ಕರ್ಕೋ ಭವ ನಾಶ ಯೋಗದಿಂದ 3 ರಾಶಿಗಳಿಗೆ 1 ತಿಂಗಳ ಸವಾಲಿನ ಸಮಯ

Published : May 29, 2023, 06:00 PM IST
ಕರ್ಕೋ ಭವ ನಾಶ ಯೋಗದಿಂದ 3 ರಾಶಿಗಳಿಗೆ 1 ತಿಂಗಳ ಸವಾಲಿನ ಸಮಯ

ಸಾರಾಂಶ

ಶುಕ್ರನು ಕರ್ಕಾಟಕದಲ್ಲಿ ಮಂಗಳವನ್ನು ಭೇಟಿಯಾದಾಗ ಕರ್ಕೋ ಭವ ನಾಶ ಯೋಗ ಸೃಷ್ಟಿಯಾಗುತ್ತದೆ. 3 ರಾಶಿಚಕ್ರದ ಚಿಹ್ನೆಗಳು ಮುಂದಿನ 1 ತಿಂಗಳು ಎಚ್ಚರಿಕೆಯಿಂದ ಇರಬೇಕಾಗುತ್ತದೆ.

ಇನ್ನೊಂದೇ ದಿನ, ನಂತರ ಐಶ್ವರ್ಯ ಮತ್ತು ವೈಭವದ ಅಂಶವೆಂದು ಪರಿಗಣಿಸಲ್ಪಟ್ಟ ಶುಕ್ರ ದೇವ ತನ್ನ ರಾಶಿಯನ್ನು ಬದಲಾಯಿಸಲಿದ್ದಾನೆ. ಸದ್ಯ ಅವನು ಮಿಥುನ ರಾಶಿಯಲ್ಲಿದ್ದಾನೆ. ಈಗ ಮೇ 30ರಂದು, ರಾತ್ರಿ 7.29ಕ್ಕೆ ಶುಕ್ರನು ಕರ್ಕಾಟಕ ರಾಶಿಗೆ ಹೋಗುತ್ತಾನೆ. ಅವನು ಚಂದ್ರನ ನೀರಿನ ಚಿಹ್ನೆ ಕರ್ಕಾಟಕಕ್ಕೆ ತೆರಳುತ್ತಿದ್ದಂತೆ ಮಂಗಳ ಈಗಾಗಲೇ ಅಲ್ಲಿ ಕುಳಿತಿದ್ದಾನೆ. ಶುಕ್ರವು ಕರ್ಕಕ್ಕೆ ಪ್ರವೇಶಿಸಿದ ತಕ್ಷಣ ಮಂಗಳವನ್ನು ಭೇಟಿಯಾಗುತ್ತಾನೆ. ಇವರಿಬ್ಬರ ಭೇಟಿಯಿಂದ ಅತ್ಯಂತ ಅಶುಭ ಯೋಗ ಕರ್ಕೋ ಭವ ನಾಶ ಯೋಗ ಸೃಷ್ಟಿಯಾಗುತ್ತಿದೆ. ಅಂತಹ ಪರಿಸ್ಥಿತಿಯಲ್ಲಿ, 3 ರಾಶಿಯ ಚಿಹ್ನೆಗಳು ಮುಂದಿನ 1 ತಿಂಗಳು ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಕರ್ಕೋ ಭವ ನಾಶ ಯೋಗದಿಂದ ತೊಂದರೆಗೀಡಾಗುವ 3 ರಾಶಿಗಳು ಯಾವೆಲ್ಲ ನೋಡೋಣ.

