ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯ 80ನೇ ವರ್ಧಂತಿಯಲ್ಲಿ ಗೋವಾ ಸಿಎಂ

Published : May 26, 2022, 03:00 PM ISTUpdated : May 26, 2022, 03:08 PM IST
ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯ 80ನೇ ವರ್ಧಂತಿಯಲ್ಲಿ ಗೋವಾ ಸಿಎಂ

ಸಾರಾಂಶ

ಮೈಸೂರಿನ ದತ್ತ ಪೀಠದ ಗುರು ಗಣಪತಿ ಸಚ್ಚಿದಾನಂದ ಸ್ವಾಮಿಗಳ 80 ವರ್ಧಂತಿಯಲ್ಲಿ ಗೋವಾ ಸಿಎಂ ಭಾಗಿಯಾದರು. ಮಠದ ಸದಸ್ಯರು ಹೂವಿನ ಹಾರ ಹಾಕಿ ಗೋವಾ ಸಿಎಂ ಬರ ಮಾಡಿಕೊಂಡರು. 10 ದಿನಗಳ‌ ವರ್ಧಂತಿ ಕಾರ್ಯಕ್ರಮದಲ್ಲಿ ಶ್ರೀಗಳಿಗೆ ವಜ್ರದ ಕಿರೀಟ ತೊಡಿಸಿ ಪೂಜೆ ಸಲ್ಲಿಸಲಾಯಿತು.

ವರದಿ : ಮಧು.ಎಂ.ಚಿನಕುರಳಿ, ಮೈಸೂರು

ಮೈಸೂರಿನ ನಂಜನಗೂಡು ರಸ್ತೆಯಲ್ಲಿರುವ ಅವದೂತ ದತ್ತಪೀಠದ ಪೀಠಾಧಿಪತಿ ಶ್ರೀ ಗಣಪತಿ ಸಚ್ಚಿದಾನಂದ ಶ್ರೀಗಳ 80 ನೇ ವರ್ಷದ ವರ್ಧಂತಿ ಕಾರ್ಯ ಬಹಳ ವಿಜೃಂಭಣೆಯಿಂದ ನೆರವೇರುತ್ತಿದೆ. ಮೇ 22 ರಿಂದ‌ 10 ದಿನಗಳ ಕಾಲ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಇಂದು ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಭಾಗಿಯಾಗಿದ್ದರು. ಕಾರಿನಲ್ಲಿ ಬಂದಿಳಿದ ಗೋವಾ ಮುಖ್ಯಮಂತ್ರಿಗಳಿಗೆ ಹಾರ ಹಾಕಿ ಸ್ವಾಗತ ಮಾಡಲಾಯಿತು.

 7ನೇ ದಿನವಾದ ಇಂದು ದತ್ತಪೀಠದಲ್ಲಿ ಶ್ರೀಗಳಿಗೆ ಪಂಚಲೋಹದ ಪೀಠದಲ್ಲಿ ಕೂರಿಸಿ ಪೂಜೆ ನೆರವೇರಿಸಲಾಯಿತು. ಮೈಸೂರಿನ ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇವಸ್ಥಾನದಲವೂ ಸೇರಿದಂತೆ ಸುತ್ತಮುತ್ತಲ ಜಿಲ್ಲೆಗಳ ಪ್ರಮುಖ ದೇವಾಲಯಗಳಿಂದ ತರಿಸಲಾಗಿದ್ದ ಪ್ರಸಾದವನ್ನ ಸಚ್ಚಿದಾನಂದ ಶ್ರೀಗಳು ಸ್ವೀಕಾರ ಮಾಡಿದರು. ಇದೇ ವೇಳೆ ಮಠದ ಭಕ್ತರೆಲ್ಲ ಸೇರಿ ಶ್ರೀಗಳಿಗೆ ವಜ್ರದ ಕಿರೀಟ ತೊಡಿಸಿ ಗೌರ ಸಲ್ಲಿಸಿ ಸಂಭ್ರಮಿಸಿದರು.

ಈ ದಿನದ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದ ಗೋವಾ ಸಿಎಂ ಡಾ.ಪ್ರಮೋದ್ ಸಾವಂತ್ ಶ್ರೀಗಳ ಆಶಿರ್ವಾದ ಪಡೆದರು. ಇದೇ ವೇಳೆ ಭಾಷಣ ಮಾಡಿದ ಸಿಎಂ ಡಾ.ಪ್ರಮೋದ್ ಸಾವಂತ್ ಗೋವಾದಲ್ಲಿ ನಾನು ಪ್ರತಿನಿಧಿಸುವ ಕ್ಷೇತ್ರದಲ್ಲೂ ದತ್ತಪೀಠ ಇದೆ. ಅಲ್ಲಿಂದ ಬಂದ ನನಗೆ ದತ್ತ ಆರಾಧನೆಯಲ್ಲಿ ತೊಡಗಿಸಿಕೊಂಡಿರುವ ಶ್ರೀಗಳ ಭೇಟಿ ಮಾಡಿ ತುಂಬಾ ಸಂತೋಷ ಆಯಿತು. ಸಕಲ ಗೋವಾ ಜನರ ಪರವಾಗಿ ಸಚ್ಚಿದಾನಂದ ಶ್ರೀಗಳಿಗೆ ಪ್ರಣಾಮ‌ಸಲ್ಲಿಸಿದರು. ಇದೇ ವೇಳೆ ಒಮ್ಮೆ ಗೋವಾದ ದತ್ತ ಕ್ಷೇತ್ರಕ್ಕೂ ಭೇಟಿ ನೀಡುವಂತೆ ಕೇಳಿಕೊಂಡರು.

