Sex or Love: ಸೆಕ್ಸ್‌ಗಿಂತಲೂ ಪ್ರೀತಿ ಮೂಲಕವೇ ಹತ್ತಿರಾಗ್ತಾರೆ ಈ ರಾಶಿ ಗಂಡಸರು!

By Contributor AsianetFirst Published May 4, 2023, 3:28 PM IST
Highlights

ಕೆಲವು ರಾಶಿಯ ಗಂಡಸರು ಸೆಕ್ಸ್‌ಗಾಗಿ ಹಪಹಪಿಸೋದಿಲ್ಲ. ಅವರು ಪ್ರೀತಿಗೇ ಮೊದಲ ಪ್ರಾಧಾನ್ಯತೆ ನೀಡುತ್ತಾರೆ. ಪುರುಷರ ಈ ಬಗೆಯ ವ್ಯಕ್ತಿತ್ವವೇ ಹುಡುಗಿಯರು ಅವರಿಗೆ ಬೀಳುವಂತೆ ಮಾಡುತ್ತದೆ. ಪ್ರೀತಿಯಲ್ಲಿ ಬಹಳ ರೊಮ್ಯಾಂಟಿಕ್‌ ಆಗಿರುವ ಪುರುಷರೇ ಹೆಚ್ಚಿರುವ ಆ ರಾಶಿಗಳು ಯಾವುವು?

ಲವ್ವಿಗೆ ಬಿದ್ದ ಗಂಡಸರಲ್ಲಿ ಹೆಚ್ಚಿನವರು ಸೆಕ್ಸ್‌ಗಾಗಿ ಹಪಹಪಿಸೋದುಂಟು. ಆದರೆ ಈ ರಾಶಿಯ ಗಂಡಸರು ಮಾತ್ರ ಪ್ರೀತಿಗೇ ಹೆಚ್ಚು ಮಹತ್ವ ನೀಡುತ್ತಾರೆ.

ಎಷ್ಟೋ ಸಲ ಲವ್ವಿಗೆ ಬಿದ್ದವರು ಕೆಲವೇ ದಿನಗಳಲ್ಲಿ ಬ್ರೇಕ್‌ಅಪ್‌ ಮಾಡಿಕೊಳ್ಳುತ್ತಾರೆ. ಇದಕ್ಕೆ ಕಾರಣ ರಿವೀಲ್ ಆಗಲ್ಲ. ಆದರೆ ಇತ್ತೀಚಿನ ಅಧ್ಯಯನವೊಂದರ ಪ್ರಕಾರ ಲವ್ವಲ್ಲಿ ಬಿದ್ದ ಕೆಲವೇ ಸಮಯದಲ್ಲಿ ಹೆಚ್ಚಿನ ಗಂಡಸರು ಸೆಕ್ಸ್‌ ವಾಂಛೆ ವ್ಯಕ್ತಪಡಿಸುತ್ತಾರೆ. ಆದರೆ ಹೆಣ್ಣುಮಕ್ಕಳಿಗೆ ಸೆಕ್ಸ್‌ ಬಗ್ಗೆ ಚಿಂತಿಸಲು ಕೊಂಚ ಸಮಯ ಬೇಕಾಗುತ್ತದೆ. ಪ್ರೀತಿಗೆ ಬಿದ್ದಾಗ ಸೆಕ್ಸ್‌ ಬಗೆಗಿನ ಆಸಕ್ತಿಯನ್ನು ಗಂಡುಮಕ್ಕಳು ವ್ಯಕ್ತಪಡಿಸೋದೇ ಎಷ್ಟೋ ಬ್ರೇಕ್‌ಅಪ್‌ಗಳಿಗೆ ಕಾರಣವಾಗುತ್ತದೆ. ಆದರೆ ಕೆಲವು ರಾಶಿಯ ಗಂಡಸರು ಸೆಕ್ಸ್‌ಗಾಗಿ ಹಪಹಪಿಸೋದಿಲ್ಲ. ಅವರು ಪ್ರೀತಿಗೇ ಮೊದಲ ಪ್ರಾಧಾನ್ಯತೆ ನೀಡುತ್ತಾರೆ. ಪುರುಷರ ಈ ಬಗೆಯ ವ್ಯಕ್ತಿತ್ವವೇ ಹುಡುಗಿಯರು ಅವರಿಗೆ ಬೀಳುವಂತೆ ಮಾಡುತ್ತದೆ. ಪ್ರೀತಿಯಲ್ಲಿ ಬಹಳ ರೊಮ್ಯಾಂಟಿಕ್‌ ಆಗಿರುವ ಪುರುಷರೇ ಹೆಚ್ಚಿರುವ ಆ ರಾಶಿಗಳು ಯಾವುವು? ಅದರಲ್ಲಿ ನಿಮ್ಮ ರಾಶಿಯೂ ಇದೆಯಾ ಅಂತ ಒಮ್ಮೆ ಚೆಕ್ ಮಾಡಿಕೊಳ್ಳಿ. 

