಂದ ಒಳ್ಳೆಯ ಫಲಿತಾಂಶವನ್ನು ನಾವು ಕಾಣಬಹುದಾಗಿದೆ. ಚಂದ್ರನ ವಾರವಾದ ಸೋಮವಾರದ ದಿನ ರೋಹಿಣಿ, ಹಸ್ತ, ಶ್ರವಣ ನಕ್ಷತ್ರಗಳು ಈ ಮೂರು ನಕ್ಷತ್ರಗಳಲ್ಲಿ ಯಾವುದಾದರೂ ಒಂದು ನಕ್ಷತ್ರ ಬಂದಾಗ ಬೆಳ್ಳಿಯಲ್ಲಿ ಮುತ್ತನ್ನು ಕೂಡಿಸಿ, ಬಲಗೈಯ ಉಂಗುರದ ಬೆರಳಿಗೆ ಈ ಉಂಗುರವನ್ನು ಧರಿಸಿದರೆ ಒಳ್ಳೆಯದು.

ಪರಿಹಾರ ಮಾಡಲು ಹುಣ್ಣಿಮೆ ಒಳ್ಳೆಯ ದಿನ. ಹದಿನಾರು ಕಲೆಗಳನ್ನು ಹೊಂದಿರುವ ಚಂದ್ರನು ಒಳ್ಳೆಯ ಆರೋಗ್ಯವನ್ನು ಕೊಡುತ್ತಾನೆ. ಹತ್ತು ಸಾವಿರ ಚಂದ್ರ ಜಪವನ್ನು ಮಾಡಿ ಅಕ್ಕಿ, ಹಾಲು, ಬಾಳೆಹಣ್ಣು, ಬಿಳಿ ವಸ್ತ್ರ, ಸಕ್ಕರೆ, ಕರ್ಪೂರ, ಬಿಳಿ ತಾವರೆಯನ್ನು ದಾನ ಮಾಡಬೇಕು. ಇವು ಚಂದ್ರನಿಗೆ ಸಂಬಂಧಪಟ್ಟಿರುವ ವಸ್ತುಗಳು. ಸೋಮವಾರದ ದಿನ ಬಡವರಿಗೆ ಮೊಸರನ್ನವನ್ನು ದಾನ ಮಾಡಿದರೆ ಉತ್ತಮ. ಹತ್ತು ಸೋಮವಾರಗಳು ಉಪವಾಸವಿದ್ದು, ಕೊನೆ ಸೋಮವಾರ ಪಾರ್ವತಿ ದೇವಿಗೆ ಕುಂಕುಮಾರ್ಚನೆಯನ್ನು ಮಾಡಿಸಿ, ಚಂದ್ರನಿಗೆ ಅಷ್ಟೋತ್ತರ ಪೂಜೆಯನ್ನು ಮಾಡಿದರೆ ಚಂದ್ರ ದೋಷದಿಂದ ಮುಕ್ತಿ ಹೊಂದಬಹುದು.

ಮಹಾಭಾರತದಿಂದ ತಿಳಿಯಿರಿ ಜೀವನ ಪಾಠ

click me!