Latest Videos

Zodiac Signs: ಬರೀ ಜೋರು ಹೊಡೆಯೋರಲ್ಲಿ ಮಾತ್ರವಲ್ಲ, ಇವರಲ್ಲೂ ಇರುತ್ತೆ ನಾಯಕತ್ವ ಗುಣ!

By Suvarna NewsFirst Published May 30, 2023, 12:52 PM IST
Highlights

ಕೆಲ ರಾಶಿಯ ಜನ ನಾಯಕತ್ವದ ಗುಣಗಳನ್ನು ಚೆನ್ನಾಗಿ ಹೊಂದಿರುತ್ತಾರೆ. ಹೆಚ್ಚು ಮಾತುಗಾರರಲ್ಲದಿದ್ದರೂ, ಸಮಯ ಬಂದಾಗ ಉತ್ತಮ ನಾಯಕರಾಗಿ ಮುನ್ನಡೆಸುತ್ತಾರೆ. ಇವರ ನೇತೃತ್ವದಲ್ಲಿ ವಿಶ್ವಾಸ ಇಡಬಹುದು. 
 

ಮೃದುಭಾಷಿಗಳು ಮತ್ತು ಮಿತಭಾಷಿಗಳನ್ನು ಕೆಲವು ಬಾರಿ ಅವರ ಸಾಮರ್ಥ್ಯಕ್ಕಿಂತ ಕಡಿಮೆ ಅಂದಾಜಿಸುವ ಪರಿಪಾಠವಿದೆ. ಅವರನ್ನು ಅಂತರ್ಮುಖಿಗಳು ಎಂದೂ ಲೇಬಲ್ ಮಾಡಲಾಗುತ್ತದೆ. ಆದರೆ, ವಾಸ್ತವ ಕೆಲವೊಮ್ಮೆ ಬೇರೆಯದೇ ಆಗಿರಬಹುದು. ಕೆಲವರ ಸ್ವಭಾವವೇ ಹಾಗಿರುತ್ತದೆ. ಅವರು ಯಾವುದೇ ರೀತಿಯಲ್ಲಿ ವಿವಾದಾಸ್ಪದ ಅಥವಾ ಮುಜುಗರ ಉಂಟುಮಾಡುವಂತಹ ಹೇಳಿಕೆ ನೀಡಲು ಬಯಸುವುದಿಲ್ಲ. ಸಾಕಷ್ಟು ಎಚ್ಚರಿಕೆಯಿಂದ ಮಾತನಾಡುತ್ತಾರೆ. ಜೋರುಜೋರಿನ ಮಾತುಗಳು, ಮಾತಿಗೆ ಎದುರು ಮಾತು, ತಕ್ಷಣಕ್ಕೆ ಏನಾದರೂ ಅಂದುಬಿಡುವುದು ಇವರ ಗುಣವಾಗಿರುವುದಿಲ್ಲ. ಕಚೇರಿಯಲ್ಲಾಗಲೀ, ಮನೆಯಲ್ಲೇ ಆಗಲೀ. ಇವರು ಏನನ್ನಾದರೂ ಮಾತನಾಡುವುದಿಲ್ಲ. ಕೆಲವೊಮ್ಮೆ ಈ ಗುಣವೇ ಅವರ ದೌರ್ಬಲ್ಯ ಎಂದು ಅನಿಸುವುದೂ ಇದೆ. ಆದರೆ, ಸಮಯ ಎದುರಾದಾಗ ಇಂಥವರೇ ಅತ್ಯುತ್ತಮ ನಾಯಕತ್ವದ ಗುಣಗಳನ್ನು ಪ್ರದರ್ಶಿಸುತ್ತಾರೆ. ಕೆಲವು ರಾಶಿಗಳ ಜನ ನಾಯಕತ್ವದ ಗುಣವನ್ನು ಅತ್ಯುತ್ತಮವಾಗಿ ಹೊಂದಿರುತ್ತಾರೆ. ಹಾಗೆಂದು ಇವರು ಮೊದಲಿಗೇ ಭಾರೀ ಬಿಲ್ಡಪ್ ನೀಡುವುದಿಲ್ಲ. ಜನಜಂಗುಳಿಯಲ್ಲಿ ಮಿತಭಾಷಿಗಳಾಗಿರುತ್ತಾರೆ. ರಿಸರ್ವ್ ಧೋರಣೆಯ ಜನರೆಂದು ಕಂಡುಬಂದರೂ ಇವರನ್ನು ಅರ್ಥ ಮಾಡಿಕೊಳ್ಳುತ್ತ ಸಾಗಿದರೆ ಇವರು ಉತ್ತಮ ಮಾತುಗಾರರು ಎನ್ನುವುದು ತಿಳಿದುಬರುತ್ತದೆ. ಹಾಗೂ ಸಾಹಸಮಯ ಚಟುವಟಿಕೆಗಳಲ್ಲಿ ತೊಡಗುವುದು ತಿಳಿದು ಬರುತ್ತದೆ. ಇಂತಹ ಕೆಲವು ರಾಶಿಗಳು ಇವು.