Latest Videos

ಮಿಥುನ ರಾಶಿ
ಈ ರಾಶಿಯವರಿಗೆ ಸೆಕ್ಸ್‌ ಬಗೆಗ ಆಸಕ್ತಿ ಇದ್ದೇ ಇರುತ್ತದೆ. ಆದರೆ ಅವರು ಪ್ರೀತಿಗೆ ಮೊದಲ ಮನ್ನಣೆ ನೀಡುತ್ತಾರೆ. ನಂತರದ ಸ್ಥಾನ ಸೆಕ್ಸ್‌ಗಿರುತ್ತದೆ. ಮಿಥುನ ರಾಶಿಯ ಪುರುಷರು ದೈಹಿಕ ಸಂಬಂಧಗಳನ್ನು ಮಾಡುವಲ್ಲಿ ಹೆಚ್ಚು ಸಕ್ರಿಯರಾಗಿರುತ್ತಾರೆ ಎಂದು ಹೇಳಲಾಗುತ್ತದೆ. ಈ ಜನರು ಲೈಂಗಿಕ ಸಮಯದಲ್ಲಿ ತಮ್ಮ ಸಂಗಾತಿಯೊಂದಿಗೆ ಹೆಚ್ಚು ಮಾತನಾಡಲು ಇಷ್ಟಪಡುತ್ತಾರೆ. ಈ ರಾಶಿಚಕ್ರದ ಜನರು ಒಂದಕ್ಕಿಂತ ಹೆಚ್ಚು ವ್ಯಕ್ತಿಗಳೊಂದಿಗೆ ದೈಹಿಕ ಸಂಬಂಧವನ್ನು ಹೊಂದಲು ಹೆಚ್ಚು ಇಷ್ಟಪಡುತ್ತಾರೆ. ಇದು ಅವರಿಗೆ ಸಾಮಾನ್ಯವಾಗಿದೆ. ಈ ರಾಶಿಚಕ್ರದ ಪುರುಷನನ್ನು ಯಾರಾದರೂ ಸುಲಭವಾಗಿ ಪ್ರಣಯಕ್ಕೆ ಒಪ್ಪುವಂತೆ ಮಾಡಬಹುದು. ಅವರು ಒಂದಕ್ಕಿಂತ ಹೆಚ್ಚು ಪ್ರೇಮ ಸಂಬಂಧಗಳಿಗೆ ಆಕರ್ಷಿತರಾಗುತ್ತಾರೆ. ಸೆಕ್ಸ್‌ಗಿಂತ ಪ್ರೇಮಕ್ಕೆ ಮೊದಲ ಆದ್ಯತೆ ನೀಡೋದೆ ಎಲ್ಲ ಹುಡುಗಿಯರೂ ಅವರನ್ನು ಇಷ್ಟ ಪಡುವ ಹಾಗೆ ಮಾಡುತ್ತದೆ. ಈ ರಾಶಿಯವರು ಮೇಷ, ಸಿಂಹ, ತುಲಾ, ಧನು ರಾಶಿ ಮತ್ತು ಕುಂಭ ರಾಶಿಯವರನ್ನು ಮದುವೆಯಾದರೆ ಭಾವನೆಗಳನ್ನು ಅರ್ಥಮಾಡಿಕೊಂಡು ಚೆನ್ನಾಗಿ ಹೊಂದಾಣಿಕೆ ಮಾಡಿಕೊಳ್ಳುವುದರಿಂದ ಅವರೊಂದಿಗಿನ ಅವರ ಸಂಬಂಧವು ದೀರ್ಘಕಾಲದವರೆಗೆ ಇರುತ್ತದೆ.

ವಿಷಕನ್ಯಾ ಯೋಗ ಇದ್ದರೆ ವೈವಾಹಿಕ ಜೀವನಕ್ಕೆ ಸಂಕಷ್ಟ, ಇದಕ್ಕೆ ಪರಿಹಾರವೇನು?

