Zodiac Signs: ಸುಳ್ಳುಗಾರ ಎಂದರೂ ಬೇಜಾರು ಮಾಡಿಕೊಳ್ಳದ ರಾಶಿ ಇದು!

By Suvarna News  |  First Published Jun 27, 2023, 4:39 PM IST

ಸೈಕೋಪಾತ್‌ ಎಂದರೆ ಹಲವು ಅಪರಾಧಗಳನ್ನೇ ಮಾಡಬೇಕೆಂದಿಲ್ಲ. ನಮ್ಮ ನಡುವೆಯೂ ಅಂತಹ ಜನರಿರುತ್ತಾರೆ. ಬೇಕಾಬಿಟ್ಟಿ ವರ್ತನೆ ಮಾಡುವವರು, ತಮಗೆ ತೋಚಿದಂತೆ ಸಾಗುವವರು, ತರ್ಕರಹಿತವಾದ ಯೋಚನಾ ಲಹರಿ ಉಳ್ಳವರು ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಸೈಕೋಪಾತ್‌ ಗಳೇ ಆಗಿರುತ್ತಾರೆ. 


ಸೈಕೋಪಾತ್…‌ ಹೆಸರು ಕೇಳಿದರೆ ಒಂದು ರೀತಿಯ ಭಯ ಉಂಟಾಗುತ್ತದೆ. ಹಲವಾರು ಕಗ್ಗೊಲೆಗಳನ್ನು ಮಾಡಿದವರ ಹೆಸರುಗಳು ನೆನಪಾಗಬಹುದು. ಅಸಲಿಗೆ, ಸೈಕೋಪಾತ್‌ ಎನಿಸಿಕೊಳ್ಳಲು ಯಾರದ್ದಾದರೂ ಜೀವವನ್ನೇ ತೆಗೆಯಬೇಕಿಲ್ಲ. ಬುದ್ಧಿ ಸ್ತಿಮಿತದಲ್ಲಿ ಇಲ್ಲದಂತೆ ವರ್ತಿಸುವವರೆಲ್ಲರೂ ಸೈಕೋಪಾತ್‌ ಗಳೇ ಆಗಿರುತ್ತಾರೆ. ಅಂದರೆ, ಈಗ ನಮ್ಮ ಸುತ್ತಮುತ್ತ ಇರುವವರೇ ಯಾರಾದರೂ ನೆನಪಿಗೆ ಬರಬಹುದು. ಹೌದು, ಹಲವು ಜನ ಎಷ್ಟೋ ಬಾರಿ ಬುದ್ಧಿ ಸ್ತಿಮಿತದಲ್ಲಿ ಇಲ್ಲದಂತೆ ವರ್ತಿಸುತ್ತಾರೆ. ಮನೋರೋಗಿಯ ಸ್ವಭಾವ ತೋರಿಸುತ್ತಾರೆ. ತಮಗೆ ತೋಚಿದಂತೆ ಸಾಗುತ್ತಾರೆ. ಇತರರು ತಮ್ಮ ಬಗ್ಗೆ ಏನು ಭಾವಿಸುತ್ತಾರೆ, ತಮ್ಮನ್ನು ಹೇಗೆ ನೋಡುತ್ತಾರೆ ಎನ್ನುವ ಬಗ್ಗೆ ಕೇರ್‌ ಮಾಡುವುದಿಲ್ಲ. ತಮ್ಮ ಸ್ಥಾನಮಾನದ ಕುರಿತಾಗಿಯೂ ಯೋಚಿಸದೆ ಬೇಕಾಬಿಟ್ಟಿ ವರ್ತನೆ ಮಾಡುತ್ತಾರೆ. ಇಂಥವರೂ ಸಹ ಸೈಕೋಪಾತ್‌ ಗಳೇ ಆಗಿರುತ್ತಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಹಲವು ರಾಶಿಗಳ ಜನರಲ್ಲಿ ಸೈಕೋಪಾತ್‌ ವರ್ತನೆ ಕಂಡುಬರುತ್ತದೆ. ಇವರು ಕೆಲವೇ ನಿರ್ದಿಷ್ಟ ವಿಚಾರಗಳ ಮಟ್ಟಿಗೆ ತರ್ಕರಹಿತವಾಗಿರುತ್ತಾರೆ. ಒಂದೊಂದು ಅಂಶಗಳಲ್ಲಿ ಇವರು ಅಸಾಧ್ಯ ಎನಿಸುವ ಮಟ್ಟಿಗೆ ಕ್ರೇಜಿಯಾಗಿರುತ್ತಾರೆ.

