ಜಾತಕಗಳಲ್ಲಿ ಹೊಂದಾಣಿಕೆ ಇಲ್ವೇ? ಈ ವಿಧಾನಗಳ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಬೋದು ನೋಡಿ

By Suvarna News  |  First Published Mar 11, 2024, 5:59 PM IST

ಕುಂಡಲಿ ಅಥವಾ ಜಾತಕಗಳು ಹೊಂದಾಣಿಕೆಯಾಗದಿದ್ದಾಗ ಅದನ್ನೊಂದು ದೋಷವೆಂದು ಪರಿಗಣಿಸಲಾಗುತ್ತದೆ. ಇದರಿಂದ ಸುಖ ಸಂಸಾರಕ್ಕೆ ಹೊಂದಾಣಿಕೆಯ ಸಮಸ್ಯೆಗಳು ಉಂಟಾಗುತ್ತವೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೆಲವು ಸುಲಭವಾದ ಮಾರ್ಗೋಪಾಯಗಳನ್ನು ಅನುಸರಿಸುವ ಮೂಲಕ  ಈ ದೋಷವನ್ನು ನಿವಾರಣೆ ಮಾಡಿಕೊಳ್ಳಲು ಸಾಧ್ಯ.


ಜೀವನದ ಅನಿಶ್ಚಿತತೆಗಳನ್ನು, ಸವಾಲುಗಳನ್ನು ಸಶಕ್ತವಾಗಿ ಎದುರಿಸಲು ಜ್ಯೋತಿಷ್ಯ ಶಾಸ್ತ್ರ ಮಾರ್ಗದರ್ಶನ ಮಾಡುತ್ತದೆ. ಇಂತಹ ಸವಾಲುಗಳಲ್ಲಿ ಬಹಳಷ್ಟು ಜನರು ಎದುರಿಸುವ ಸವಾಲೆಂದರೆ, ಕುಂಡಲಿಗಳಲ್ಲಿ ಅಥವಾ ಜಾತಕಗಳಲ್ಲಿ ಹೊಂದಾಣಿಕೆ ಆಗದಿರುವುದು. ಪ್ರೀತಿಸಿ ಮದುವೆಯಾಗುವವರು ಸಾಮಾನ್ಯವಾಗಿ ತಮ್ಮ ಕುಂಡಲಿಗಳ ಹೊಂದಾಣಿಕೆಯ ಕುರಿತು ಪರಿಶೀಲನೆ ನಡೆಸುವುದಿಲ್ಲ. ಆದರೆ, ನಂತರದ ದಿನಗಳಲ್ಲಿ ಅವರ ಕುಂಡಲಿಗಳಲ್ಲಿ ಸ್ವಲ್ಪವೂ ಹೊಂದಾಣಿಕೆ ಇಲ್ಲ ಎನ್ನುವುದು ತಿಳಿದುಬಂದಾಗ, ಅದೇ ಸಂಬಂಧದಲ್ಲಿ ದೊಡ್ಡ ಕೊರಗಾಗಿ, ಅವರ ನಡುವಿನ ಅಂತರ ಇನ್ನಷ್ಟು ಹೆಚ್ಚಾಗುತ್ತ ಸಾಗಬಹುದು. ಅಲ್ಲದೆ, ಕೆಲವು ಸಮಯದಲ್ಲಿ ಹುಡುಗ-ಹುಡುಗಿಯ ವಿಚಾರದಲ್ಲಿ ಬೇರೆ ಎಲ್ಲ ಅಂಶವೂ ಸಮ್ಮತವಾಗಿ, ಕುಂಡಲಿಯ ಕಾರಣಕ್ಕೆ ಮದುವೆಯ ವಿಚಾರವನ್ನು ಕೈಬಿಡಬೇಕಾದ ಸನ್ನಿವೇಶ ಎದುರಾಗಬಹುದು. ಅಂತಹ ಸಮಯದಲ್ಲೂ ಸಂಕಷ್ಟ ಎದುರಾಗುತ್ತದೆ. ಹೀಗೆ, ಕುಂಡಲಿ ಹೊಂದಾಣಿಕೆ ಆಗದಿರುವ ಸಮಯದಲ್ಲೂ ಅವುಗಳನ್ನು ಇನ್ನಿತರ ಕೆಲವು ಮಾರ್ಗಗಳ ಮೂಲಕ ಸರಿಪಡಿಸಿಕೊಳ್ಳಲು ಸಾಧ್ಯ ಎಂದು ಜ್ಯೋತಿಷ್ಯ ಶಾಸ್ತ್ರ ಸಲಹೆ ನೀಡುತ್ತದೆ. 

