Vaastu Tips: ಮದುವೆ ಲೇಟ್ ಆಗುತ್ತಿದ್ಯಾ? ಇಲ್ಲಿದೆ ಪರಿಹಾರ!

By Suvarna News  |  First Published Nov 23, 2021, 4:30 PM IST

ಹಿಂದೂ ಧರ್ಮದಲ್ಲಿ ಸಂಸ್ಕಾರಗಳಿಗೆ ಭಾರಿ ಮಹತ್ವವಿದೆ. ಈ ಸಂಸ್ಕಾರಗಳಲ್ಲಿ ಹಿಂದೂ ಧರ್ಮವೂ ಒಂದು. ಈ ಸಂಸ್ಕಾರಕ್ಕೂ ವಯೋಮಿತಿ ಇದೆ. ಆದರೆ, ಸೂಕ್ತ ಕಾಲದಲ್ಲಿ ಕೆಲವರಿಗೆ ವಿವಾಹ ಆಗುವುದಿಲ್ಲ. ಇದಕ್ಕೆ ಹಲವು ದೋಷಗಳಿದ್ದರೂ ಪರಿಹಾರಗಳೂ ಇವೆ. ಅವುಗಳ ಬಗ್ಗೆ ತಿಳಿಯೋಣ. 


ವಯಸ್ಸಿಗೆ (Age) ಬಂದ ಮಗನೋ (Son), ಮಗಳೋ (Daughter) ಇದ್ದಾರೆ. ಆದರೆ, ಏನೆ ಪ್ರಯತ್ನ (Effort) ಪಟ್ಟರೂ ಮದುವೆ (Marriage) ಮಾತ್ರ ಆಗುತ್ತಿಲ್ಲ. ಜಾತಕವೇ (Kundali) ಸೆಟ್ (Set) ಆಗುತ್ತಿಲ್ಲ. ಇನ್ನೂ ಜಾತಕ ಸರಿ ಹೊಂದಿದರೂ ಹುಡಗಿನಿಗೆ (Boy) ಹುಡುಗಿಯೋ, ಹುಡುಗಿಗೆ (Girl) ಹುಡಗನೋ ಸರಿ ಬರುವುದಿಲ್ಲ. ಒಟ್ಟಿನಲ್ಲಿ ಮದುವೆ ಮಾತ್ರ ವಿಳಂಬವಾಗುತ್ತಾ ಹೋಗುತ್ತದೆ. ಇದಕ್ಕೆ ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರ ಅನೇಕ ಸಮಸ್ಯೆಗಳು (Problems) ಕಾರಣವಾಗಿರುತ್ತವೆ. ಹಾಗಂತ ಇವುಗಳಿಗೆ ಪರಿಹಾರ ಇಲ್ಲವೇಂದೇನಿಲ್ಲ. ಹಿಂದೂ (Hindu) ಧರ್ಮದಲ್ಲಿ (Religion) ಹದಿನಾರು ಸಂಸ್ಕಾರಗಳಿವೆ. ಅವುಗಳಲ್ಲಿ ವಿವಾಹ ಸಹ ಬಹಳ ಮುಖ್ಯವಾದ ಸಂಸ್ಕಾರವಾಗಿದೆ. ಪ್ರತಿಯೊಂದು ಕೆಲಸಕ್ಕೂ ಸಮಯ (Time), ಅವಧಿ ಎಂಬುದು ಇದ್ದೇ ಇರುತ್ತದೆ. ಯಾವ ಯಾವ ಸಮಯಕ್ಕೆ ಏನೇನು ಸಂಸ್ಕಾರಗಳು ಆಗಬೇಕೋ ಅವುಗಳು ಆಗಬೇಕು. ಹೀಗಾಗಿ ವಿವಾಹಕ್ಕೂ ಸಹ ವಯಸ್ಸಿನ ಮಿತಿ ಇದ್ದರೆ ಒಳ್ಳೆಯದು ಎಂದು ಹೇಳಲಾಗಿದೆ. ಆದರೆ, ಈ ಪ್ರಕ್ರಿಯೆಯಲ್ಲಿ ಅಡೆತಡೆಗಳು ಬರುವುದು ಸಹಜ. ಜ್ಯೋತಿಷ್ಯ ಶಾಸ್ತ್ರದ ಅನುಸಾರ, ಶುಕ್ರ (Venus) ಮತ್ತು ಗುರುವು (Jupiter) ಪ್ರೀತಿ (Love) ಮತ್ತು ಮದುವೆಯೊಂದಿಗೆ ಸಂಬಂಧವನ್ನು ಹೊಂದಿರುವ ಗ್ರಹಗಳಾಗಿವೆ. ಪುರುಷನ ಜಾತಕದಲ್ಲಿ ಶುಕ್ರನು ಪತ್ನಿ (Wife) ಮತ್ತು ವೈವಾಹಿಕ ಸಂತೋಷದ (Happy) ಅಂಶವೆಂದು ಪರಿಗಣಿಸಲ್ಪಟ್ಟರೆ, ಗುರುಗ್ರಹವು ಕನ್ಯಾ ಜಾತಕದಲ್ಲಿ ಮದುವೆಗೆ ಸಂಬಂಧಿಸಿದೆ ಎಂದು ಪರಿಗಣಿಸಲಾಗುತ್ತದೆ. ಈ ಎರಡು ಗ್ರಹಗಳು ಜಾತಕದಲ್ಲಿ ಇರುವಂತೆಯೇ ವ್ಯಕ್ತಿಯ ವಿವಾಹ ಸಂಬಂಧಿತ ಕಾರ್ಯಗಳ ಬಗ್ಗೆ ನೋಡಬೇಕಾಗುತ್ತದೆ. ವಿವಾಹ ವಿಳಂಬಕ್ಕೆ ಜ್ಯೋತಿಷ್ಯದಲ್ಲಿ ಹಲವು ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇವುಗಳ ಬಗ್ಗೆ ತಿಳಿಯೋಣ ಬನ್ನಿ.. 