•    ಮೇಷ (Aries)
ರಿಸ್ಕ್‌ (Risk) ತೆಗೆದುಕೊಳ್ಳುವ ಸೈಕೋಪಾತ್‌ (Psychopath) ಗಳು ಇವರು. ಅತಿಯಾದ ದುಡುಕು ವರ್ತನೆ (Impulsive Behavior) ಮಾಡುತ್ತಾರೆ. ತಮಗೆ ಇಷ್ಟವಾಗದ ವಿಚಾರಗಳ ಬಗ್ಗೆ ತರ್ಕಬದ್ಧವಾಗಿ ಯೋಚಿಸುವುದು ದೂರದ ಮಾತು. ತಮ್ಮದೇ ವಾದಸರಣಿ ಮಾಡುವ ಇವರ ಜತೆಗೆ ಹೆಚ್ಚಿನ ಮಾತುಕತೆ ನಡೆಸುವುದು ಕೆಲವರಿಗೆ ಕಷ್ಟ. ಮೇಷ ರಾಶಿ (Zodiac Sign) ಕ್ರಿಯೆಯನ್ನು (Action) ನಿಯಂತ್ರಿಸಿಕೊಳ್ಳಲು ವಿಫಲವಾಗುತ್ತದೆ. ಹೀಗಾಗಿ, ಮೇಷ ರಾಶಿಯ ಜನ ಅತ್ಯಂತ ರಿಸ್ಕಿ ಎನಿಸುವ ಕಾರ್ಯದಲ್ಲಿ ತೊಡಗುತ್ತಾರೆ. ಭಯಾನಕ (Terrible) ನಿಲುವು ತೆಗೆದುಕೊಳ್ಳಲು ಇವರಿಗೆ ಯಾವ ಭಯವೂ ಇರುವುದಿಲ್ಲ. 

Zodiac Sign: ಸಂಗಾತಿ ಒತ್ತಡ ಕಡಿಮೆ ಮಾಡೋಕೆ ಹಣಕಾಸು ಹೊಣೆ ತೆಗೆದುಕೊಳ್ಳೋ ರಾಶಿಗಳಿವು!

Latest Videos

undefined

•    ವೃಷಭ (Taurus)
ಯಾವುದೋ ಪರಿಸ್ಥಿತಿಯಲ್ಲಿ ಖಾಲಿ ಇರುವಾಗ ಪರಿಹಾರವೆಂಬಂತೆ ವಿಧ್ವಂಸಕ ಕೃತ್ಯಗಳಲ್ಲಿ (Destructive Activity) ತೊಡಗುತ್ತಾರೆ. ವಿಧ್ವಂಸಕವೆಂದರೆ, ಇತರರಿಗೂ ಹಾನಿಯಾಗಬಹುದು, ಸ್ವತಃ ತಮಗೂ ಹಾನಿ ಮಾಡಿಕೊಳ್ಳಬಹುದು. ಏನೇ ಬಯಸಿದರೂ ದೊರೆಯಬೇಕು ಎನ್ನುವ ಹಠಮಾರಿತನದಿಂದಾಗಿ ಈ ಗುಣ ಬೆಳೆಸಿಕೊಳ್ಳುತ್ತಾರೆ. ಕೆಲವೊಮ್ಮೆ ತೀರ ಅಗ್ರೆಸ್ಸಿವ್‌ (Aggressive) ವರ್ತನೆ ತೋರುತ್ತಾರೆ. ತಾವು ಹೇಳಿದಂತೆ ಆಗಲಿಲ್ಲ ಎಂದಾದರೆ ಇತರರನ್ನು ನಿಕೃಷ್ಟವಾಗಿ ಕಾಣಬಲ್ಲರು. ತಮಗೆ ಖುಷಿಯಾಗುವ ಯಾವುದಾದರೂ ಕ್ರಿಯೆಗಳಿಗೆ ಅಡೆತಡೆ ಉಂಟು ಮಾಡುವವರನ್ನು ಭಾರೀ ಹೀನಾಯವಾಗಿ ನೋಡಬಲ್ಲರು.