ಕುಂಡಲಿ (Kundali) ಅಥವಾ ಜಾತಕವನ್ನು (Birth Chart) ನಮ್ಮ ಹುಟ್ಟಿನ ಸಮಯವನ್ನು (Time) ಆಧರಿಸಿ ರೂಪಿಸಲಾಗಿರುತ್ತದೆ. ಆ ಸಮಯದ ನಕ್ಷತ್ರ, ರಾಶಿ ಇತ್ಯಾದಿಗಳನ್ನು ಆಧರಿಸಿ ವಿಶಿಷ್ಟವಾದ ಕಾಸ್ಮಿಕ್ ಶಕ್ತಿ (Cosmic Energy) ನಮ್ಮ ಮೇಲೆ ಪ್ರಭಾವ ಹೊಂದಿರುತ್ತದೆ. ಇಬ್ಬರು ವ್ಯಕ್ತಿಗಳು ಜತೆಗೂಡಿ ಬದುಕುವ ಸಮಯದಲ್ಲಿ ಜಾತಕದಲ್ಲಿ ಹೊಂದಾಣಿಕೆ (Match) ಇಲ್ಲವಾದರೆ ಅನಗತ್ಯವಾದ ಸಮಸ್ಯೆಗಳು ಎದುರಾಗಬಹುದು. ಅವುಗಳನ್ನು ಕೆಲವು ಮಾರ್ಗದ ಮೂಲಕ ನಿವಾರಣೆ ಮಾಡಿಕೊಳ್ಳಲು ಸಾಧ್ಯ.

Latest Videos

undefined

Zodiac Sign: ಮಾನಸಿಕವಾಗಿ ಯಾವಾಗ್ಲೂ ದೂರವೇ ಇರ್ತಾರೆ; ಇವ್ರಿಗೆ ಸೊಕ್ಕಾ? ಇವರು ಯಾಕ್ಹಿಂಗೆ?

•    ಹರಳುಗಳ (Gem Stone) ಥೆರಪಿ 
ಹರಳುಗಳು, ರತ್ನಗಳು ತಮ್ಮದೇ ಆದ ವಿಶಿಷ್ಟ ಪ್ರಭಾವ (Effect) ಹೊಂದಿರುತ್ತವೆ. ಕುಂಡಲಿ ಹೊಂದಾಣಿಕೆ ಇಲ್ಲದಿರುವ ಸಮಯದಲ್ಲಿ ಇವುಗಳನ್ನು ಪರಿಹಾರವಾಗಿ ಬಳಸಿಕೊಳ್ಳಬಹುದು. ನಿಮ್ಮ ಜಾತಕಕ್ಕೆ ಅನುಗುಣವಾದ ಹರಳು ಧರಿಸುವ ಮೂಲಕ ಸಂಬಂಧದಲ್ಲಿ (Relation) ಧನಾತ್ಮಕ (Positive) ಪ್ರಭಾವ ಉಂಟಾಗುವಂತೆ ಮಾಡಬಹುದು. ಕಾಸ್ಮಿಕ್ ಎನರ್ಜಿಗಳಲ್ಲಿ ಹೊಂದಾಣಿಕೆ ಇಲ್ಲದಿದ್ದಾಗ ಹರಳುಗಳು ಅವುಗಳ ಪ್ರಭಾವವನ್ನು ನಿವಾರಿಸುವಲ್ಲಿ ಪ್ರಮುಖವಾಗುತ್ತವೆ. ನಿಮಗೆ ಸರಿಹೊಂದುವ ಹರಳನ್ನು ಮಾತ್ರವೇ ಧರಿಸಬೇಕು.

•    ಮಂತ್ರ ಪಠಣ (Mantra Chanting) 
ನಮ್ಮ ಎನರ್ಜಿ ಮೇಲೆ ಶಬ್ದ (Sound) ತರಂಗಗಳ ಬಹುದೊಡ್ಡ ಪ್ರಭಾವವಿದೆ. ಜಾತಕವನ್ನಾಧರಿಸಿ ನಿರ್ದಿಷ್ಟ ಮಂತ್ರಗಳನ್ನು ಪಠಣ ಮಾಡುವ ಮೂಲಕ ಜಾತಕದಲ್ಲಿ ಹೊಂದಾಣಿಕೆ ಆಗದಿದ್ದಾಗ ಉಂಟಾಗುವ ಸಮಸ್ಯೆಗಳನ್ನು (Problems) ನಿವಾರಿಸಿಕೊಳ್ಳಲು ಸಾಧ್ಯ ಎನ್ನುತ್ತದೆ ಜ್ಯೋತಿಷ್ಯ (Astrology) ಶಾಸ್ತ್ರ. ಮಂತ್ರಗಳಿಂದ ಕಾಸ್ಮಿಕ್ ಶಕ್ತಿಯನ್ನು ಸಮತೋಲನಗೊಳಿಸಬಹುದು. 

