ಜೀವನದಲ್ಲಿ ನಿಮ್ಮ ಗುರಿ ಸಾಧಿಸೋಕೆ ಐದು ಸೆಕೆಂಡ್ ಸಾಕು! ಸಿಸ್ಟರ್‌ ಶಿವಾನಿ ಹೇಳಿದ 5 ಸೆಕೆಂಡ್‌ ಸೂತ್ರ ಇಲ್ಲಿದೆ

By Bhavani Bhat  |  First Published Sep 14, 2024, 8:59 PM IST

ಸಿಸ್ಟರ್‌ ಶಿವಾನಿ ಅಥವಾ ಬಿಕೆ ಶಿವಾನಿ ಬ್ರಹ್ಮಕುಮಾರಿ ಪಂಥದ ಯೋಗಿ. ಇವರು ಅತ್ಯುತ್ತಮ ಆಧ್ಯಾತ್ಮಿಕ ಶಿಕ್ಷಕಿ ಮತ್ತು ಪ್ರೇರಣಾದಾಯಿ ಮಾತುಗಾರ್ತಿ. ನೀವು ಅಂದುಕೊಂಡ ಗುರಿ ಸಾಧಿಸಲು ಅವರು ನೀಡಿದ ʼಐದು ಸೆಕೆಂಡ್‌ ಸೂತ್ರʼ ಇಲ್ಲಿದೆ. 
 



ಅಂದುಕೊಂಡ ಕೆಲಸದ ಗುರಿ ಸಾಧಿಸುವುದು ಹೇಗೆ? ಸಿಂಪಲ್.‌ ನೀರು ಕುಡಿಯುವ ಅಥವಾ ಆಹಾರ ಸೇವಿಸುವ ಮೊದಲು 5 ಸೆಕೆಂಡ್ ವಿರಾಮ ಕೊಡಿ. ಆ 5 ಸೆಕೆಂಡ್‌ ನಿಮಗೆ ಎಷ್ಟು ಆಂತರಿಕ ಶಾಂತಿ ನೀಡುವುದೋ ನೀವೇ ನೋಡಿ. 

ಮೇಲಿನದು ತುಂಬ ಸರಳ ಅನ್ನಿಸಬಹುದು. ನಿಜ, ಅದು ಸರಳ. ಆದರೆ ಆಚರಣೆ ಹೇಗೆ ಎಂಬುದು ನಿಮಗೆ ಗೊತ್ತಿರಲಿ.  ಸಿಸ್ಟರ್‌  ಶಿವಾನಿ ಹೇಳುವ ಪ್ರಕಾರ, ನೀವು ನೀರು ಕುಡಿಯುವ ಮುನ್ನ ಅಥವಾ ಅನ್ನಕ್ಕೆ ಕೈ ಹಾಕುವ ಮೊದಲು 5 ಸೆಕೆಂಡ್‌ ತಡೆದು, ಕೆಲವು ಪಾಸಿಟಿವ್‌ ಮಾತುಗಳನ್ನು ನಿಮಗೆ ನೀವೇ ಹೇಳಿಕೊಳ್ಳಬೇಕು. ಶಿವಾನಿ ಇವುಗಳನ್ನು affirmations ಎಂದು ಕರೆಯುತ್ತಾರೆ. ಅವುಗಳನ್ನು ಕನ್ನಡದಲ್ಲಿ ದೃಢವಚನಗಳು ಅನ್ನಬಹುದು. ಹಾಗೆಂದತೆ ನಿಮಗೆ ನೀವೇ ಹೇಳಿಕೊಳ್ಳುವ ಪಾಸಿಟಿವ್‌ ಸೂತ್ರಗಳು. ಇವು ಸಕಾರಾತ್ಮಕ ಹೇಳಿಕೆಗಳು. ಇವುಗಳನ್ನು ಪುನರಾವರ್ತಿಸುವ ಮೂಲಕ ನಾವು ಅವನ್ನು ನಂಬುತ್ತೇವೆ ಮತ್ತು ಆ ಹೇಳಿಕೆಗಳನ್ನು ನಿಜವಾಗಿಸುವ ಕಡೆಗೆ ನಮ್ಮ ಶಕ್ತಿಯನ್ನು ವಿನಿಯೋಗಿಸಿ ಕೆಲಸ ಮಾಡುತ್ತೇವೆ.

Tap to resize

Latest Videos

undefined

ನೀರು ಇಲ್ಲಿ ಹೇಗೆ ಸಹಾಯಕ? ನೀರು ನಮಗೆ ಜೀವ ನೀಡುವ ಶಕ್ತಿ. ಅದು ಇಲ್ಲದೆ ನಾವು ಜೀವಂತವಾಗಿ ಉಳಿಯುವ ಸಾಧ್ಯತೆಗಳು ಕಡಿಮೆ. ಆದ್ದರಿಂದ ನೀರು ಧನಾತ್ಮಕ ಕಂಪನಗಳನ್ನು ಹೀರಿಕೊಳ್ಳುವ ಮತ್ತು ಹಿಂತಿರುಗಿಸುವ ಶಕ್ತಿಯನ್ನು ಹೊಂದಿದೆ. ನೀರು ಅಂದರೆ ಗಂಗಾಜಲ. ಅದು ನಿಮ್ಮ ಆಲೋಚನೆಗಳನ್ನು ಶುದ್ಧೀಕರಿಸುವ ಸಾಮರ್ಥ್ಯವನ್ನು ಹೊಂದಿದೆ. ಮತ್ತು ಜೀವನದಲ್ಲಿ ಉತ್ತಮವಾದುದನ್ನು ಸಾಧಿಸಲು ಸಹಾಯ ಮಾಡುತ್ತದೆ.

