Vastu Tips : ಮನೆ ಮುಖ್ಯ ದ್ವಾರದಲ್ಲಿ ನೀರಿಟ್ಟರೆ ಬದುಕು ಹೀಗ್ ಬದಲಾಗುತ್ತಾ?

By Suvarna NewsFirst Published Jun 24, 2023, 1:05 PM IST
Highlights

ಕೆಲವರ ಮನೆಯ ಮುಖ್ಯ ಬಾಗಿಲಿನ ಬಳಿ ನೀರಿನ ಪಾತ್ರೆಯನ್ನು ನೀವು ನೋಡಿರಬಹುದು. ಅದು ನಿಮ್ಮನ್ನು ಆಕರ್ಷಿಸಿರಲೂಬಹುದು. ಇದು ಬರೀ ಆಕರ್ಷಣೆ ಮಾತ್ರವಲ್ಲ. ಈ ನೀರಿನಿಂದ ಲಾಭ ಸಾಕಷ್ಟಿದೆ. 
 

ಮನೆಯ ಮುಖ್ಯ ಬಾಗಿಲು ಮನೆಯ ಸಮೃದ್ಧಿಗೆ ಕಾರಣವಾಗುತ್ತದೆ. ಮನೆಯ ಮುಖ್ಯ ಬಾಗಿಲಿನಿಂದಲೇ ಸಕಾರಾತ್ಮಕ, ನಕಾರಾತ್ಮಕ ಶಕ್ತಿಗಳು ಒಳ ಪ್ರವೇಶ ಮಾಡುತ್ತವೆ. ಇದೇ ಕಾರಣಕ್ಕೆ ವಾಸ್ತು ಶಾಸ್ತ್ರದಲ್ಲಿ ಮುಖ್ಯ ಬಾಗಿಲಿಗೆ ಹೆಚ್ಚಿನ ಮಾನ್ಯತೆ ನೀಡಲಾಗಿದೆ. ಮನೆಯ ಮುಖ್ಯ ಬಾಗಿಲಿನಿಂದ ಹೊರ ಬೀಳ್ತಿರುವ ವ್ಯಕ್ತಿ ಖಾಲಿ ಪಾತ್ರೆಗಳು, ಪೊರಕೆ ಸೇರಿದಂತೆ ಯಾವುದೇ ಅಶುಭ ವಸ್ತುಗಳನ್ನು ನೋಡ್ಬಾರದು ಎನ್ನಲಾಗುತ್ತದೆ. ಮನೆಯ ಮುಖ್ಯ ದ್ವಾರದ ಬಳಿ ಏನಿರಬೇಕು, ಹೇಗಿರಬೇಕು ಎಂಬುದೆಲ್ಲವನ್ನೂ ವಾಸ್ತು ಶಾಸ್ತ್ರದಲ್ಲಿ ವಿವರಿಸಲಾಗಿದೆ. 

ವಾಸ್ತು ಶಾಸ್ತ್ರ (Vastu Shastra) ದಲ್ಲಿ, ಮನೆಯ ಮುಖ್ಯ ಬಾಗಿಲಿನ ಬಳಿ ನೀರಿಡುವುದು ಶುಭಕರವೆಂದು ಹೇಳಲಾಗಿದೆ. ಮನೆಯಿಂದ ಹೊರಗೆ ಹೋಗುವ ವ್ಯಕ್ತಿ ಕಣ್ಣು, ನೀರಿ (Water) ನ ಪಾತ್ರೆ ಮೇಲೆ ಬಿದ್ದಾಗ, ಆತ ಹೋಗುವ ಕೆಲಸದಲ್ಲಿ ಯಶಸ್ಸು ಸಿಗುತ್ತದೆ ಎಂಬ ನಂಬಿಕೆ ನಮ್ಮಲ್ಲಿದೆ. ಹಿಂದಿನ ಕಾಲದಲ್ಲಿ ಪ್ರತಿಯೊಬ್ಬರ ಮನೆ ಮುಂದೆ ನೀರಿಡಲಾಗ್ತಾಯಿತ್ತು. ಮನೆಗೆ ಬಂದ ವ್ಯಕ್ತಿ, ಮನೆ ಮುಂದಿರುವ ನೀರಿನಲ್ಲಿ ಕಾಲುತೊಳೆದು ಮನೆ ಪ್ರವೇಶ ಮಾಡ್ತಿದ್ದ. ಸ್ವಚ್ಛತೆ (Cleanl) ಜೊತೆ ವಾಸ್ತುವಿನ ಕಾರಣ ಇದ್ರ ಹಿಂದಿತ್ತು. ಮನೆಯ ಮುಂದೆ ನೀರಿಡುವುದ್ರಿಂದ ಏನೆಲ್ಲ ಲಾಭವಿದೆ ಎಂಬುದನ್ನು ನಾವಿಂದು ಹೇಳ್ತೇವೆ.