•    ಪೂಜೆ (Worship), ಸಂಪ್ರದಾಯ
ಗ್ರಹಗತಿಗಳನ್ನು ಆಧರಿಸಿ ನಿರ್ದಿಷ್ಟ ಸಮಯದಲ್ಲಿ ಮಾಡುವ ಪೂಜೆಗಳು ಹಾಗೂ ಕೆಲವು ಸಂಪ್ರದಾಯಗಳಿಂದ ಕಾಸ್ಮಿಕ್ ಎನರ್ಜಿಗಳ ನಡುವೆ ಸೌಹಾರ್ದತೆ (Harmony) ಮೂಡಿಸಲು ಸಾಧ್ಯ. ಗ್ರಹದ ಪ್ರಭಾವಗಳಿಂದ ಉಂಟಾಗುವ ಪರಿಣಾಮಗಳನ್ನು ನಿವಾರಿಸಿಕೊಳ್ಳಲು ಇವುಗಳಿಂದ ಅನುಕೂಲವಾಗುತ್ತದೆ. ಇವು ಆಧ್ಯಾತ್ಮಿಕ (Spiritual) ಪರಿಹಾರಗಳಾಗಿವೆ. 

ಮಹಾಲಕ್ಷ್ಮಿ ರಾಜಯೋಗದಿಂದ ಈ ರಾಶಿಯವರು ಶ್ರೀಮಂತರಾಗುತ್ತಾರೆ, ಹೋಳಿಯಲ್ಲಿ ಬ್ಯಾಂಕ್ ಬ್ಯಾಲೆನ್ಸ್ ಡಬಲ್

•    ಜ್ಯೋತಿಷ್ಯದ ಅರಿವು
ಮನುಷ್ಯರ ನಡುವೆ ಭಿನ್ನಾಭಿಪ್ರಾಯ ಸಹಜ. ಅವು ಯಾಕೆ ಉಂಟಾಗುತ್ತವೆ, ಮನುಷ್ಯರ ನಡುವಿನ ಭಿನ್ನತೆಗೆ ಕಾರಣವೇನು ಎನ್ನುವುದನ್ನು ಜ್ಯೋತಿಷ್ಯ ಶಾಸ್ತ್ರದ ತಳಹದಿಯಲ್ಲಿ ಅರಿತುಕೊಳ್ಳುವುದರಿಂದಲೂ ದಂಪತಿಯ (Couple) ನಡುವಿನ ಮನಸ್ತಾಪವನ್ನು ಬಗೆಹರಿಸಿಕೊಳ್ಳಲು ಸಾಧ್ಯ. ವ್ಯಕ್ತಿಗಳ ವರ್ತನೆಗೆ ಕಾರಣವಾಗುವ ರಾಶಿ, ಗ್ರಹಗಳ ಪ್ರಭಾವದ ಬಗ್ಗೆ ಅರಿತುಕೊಂಡಾಗ ದಂಪತಿ ಪರಸ್ಪರ ಕೆಲವು ವರ್ತನೆಗಳ (Behaviour) ಬಗ್ಗೆ ಗಮನಹರಿಸದೆ ಇರಲು ಹಾಗೂ ಕೆಲವನ್ನು ಅರಿತುಕೊಳ್ಳಲು ಅನುಕೂಲವಾಗುತ್ತದೆ. 

•    ಯೋಗ (Yoga) ಮತ್ತು ಧ್ಯಾನ (Meditation)
ಯೋಗ ಮತ್ತು ಧ್ಯಾನಗಳು ಕೇವಲ ದೈಹಿಕ ಮತ್ತು ಮಾನಸಿಕ (Mental) ಆರೋಗ್ಯಕ್ಕೆ ಪೂರಕವಾದ ಮಾರ್ಗಗಳಷ್ಟೇ ಅಲ್ಲ, ಅವು ಕಾಸ್ಮಿಕ್ ಎನರ್ಜಿಗಳನ್ನು ಸಮತೋಲನಗೊಳಿಸುವಲ್ಲೂ (Balance) ಪ್ರಮುಖ ಪಾತ್ರ ವಹಿಸುತ್ತವೆ. ದಿನವೂ ಯೋಗ ಮತ್ತು ಧ್ಯಾನಗಳಲ್ಲಿ ನಿರತವಾಗುವುದರಿಂದ ಮನಸ್ಸು, ದೇಹದ ಸ್ಫೂರ್ತಿ ಈ ಬ್ರಹ್ಮಾಂಡದ ಶಕ್ತಿಯೊಂದಿಗೆ ವಿಲೀನಗೊಳ್ಳುತ್ತದೆ. ಇಲ್ಲೂ ಸಹ ನಿಮ್ಮ ಜಾತಕಕ್ಕೆ ಹೊಂದುವ ಧ್ಯಾನ ವಿಧಾನವನ್ನು ಅನುಸರಿಸುವುದು ಉತ್ತಮ.  

click me!