ಮದುವೆಯ ದಿನಾಂಕದ ಸಂಖ್ಯೆಯ ಪ್ರಭಾವ ದೊಡ್ಡದಿದೆ. ಆ ಸಂಖ್ಯೆಯ ಎನರ್ಜಿ ನಮ್ಮ ವೈವಾಹಿಕ ಜೀವನದ ಮೇಲೆ ಪ್ರಭಾವ ಬೀರುತ್ತದೆ. ಕೆಲವು ನಿರ್ದಿಷ್ಟ ಸಂಖ್ಯೆಗಳು ವಿವಾಹ ಕಾರ್ಯ ನೆರವೇರಿಸಲು ಅತ್ಯಂತ ಪ್ರಶಸ್ತವಾದ ದಿನಗಳಾಗಿವೆ.
ಮದುವೆ ದಿನಾಂಕ ಗೊತ್ತು ಮಾಡುವುದೊಂದು ಮಹತ್ವದ ಕೆಲಸ. ಯಾವಾಗೆಂದರೆ ಆಗ ವಿವಾಹ ಕಾರ್ಯವನ್ನು ನಡೆಸಲು ಆಗುವುದಿಲ್ಲ. ಉತ್ತಮ ದಿನ, ಮುಹೂರ್ತವನ್ನು ಆಧರಿಸಿ ನಿಶ್ಚಿತಗೊಳಿಸಲಾಗುತ್ತದೆ. ಹಾಗೆಯೇ, ದಿನಾಂಕ ಕೂಡ ಮುಖ್ಯವಾಗುತ್ತದೆ. ಏಕೆಂದರೆ, ಸಂಖ್ಯಾಶಾಸ್ತ್ರದ ಪ್ರಕಾರ, ವೈವಾಹಿಕ ಬದುಕಿನ ಮೇಲೆ ಸಂಖ್ಯೆಗಳು ಪ್ರಭಾವ ಬೀರುತ್ತವೆ. ಹೀಗಾಗಿ, ಮದುವೆಯ ದಿನಾಂಕ ಎನ್ನುವುದು ಕ್ಯಾಲೆಂಡರ್ ನಲ್ಲಿ ಕೇವಲ ಒಂದು ದಿನಾಂಕವಾಗಿರುವುದಿಲ್ಲ. ಯಾವುದೇ ದಿನ ಅಥವಾ ದಿನಾಂಕ ವೈಬ್ರೇಷನ್, ಎನರ್ಜಿಗಳಿಂದ ಕೂಡಿರುತ್ತದೆ. ಈ ಎನರ್ಜಿ ನಮ್ಮ ವೈವಾಹಿಕ ಜೀವನದ ಮೇಲೆ ಪರಿಣಾಮ ಬೀರುವುದರಿಂದ ದಿನಾಂಕದ ಕುರಿತೂ ಮುತುವರ್ಜಿ ವಹಿಸಬೇಕಾಗುತ್ತದೆ. ಕೆಲವು ದಿನಾಂಕ ಸಂಖ್ಯಾಶಾಸ್ತ್ರದ ಪ್ರಕಾರ, ಅತ್ಯುಮ್ಮವಾಗಿದ್ದರೆ, ಕೆಲವು ದಿನಾಂಕದಲ್ಲಿ ಎಂದೂ ಮದುವೆ ಮಾಡಬಾರದು. ಕೆಲವು ಸಂಖ್ಯೆಗಳು ವಿಶಿಷ್ಟ ಪ್ರಭಾವ ಹೊಂದಿದ್ದು, ಈ ದಿನಾಂಕಗಳಂದು ವಿವಾಹ ಕಾರ್ಯ ನೆರವೇರಿಸುವುದು ಉತ್ತಮ. ಈ ಸಂಖ್ಯೆಗಳು ಮತ್ತು ಅವುಗಳ ಧನಾತ್ಮಕ ಪ್ರಭಾವವನ್ನು ತಿಳಿದುಕೊಳ್ಳೋಣ.