ವಿವಾಹ ವಿಳಂಬಕ್ಕಿಲ್ಲಿದೆ ಪರಿಹಾರ (Solutions)
ಯುವತಿಯರಿಗೆ ವಿವಾಹ ವಿಳಂಬವಾದರೆ ಅಂಥವರು ಗುರುವನ್ನು ಪೂಜಿಸಬೇಕು. ವಿಷ್ಣು (Lord Vishnu) ಮತ್ತು ಗುರು ಬೃಹಸ್ಪತಿಗೆ ವಿಶೇಷ ಶ್ರದ್ಧೆ - ಭಕ್ತಿಯಿಂದ ಪೂಜೆ ಸಲ್ಲಿಸಬೇಕು. ಗುರುವಾರ ಉಪವಾಸ ಮಾಡುವ ಮೂಲಕ ಹಳದಿಪ್ರಿಯನಿಗೆ (Yello) ಅರಿಶಿಣದ ತಿಲಕ, ಹಳದಿ ಹೂವುಗಳು, ಹಳದಿ ಸಿಹಿತಿಂಡಿಗಳಿಂದ ಪೂಜೆ ಸಲ್ಲಿಸಬೇಕು. ಇದೇ ವೇಳೆ ಬಾಳೆ ಮರದ ಬೇರಿನಲ್ಲಿ ಶುದ್ಧ ತುಪ್ಪದ (Ghee) ದೀಪವನ್ನು (Lighting) ಹಚ್ಚಿ ಬಾಳೆಯ (Banana) ಬೇರಿಗೆ ನೀರು (Water) ನೀಡಬೇಕು. ಆದರೆ ಈ ದಿನ ಬಾಳೆಹಣ್ಣು ತಿನ್ನಬಾರದು. ಜೊತೆಗೆ ಗುರುವಾರದಂದು ಹಳದಿ ಬಣ್ಣದ ವಸ್ತ್ರವನ್ನು (Dress) ಧರಿಸಬೇಕಾಗುತ್ತದೆ. ಇನ್ನು ಊಟ-ಉಪಾಹಾರಕ್ಕೆ (Meals) ಸಂಬಂಧಪಟ್ಟಂತೆ ಉಪ್ಪು (Salt) ಇಲ್ಲದ ಹಳದಿ ಆಹಾರವನ್ನು ಸೇವಿಸಬೇಕು. 

ಇದನ್ನು ಓದಿ: A, K, P, R ನಿಂದ ಶುರುವಾಗೋ ಹೆಸರಿನ ಹುಡುಗರು ತುಂಬಾ ಕೇರಿಂಗ್..!