Latest Videos

ಮದುವೆಯಲ್ಲಿ ಮೆಹೆಂದಿ, ಅರಿಶಿಣ ಹಚ್ಚುವುದೇಕೆ?; ಇದರ ಹಿಂದಿನ ವೈಜ್ಞಾನಿಕ ಕಾರಣ ಏನು?

ಮನೆಯ ಮುಖ್ಯ ಬಾಗಿಲಿನ ಬಳಿ ನೀರಿಟ್ಟರೆ ಏನಾಗುತ್ತೆ? :
ಮನೆ ಪ್ರವೇಶಿಸುತ್ತೆ ಅದೃಷ್ಟ :
ವಾಸ್ತು ಶಾಸ್ತ್ರದ ಪ್ರಕಾರ, ನಿಮ್ಮ ಮನೆಯ ಮುಖ್ಯ ದ್ವಾರದಲ್ಲಿ ನೀರು ತುಂಬಿದ ಬಟ್ಟಲು ಅಥವಾ ಪಾತ್ರೆಯನ್ನು ಇಡುವುದು ಅದೃಷ್ಟ ಮತ್ತು ಸಮೃದ್ಧಿಯನ್ನು ತರುತ್ತದೆ. ಬಟ್ಟಲಿನಲ್ಲಿರುವ ನೀರು ಸಂಪತ್ತು ಮತ್ತು ಸಮೃದ್ಧಿಯನ್ನು ಪ್ರತಿನಿಧಿಸುತ್ತದೆ. ಧನಾತ್ಮಕ ಶಕ್ತಿಯನ್ನು ಆಕರ್ಷಿಸಲು ಇದು ಸಹಾಯ ಮಾಡುತ್ತದೆ. ಇದರಿಂದ ಕುಟುಂಬಸ್ಥರ ಆರೋಗ್ಯ ಸುಧಾರಿಸುತ್ತದೆ. ಸಂಪತ್ತಿನಲ್ಲಿ ಅಭಿವೃದ್ಧಿಯಾಗುತ್ತದೆ.  

ನಕಾರಾತ್ಮಕ ಶಕ್ತಿ ಪ್ರವೇಶಕ್ಕೆ ತಡೆ (Negative Energy) : ವಾಸ್ತು ಶಾಸ್ತ್ರದಲ್ಲಿ ನೀರಿಗೂ ಮಹತ್ವದ ಸ್ಥಾನ ನೀಡಲಾಗಿದೆ. ಅನೇಕ ಸಮಸ್ಯೆಗಳನ್ನು ಪರಿಹರಿಸುವ ಶಕ್ತಿ ನೀರಿಗಿದೆ. ನೀರು, ದುಷ್ಟ ಶಕ್ತಿಯನ್ನು ದೂರವಿಡುವ ಕೆಲಸ ಮಾಡುತ್ತದೆ. ಮನೆಯ ಮುಖ್ಯ ಬಾಗಿಲಿನಲ್ಲಿ ನೀವು ನೀರನ್ನು ಇಡೋದ್ರಿಂದ ನಕಾರಾತ್ಮಕ ಶಕ್ತಿ ಮನೆ ಪ್ರವೇಶ ಮಾಡುವುದಿಲ್ಲ. ಕುಟುಂಬಸ್ಥರಲ್ಲಿ ಶಾಂತಿ ನೆಲೆಸುವಂತೆ ಮಾಡುತ್ತದೆ. ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ವೃದ್ಧಿಸುವ ಜೊತೆಗೆ ದುರಾದೃಷ್ಟ ಬರದಂತೆ ತಡೆಯುವ ಕೆಲಸವನ್ನು ಇದು ಮಾಡುತ್ತದೆ.