ತುಲಾ ರಾಶಿ(Libra)
ತುಲಾ ರಾಶಿಯ ಜನರ ರಾಶಿಯಿಂದ ಹತ್ತನೇ ಮನೆಯಲ್ಲಿ ಶುಕ್ರನು ಇರುತ್ತಾನೆ. ಆದ್ದರಿಂದಲೇ ಕರ್ಕೋ ಭಾವ ನಾಶ ಯೋಗ ಮಾಡುವ ಶುಕ್ರನ ಈ ಅಶುಭ ಯೋಗವು ನಿಮ್ಮ ಕಾರ್ಯಕ್ಷೇತ್ರಕ್ಕೆ ಒಳ್ಳೆಯದಲ್ಲ. ನೀವು ಕಚೇರಿ ರಾಜಕೀಯದಿಂದ ದೂರವಿರಬೇಕು. ನೀವು ಇದನ್ನು ಮಾಡದಿದ್ದರೆ, ನಿಮ್ಮ ಸಹೋದ್ಯೋಗಿಗಳೊಂದಿಗಿನ ಸಂಬಂಧವು ಹಾಳಾಗಬಹುದು. ಇದು ನಿಮ್ಮ ಕೆಲಸಕ್ಕೆ ಸಮಸ್ಯೆಗಳನ್ನು ಉಂಟು ಮಾಡಬಹುದು. ಹಿರಿಯ ಅಧಿಕಾರಿಗಳ ಜೊತೆ ಸೌಜನ್ಯದಿಂದ ನಡೆದುಕೊಂಡರೆ ಉತ್ತಮ. ಈ ಅವಧಿಯಲ್ಲಿ ನಿಮ್ಮ ಹೆಸರು ಹಾಳಾಗಬಹುದು. ವ್ಯಾಪಾರಸ್ಥರು ಕೂಡ ಜಾಗರೂಕರಾಗಿರಬೇಕು. ನಷ್ಟವಾಗುವ ಸಾಧ್ಯತೆಗಳಿವೆ. ಇದರ ಋಣಾತ್ಮಕ ಪರಿಣಾಮ ನಿಮ್ಮ ಆರೋಗ್ಯದ ಮೇಲೂ ಕಾಣಬಹುದು.

ಶಿವಲಿಂಗದ ಮೇಲೆ ನೀರು ಹನಿ ಹನಿಯಾಗಿ ತೊಟ್ಟಿಕ್ಕುವ ಹಿಂದಿನ ಕಾರಣವೇನು?

ಧನು ರಾಶಿ(Sagittarius)
ಕರ್ಕಾಟಕದಲ್ಲಿರುವ ಶುಕ್ರನು ನಿಮ್ಮ ರಾಶಿಯಿಂದ ಎಂಟನೇ ಮನೆಯಲ್ಲಿರುತ್ತಾನೆ. ಇದು ನಿಮ್ಮ ಆರ್ಥಿಕ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸಬಹುದು. ರಹಸ್ಯವಾಗಿ ಖರ್ಚು ಮಾಡುವ ಅಭ್ಯಾಸವನ್ನು ನೀವು ತಪ್ಪಿಸಬೇಕು. ಅತಿಯಾದ ಖರ್ಚು ನಿಮ್ಮ ಸಮಸ್ಯೆಗಳನ್ನು ಹೆಚ್ಚಿಸಬಹುದು. ಈ ಒಂದು ತಿಂಗಳಲ್ಲಿ ನೀವು ಯಾವುದೇ ರೀತಿಯ ಅನೈತಿಕ ಕೆಲಸಗಳಿಂದ ದೂರವಿರಬೇಕು. ಇಲ್ಲದಿದ್ದರೆ ನೀವು ತೊಂದರೆಗಳನ್ನು ಎದುರಿಸಬೇಕಾಗಬಹುದು. ಕುಟುಂಬ ಸದಸ್ಯರೊಂದಿಗೆ ಕಲಹ ಉಂಟಾಗಬಹುದು. ಕುಟುಂಬದ ಕಾರಣದಿಂದ ಒತ್ತಡ ಹೆಚ್ಚಾಗಬಹುದು. ನೀವು ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುತ್ತಿದ್ದರೆ, ನಿಮ್ಮ ಸಂಗಾತಿಯೊಂದಿಗಿನ ಸಂಬಂಧವನ್ನು ಹಾಳು ಮಾಡಬೇಡಿ. ಈ ಸಮಯದಲ್ಲಿ ಎಲ್ಲಿಯೂ ಯಾವುದೇ ರೀತಿಯ ಹೂಡಿಕೆ ಮಾಡಬೇಡಿ, ಅದು ನಿಮಗೆ ಹಾನಿಕಾರಕ ಎಂದು ಸಾಬೀತುಪಡಿಸಬಹುದು.