•    ತುಲಾ (Libra)
ತುಲಾ ರಾಶಿಗಳ ಕೆಲ ಜನರು ಮಿತಭಾಷಿಗಳಲ್ಲ. ಮಾತಿನಲ್ಲಿ ಪಳಗಿರುತ್ತಾರೆ. ಈ ರಾಶಿಯ ಜನ ಕಚೇರಿಗಳಲ್ಲಿ (Office) ಎಲ್ಲರ ಕೇಂದ್ರಬಿಂದುವಾಗಲು ಇಷ್ಟಪಡುವುದಿಲ್ಲ. ಮುನ್ನೆಲೆಗೆ ಬರುವ ಬದಲು ಇತರರನ್ನು ಗಮನಿಸುತ್ತ (Observe) ಇರುತ್ತಾರೆ. ಈ ಗುಣದಿಂದ ಇವರು ಎಷ್ಟೋ ಬಾರಿ ಕಡೆಗಣನೆಗೆ (Underestimate) ಒಳಗಾಗುತ್ತಾರೆ. ಆದರೆ, ಇವರು ಇಡೀ ಡಿಪಾರ್ಟ್ ಮೆಂಟನ್ನು ತಮ್ಮೊಂದಿಗೆ ಕರೆದೊಯ್ಯಬಲ್ಲರು. ನೇತೃತ್ವ (Leadership) ವಹಿಸಬಲ್ಲರು. ಯಾರದ್ದೇ ಪಕ್ಷಪಾತಿಯಾಗದೆ (Side) ಕಾರ್ಯಕ್ಕೆ ಬದ್ಧರಾಗಿರುತ್ತಾರೆ. ಖಾಸಗಿಯಾಗಿ ಯಾರನ್ನೂ ಪರಿಗಣಿಸದೆ ವೃತ್ತಿಪರತೆಯ (Professional) ಹಿನ್ನೆಲೆಯಲ್ಲಿ ಯೋಚಿಸುತ್ತಾರೆ. ಎಷ್ಟೇ ಒತ್ತಡದ (Stress) ಸಮಯವನ್ನೂ ಚೆನ್ನಾಗಿ ನಿಭಾಯಿಸುತ್ತಾರೆ. ಈ ಗುಣ ಇವರನ್ನು ಅತ್ಯುತ್ತಮ ನಾಯಕರನ್ನಾಗಿ ರೂಪಿಸುತ್ತದೆ. ಎಲ್ಲರೊಂದಿಗೆ ಮೃದುವಾಗಿ (Soft) ನಡೆದುಕೊಳ್ಳುತ್ತಾರೆ.

ಶನಿ ವಕ್ರಿ: 5 ರಾಶಿಗಳಿಗೆ ಶುರುವಾಗಲಿದೆ ಫುಲ್ ಲಕ್ ರೀ..

•    ಮಕರ (Capricorn)
ಕೆಲವು ಬಾರಿ ಮಕರ ರಾಶಿಯ ಜನರ ಬಗ್ಗೆ ಎಚ್ಚರಿಕೆ ವಹಿಸಬೇಕಾಗುತ್ತದೆ. ಏಕೆಂದರೆ ಇವರು ತಮ್ಮದೇ ಆದ ವಿಚಾರಗಳ ಹಿನ್ನೆಲೆಯಲ್ಲಿ ವರ್ತಿಸುತ್ತಾರೆ. ಆದರೆ, ಇವರು ಯಾವುದೇ ಕಾರಣಕ್ಕೂ ತಪ್ಪು ಹೇಳಿಕೆ (Wrong Statement) ನೀಡಲು ಹಿಂದೇಟು ಹಾಕುತ್ತಾರೆ. ಹೀಗಾಗಿ, ಮಾತನಾಡುವ ಮುನ್ನ ಯೋಚಿಸುತ್ತಾರೆ. ಎಚ್ಚರಿಕೆಯಿಂದ ತಮ್ಮ ಮಾತುಗಳು (Words) ಮತ್ತು ಕ್ರಿಯೆಯನ್ನು ವಿಮರ್ಶೆ ಮಾಡುತ್ತಾರೆ. ದೀರ್ಘವಾದ ಭಾಷಣ ಮಾಡಲು ಇವರಿಂದ ಸಾಧ್ಯವಿಲ್ಲ. ಸುಮ್ಮನಿರುವ ಸ್ವಭಾವ ಹೊಂದಿದ್ದರೂ ಅದ್ಭುತ ನಾಯಕತ್ವದ ಗುಣ ಹೊಂದಿರುತ್ತಾರೆ. ಜನರ ಸಮಯಕ್ಕೆ ಬೆಲೆ (Value) ನೀಡುತ್ತಾರೆ. ಮಕರ ರಾಶಿಯ ಜನ ಮೊದಲು ಉತ್ತಮ ಕೇಳುಗರಾಗುತ್ತಾರೆ, ಬಳಿಕ ಮಾತನಾಡುತ್ತಾರೆ. ಇದು ಅವರನ್ನು ಉತ್ತಮ ಬಾಸುಗಳನ್ನಾಗಿ ರೂಪಿಸುತ್ತದೆ. ಸಹೋದ್ಯೋಗಿಗಳಿಗೆ (Colleagues) ಸಾಕಷ್ಟು ಬೆಂಬಲ ನೀಡುತ್ತಾರೆ.