ಈ ರಾಶಿಯವರು ಮನದ ಮಾತು ಹೇಳಲು ಭಯ ಪಡುತ್ತಾರೆ..

ಗಾಳಿಯ ಗುಣಮಟ್ಟದಲ್ಲಿ ಸುಧಾರಣೆ (Fresh Air) : ವಾಸ್ತು ಶಾಸ್ತ್ರದ ಮೇಲೆ ನಂಬಿಕೆ ಇಲ್ಲ ಎನ್ನುವವರು ವಿಜ್ಞಾನವನ್ನು ನಂಬಿಯಾದ್ರೂ ಮನೆ ಮುಂದೆ ನೀರಿನ ಪಾತ್ರೆ ಇಡಬೇಕು. ಮನೆಯ ಮುಂದಿರುವ ನೀರು, ಗಾಳಿಯನ್ನು ಶುದ್ಧಗೊಳಿಸುತ್ತದೆ. ಇದು ಮಾಲಿನ್ಯ ಮತ್ತು ತೇವಾಂಶವನ್ನು ಹೀರಿಕೊಳ್ಳುತ್ತದೆ. ಗಾಳಿಯ ಗುಣಮಟ್ಟ ಇದ್ರಿಂದ ಸುಧಾರಣೆಯಾಗುವ ಕಾರಣ, ಉಸಿರಾಟಕ್ಕೆ ಸಂಬಂಧಿಸಿದ ಸಮಸ್ಯೆಯ ಅಪಾಯದಿಂದ ನೀವು ನಿಮ್ಮನ್ನು ರಕ್ಷಿಸಿಕೊಳ್ಳಬಹುದು. 

ಆತಿಥ್ಯದ ಸಂಕೇತ (Symbol of Hospitality) : ಮನೆಯ ಮುಂದೆ ಮಡಿಕೆಯಲ್ಲಿ ನೀರಿಡೋದ್ರಿಂದ ಮನೆಯ ವಾತಾವರಣ ಬದಲಾಗುತ್ತದೆ. ಮನೆ ಎಲ್ಲರನ್ನು ಆಕರ್ಷಿಸುತ್ತದೆ. ಅತಿಥಿಗಳಿಗೆ ಇದು ಉತ್ತಮ ನೋಟ ನೀಡುವ ಜೊತೆಗೆ ಆತಿಥ್ಯದ ಸಂಕೇತವಾಗಿದೆ. 

ಮುಖ್ಯ ಬಾಗಿಲಿಗೆ ನೀರು ಇಡುವ ಮೊದಲು ಇದನ್ನು ತಿಳಿಯಿರಿ : ನೀವೂ ಮನೆಯ ಮುಖ್ಯ ಬಾಗಿಲಿನಲ್ಲಿ ನೀರಿಡುವ ನಿರ್ಧಾರ ಮಾಡಿದ್ದರೆ ಕೆಲವೊಂದು ನಿಯಮ ಪಾಲನೆ ಮಾಡಬೇಕು.
• ವಾಸ್ತು ಶಾಸ್ತ್ರಕ್ಕೆ ಹೊಂದುವ ತಾಮ್ರ ಅಥವಾ ಹಿತ್ತಾಳೆಯಂತಹ ಪಾತ್ರೆಯಲ್ಲೇ ನೀವು ನೀರಿಡಬೇಕು.
• ಪ್ರತಿ ದಿನ ನೀವು ನೀರನ್ನು ಬದಲಿಸಬೇಕು. ಹಾಗೆಯೇ ಪಾತ್ರೆಯನ್ನು ಸ್ವಚ್ಛಗೊಳಿಸಬೇಕು.
• ವಾಸ್ತು ನಿಯಮದಂತೆ ಸರಿಯಾದ ದಿಕ್ಕಿನಲ್ಲಿ ನೀವು ನೀರನ್ನು ಇಡಬೇಕು.
• ಅತಿಥಿಗಳಿಗೆ ಸುಲಭವಾಗಿ ಗೋಚರಿಸುಂತೆ ಇದನ್ನು ಇಡಲು ಪ್ರಯತ್ನಿಸಿ.
 

click me!