• ಸಂಖ್ಯೆ 2ರ ಸಾಮರಸ್ಯ (Harmony)
2ನೇ ಅಂಕೆ ಸಮತೋಲನ (Balance) ಮತ್ತು ಸಹಕಾರದೊಂದಿಗೆ ಸಂಬಂಧ ಹೊಂದಿದೆ. 2ನೇ ದಿನಾಂಕವನ್ನು (Date) ಮದುವೆಗೆ (Marriage) ಅತ್ಯಂತ ಪ್ರಶಸ್ತ ದಿನ ಎಂಬುದಾಗಿ ಭಾವಿಸಲಾಗುತ್ತದೆ. ಇದು ಏಕತೆ (Unity) ಮತ್ತು ಅರ್ಥಮಾಡಿಕೊಳ್ಳುವಿಕೆಯ ಗುಣವನ್ನು ಸೂಚಿಸುತ್ತದೆ. ಸೌಹಾರ್ದ ಸಹಭಾಗಿತ್ವ ನಿರ್ಮಾಣಕ್ಕೆ ಕೊಡುಗೆ ನೀಡುತ್ತದೆ. ನಿಮ್ಮ ಮದುವೆ ದಿನಾಂಕ 2 ಆಗಿದ್ದರೆ ನಿಮ್ಮ ವೈವಾಹಿಕ ಜೀವನದಲ್ಲಿ (Married Life) ಸಹಕಾರ, ಪರಸ್ಪರ ಬೆಂಬಲದ (Support) ಗುಣ ಹೆಚ್ಚಾಗಿ ಕಂಡುಬರುತ್ತದೆ.
ಜಾತಕಗಳಲ್ಲಿ ಹೊಂದಾಣಿಕೆ ಇಲ್ವೇ? ಈ ವಿಧಾನಗಳ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಬೋದು ನೋಡಿ
• ಸಂಖ್ಯೆ 4ರ ಸ್ಥಿರತೆ
4ನೇ ಅಂಕೆ ಸ್ಥಿರತೆ (Stability) ಮತ್ತು ಸರಳತೆಗೆ (Simplicity) ಸಂಬಂಧ ಹೊಂದಿದೆ. ನೀವು ಒಂದೊಮ್ಮೆ ಈ ದಿನಾಂಕದಂದು ಮದುವೆಯಾಗುತ್ತಿದ್ದರೆ ಅಥವಾ ಆಗಿದ್ದರೆ ನಿಮ್ಮ ಜೀವನದಲ್ಲಿ ವಿಶ್ವಾಸದ ಸದೃಢವಾದ ತಳಹದಿ ಹಾಗೂ ಬದ್ಧತೆ (Commitment) ಸಾಮಾನ್ಯವಾಗಿ ಕಂಡುಬರುರುತ್ತದೆ. ಈ ಅಂಶಗಳು ವೈವಾಹಿಕ ಜೀವನವನ್ನು ಹೆಚ್ಚು ಸುರಕ್ಷಿತವನ್ನಾಗಿಸುತ್ತದೆ. ನಂಬಿಕೆ (Trust) ಮತ್ತು ವಿಶ್ವಾಸಾರ್ಹತೆಯ ಎನರ್ಜಿ (Energy) ನಿಮ್ಮದಾಗುತ್ತದೆ.
