Weekly Love Horoscope: ಯಾರಿಗೆ ಒಲಿಯಲಿದೆ ಪ್ರೀತಿ?

By Sushma Hegde  |  First Published Jun 27, 2023, 4:05 PM IST

ಪ್ರತಿಯೊಬ್ಬರಿಗೂ ತಮ್ಮ ಭವಿಷ್ಯದ ಬಗ್ಗೆ ಕುತೂಹಲ ಇರುತ್ತದೆ.  ಈ ವಾರ ಹೇಗಿರುತ್ತದೆ ಎನ್ನುವ ಬಗ್ಗೆ ತಿಳಿದುಕೊಳ್ಳಲು ಆಸೆ ಇರುತ್ತದೆ. ಜೂನ್‌ 26 ರಿಂದ ಜುಲೈ 2ವರೆಗೆ ಪ್ರೀತಿ ಹಾಗೂ ಸಂಬಂಧಗಳಲ್ಲಿ ಎಲ್ಲಾ 12 ರಾಶಿಗಳ ಭವಿಷ್ಯ ಹೇಗಿದೆ ಎನ್ನುವುದರ ಬಗ್ಗೆ ವಿಸ್ತಾರವಾಗಿ ತಿಳಿಯೋಣ.


ಪ್ರತಿಯೊಬ್ಬರಿಗೂ ತಮ್ಮ ಭವಿಷ್ಯದ ಬಗ್ಗೆ ಕುತೂಹಲ ಇರುತ್ತದೆ.  ಈ ವಾರ ಹೇಗಿರುತ್ತದೆ ಎನ್ನುವ ಬಗ್ಗೆ ತಿಳಿದುಕೊಳ್ಳಲು ಆಸೆ ಇರುತ್ತದೆ. ಜೂನ್‌ 26 ರಿಂದ ಜುಲೈ 2ವರೆಗೆ ಪ್ರೀತಿ ಹಾಗೂ ಸಂಬಂಧಗಳಲ್ಲಿ ಎಲ್ಲಾ 12 ರಾಶಿಗಳ ಭವಿಷ್ಯ ಹೇಗಿದೆ ಎನ್ನುವುದರ ಬಗ್ಗೆ ವಿಸ್ತಾರವಾಗಿ ತಿಳಿಯೋಣ.

ಈ ವಾರದಲ್ಲಿ ದ್ವಾದಶ ರಾಶಿಗಳ (Zodiac Sign) ವಾರ ಭವಿಷ್ಯ ಹೇಗಿರಲಿದೆ ಯಾವ ಯಾವ ರಾಶಿಯವರಿಗೆ ಪ್ರೀತಿ ವಿಚಾರದಲ್ಲಿ ಶುಭಫಲ ಇರಲಿದೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

Tap to resize

Latest Videos

undefined

ಮೇಷ (Aries) : ನೀವು ವಿವಾಹಿತರಾಗಿರಲಿ ಅಥವಾ ಇಲ್ಲದಿರಲಿ ನಿಮ್ಮ ಪ್ರೇಮ ಜೀವನವು ಸರಿಯಾದ ದಿಕ್ಕಿನಲ್ಲಿ ಸಾಗುತ್ತದೆ. ನಿಮಗೆ ಸಹಾಯದ ಅಗತ್ಯವಿದ್ದಾಗ ನಿಮ್ಮ ಸಹಚರರು ನಿಮ್ಮೊಂದಿಗೆ ಇರುತ್ತಾರೆಯೇ ಅಥವಾ ಇಲ್ಲವೇ ಎಂಬುದು ಗೊತ್ತಾಗಲಿದೆ.

ವೃಷಭ ರಾಶಿ (taurus) : ನೀವು ಪರಿಪೂರ್ಣ ಸಂಗಾತಿಯನ್ನು ಹುಡುಕಲು ಇದು ಯೋಗ್ಯವಾದ ಸಮಯ. ನಿಮ್ಮ ಮನಸ್ಸು ಮತ್ತು ಮನೆಯನ್ನು ತೆರೆದಿಡಿ. ಹೊಸ ವ್ಯಕ್ತಿಯ ಆಗಮನ ಆಗಬಹುದು.