•    ವೃಶ್ಚಿಕ (Scorpio)
ವಾಸ್ತವದ ಸಂಘರ್ಷಗಳನ್ನು ಅವಾಯ್ಡ್ ಮಾಡಲು ಯತ್ನಿಸುತ್ತಾರೆ. ಇವರಲ್ಲಿ ಕ್ರಿಯಾಶೀಲತೆ (Creativity) ಮತ್ತು ಭಾವುಕತೆ (Emotional) ಸಮಾನವಾಗಿ ಮಿಳಿತವಾಗಿರುತ್ತದೆ. ಏಕಾಂಗಿಯಾಗಿ ಕೆಲಸ ಮಾಡುತ್ತಾರೆ, ಶ್ರಮಜೀವಿಯಾಗಿರುತ್ತಾರೆ. ತಮ್ಮ ಸಹೋದ್ಯೋಗಿಗಳು ಅಥವಾ ಮನೆಯಲ್ಲಿ ಇತರ ಜನರೊಂದಿಗೆ ಹೆಚ್ಚಿನ ಮಾತುಕತೆ ನಡೆಸುವುದಿಲ್ಲ. ಎಲ್ಲ ಮಾಹಿತಿಗಳನ್ನು ಎಲ್ಲರೊಂದಿಗೂ ಹಂಚಿಕೊಳ್ಳಲು (Share) ಬಯಸುವುದಿಲ್ಲ. ಇತರರ ಭಾವನೆಗಳನ್ನು ಬಹಳ ಬೇಗ ಅರಿತುಕೊಳ್ಳುತ್ತಾರೆ.

ಈ ರಾಶಿಗಳಿಗೆ ಆರೋಗ್ಯಕರ ಸಂಬಂಧ ನಿಭಾಯಿಸುವುದು ನೀರು ಕುಡಿದಷ್ಟೇ ಸಲೀಸು!

•    ವೃಷಭ (Taurus)
ವೃಷಭ ರಾಶಿಯ ಜನ ಅಂತರ್ಮುಖಿಗಳಲ್ಲ. ಆದರೆ, ತಾವು ಯಾರೊಂದಿಗೆ ಓಪನ್ (Open) ಆಗಬೇಕು ಎನ್ನುವುದನ್ನು ಆಯ್ಕೆ (Choice) ಮಾಡಿಕೊಳ್ಳುತ್ತಾರೆ. ಅವರೊಂದಿಗೆ ಮಾತ್ರ ಮುಕ್ತವಾಗಿ ಬೆರೆಯುತ್ತಾರೆ. ಉಳಿದವರೊಂದಿಗೆ ಇವರು ಸುಮ್ಮನಿದ್ದುಬಿಡುತ್ತಾರೆ. ತಮ್ಮದೇ ವಿಧಾನದಲ್ಲಿ ಯಶಸ್ವಿಯಾಗಿ ಕೆಲಸ ನಿಭಾಯಿಸುವ ಶಕ್ತಿ, ಉತ್ತಮ ನಾಯಕತ್ವದ ಗುಣ ಹೊಂದಿರುತ್ತಾರೆ. ಮೊದಲು ಒರಟಾಗಿ ಕಂಡುಬಂದರೂ ಅವರ ಗುಣ ಅದಲ್ಲ. ನೇತೃತ್ವ ವಹಿಸಿದಾಗ ಆತ್ಮವಿಶ್ವಾಸಿಗಳಾಗಿ (Confident) ಮುನ್ನಡೆಯುತ್ತಾರೆ. 
 

click me!