• ಡೈನಮಿಕ್ 7
ಅಂಕೆ 7 ಆಧ್ಯಾತ್ಮಿಕ ಬೆಳವಣಿಗೆ (Spiritual Development) ಮತ್ತು ಆತ್ಮಾವಲೋಕನಕ್ಕೆ ಹೆಸರು. ಈ ಗುಣ ವೈವಾಹಿಕ ಜೀವನಕ್ಕೆ ವಿಶಿಷ್ಟ ಆಳವನ್ನು ತರುತ್ತದೆ. ನೀವು 7ನೇ ದಿನಾಂಕದಂದು ಮದುವೆಯಾಗಿದ್ದರೆ ಸ್ವ ಅರಿವು ಹೆಚ್ಚಿಸಿಕೊಳ್ಳಲು ನೆರವಾಗುತ್ತದೆ. ದಂಪತಿ ಪರಸ್ಪರ ಅರ್ಥಗರ್ಭಿತ ಸಂಪರ್ಕವನ್ನು (Connection) ಹೊಂದುವುದು ಸಾಧ್ಯವಾಗುತ್ತದೆ.
• 8ರ ಪ್ರಗತಿ
8ನೇ ಅಂಕೆ ಸಮೃದ್ಧ ಹಾಗೂ ಪ್ರಗತಿಯನ್ನು (Prosperity) ಸೂಚಿಸುವಂಥದ್ದು. ಈ ಸಂಖ್ಯೆ ಹಣಕಾಸಿನ ಸ್ಥಿರತೆ ಮತ್ತು ಐಹಿಕ ಭೋಗಗಳನ್ನು ಸೂಚಿಸುತ್ತದೆ. ಹಣಕಾಸು ಸ್ಥಿತಿ (Financial Status) ಚೆನ್ನಾಗಿರುವುದರಿಂದ ಜೀವನದಲ್ಲಿ ಹಲವು ಲಾಭವಿದೆ. ಅನಗತ್ಯ ಒತ್ತಡಗಳು, ಹೆಚ್ಚಿನ ಪರಿಶ್ರಮ, ಹಲವು ರೀತಿಯ ಕೆಟ್ಟ ಅನುಭವಗಳಿಂದ ಮುಕ್ತಿ ದೊರೆಯುತ್ತದೆ. ಹಲವು ಉತ್ತಮ ಅನುಭವಗಳನ್ನು ದಂಪತಿ (Couple) ಹೊಂದುವಂತೆ ಮಾಡುತ್ತದೆ. 8ರ ಎನರ್ಜಿಯನ್ನು ಜೀವನದ ಎಲ್ಲ ಅಂಶಗಳಿಗೂ ಅನ್ವಯ ಮಾಡಿಕೊಳ್ಳುವುದು ಅಗತ್ಯ.
ಪದೇ ಪದೇ ಮಾನಸಿಕ ಖಿನ್ನತೆ, ಒತ್ತಡಕ್ಕೆ ಈ ಗ್ರಹಗಳ ದೋಷವೇ ಕಾರಣ
• ಸಂಖ್ಯೆ 11ರ ಕಾಸ್ಮಿಕ್ (Cosmic) ಸಂಪರ್ಕ
11ನೇ ಸಂಖ್ಯೆ ಮಾಸ್ಟರ್ ಸಂಖ್ಯೆ ಎಂದೇ ಗುರುತಿಸಿಕೊಂಡಿರುವಂಥದ್ದು. ಆಧ್ಯಾತ್ಮಿಕ ಅರಿವು ಹೆಚ್ಚಳಕ್ಕೆ ಕಾರಣವಾಗಿ ಸಂಗಾತಿಗಳ ನಡುವೆ ಉತ್ತಮ ಬಾಂಧವ್ಯ (Relation) ಬೆಸೆಯಲು ಇದು ಕಾರಣವಾಗುತ್ತದೆ. ನಿಮ್ಮ ಮದುವೆ ಈ ದಿನಾಂಕದಂದು ಆಗಿದ್ದರೆ ಆಧ್ಯಾತ್ಮಿಕ ಸಾಂಗತ್ಯ ನಿಮ್ಮದಾಗುತ್ತದೆ ಹಾಗೂ ದೀರ್ಘಕಾಲ ಜತೆಯಾಗಿ ಬಾಳಲು ನೆರವಾಗುತ್ತದೆ.