Zodiac Sign: ಎಲ್ಲೇ ಹೋಗಲಿ ಅದ್ಭುತವಾಗಿ ಚೌಕಾಸಿ ಮಾಡ್ತಾರೆ ಈ ಜನ!

By Suvarna NewsFirst Published Apr 3, 2023, 5:09 PM IST
Highlights

ಚೌಕಾಸಿ ಮಾಡಲು ಎಲ್ಲರಿಗೂ ಬರುವುದಿಲ್ಲ. ಸೀರೆ ಅಂಗಡಿಗೆ ಹೋದರೆ ಅವರು ಹೇಳಿದ ದರ ನೀಡಿ ಕೊಂಡುಬರುವವರಿರುವಂತೆಯೇ, ಅರ್ಧ ಗಂಟೆಯಾದರೂ ತಾಳ್ಮೆಯಿಂದ ಚೌಕಾಸಿ ಮಾಡುವವರಿದ್ದಾರೆ. ಈ ಗುಣ ಮುಖ್ಯವಾಗಿ ಈ ನಾಲ್ಕು ರಾಶಿಗಳಲ್ಲಿ ಕಂಡುಬರುತ್ತದೆ. 
 

ಶಾಪಿಂಗ್ ಗೆ ಹೋದರೆ ಅವರು ಹೇಳಿದ ರೇಟ್ ಗೆ ವಸ್ತುಗಳನ್ನು ಕೊಂಡು ತರುವವರು ಬೇರೆ. ಆದರೆ, ಅವರು ಹೇಳಿದುದಕ್ಕಿಂತ ಕನಿಷ್ಠ ಬೆಲೆಗೆ ಚೌಕಾಸಿ ಮಾಡಿ ತಂದು, ಒಂದು ವಸ್ತುವಿಗಾಗಿ ನಾಲ್ಕಾರು ಅಂಗಡಿಗಳನ್ನು ಸುತ್ತಿ, ತಿರುಗಿ ಮಾಹಿತಿ ಪಡೆದು ಚೌಕಾಸಿ ಮಾಡುವವರು ಬೇರೆ. ಬೇಕಾದ ಯಾವುದೋ ಒಂದು ವಸ್ತುವಿಗೆ ಅಷ್ಟೆಲ್ಲ ಸಾಹಸ ಮಾಡಲು ಬಹಳಷ್ಟು ಜನರಿಗೆ ತಾಳ್ಮೆ ಇರುವುದಿಲ್ಲ, ಪುರುಸೊತ್ತೂ ಇರುವುದಿಲ್ಲ. ಆದರೆ, ಕೆಲವರು ಹಾಗಲ್ಲ. ಅವರು ಚೌಕಾಸಿಯಲ್ಲಿ ಪರಿಣಿತರು. ತರಕಾರಿ ಕೊಂಡುಕೊಳ್ಳಲು ಹೋಗಲಿ, ಸೀರೆ ಅಂಗಡಿಗೆ ಹೋಗಿರಲಿ. ಸಾಕಷ್ಟು ಪ್ರಯತ್ನಿಸಿ ದರ ಕಡಿಮೆ ಮಾಡಿಕೊಳ್ಳುವ ಬುದ್ಧಿ ಅವರಲ್ಲಿರುತ್ತದೆ. ಕೇವಲ ಸಣ್ಣಪುಟ್ಟ ವ್ಯಾಪಾರವನ್ನಲ್ಲ, ಇವರು ದೊಡ್ಡ ದೊಡ್ಡ ಡೀಲ್ ಗಳನ್ನು ಸಹ ಸಾಕಷ್ಟು ಚೌಕಾಸಿ ಮಾಡಿಯೇ ಹೆಚ್ಚು ಲಾಭ ಮಾಡಿಕೊಳ್ಳುವ ಚಾಣಾಕ್ಷತನ ಹೊಂದಿರುತ್ತಾರೆ. ಇದು ಸಹ ಕೆಲವು ರಾಶಿಗಳಲ್ಲಿ ಮಾತ್ರವೇ ಕಂಡುಬರುವ ಗುಣ. ಹೀಗಾಗಿ, ಈ ರಾಶಿಗಳ ಜನ ಮಾತ್ರ ಚೌಕಾಸಿಯಲ್ಲಿ ಸಾಕಷ್ಟು ಯಶಸ್ವಿಯಾಗುತ್ತಾರೆ ಹಾಗೂ ಅವರು ಹೇಗಾದರೂ ಚೌಕಾಸಿ ಮಾಡಿ ಹೆಚ್ಚು ಲಾಭ ಮಾಡಿಕೊಳ್ಳುತ್ತಾರೆ. 