ಎಚ್ಚರ, ಗರ್ಭಿಣಿ ಇರೋ ಮನೆಯಲ್ಲಿರಬಾರದು ಮುಳ್ಳಿನ ಗಿಡ!

ಸಚ್ಚಿದಾನಂದ ಶ್ರೀಗಳು ಪರಿಣಾಮ ಪ್ರೇಮ ಹೊಂದಿದ್ದಾರೆ. ಶುಕವ ನಿರ್ಮಿಸಿ ಮಾದರಿಯಾಗಿದ್ದಾರೆ. ಶ್ರೀಗಳು ಹಲವು ವಿಚಾರದಲ್ಲಿ ಗಿನ್ನಿಸ್ ದಾಖಲೆಗಳನ್ನುಹ ಬರೆದಿರುವುದು ಬಹಳ ಸಂತೋಷ. ವಿಶೇಷವಾಗಿ ಶಾಸ್ತ್ರೀಯ ಸಂಗೀತ ಪರಂಪರೆಯನ್ನು ಬೆಳೆಸುತ್ತಿದ್ದಾರೆ. ವೇದ ಪರಂಪರೆಯನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ಇವರ ಆಧ್ಯಾತ್ಮಿಕ ಸಂಗೀತ ದ ಮೂಲಕ ದೇಶದ ಸಂಗೀತ ಪರಂಪರೆಯನ್ನು ಎತ್ತಿ ಹಿಡಿಯುತ್ತಿದ್ದಾರೆ ಎಂದು ಕೊಂಡಾಡಿದರು.

ಇನ್ನು ಕಾರ್ಯಕ್ರಮದಲ್ಲಿ ಗಣಪತಿ ಸಚ್ಚಿದಾನಂದ ಶ್ರೀಗಳು ರಚಿಸಿರುವ "ಗೀತಾಸ್ವರ ಪ್ರಸ್ತಾರಂ" ಪುಸ್ತಕವನ್ನ ಲೋಕಾರ್ಪಣೆ ಮಾಡಲಾಯಿತು. ಇದರ ಜೊತೆಗೆ ಅವರೇ ರಚಿಸಿರುವ 80 ಭಜನೆಗಳನ್ನು ಒಳಗೊಂಡ ಕೀರ್ತನ ಸಂಗ್ರಹ ಕೂಡ ಬಿಡುಗಡೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಕರ್ನಾಟಕ, ಆಂಧ್ರಪ್ರದೇಶ, ಗೋವಾ ಸೇರಿದಂತೆ ಹಲವು ರಾಜ್ಯಗಳ ಸಾವಿರಾರು ಭಕ್ತರು ಭಾಗವಹಿಸಿದ್ದರು. ನೆರೆದಿದ್ದ ಭಕ್ತರ ಸಮೂಹಕ್ಕೆ ಸಚ್ಚಿದಾನಂದ ಶ್ರೀಗಳು ಭಕ್ತಿಯ ಪ್ರವಚನ ನೀಡಿದರು.

ಸುಖ, ಶಾಂತಿ, ನೆಮ್ಮದಿಗೆ ಸಿಂಪಲ್ ವಾಸ್ತು ಟಿಪ್ಸ್ ಇವು

ಬಹಳ ವೈಭವದಿಂದ ಜರುಗಿದ ಗಣಪತಿ ಸಚ್ಚಿದಾನಂದ ಶ್ರೀಗಳ 80 ನೇ ವರ್ಧಂತಿಯಲ್ಲಿ ಗೋವಾ ಗೋವಾ ಸಿಎಂ‌ಗೆ ನೆನಪಿನ ಕಾಣಿಕೆ ನೀಡಿ ಸನ್ಮಾನ ಮಾಡಲಾಯಿತು.

PREV
Read more Articles on
click me!

Recommended Stories

ಈ 4 ರಾಶಿಯವರಲ್ಲಿ ಒಳ್ಳೆಯದಕ್ಕಿಂತ ಕೆಟ್ಟ ಗುಣಗಳೇ ಹೆಚ್ಚು, ದ್ವೇಷ ಸಾಧಿಸೋದ್ರಲ್ಲಿ ನಿಸ್ಸೀಮರು
ಹೊಸ ವರ್ಷದಲ್ಲಿ 3 ರಾಜಯೋಗ, 3 ರಾಶಿಗೆ ಬಹಳಷ್ಟು ಹಣ