ಮಿಥುನ ರಾಶಿ (Gemini): ಇದು ನಿಮ್ಮ ಪ್ರೇಮಿಗಳ ಜತೆ ಮನಬಿಚ್ಚಿ ಮಾತನಾಡಲು ಪ್ರಾರಂಭಿಸುವ ಸಮಯವಾಗಿದ್ದು, ನಿಮಗೆ ಸಂತೋಷ ಕೊಡುತ್ತದೆ. ಹಾಗೂ ಈ ವಾರ ಹೊಸ ಜವಾಬ್ದಾರಿಗಳು ಹೆಗಲೇರುವ ಸಾಧ್ಯತೆ ಇದೆ.

ಕಟಕ ರಾಶಿ  (Cancer): ಒಂದು ಸಣ್ಣ ತಪ್ಪು ತಿಳುವಳಿಕೆಯಿಂದ ನಿಮ್ಮ ಸಂಗಾತಿ ನಡುವಿನ ಕಲಹ ಉಂಟಾಗಬಹುದು. ನೀವು ಈಗಾಗಲೇ ಪ್ರೀತಿಯ ಸಂಬಂಧದಲ್ಲಿದ್ದರೆ, ನಿಮ್ಮ ಕುಟುಂಬ ಸದಸ್ಯರು ನಿಮ್ಮ ಪ್ರೀತಿಗೆ ಮದುವೆಯ ಮುದ್ರೆ ಹಾಕಬಹುದು.

ಈ ರಾಶಿಯವರು ಮನದ ಮಾತು ಹೇಳಲು ಭಯ ಪಡುತ್ತಾರೆ..

ಸಿಂಹ ರಾಶಿ (Leo): ನಿಮ್ಮ ತಪ್ಪು ತಿಳುವಳಿಕೆಯಿಂದಾಗಿ ನಿಮ್ಮ ಸಂಗಾತಿ ಜತೆ ದೊಡ್ಡ ಜಗಳ ಉಂಟಾಗುವ ಅವಕಾಶವಿದೆ. ನೀವು ಶಾಂತತೆಯನ್ನು ಕಾಪಾಡಿಕೊಳ್ಳಿ, ಇಲ್ಲದಿದ್ದರೆ ಸಂಬಂಧವು ಶೀಘ್ರದಲ್ಲೇ ಕೊನೆಗೊಳ್ಳುತ್ತದೆ.

ಕನ್ಯಾ ರಾಶಿ (Virgo): ಈ ವಾರ ನೀವು ಆಕರ್ಷಕವಾದ ಹೊಸ ಅನುಭವಗಳನ್ನು ಪಡೆಯುತ್ತೀರಿ. ನಿಮ್ಮ ಸಂಗಾತಿಗೆ ಬಹಿರಂಗಪಡಿಸದ ಭಾವನೆಗಳನ್ನು ಹೇಳುವಿರಿ. ಇದು ನಿಮಗೆ ನಿಜವಾಗಿಯೂ ರೋಮಾಂಚನಕಾರಿ ಸನ್ನಿವೇಶವನ್ನು ನೀಡುತ್ತದೆ. ಇದರಿಂದ ನೀವು ಮನಸ್ಸಿನ ಶಾಂತಿಯನ್ನು ಹೊಂದಿರುತ್ತೀರಿ.

ತುಲಾ ರಾಶಿ (Libra) : ನಿಮ್ಮ ಸಂಗಾತಿಯ ಕೋಪವನ್ನು ಶಾಂತವಾಗಿ ನಿಭಾಯಿಸುವ ಸಾಮರ್ಥ್ಯ ಬೆಳೆಸಿಕೊಳ್ಳುವಿರಿ. ಇದು ಮುಂದೊಂದು ದಿನ ನಾಟಕೀಯವಾಗಿ ಕಾಣಲಿದೆ.