•    ವೃಶ್ಚಿಕ (Scorpio)
ವೃಶ್ಚಿಕ ರಾಶಿಯ ಜನ ಚೌಕಾಸಿಯಲ್ಲಿ (Negotiations) ಹೆಸರುವಾಸಿ. ಮನೆ ಖರೀದಿ (Buy Home) ಮಾಡುವುದಿರಲಿ, ಬಾಡಿಗೆಗೆ ಹೋಗುವುದಿರಲಿ, ತರಕಾರಿ, ಹಣ್ಣು ಯಾವುದೇ ವಸ್ತುಗಳನ್ನು ಕೊಂಡುಕೊಳ್ಳುವ ವಿಚಾರದಲ್ಲಿರಲಿ. ವೃಶ್ಚಿಕ ರಾಶಿಯ ಜನ ಭಾರೀ ಚೌಕಾಸಿ ಮಾಡುತ್ತಾರೆ. ಹಾಗೂ ಇದರಲ್ಲಿ ಯಶಸ್ವಿಯೂ ಆಗುತ್ತಾರೆ. ಚೌಕಾಸಿ ಮಾಡಿ ಹಣ ಉಳಿಸಿದ ತೃಪ್ತಿ (Satisfaction) ಇವರಲ್ಲಿ ಕಾಣಿಸುತ್ತದೆ. ವ್ಯಾಪಾರ-ವ್ಯವಹಾರಗಳಲ್ಲಿ (Business) ಇವರು ಭಾವನೆಗಳನ್ನು ಆಧರಿಸಿ ನಡೆಯುವುದಿಲ್ಲ. ವೃತ್ತಿ (Profession) ಮಾಡುವ ಸ್ಥಳಗಳಲ್ಲೂ ಇವರು ಚೌಕಾಸಿ ಮಾಡುವುದನ್ನು ಬಿಡುವುದಿಲ್ಲ. ವರ್ಚಸ್ಸು (Charisma) ಹೊಂದಿರುವ ಇವರು ಎದುರಿನವರಿಗೂ ಅನುಕೂಲವಾಗುವಂತೆ ವಿನ್-ವಿನ್ (Win-Win) ಸನ್ನಿವೇಶವನ್ನು ನಿರ್ಮಿಸಬಲ್ಲರು.

Latest Videos

Zodiac Sign: ಪ್ರಾಮಾಣಿಕವಾಗಿ ಭಾವನೆ ಹಂಚ್ಕೊಳೋಕೆ ಸೋಲ್ತಾರೆ ಈ ಜನ

•    ಸಿಂಹ (Leo)
ಸಿಂಹ ರಾಶಿಯ ಜನ ಅದ್ಭುತ ಸಂವಹನಕಾರರು (Communicators). ಏಕೆಂದರೆ, ಇವರು ಚೌಕಾಸಿಯಲ್ಲಿ ನಿಷ್ಣಾತರು. ವ್ಯಾಪಾರ-ವ್ಯವಹಾರಗಳಲ್ಲಿ ಇವರದ್ದು ಎತ್ತಿದ ಕೈ. ಇಂಥದ್ದಕ್ಕೆ ಸಂಬಂಧಿಸಿ ಚೌಕಾಸಿ ಮಾಡುವುದೆಂದರೆ ಇವರು ಹೆಮ್ಮೆ, ತೃಪ್ತಿ ಹಾಗೂ ಭಾರೀ ಮೋಜನ್ನು (Enjoyment) ಅನುಭವಿಸುತ್ತಾರೆ. ಸಾಮಾಜಿಕ ಕೌಶಲದಲ್ಲಿ (Social Skills) ಅದ್ಭುತ ಶಕ್ತಿ ಹೊಂದಿರುವ ಸಿಂಹ ರಾಶಿಯ ಜನ ಜಂಗುಳಿಯಲ್ಲಿ ಮುದುಡುವುದಿಲ್ಲ. ಸಮಸ್ಯೆಗಳನ್ನು ಪರಿಹರಿಸುವಲ್ಲೂ ಇವರು ಮುಂದಿರುತ್ತಾರೆ. 