ಶುಕ್ರ ಗೋಚಾರದಿಂದ ಮಕರದಲ್ಲಿ ಲಕ್ಷ್ಮೀ ಯೋಗ; 4 ರಾಶಿಗಳಿಗೆ ಇದರ ಲಾಭ

ಕುಂಭ ರಾಶಿ(Aquarius)
ಕರ್ಕಾಟಕದಲ್ಲಿ ಶುಕ್ರನ ಸಂಚಾರದಿಂದಾಗಿ ನಿಮ್ಮ ವಿರೋಧಿಗಳು ಸಕ್ರಿಯರಾಗಿರುತ್ತಾರೆ. ಮುಂದಿನ ಒಂದು ತಿಂಗಳು ನೀವು ತೊಂದರೆಗೊಳಗಾಗುತ್ತೀರಿ. ನೀವು ಹೆಚ್ಚು ಶ್ರಮ ವಹಿಸಿ ಕೆಲಸ ಮಾಡಿದಷ್ಟೂ ಫಲ ಸಿಗುವುದಿಲ್ಲ. ನಿಮ್ಮ ಸಹೋದ್ಯೋಗಿಗಳು ನಿಮ್ಮ ವಿರುದ್ಧ ನಿಲ್ಲುತ್ತಾರೆ, ಅವರು ಪಿತೂರಿಯನ್ನು ಸಹ ರಚಿಸಬಹುದು. ಕೆಟ್ಟ ಸಂದರ್ಭಗಳನ್ನು ತಪ್ಪಿಸಲು, ನಿಮ್ಮ ಕೆಲಸದ ಮೇಲೆ ಸಂಪೂರ್ಣವಾಗಿ ಗಮನ ಕೇಂದ್ರೀಕರಿಸಿ. ಆರೋಗ್ಯಕ್ಕೆ ಸಮಯ ಒಳ್ಳೆಯದಲ್ಲ. ಹಾಗಾಗಿ ಆರೋಗ್ಯದ ಬಗ್ಗೆ ಎಚ್ಚರವಿರಲಿ. ಖರ್ಚು ಹೆಚ್ಚಾಗುತ್ತದೆ, ನಿಯಂತ್ರಣದಲ್ಲಿರಿ. ತುಂಬಾ ಮಸಾಲೆ ತಿನ್ನುವುದನ್ನು ತಪ್ಪಿಸಿ. ಉದ್ಯಮಿಗಳು ಅನೇಕ ಸವಾಲುಗಳನ್ನು ಎದುರಿಸಬಹುದು. ಯಾವುದೇ ಆಸ್ತಿ ವಿವಾದಕ್ಕೆ ಕಾರಣವಾಗಬಹುದು. ಈ ಒಂದು ತಿಂಗಳ ಅವಧಿಯಲ್ಲಿ ಯಾವುದೇ ರೀತಿಯ ವಿವಾದಗಳಿಂದ ದೂರವಿದ್ದರೆ ಉತ್ತಮ.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

PREV
Read more Articles on
click me!

Recommended Stories

ಈ 4 ರಾಶಿಯವರಲ್ಲಿ ಒಳ್ಳೆಯದಕ್ಕಿಂತ ಕೆಟ್ಟ ಗುಣಗಳೇ ಹೆಚ್ಚು, ದ್ವೇಷ ಸಾಧಿಸೋದ್ರಲ್ಲಿ ನಿಸ್ಸೀಮರು
ಹೊಸ ವರ್ಷದಲ್ಲಿ 3 ರಾಜಯೋಗ, 3 ರಾಶಿಗೆ ಬಹಳಷ್ಟು ಹಣ