ಕರ್ನಾಟಕದ ಪ್ರಸಿದ್ಧ ಮತ್ತು ಶ್ರೀಮಂತ ದೇಗುಲಗಳಲ್ಲಿ ಒಂದಾದ ಚಾಮರಾಜನಗರ ಮಲೆ ಮಹದೇಶ್ವರ ಬೆಟ್ಟದ ಮಾದಪ್ಪನ ದೇವಾಲಯದಲ್ಲಿ ಭಾನುವಾರದಿಂದ 528 ಕೆಜಿ ತೂಕದ ಬೆಳ್ಳಿ ರಥದ ಸೇವೆ ಆರಂಭವಾಗಿದೆ.
ವರದಿ - ಪುಟ್ಟರಾಜು. ಆರ್. ಸಿ. ಏಷಿಯಾನೆಟ್ ಸುವರ್ಣ ನ್ಯೂಸ್
ಚಾಮರಾಜನಗರ (ಜೂ.25): ಕರ್ನಾಟಕದ ಪ್ರಸಿದ್ಧ ಮತ್ತು ಶ್ರೀಮಂತ ದೇಗುಲಗಳಲ್ಲಿ ಒಂದಾದ ಚಾಮರಾಜನಗರ ಮಲೆ ಮಹದೇಶ್ವರ ಬೆಟ್ಟದ ಮಾದಪ್ಪನ ದೇವಾಲಯದಲ್ಲಿ ಭಾನುವಾರದಿಂದ 528 ಕೆಜಿ ತೂಕದ ಬೆಳ್ಳಿ ರಥದ ಸೇವೆ ಆರಂಭವಾಗಿದೆ.
undefined
ರಾಜ್ಯದಲ್ಲಿ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿರುವ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೈ ಮಹದೇಶ್ವರ ಸ್ವಾಮಿಗೆ (ಮಾದಪ್ಪ) ಕೆಲವು ತಿಂಗಳುಗಳ ಹಿಂದೆಯಷ್ಟೇ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಾಂಕೇತಿಕವಾಗಿ ರಥ ಉದ್ಘಾಟನೆ ಮಾಡಿದ್ದರು. ಇದೀಗ ರಥ ನಿರ್ಮಾಣ ಕಾಮಗಾರಿ ಸಂಪೂರ್ಣ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಇಂದಿನಿಂದ ಬೆಳ್ಳಿ ರಥ ಸೇವೆ ಆರಂಭಗೊಂಡಿದೆ. ಭಕ್ತರು ಪ್ರತಿದಿನ ಬೆಳಗ್ಗೆ 2001 ಸಾವಿರ ರೂ. ಶುಲ್ಕ ಕೊಟ್ಟು ಬೆಳ್ಳಿ ರಥ ಸೇವೆ ಮಾಡಿಸಬಹುದಾಗಿದೆ.
ಮಲೆ ಮಹದೇಶ್ವರ ಹುಂಡಿ ಎಣಿಕೆ : ಒಂದೇ ತಿಂಗಳಲ್ಲಿ 2.53 ಕೋಟಿ ರು.ಸಂಗ್ರಹ!
ಹಲವು ರಥಗಳ ಸೇವೆ ಚಾಲ್ತಿಯಲ್ಲಿದೆ: ಈಗಾಗಲೇ, ದೇವಾಲಯದಲ್ಲಿ ಸಂಜೆ ಹೊತ್ತು ಚಿನ್ನದ ರಥ ಸೇವೆ ನಡೆಯಲಿದೆ. ಇದುವರೆಗೆ ಹುಲಿವಾಹನ, ಬಸವವಾಹನ, ರುದ್ರಾಕ್ಷಿ ಮಂಟಪ, ಚಿನ್ನದ ರಥದ ಸೇವೆಗಳು ಇದ್ದವು ಈಗ ಇದರ ಜೊತೆಗೆ ಇದೀಗ ಬೆಳ್ಳಿರಥ ಸೇರ್ಪಡೆಯಾಗಿ ಬೆಳ್ಳಿ ರಥದ ಸೇವೆ ಲೋಕಾರ್ಪಣೆಯಾಗಿದೆ. ಈ ವೇಳೆ ಸಾಲೂರು ಮಠದ ಸ್ವಾಮೀಜಿ, ಪ್ರಾಧಿಕಾರದ ಕಾರ್ಯದರ್ಶಿ ಕಾತ್ಯಾಯಿನಿದೇವಿ ಹಾಗೂ ಸೆಸ್ಕ್ ಎಂಡಿ ಜಯವಿಭವಸ್ವಾಮಿ ಉಪಸ್ಥಿತರಿದ್ದರು. ರಾಜ್ಯದಲ್ಲೇ ಅತಿಹೆಚ್ಚು ಆದಾಯ ಪಡೆಯುವ ಎರಡನೇ ದೇವಾಲಯ ಇದಾಗಿದ್ದು, ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡು ಬರುತ್ತಿದೆ.