ಈಗ, ದೃಢವಚನಗಳು ಯಾವುವು? ಶಿವಾನಿ ಹೇಳುವ ಪ್ರಕಾರ ಅವರು ಹೇಳಿಕೊಳ್ಳುವ affirmations ಅಂದರೆ ಇವು: 
ನಾನು ಕುಡಿಯಲಿರುವ ನೀರಿಗಾಗಿ ಮೊದಲು ‘ಪರಮಾತ್ಮ’ನಿಗೆ ಧನ್ಯವಾದ ಹೇಳುತ್ತೇನೆ. 
ನಾನು ಯಾವಾಗಲೂ ಶಾಂತವಾಗಿ, ಸಂತೋಷವಾಗಿರುತ್ತೇನೆ.
ನಾನು ಶಕ್ತಿಶಾಲಿ, ನಾನು ರೋಗದಿಂದ ಮುಕ್ತನಾಗಿದ್ದೇನೆ.
ಇಷ್ಟು ಹೇಳಿಕೊಂಡ ಬಳಿಕ ಆಕೆ ನೀರನ್ನು ಕುಡಿಯುತ್ತಾರೆ.

ಈ ದೃಢವಚನಗಳು ಉಚ್ಚರಿಸಲು ಕಷ್ಟವೇನಲ್ಲ. ಅವು ಸಂಸ್ಕೃತ ಮಂತ್ರಗಳಾಗಿರಬೇಕಿಲ್ಲ. ಅವು ಸರಳವಾದ, ದಿನನಿತ್ಯದ ಮಾತುಗಳನ್ನು ಹೇಳಬಹುದಾದವು. 

Chanakya Niti: ಮೂರ್ಖರ ಜೊತೆಗೆ ಹೇಗಿರಬೇಕು? ಚಾಣಕ್ಯ ಹೇಳ್ತಾರೆ ಕೇಳಿ!‌
 

ಇದರಿಂದ ಏನು ಪ್ರಯೋಜನ? 

- ಇವು ಸರಳವಾಗಿದ್ದು, ದೈನಂದಿನ ಜೀವನದಲ್ಲಿ ಸಹಾಯ ಮಾಡುತ್ತವೆ. ವ್ಯಕ್ತಿಯ ಮೇಲೆ ಧನಾತ್ಮಕ, ಶಾಂತಗೊಳಿಸುವ ಪರಿಣಾಮವನ್ನು ಬೀರಬಹುದು. 
- ಇವು ಸುಮಾರು ಒಂದು ತಿಂಗಳಲ್ಲಿ ನಿಮ್ಮ ದೇಹವನ್ನು ಸಕಾರಾತ್ಮಕತೆಗೆ ಒಗ್ಗಿಸಿಕೊಳ್ಳುತ್ತದೆ. ನೀವು ಎಷ್ಟು ಚೆನ್ನಾಗಿ ಯೋಚಿಸುತ್ತಿದ್ದೀರಿ ಎಂಬುದರ ಬಗ್ಗೆ ಸಂತೋಷವಾಗುತ್ತದೆ.
- ಇವು ನಿಮ್ಮ ದಿನದ ಒಂದು ನಿಮಿಷವನ್ನು ಸಹ ತೆಗೆದುಕೊಳ್ಳುವುದಿಲ್ಲ. ಆದರೆ ಅವು ನೀಡುವ ಪ್ರಯೋಜನಗಳು ನಿಮ್ಮೊಂದಿಗೆ ವರ್ಷಗಳ ಕಾಲ ಉಳಿಯುತ್ತವೆ.

ಹೀಗೆ, ಮುಂದಿನ ಬಾರಿ ನೀವು ಒಂದು ಲೋಟ ನೀರು ಕುಡಿಯಲು ಬಯಸಿದಾಗ ಅಥವಾ ಊಟಕ್ಕೆ ಕುಳಿತಾಗ, 5 ಸೆಕೆಂಡುಗಳ ಕಾಲ ವಿರಾಮ ನೀಡಲು ಮರೆಯದಿರಿ. "ನಾನು ಇಂದು ಪಡೆದಿರುವ ಶುದ್ಧ ನೀರು ಮತ್ತು ಆರೋಗ್ಯಕರ ಆಹಾರಕ್ಕಾಗಿ ದೇವರಿಗೆ ಧನ್ಯವಾದಗಳು. ನಾನು ಶಕ್ತಿಶಾಲಿ. ನಾನು ಶಾಂತ. ನಾನು ಆರೋಗ್ಯವಂತ" ಎಂದು ಹೇಳಿಕೊಂಡ ಮೇಲೆ ಸೇವಿಸಿ. 

ಅನಾದಿ ಕಾಲದಿಂದಲೂ ಇವುಗಳನ್ನು ಬಳಸಲಾಗುತ್ತಿದೆ. ನಮ್ಮ ಪೂರ್ವಜರು ಊಟಕ್ಕೆ ಮೊದಲು ಹೇಳುತ್ತಿದ್ದ ಮಂತ್ರಗಳೂ ಇದೇ ಅರ್ಥವನ್ನು ಹೊಂದಿದ್ದವು!

ಗ್ರಹಣದ ಸಮಯದಲ್ಲಿ ಗರ್ಭಿಣಿಯರು ಮನೆಯಿಂದ ಹೊರಗೆ ಹೋಗಬಾರದು ಏಕೆ?
 

click me!