ಮಠಾಧೀಶರಿಗೆ ನಡೆ ನುಡಿಯ ಸಂದೇಶ ನೀಡುವ ಕೌದಿ ಪೂಜೆ ಸಂಭ್ರಮ: ರಾಜ್ಯದ ಭಕ್ತರ ಗಮನ ಸೆಳೆದ‌ ಕಬೀರಾನಂದ ಶ್ರೀ!

By Govindaraj S  |  First Published Mar 10, 2024, 5:55 PM IST

ಮಠಾಧೀಶರು ಅಂದ್ರೆ ಎಸಿ ಕಾರಿನಲ್ಲಿ ಕಳಿತುಕೊಂಡು ಐಷಾರಾಮಿ ಜೀವನ ಸಾಗಿಸೋರೇ ಹೆಚ್ಚು. ಆದ್ರೆ ಇಲ್ಲೊಬ್ರು ಸ್ವಾಮೀಜಿ ಪ್ರತಿ ವರ್ಷ ಶಿವರಾತ್ರಿಯ ಮರುದಿನ ಕೌದಿಪೂಜೆ ನಡೆಸುವ ಮೂಲಕ ಮಠಾಧೀಶರು ಹೇಗಿರಬೇಕೆಂಬ ಸಂದೇಶ ನೀಡ್ತಿದ್ದಾರೆ. 


ವರದಿ: ಕಿರಣ್.ಎಲ್.ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ

ಚಿತ್ರದುರ್ಗ (ಮಾ.10): ಮಠಾಧೀಶರು ಅಂದ್ರೆ ಎಸಿ ಕಾರಿನಲ್ಲಿ ಕಳಿತುಕೊಂಡು ಐಷಾರಾಮಿ ಜೀವನ ಸಾಗಿಸೋರೇ ಹೆಚ್ಚು. ಆದ್ರೆ ಇಲ್ಲೊಬ್ರು ಸ್ವಾಮೀಜಿ ಪ್ರತಿ ವರ್ಷ ಶಿವರಾತ್ರಿಯ ಮರುದಿನ ಕೌದಿಪೂಜೆ ನಡೆಸುವ ಮೂಲಕ ಮಠಾಧೀಶರು ಹೇಗಿರಬೇಕೆಂಬ ಸಂದೇಶ ನೀಡ್ತಿದ್ದಾರೆ. ಹಾಗಾದ್ರೆ ಆ ಕೌದಿಪೂಜೆ ಹೇಗಿತ್ತು., ಅದರ ವಿಶೇಷತೆ ಏನು ಅಂತೀರಾ..! ಚಿಂದಿ ಬಟ್ಟೆಗಳಿಂದ ತಯಾರಾದ ಕೌದಿ ಧರಿಸಿರೋ ಸ್ವಾಮೀಜಿ. ಅಮಂಗಲ ಎನ್ನುವ ತಂಕಟಿ ಹೂವು ಹಾಗೂ ಮಣ್ಣಿನ ತಟ್ಟೆ ಹಿಡಿದು ಭಿಕ್ಷಾಟನೆ ಮಾಡ್ತಿರೊ ಶ್ರೀಗಳು. ಈ ದೃಶ್ಯಗಳಿಗೆ  ಸಾಕ್ಷಿಯಾಗಿದ್ದು ಕೋಟೆನಾಡು ಚಿತ್ರದುರ್ಗದ ಶಿವಲಿಂಗಾನಂದ ಶ್ರೀಗಳು. 

Tap to resize

Latest Videos

undefined

ಹೌದು, ಆರೂಡ ಪರಂಪರೆಯ ಕಬೀರಾನಂದ ಆಶ್ರಮದ ಪೀಠಾಧಿಪತಿಯಾಗಿರೋ ಇವರು ತಮ್ಮ ಮಠದಲ್ಲಿ ಸತತ 93 ವರ್ಷಗಳಿಂದ ಪ್ರತಿವರ್ಷ  ಶಿವರಾತ್ರಿಯ ಮರುದಿನ ಈ ಕೌದಿಪೂಜೆಯನ್ನು ಆಚರಿಸಕೊಂಡು ಬಂದಿದ್ದಾರೆ. ಈ ಕೌದಿಪೂಜೆಯಂದು ಅತಿ ಮುಖ್ಯವಾಗಿ ಖಾವಿಧಾರಿ ಆದವರು ಸಮಾಜದಲ್ಲಿ ಹೇಗೆ ಬದುಕಬೇಕೆಂಬ ಸಂದೇಶ ಅಡಗಿದೆ. ಸನ್ಯಾಸಿಗೆ ಐಷಾರಾಮಿಯಾಗಿ ಬದುಕುವ ಅವಕಾಶ ಒದಗಿ ಬಂದರು ಸಹ ಅವೆಲ್ಲಾ ಅಶಾಶ್ವತ ಎಂದು ಅರಿತು ಬದುಕಬೇಕು. ಅಲ್ಲದೇ ಮಠಾಧೀಶರು ಒಂದು ಜಾತಿಗೆ ಸೀಮಿತವಾಗದೇ ಬಣ್ಣ ಬಣ್ಣದ  ಚಿಂದಿ ಬಟ್ಟೆಗಳಿಂದ ತಯಾರಾದ ಕೌದಿ ಬಟ್ಟೆಯಂತೆ ಮಠಾಧೀಶರು ಸಹ ಜಾತಿಭೇದ ಮಾಡದೇ  ಅಜಾತಿಯವರಾಗಿ ಬದುಕಬೇಕೆಂಬ ನೀತಿ ಈ ಕೌದಿ ಪೂಜೆಯಲ್ಲಿದೆ. 