ಮಾರ್ಚ್ 19ರಂದು ಬೆಳ್ಳಿ ರಥ ಲೋಕಾರ್ಪಣೆ: ಹನೂರು ತಾಲೂಕಿನ ಪ್ರಸಿದ್ಧ ಯಾತ್ರಾಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ನಿರ್ಮಾಣ ಮಾಡಿರುವ 108 ಅಡಿ ಎತ್ತರದ ಮಲೆ ಮಹದೇಶ್ವರ ಸ್ವಾಮಿ ಪ್ರತಿಮೆ, ಬೆಳ್ಳಿರಥವನ್ನು ಮಾರ್ಚ್ 19ರಂದು ಲೋಕಾರ್ಪಣೆ ಮಾಡಿದ್ದ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಹದೇಶ್ವರರ ಪ್ರತಿಮೆ ನಿರ್ಮಾಣದಿಂದ ಕ್ಷೇತ್ರದ ಹಿರಿಮೆ, ಗರಿಮೆ ಎತ್ತಿ ಹಿಡಿಯುವ ಕೆಲಸವಾಗಿದೆ ಎಂದಿದ್ದರು. ಮಹದೇಶ್ವರರ ಇಷ್ಟು ದೊಡ್ಡಮೂರ್ತಿ ಚೆನ್ನಾಗಿ ಮೂಡಿ ಬಂದಿದ್ದು, ಜೀವಕಳೆ ಇದೆ. ಮಹದೇಶ್ವರರ ಪ್ರತಿಮೆ ನಿರ್ಮಾಣಕ್ಕಾಗಿ ಶ್ರಮಿಸಿದ ಎಲ್ಲರೂ ತಮ್ಮ ಬದುಕಿನ ಸಾರ್ಥಕತೆಯನ್ನು ಕಂಡುಕೊಂಡಿದ್ದಾರೆ ಎಂದು ಹೇಳಿದ್ದರು.
ಹುಲಿ ಮೇಲೆ ಕುಳಿತ ಮಾದಪ್ಪನ ಪ್ರತಿಮೆ: 108 ಅಡಿ ಎತ್ತರದ ಈ ಪ್ರತಿಮೆ ಎರಡು ಸ್ತರದಲ್ಲಿ ನಿರ್ಮಾಣವಾಗಿದೆ. ಕಲ್ಲು ಬಂಡೆಯ ರಚನೆಯ ಮೇಲೆ ಹುಲಿ ಮೇಲೆ ಕುಳಿತ ತ್ರಿಶೂಲ ಹಿಡಿದ ಮಹದೇಶ್ವರ ಸ್ವಾಮಿಯ ಪ್ರತಿಮೆ ರೂಪಿಸಲಾಗಿದೆ. ಕಲ್ಲುಬಂಡೆಯಾಕೃತಿಯ ರಚನೆಯಲ್ಲಿ ಗುಹೆಯ ಮಾದರಿಯಲ್ಲಿ ಎರಡು ಮಹಡಿಗಳಿವೆ. ತಳಭಾಗದಲ್ಲಿ ಮಹದೇಶ್ವರ ಬೆಟ್ಟದ ಚಾರಿತ್ರಿಕ ಹಿನ್ನೆಲೆ ಸಾರುವ ಕಲಾಕೃತಿಗಳ ರಚನೆ, ಭಕ್ತರ ವಿಶ್ರಾಂತಿ ಸ್ಥಳಾವಕಾಶ ಸೇರಿದಂತೆ ಭಕ್ತರು, ಪ್ರವಾಸಿಗರಿಗೆ ಮಹದೇಶ್ವರ ಚರಿತ್ರೆ, ಪರಂಪರೆ ಸಾರುವ ಮ್ಯೂಸಿಯಂ ನಿರ್ಮಾಣವಾಗಲಿದೆ. 20 ಕೋಟಿ ರು.ವೆಚ್ಚದ ಯೋಜನೆ ಇದಾಗಿದೆ.
ದೇಶದಲ್ಲಿ ಮೋದಿ ಸೋಲಲ್ಲ, ರಾಹುಲ್‌ಗಾಂಧಿಗೆ ಮದುವೆ ಆಗೊಲ್ಲ: ಬೊಮ್ಮಾಯಿ ವ್ಯಂಗ್ಯ
ಮೇ ತಿಂಗಳಲ್ಲಿ 2.53 ಕೋಟಿ ರೂ. ಹಣ ಸಂಗ್ರಹ: ಕಳೆದ ಮೇ ತಿಂಗಳಲ್ಲಿ ಮಲೆ ಮಹದೇಶ್ವರ ಸ್ವಾಮಿ ದೇವಾಲಯಕ್ಕೆ ಅಮಾವಾಸ್ಯೆ, ವಿಶೇಷ ದಿನಗಳಲ್ಲಿ, ಸರ್ಕಾರಿ ರಜಾ ದಿನಗಳಂದು ರಾಜ್ಯದ ವಿವಿಧೆಡೆಯಿಂದ ಸಾವಿರರು ಜನರು ಆಗಮಿಸಿದ್ದರು. ವಿದ್ಯಾರ್ಥಿಗಳಿಗೆ ಬೇಸಿಗೆ ರಜಾ ಹಾಗೂ ವಿಧಾನಸಭಾ ಚುನಾವಣೆ ಹಿನ್ನೆಲೆ ಕಳೆದ 32 ದಿನಗಳ ಅವಧಿಯಲ್ಲಿ 2,53,58,519 ರೂಪಾಯಿ ನಗದು ಹಣ, 65 ಗ್ರಾಂ ಚಿನ್ನ ಹಾಗೂ 3.358 ಗ್ರಾಂ ಬೆಳ್ಳಿ ಸಂಗ್ರಹವಾಗಿತ್ತು. ಮಲೆ ಮಹದೇಶ್ವರಸ್ವಾಮಿ ಅಭಿವೃದ್ಧಿ ಪ್ರಾಧಿಕಾರ (Male Mahadeswaraswamy Development Authority)ದ ಸಿಬ್ಬಂದಿ ವರ್ಗದವರು ಹಾಜರಿದ್ದರು.