ಕನ್ಯಾ ರಾಶಿ
ಕನ್ಯಾರಾಶಿಯವರೂ ಸೆಕ್ಸ್‌ ಬಗ್ಗೆ ಸಾಕಷ್ಟು ಉತ್ಸುಕತೆ ಇದ್ದರೂ ತೋರ್ಪಡಿಸದೇ ಪ್ರೇಮಕ್ಕೆ ಹಂಬಲಿಸುವಂತೆ ಕಾಣುತ್ತಾರೆ. ಆದರೆ ಅವರು ಲೈಂಗಿಕತೆಯ ಬಗ್ಗೆ ಹೆಚ್ಚು ಉತ್ಸುಕರಾಗಿರುತ್ತಾರೆ. ಯಾವಾಗ ಪ್ರೇಮ ಚೆನ್ನಾಗಿ ಕಚ್ಚಿಕೊಳ್ಳುತ್ತೋ ಆಗ ಸೆಕ್ಸ್‌ ಬಗ್ಗೆ ಒಲವು ತೋರಿಸುತ್ತಾರೆ. ಆಗ ಇಬ್ಬಂದಿಗೆ ಸಿಲುಕಬಹುದು. ಹೀಗಾಗಿ ಈ ರಾಶಿಯವರು ವಿಶ್ವಾಸಾರ್ಹತೆ ಸಂಗಾತಿಯೊಂದಿಗೆ ದೈಹಿಕವಾಗಿ ಸಂಪರ್ಕ ನಡೆಸುವುದು ಒಳ್ಳೆಯದು. ಇಲ್ಲವಾದಲ್ಲಿ ಮೊದಲ ಲೈಂಗಿಕತೆ ಸಂಬಂಧದ ಮೇಲೆ ನೆಗೆಟಿವ್ ಪರಿಣಾಮ ಬೀರುವ ಸಾಧ್ಯತೆ ಇದೆ. ಆದರೆ ಈ ರಾಶಿಚಕ್ರದ ಜನರು ಪ್ರೀತಿಯ ವಿಷಯದಲ್ಲಿ ತುಂಬಾ ನಿಷ್ಠರಾಗಿರುತ್ತಾರೆ. ಅವರಲ್ಲಿ ಸೂಕ್ತವಾದ ಜೀವನ ಸಂಗಾತಿಯನ್ನು ಹೊಂದಬೇಕು ಎನ್ನುವ ಬಯಕೆ ಇರುತ್ತದೆ, ಅದರಲ್ಲೂ ವಿಶೇಷವಾಗಿ ತಮ್ಮ ಸಂಗಾತಿಯು ತಮ್ಮಲ್ಲಿರುವ ಗುಣಗಳನ್ನು ಹೊಂದಿರಬೇಕು ಎಂದು ಬಯಸುತ್ತಾರೆ. ಲೈಂಗಿಕ ಸಮಸ್ಯೆಗಳು ಸೇರಿದಂತೆ ಅವರ ವೈವಾಹಿಕ ಜೀವನದಲ್ಲಿ ಅನೇಕ ಸಮಸ್ಯೆಗಳಿವೆ, ಆದರೆ ಅವರು ಲೈಂಗಿಕತೆಗಿಂತ ಮಾನಸಿಕ ಸಾಮರಸ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ.

ತುಲಾ ರಾಶಿ
ಈ ರಾಶಿಚಕ್ರದ ಪುರುಷರು ಯಾವಾಗಲೂ ತಮ್ಮ ಸಂಗಾತಿಯನ್ನು ಹೆಚ್ಚು ತೃಪ್ತಿಪಡಿಸುತ್ತಾರೆ. ಈ ರಾಶಿಚಕ್ರದ ಪುರುಷರು ತಮ್ಮ ಅತ್ಯಂತ ನಿಷ್ಠಾವಂತ ಸಂಗಾತಿಯೊಂದಿಗೆ ಮಾತ್ರ ದೈಹಿಕ ಸಂಬಂಧವನ್ನು ಮಾಡುತ್ತಾರೆ. ಇಲ್ಲದಿದ್ದರೆ, ಯಾರಾದರೂ ಎಷ್ಟೇ ಪ್ರಯತ್ನಿಸಿದರೂ ಅವರು ದೈಹಿಕ ಸಂಬಂಧವನ್ನು ಮಾಡುವುದಿಲ್ಲ. ಅವರು ಯಾವಾಗಲೂ ತಮ್ಮ ಸಂಗಾತಿಯ ಇಚ್ಛೆಗೆ ಅನುಗುಣವಾಗಿ ದೈಹಿಕ ಸಂಬಂಧಗಳನ್ನು ಮಾಡುತ್ತಾರೆ. ಹುಡುಗಿಯರು ಅವರತ್ತ ಬೇಗನೆ ಆಕರ್ಷಿತರಾಗುತ್ತಾರೆ. ಅವರು ತಮ್ಮ ಪ್ರೀತಿ ಮತ್ತು ಕರ್ತವ್ಯದ ನಡುವೆ ಉತ್ತಮ ಸಮತೋಲನವನ್ನು ಮಾಡುವಲ್ಲಿ ಪರಿಣತರಾಗಿದ್ದಾರೆ. 

ಭವಿಷ್ಯದ ಸಮೃದ್ಧಿಯ ಸೂಚನೆ ನೀಡುತ್ತವೆ ಈ ಕನಸುಗಳು..
 

click me!