ವೃಶ್ಚಿಕ (Scorpio): ನೀವು ನಿಮ್ಮ ಸಂಗಾತಿ ಜೊತೆಯಲ್ಲಿ ವಾದ ಮಾಡುವುದನ್ನು ನಿಲ್ಲಿಸುವಿರಿ. ವೈವಾಹಿಕ ಜೀವನವು ಸಂತೋಷದಿಂದ ಕೂಡಿರುತ್ತದೆ ಮತ್ತು ಕುಟುಂಬದೊಂದಿಗೆ ಸಂತೋಷದಿಂದ ಸಮಯ ಕಳೆಯಲು ಅವಕಾಶಗಳು ದೊರೆಯುತ್ತವೆ.

ಧನು ರಾಶಿ (Sagittarius) : ನಿಮ್ಮ ಸಂಗಾತಿಯ ನಡುವೆ ಪ್ರೀತಿ ಮತ್ತು ಭಾವೋದ್ರೇಕದ ಭಾವನೆ ಇರುತ್ತದೆ. ಪ್ರೇಮದ ವಿಷಯದಲ್ಲಿ ಈ ವಾರ ನಿಮಗೆ ಸ್ವಲ್ಪ ಕಷ್ಟವಾಗಬಹುದು. ಪ್ರೀತಿಯ ಸಂಗಾತಿಯೊಂದಿಗೆ ಯಾವುದೋ ವಿಷಯದಲ್ಲಿ ತಪ್ಪು ತಿಳುವಳಿಕೆ ಉಂಟಾಗಬಹುದು. 

ಮಕರ ರಾಶಿ (Capricorn): ನಿಮ್ಮ ಸಂಗಾತಿಗೆ ಇಂಪ್ರೆಸ್ ಮಾಡಲು ಪೋಷಕರು ಅಥವಾ ಸ್ನೇಹಿತರ ಸಹಾಯ ಪಡೆಯುವಿರಿ. ಇದರಿಂದ ನಿಮ್ಮಿಬ್ಬರ ನಡುವೆ ಪ್ರೀತಿ ಇನ್ನು ಹೆಚ್ಚಾಗಲಿದೆ. 

ಜೀವನದಲ್ಲಿ ರಾಹು ದೆಸೆಯಿಂದ ಎದುರಾಗುವ ಕಷ್ಟಗಳು ಯಾವುವು? ಇಲ್ಲಿದೆ ಪರಿಹಾರ ಕ್ರಮ

ಕುಂಭ (Aquarius) : ನೀವು ಪ್ರೀತಿಯ ವಿಚಾರದಲ್ಲಿ ಹೆಚ್ಚಿನ ಅವಕಾಶಗಳು ಪಡೆಯುವಿರಿ. ನಿಮ್ಮ ಸಂಗಾತಿ ನಿಮ್ಮೊಂದಿಗೆ ಸಂತೋಷವಾಗಿರಲು ನೀವು ನಿರೀಕ್ಷಿಸಬಹುದು. ಮತ್ತು ನೀವು ಏಕಾಂಗಿಯಾಗಿದ್ದರೂ ಸಹ ನಿಮ್ಮ ಜೀವನದಲ್ಲಿ ಒಬ್ಬ ನಿರ್ದಿಷ್ಟ ವ್ಯಕ್ತಿಯ ಆಗಮನ ಆಗಲಿದೆ.

ಮೀನ (Pisces) : ಈ ವಾರ ಮುಗಿಯುವ ವೇಳೆಗೆ ನೀವು ಸಾಕಷ್ಟು ಭಾವನಾತ್ಮಕ ಏರುಪೇರುಗಳನ್ನು ಎದುರಿಸಲಿದ್ದೀರಿ. ಆಸೆಗಳು ಮತ್ತು ಪ್ರಚೋದನೆಗಳಿಗೆ ಮಾರು ಹೋಗಬೇಡಿ.

click me!