A, K, P, R ನಿಂದ ಶುರುವಾಗೋ ಹೆಸರಿನ ಹುಡುಗರು ತುಂಬಾ ಕೇರಿಂಗ್..!

By Suvarna NewsFirst Published Nov 21, 2021, 6:35 AM IST
Highlights

ಹೆಸರಿನಲ್ಲಿ ಏನಿದೆ ಬದನೆಕಾಯಿ ಅಂತ ಮಾತ್ರ ಹೇಳಬಾರದು. ಯಾಕೆಂದರೆ ಹೆಸರಿಗೆ ಅದರದ್ದೇ ಆದ ವಿಶಿಷ್ಟತೆಗಳಿರುತ್ತವೆ. ಇನ್ನು ಕೆಲವು ಹೆಸರಿನ ಆರಂಭಿಕ ಅಕ್ಷರದಿಂದ ಯಶಸ್ಸು, ಕಾಳಜಿ ಸಿಗುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಹಾಗಿದ್ದರೆ ಇಂಗ್ಲಿಷ್‌ನ ಮೊದಲ ಅಕ್ಷರ ಎ, ಕೆ, ಪಿ, ಆರ್ ನಿಂದ ಪ್ರಾರಂಭವಾಗುವವರ ಗುಣಸ್ವಭಾವಗಳ ಬಗ್ಗೆ ತಿಳಿಯೋಣ.

ಜ್ಯೋತಿಷ್ಯ ಶಾಸ್ತ್ರದಿಂದ(Astrology) ವ್ಯಕ್ತಿಗೆ ಸಂಬಂಧಿಸಿದ ಅನೇಕ ವಿಚಾರಗಳನ್ನು ತಿಳಿಯಬಹುದಾಗಿದೆ. ವ್ಯಕ್ತಿಯ ವ್ಯಕ್ತಿತ್ವದ ಸ್ವಭಾವ, ಗುಣ, ಉದ್ಯೋಗ, ವ್ಯಾಪಾರ, ವಿವಾಹ, ಸಂತಾನ ಮತ್ತು ಇನ್ನಿತರ ಹಲವಾರು ವಿಷಯಗಳನ್ನು ಮತ್ತು ಭವಿಷ್ಯದ (Future) ಆಗುಹೋಗುಗಳನ್ನು ತಿಳಿಯಬಹುದಾಗಿದೆ. ಸಂಖ್ಯಾಶಾಸ್ತ್ರ, ವಾಸ್ತು ಶಾಸ್ತ್ರ, ಹಸ್ತ ಸಾಮುದ್ರಿಕಾ ಶಾಸ್ತ್ರ ಹೀಗೆ ಜ್ಯೋತಿಷ್ಯಶಾಸ್ತ್ರದಲ್ಲಿ ಅನೇಕ ವಿಧಾನಗಳಿವೆ. ಇವುಗಳ ಮೂಲಕ ಪ್ರತ್ಯೇಕವಾಗಿ ಭವಿಷ್ಯದ ವಿಚಾರಗಳನ್ನು ತಿಳಿಯಬಹುದು. ಅಷ್ಟೆ ಅಲ್ಲದೆ ಹೆಸರಿನ (Name) ಮೊದಲ ಅಕ್ಷರದಿಂದ ವ್ಯಕ್ತಿಯ ಸ್ವಭಾವವನ್ನು ತಿಳಿಯಬಹುದೆಂದು ಶಾಸ್ತ್ರ ಹೇಳುತ್ತದೆ. ಇಂಗ್ಲಿಷ್‌ನ (English) ಮೊದಲ ಅಕ್ಷರ ಎ, ಕೆ, ಪಿ, ಆರ್ ಅಕ್ಷರದಿಂದ ಆರಂಭವಾಗುವ (Start) ಹುಡುಗರು (Boys) ಇತರರ ಬಗ್ಗೆ ಹೆಚ್ಚು ಕಾಳಜಿಯುಳ್ಳವರು (Caring) ಮತ್ತು ಉತ್ತಮ ಸಂಗಾತಿ (Partner) ಆಗುವವರು ಎಂದು ಹೇಳಲಾಗುತ್ತದೆ. ಹಾಗಾದರೆ ಈ ಅಕ್ಷರಗಳಿಂದ ಆರಂಭವಾಗುವ ಹೆಸರಿನ ಹುಡುಗರ ವ್ಯಕ್ತಿತ್ವ ಮತ್ತು ಪ್ರೇಮ (Love) ಜೀವನದ (Life)  ಬಗ್ಗೆ ತಿಳಿಯೋಣ.