ಹೀಗಾಗಿ ಪ್ರತಿವರ್ಷ ಚಾಚು ತಪ್ಪದೇ ಅಮಂಗಲ ಎನಿಸಿರೋ ತಂಕಟಿ ಹೂವು ಧರಿಸಿ, ಮಣ್ಣಿನ ತಟ್ಟೆ ಹಿಡಿದು ಆರೂಡ ಪರಂಪರೆಯಂತೆ ಭಿಕ್ಷಾಟನೆ ಮಾಡುವ ಶ್ರೀಗಳ ಸಂಪ್ರದಾಯ ಇತರೆ ಮಠಾಧೀಶರಿಗೆ ಮಾದರಿ‌ ಎನಿಸಿದೆ. ಇನ್ನು ಈ ಕೌದಿಪೂಜೆ ಉತ್ಸವವನ್ನು ಕಣ್ತುಂಬಿಕೊಳ್ಳಲು ರಾಜ್ಯದ ಮೂಲೆ ಮೂಲೆಗಳಿಂದಲೂ ಭಕ್ತರು ಕೋಟೆನಾಡಿಗೆ ಧಾವಿಸ್ತಾರೆ. ಸತತ ಐದು ದಿನಗಳ ಕಾಲ‌ ನಡೆಯುವ ಶಿವರಾತ್ರಿ ಉತ್ಸವದಲ್ಲಿ ಭಾಗಿಯಾಗಿ, ಭಜನೆ ಹಾಗೂ ಆಧ್ಯಾತ್ಮಿಕ ಚಿಂತನೆಗಳಲ್ಲಿ ತಲ್ಲೀನರಾಗುವ ಭಕ್ತರು ಕೊನೆಯ ದಿನ ನಡೆಯುವ ಈ ಕೌದಿಪೂಜೆಯ ಸಮಾನತೆಯ ಸಂದೇಶ ಹೊತ್ತು ವಾಪಾಸ್ಸು ಆಗುವುದು ಇಲ್ಲಿನ ವಿಶೇಷ. 

ತುಮಕೂರಲ್ಲಿ ವಿ.ಸೋಮಣ್ಣ ಸ್ಪರ್ಧೆಗೆ ವಿರೋಧ ಇಲ್ವೇನ್ರಿ?: ಸಚಿವ ರಾಮಲಿಂಗಾರೆಡ್ಡಿ

ಅದ್ರಲ್ಲಂತೂ ಶ್ರೀಗಳ ಸರಳತೆ ಹಾಗೂ ಸಮಾನತೆಯ ಸಂದೇಶ ಸಾರುವ ಕೌದಿಪೂಜೆಯನ್ನು ಕಣ್ತುಂಬಿಕೊಳ್ಳುವುದೇ ಈ ಭಾಗದ ಜನರ ವಿಶೇಷವಾಗಿದೆ. ಒಟ್ಟಾರೆ ಮಠ ಅಂದ್ರೆ ಬೇರೆನೇ ಆಲೋಚಿಸುವ ಈ ಕಾಲದಲ್ಲಿ,‌ ಚಿತ್ರದುರ್ಗದ ಶಿವಲಿಂಗಾನಂದ‌ ಶ್ರಿಗಳು‌ ಮಾತ್ರ ಐಶಾರಾಮಿ‌ ಬದುಕನ್ನು ಬದಿಗಿಟ್ಟು‌ ಆರೂಡ‌ ಪರಂಪರೆಯಂತೆ ‌ಕೌದಿಪೂಜೆ ನಡೆಸುತ್ತಿದ್ದಾರೆ. ಹೀಗಾಗಿ ಈ ಕೌದಿಪೂಜೆ ಮಧ್ಯ ಕರ್ನಾಟಕದ ಭಕ್ತರ‌ ಗಮನ ಸೆಳೆದಿದೆ‌.

click me!