ಕೇಸರಿ (Saffron) - ಅರಿಶಿಣವೇ ಪರಿಹಾರ
ಮದುವೆಯಾಗದವರು ಪ್ರತಿ ಗುರುವಾರ ಕೇಸರಿ ಅಥವಾ ಅರಿಶಿಣದ ನೀರಿನಲ್ಲಿ ಸ್ನಾನ ಮಾಡಬೇಕು. ಇದರ ಜೊತೆಗೆ ಹಳದಿ ಬಣ್ಣದ ವಸ್ತುಗಳನ್ನು ದಾನ (Donate)  ಮಾಡಬೇಕು. ಇದರಿಂದ ಯಾವುದಾದರೂ ಪಾಪಗಳಿದ್ದರೆ ನಿವಾರಣೆಯಾಗಲಿದೆ. ಪ್ರತಿ ಗುರುವಾರ (Thursday), ಹಿಟ್ಟಿಗೆ ಸ್ವಲ್ಪ ಅರಿಶಿಣವನ್ನು ಸೇರಿಸಿ ಅದನ್ನು ಹಸುವಿಗೆ ತಿನ್ನಿಸಬೇಕು. ಇದರಿಂದ ದಾಂಪತ್ಯ ಜೀವನಕ್ಕೆ ಸಂಬಂಧಪಟ್ಟಂತೆ ಇರುವ ಅಡೆತಡೆಗಳು ನಿವಾರಣೆ ಆಗಲಿದೆ. ಜೊತೆಗೆ ಈ ರೀತಿ ಆಚರಣೆ ಮಾಡಿದವರ ಸೌಭಾಗ್ಯವೂ (Good fortune) ಹೆಚ್ಚಲಿದೆ ಎಂಬ ನಂಬಿಕೆ (Faith) ಇದೆ. 

ಶ್ರೀಕೃಷ್ಣನ ಆರಾಧಿಸಿ (God Krishna)
ವಿವಾಹದಲ್ಲಿ ವಿಳಂಬವಾಗುತ್ತಿದ್ದರೆ ಅಥವಾ ಪ್ರೇಮ ವಿವಾಹದಲ್ಲಿ (Love Marriage) ಸಮಸ್ಯೆಗಳು ಎದುರಾಗುತ್ತಿದ್ದರೆ ಯುವಕರು ಸಹ ಈ ಕ್ರಮವನ್ನು (Steps) ಅನುಸರಿಸಬಹುದಾಗಿದೆ. ಪರಮಾತ್ಮ ಶ್ರೀಕೃಷ್ಣನನ್ನು ಪ್ರಾಮಾಣಿಕವಾಗಿ (Honest) ಹೃದಯಪೂರ್ವಕವಾಗಿ (Heartfelt) ಆರಾಧಿಸಬೇಕು. ಶ್ರೀಕೃಷ್ಣನ ಈ ಮಂತ್ರವನ್ನು (Mantra) ಕನಿಷ್ಠ 108 ಬಾರಿಯಾದರೂ ಜಪಿಸಬೇಕು. 
'ಕ್ಲೀಂ ಕೃಷ್ಣಾಯ ಗೋವಿಂದಾಯ ಗೋಪೀಜನವಲ್ಲಭಾಯ ಸ್ವಾಹಾ' //

ಇದನ್ನು ಓದಿ: ಈ ದಿನ ಹುಟ್ಟಿದ ಹುಡುಗಿಯರಿಂದ ಗಂಡಂದಿರಿಗೆ ಅದೃಷ್ಟ..!

ಗೋಶಾಲೆಗೆ ಹೋಗಿ (Goshala)
ವಿವಾಹ ವಿಳಂಬವಾಗುತ್ತಿದ್ದರೆ ಅಂಥವರು ಪ್ರತಿ ಗುರುವಾರದಂದು ಗೋಶಾಲೆಗೆ ಹೋಗಿ ಅಲ್ಲಿ ಗೋವುಗಳಿಗೆ (Cow) ಆಹಾರವನ್ನು (Food) ನೀಡಬೇಕು. ಅವುಗಳನ್ನು ಪ್ರೀತಿಯಿಂದ ಮಾತನಾಡಿಸಬೇಕು. ಹೀಗೆ ಮಾಡಿದಲ್ಲಿ ಗೋವುಗಳ ಆಶೀರ್ವಾದವೂ (Blessings) ಲಭ್ಯವಾಗುವುದಲ್ಲದೆ, ವಿವಾಹಗಳು ಬಹುಬೇಗ ನೆರವೇರಲು ಕಾರಣವಾಗುತ್ತವೆ.

click me!