ಎ ಅಕ್ಷರ (Letter A)
ಜ್ಯೋತಿಷ್ಯಶಾಸ್ತ್ರದ ಅನುಸಾರ “ಎ” ಅಕ್ಷರದಿಂದ (Letter) ಆರಂಭವಾಗುವ ಹೆಸರಿನ ಹುಡುಗರ ವೈವಾಹಿಕ ಜೀವನ (Married life) ಅತ್ಯಂತ ಖುಷಿಯಿಂದ (Happy) ಕೂಡಿರುತ್ತದೆ. ಎ ಅಕ್ಷರದಿಂದ ಪ್ರಾರಂಭವಾಗುವ ಹೆಸರಿನ ಹುಡುಗರು ತಮ್ಮ ಜೀವನ ಸಂಗಾತಿಯನ್ನು ಅತ್ಯಂತ ಕಾಳಜಿಯಿಂದ ನೋಡಿಕೊಳ್ಳುತ್ತಾರೆ. ಅವರ ಖುಷಿಗಾಗಿ ಏನನ್ನಾದರೂ ಹೊಸತನ್ನು ಮಾಡಲು ಪ್ರಯತ್ನಿಸುತ್ತಾರೆ. ಇವರ ಪತ್ನಿ(Wife) ಬೇಸರದಲ್ಲಿದ್ದರೆ (Sad) ಅದರಿಂದ ಹೊರ ತಂದು ಅವರನ್ನು ಖುಷಿಪಡಿಸುವ ಕಲೆ ಇವರಿಗೆ ತಿಳಿದಿರುತ್ತದೆ. ಅಷ್ಟೇ ಅಲ್ಲದೆ ಇವರ ಪತ್ನಿ ತಪ್ಪು ಮಾಡಿದರೂ ಸಹ ಅದನ್ನು ಮನಸ್ಸಿನಲ್ಲಿಟ್ಟುಕೊಳ್ಳದೆ ಕ್ಷಮಿಸುವ  ಗುಣ ಇವರದ್ದಾಗಿರುತ್ತದೆ. ಈ ವ್ಯಕ್ತಿಗಳಿಗೆ ವೈವಾಹಿಕ ಜೀವನದಲ್ಲಿ ತೊಡಕುಗಳು ಬರುವುದು ಇಷ್ಟವಿರುವುದಿಲ್ಲ. ಹಾಗಾಗಿ ಹೊಂದಾಣಿಕೆಯಿಂದ ಜೀವನ ನಡೆಯಲು ಪ್ರಯತ್ನಿಸುತ್ತಾರೆ.

ಇದನ್ನು ಓದಿ: ಯಾವ ದೇವರಿಗೆ ಯಾವ ಜಪಮಾಲೆ ಇಷ್ಟ, ಬಳಸೋದು ಹೇಗೆ?

ಕೆ ಅಕ್ಷರ (Letter K)
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆ ಅಕ್ಷರದಿಂದ ಆರಂಭವಾಗುವ ಹೆಸರಿನ ಹುಡುಗರು ತಮ್ಮ ಹೆಂಡತಿಯನ್ನು ಅತ್ಯಂತ ಹೆಚ್ಚು ಕಾಳಜಿಯನ್ನು ಹೊಂದಿರುತ್ತಾರೆ. ಅಷ್ಟೇ ಅಲ್ಲದೆ ಈ ವ್ಯಕ್ತಿಗಳು ರೊಮ್ಯಾಂಟಿಕ್ (Romantic) ಸಹ ಆಗಿರುತ್ತಾರೆ. ಈ ವ್ಯಕ್ತಿಗಳು ಸಂಗಾತಿಯನ್ನು (Partner) ಹೆಚ್ಚು ಪ್ರೀತಿಸುವುದಲ್ಲದೇ(Love), ಅವರ ಎಲ್ಲ ಇಷ್ಟ ಕಷ್ಟಗಳನ್ನು (Difficulties) ಚೆನ್ನಾಗಿ ಅರಿತಿರುತ್ತಾರೆ. ವೈವಾಹಿಕ ಜೀವನವು ಅತ್ಯಂತ ಖುಷಿಯಾಗಿರಲು ಹೆಚ್ಚಿನ ಪ್ರಯತ್ನ ಮಾಡುತ್ತಾರೆ. ಎಲ್ಲ ವಿಷಯಗಳಲ್ಲೂ ಮೊದಲು ಪತ್ನಿಯ ಖುಷಿಯ ಬಗ್ಗೆ  ಚಿಂತಿಸುತ್ತಾರೆ.