•    ಮಿಥುನ (Gemini)
ಸುಳ್ಳು (Lie) ಹೇಳುವುದರಲ್ಲಿ ಇವರು ಸೈಕೋಪಾತ್‌ ಗಳು ಎನ್ನಬಹುದು. ಸೋಷಿಯಲ್‌ ಬಟರ್‌ ಫ್ಲೈ ಎನ್ನುವ ಈ ರಾಶಿಯ ಜನ ತಾವು ಉಸಿರಾಡುವಷ್ಟೇ ಸಹಜವಾಗಿ ಸುಳ್ಳನ್ನು ಹೇಳಬಲ್ಲರು. ಸುಳ್ಳು ಹೇಳುವುದಕ್ಕೆ ಇವರಲ್ಲಿ ನಿರ್ದಿಷ್ಟ ಕಾರಣವೇನೂ (Reason) ಇರುವುದಿಲ್ಲ. ಇವರು ಹೇಳುವುದೆಲ್ಲ ಸುಳ್ಳಾಗಿರಬಹುದು. ಸತ್ಯ (Truth) ಮತ್ತು ಸುಳ್ಳಿನ ಅಂತರವನ್ನು ಅರಿತುಕೊಳ್ಳುವ ಸಾಮರ್ಥ್ಯ (Capacity) ಇವರಲ್ಲಿ ಕಡಿಮೆ ಇರುತ್ತದೆ. ಸುಳ್ಳು ಹೇಳುವ ತಮ್ಮ ಗುಣವನ್ನು ತಾವೇ ಪ್ರಶ್ನಿಸಿಕೊಳ್ಳುವುದೂ ಇಲ್ಲ ಹಾಗೂ ಇದನ್ನು ಪ್ರಜ್ಞೆಗೆ ಒಡ್ಡಿಕೊಳ್ಳುವುದೂ ಇಲ್ಲ. ಹೀಗಾಗಿ, ಸುಳ್ಳು ಹೇಳುವುದು ಇವರಿಗೆ ತಪ್ಪೆಂದು ಅನ್ನಿಸುವುದೇ ಇಲ್ಲ. ಯಾರಾದರೂ ತಮ್ಮ ಬಗ್ಗೆ ಸುಳ್ಳುಗಾರ ಎಂದು ಆಡಿಕೊಂಡರೂ ಇವರಿಗೆ ಬೇಸರವಿಲ್ಲ. ಒಟ್ಟಿನಲ್ಲಿ ತಮ್ಮ ಈ ಗುಣವನ್ನು ನಿಯಂತ್ರಿಸಿಕೊಳ್ಳಲು ಕಷ್ಟಪಡುತ್ತಾರೆ. 

ಇವರು ಪ್ರೀತಿಪಾತ್ರರಿಗೆ ಜೀವ ಕೊಡಲೂ ಸಿದ್ಧ; ಹೆಚ್ಚು ಕಾಳಜಿ ವಹಿಸುವ ರಾಶಿಗಳು ಯಾವುವು?

•    ವೃಶ್ಚಿಕ (Scorpio)
ಚೇಳು ಕಪ್ಪಾಗಿರುತ್ತದೆ. ಕಪ್ಪನ್ನು ಕಲ್ಪನೆಗೆ ಹೋಲಿಸಬಹುದು. ವೃಶ್ಚಿಕ ರಾಶಿಯ ಜನ ಧೈರ್ಯವಂತರಾಗಿರುತ್ತಾರೆ. ಶಕ್ತಿಶಾಲಿಯಾಗಿರುತ್ತಾರೆ. ಯಾರನ್ನಾದರೂ ನಿಯಂತ್ರಿಸುವ (Control) ಸಮಯದಲ್ಲಿ ಕುತಂತ್ರದಿಂದ ವರ್ತಿಸಬಹುದು. ಯಾವುದಾದರೂ ಪರಿಸ್ಥಿತಿಯನ್ನು ತಮ್ಮ ಹತೋಟಿಗೆ ತಂದುಕೊಳ್ಳುವಾಗಲೂ ಠಕ್ಕತನ ತೋರಬಹುದು. ಸಿಕ್ಕಾಪಟ್ಟೆ ಕಲ್ಪನಾ (Imagination) ಬುದ್ಧಿ ಹೊಂದಿರುವ ಇವರು ಯಾವುದೇ ಸನ್ನಿವೇಶವನ್ನಾದರೂ ಕಲ್ಪನೆ ಮಾಡಿಕೊಳ್ಳಬಲ್ಲರು. ಅಪರಾಧ (Crime) ಮಾಡುವುದಷ್ಟೇ ಅಲ್ಲ, ಅಪರಾಧಿಗಳ ಗುಂಪಿಗೆ ನಾಯಕರೂ ಆಗಬಲ್ಲರು. 

click me!