•    ತುಲಾ (Libra)
ತುಲಾ ರಾಶಿಯ ಜನ ಶ್ರಮವಹಿಸಿ (Hard Work) ಕೆಲಸ ಮಾಡುತ್ತಾರೆ. ತಮ್ಮ ನಿರೀಕ್ಷಿತ ಫಲ ಸಿಗುವವರೆಗೂ ಕೈಗೆತ್ತಿಕೊಂಡ ಕೆಲಸವನ್ನು ಬಿಡುವುದಿಲ್ಲ. ಹೀಗಾಗಿ, ಇವರು ಸಾಕಷ್ಟು ಚೌಕಾಸಿ ಮಾಡುತ್ತಾರೆ. ಶಾಪಿಂಗ್ ಮಾಲ್ ನಲ್ಲಿರಲಿ ಅಥವಾ ತಮ್ಮದೇ ಕಂಪೆನಿಗೆ ಉದ್ಯೋಗಿಗಳನ್ನು ನೇಮಕ (Appoint) ಮಾಡಿಕೊಳ್ಳುವಲ್ಲಾಗಲಿ. ಇವರು ಸಾಕಷ್ಟು ಚೌಕಾಸಿ ಮಾಡಿಯೇ ಮುಂದುವರೆಯುತ್ತಾರೆ. ತಮಗೆ ನಿಜವಾಗಿಯೂ ಪ್ರಯೋಜನಕ್ಕೆ ಬರುವವರನ್ನು ಮಾತ್ರವೇ ನೇಮಕ ಮಾಡಿಕೊಳ್ಳುತ್ತಾರೆ. ಸಿಕ್ಕಾಪಟ್ಟೆ ಒತ್ತಡ (Stress) ಸಹಿಸಿಕೊಳ್ಳುವ ಗುಣ ಹೊಂದಿರುತ್ತಾರೆ. ಆದರೆ, ಈ ರಾಶಿ ಪೈಕಿಯಲ್ಲೇ ಕೆಲವರಿಗೆ ಮಾತ್ರ ಒತ್ತಡ ನಿಭಾಯಿಸಲು ಬರುವುದಿಲ್ಲ. ಇವರ ಅಂದಾಜು ಕರಾರುವಕ್ಕಾಗಿದ್ದು, ಇತರರು ಇವರ ನಿರ್ಧಾರವನ್ನು ಒಪ್ಪಿಕೊಳ್ಳುವುದು ಸಹಜ.

ಈ 5 ರಾಶಿಯವ್ರು ಪಕ್ಕಾ Marriage Material; ವೈವಾಹಿಕ ಜೀವನಕ್ಕೆ ಬೇಗ ಒಗ್ಗಿಕೊಳ್ತಾರೆ!

•    ಕುಂಭ (Aquarius)
ಯಾವುದೇ ಸನ್ನಿವೇಶವನ್ನು (Situation) ವಿಮರ್ಶಿಸುವಲ್ಲಿ (Analyse) ಕುಂಭ ರಾಶಿಯವರು ಅದ್ಭುತ ಜ್ಞಾನ ಹೊಂದಿರುತ್ತಾರೆ. ಹಾಗೂ ಆ ಕ್ಷಣಕ್ಕೆ ನಿರ್ಧಾರ (Decision) ಕೈಗೊಳ್ಳಲು ಹಿಂದೇಟು ಹಾಕುವುದಿಲ್ಲ. ಸಿಹಿಯಾಗಿ ಮಾತನಾಡುತ್ತಲೇ ಉತ್ತಮ ಡೀಲ್ (Deal) ಮಾಡಬಲ್ಲರು. ತಮಗೆ ಅನುಕೂಲವಾಗುವ ಫಲಿತಾಂಶ ಬರಲು ಯಾವುದೇ ನಿರ್ಧಾರವನ್ನಾದರೂ ಮತ್ತೊಮ್ಮೆ ಪರಿಶೀಲನೆ ಮಾಡುತ್ತಾರೆ. ಬ್ಯುಸಿನೆಸ್ ಡೀಲ್ ಮಾಡುವಲ್ಲಿ ಇವರನ್ನು ಮೀರಿಸುವವರಿಲ್ಲ. 

click me!