ಪಿ ಅಕ್ಷರ (Letter P)
ಪಿ ಅಕ್ಷರದಿಂದ ಆರಂಭವಾಗುವ ಹೆಸರಿನ ಹುಡುಗರು ತುಂಬಾ ರೊಮ್ಯಾಂಟಿಕ್ ಆಗಿರುತ್ತಾರೆ. ಪತ್ನಿಗೆ ಇವರು ಸಂಪೂರ್ಣ ಸಮರ್ಪಿತರಾಗಿರುತ್ತಾರೆ. ಅವರ ಪ್ರತಿ ಮಾತಿಗೂ ಆದ್ಯತೆಯನ್ನು ನೀಡುತ್ತಾರೆ. ಇವರ ಪತ್ನಿ ಅಥವಾ ಸಂಗಾತಿ (Partner) ಬೇಸರದಲ್ಲಿದ್ದರೆ, ಬಹಳ ಬೇಗ ತಿಳಿದುಕೊಳ್ಳುವ ಇವರು, ಅದನ್ನು ಸರಿಪಡಿಸಲು ಎಲ್ಲ ರೀತಿಯ ಪ್ರಯತ್ನವನ್ನು ಮಾಡುತ್ತಾರೆ. ಒಂದೊಮ್ಮೆ ಜಗಳವಾದರೂ (Quarrel) ಸಹ ಇವರೇ ಮೊದಲು ಹೋಗಿ ಸಮಾಧಾನ ಪಡಿಸಿ ರಾಜಿ ಮಾಡಿಕೊಳ್ಳುತ್ತಾರೆ. 

ಇದನ್ನು ಓದಿ: ನಂಬಲು ಅರ್ಹವಾದ ರಾಶಿಗಳಿವು!

ಆರ್ ಅಕ್ಷರ (Letter R)
ಆರ್ ಅಕ್ಷರದಿಂದ ಪ್ರಾರಂಭವಾಗುವ ಹೆಸರಿನ ಹುಡುಗರು ತಮ್ಮ ಪತ್ನಿಯನ್ನು ಬಹಳವಾಗಿಯೇ ಪ್ರೀತಿಸುತ್ತಾರೆ. ಅವರನ್ನು ಯಾವಾಗಲೂ ಖುಷಿಯಾಗಿಟ್ಟುಕೊಳ್ಳಲು ಇವರು ಸಾಕಷ್ಟು ಪ್ರಯತ್ನಿಸುತ್ತಾರೆ. ಹೀಗಾಗಿ ಇವರು ತಮ್ಮ ವೈವಾಹಿಕ (Married life) ಜೀವನದಲ್ಲಿ ಯಾವುದೇ ರೀತಿಯಾದಂತಹ ಭಿನ್ನಾಭಿಪ್ರಾಯವನ್ನು (Differences) ಇಷ್ಟಪಡುವವರಲ್ಲ. ಎಲ್ಲವನ್ನೂ ಮುಂಚಿತವಾಗಿಯೇ ಬಗೆಹರಿಸಿಕೊಳ್ಳಲು ಇಷ್ಟಪಡುತ್ತಾರೆ. ಒಂದೊಮ್ಮೆ ಇವರು ತಮ್ಮ ಪತ್ನಿ ತಪ್ಪು ಮಾಡಿದರೂ ಸಹ ಅದನ್ನು ನಿರ್ಲಕ್ಷಿಸುವುದರ (Ignore) ಜೊತೆಗೆ ಕ್ಷಮಿಸಿಬಿಡುವ ಗುಣವನ್ನು ಹೊಂದಿದ್ದಾರೆ. 

click me!