Good Time Signs: ಒಳ್ಳೆ ಸಮಯ ಬರೋ ಮುನ್ನ ಎಷ್ಟೆಲ್ಲ ಸಂಕೇತ ನೀಡುತ್ತೆ ಗೊತ್ತಾ?

Published : May 15, 2023, 03:41 PM IST
Good Time Signs: ಒಳ್ಳೆ ಸಮಯ ಬರೋ ಮುನ್ನ ಎಷ್ಟೆಲ್ಲ ಸಂಕೇತ ನೀಡುತ್ತೆ ಗೊತ್ತಾ?

ಸಾರಾಂಶ

ಜೀವನದಲ್ಲಿ ಅದೃಷ್ಟದ ಬಾಗಿಲು ತೆರೆಯುವ ಮುನ್ನ ಸಾಕಷ್ಟು ಶುಭ ಸೂಚನೆಗಳು ದೊರಕುತ್ತವೆ. ಈ ಮಂಗಳಕರ ಚಿಹ್ನೆಗಳನ್ನು ಗಮನಿಸಿದಾಗಲೇ ನಿಮಗೆ ಮುಂದೆ ಕಾದಿರುವ ಸಂತೋಷದ ದಿನಗಳ ಬಗ್ಗೆ ತಿಳಿಯುತ್ತದೆ. 

ವ್ಯಕ್ತಿಯ ಜೀವನದಲ್ಲಿ ನಡೆಯುವ ಘಟನೆಗಳ ಪೂರ್ವ ಚಿಹ್ನೆಗಳು ಖಂಡಿತವಾಗಿಯೂ ಕಂಡುಬರುತ್ತವೆ. ಅದನ್ನು ಅರ್ಥ ಮಾಡಿಕೊಳ್ಳಬೇಕು. ಒಳ್ಳೆಯ ದಿನಗಳು ಬರುವ ಮುನ್ನವೇ ಕೆಲವು ಚಿಹ್ನೆಗಳು ಬರಲು ಪ್ರಾರಂಭಿಸುತ್ತವೆ, ಅವುಗಳನ್ನು ಗುರುತಿಸುವ ಮೂಲಕ, ನಿಮ್ಮ ಸಮಯ ಬದಲಾಗುತ್ತಿದೆ ಎಂದು ತಿಳಿಯಬಹುದು. ಈ ಮಂಗಳಕರ ಚಿಹ್ನೆಗಳಿಂದ, ನಿಮ್ಮ ಅದೃಷ್ಟದ ಬಾಗಿಲು ತೆರೆಯಲಿದೆ ಎಂದು ನೀವು ಅರ್ಥ ಮಾಡಿಕೊಳ್ಳಬಹುದು.

ಬಿಳಿ ಹಸುವಿನ ಕೂಗು
ಧಾರ್ಮಿಕ ಗ್ರಂಥಗಳ ಪ್ರಕಾರ, ಬಿಳಿ ಬಣ್ಣದ ತಾಯಿ ಹಸು ನಿಮ್ಮ ಮನೆ ಬಾಗಿಲಿಗೆ ಬಂದು ಜೋರಾಗಿ ಕೂಗುತ್ತಿದ್ದರೆ, ಖಂಡಿತವಾಗಿಯೂ ಮನೆಯ ಸಂತೋಷವು ಹೆಚ್ಚಾಗುತ್ತದೆ. ಸಂಪತ್ತು ಹೆಚ್ಚುವ ಸಂಕೇತ ಇದಾಗಿದೆ.

ಮಧುರವಾದ ಶಬ್ದಗಳು
ಒಬ್ಬ ವ್ಯಕ್ತಿಯು ಬೆಳಿಗ್ಗೆ ದೇವಾಲಯದಿಂದ ಗಂಟೆ, ಶಂಖ ಅಥವಾ ಭಜನೆ-ಕೀರ್ತನೆಗಳ ಶಬ್ದವನ್ನು ಕೇಳಿದರೆ, ಅದು ಅವನಿಗೆ ಶುಭ ಶಕುನವಾಗಿದೆ.

ವಧುವಿನ ನೋಟ
ನೀವು ಎಲ್ಲೋ ಹೋಗುತ್ತಿರುವಿರಿ ಮತ್ತು ದಾರಿಯಲ್ಲಿ ಷೋಡಶಾಲಂಕಾರ ಮಾಡಿಕೊಂಡ ಹೊಸ ವಧುವನ್ನು ನೀವು ನೋಡಿದರೆ, ನಿಮಗೆ ಏನಾದರೂ ಒಳ್ಳೆಯದು ಸಂಭವಿಸಲಿದೆ ಎಂದು ಅರ್ಥ ಮಾಡಿಕೊಳ್ಳಿ.

ತೆಂಗಿನ ಕಾಯಿ
ಒಬ್ಬ ವ್ಯಕ್ತಿಯು ಬೆಳಿಗ್ಗೆ ಎದ್ದ ತಕ್ಷಣ ಶ್ರೀಫಲ ಅಂದರೆ ತೆಂಗಿನಕಾಯಿಯನ್ನು ನೋಡಿದರೆ, ಆ ವ್ಯಕ್ತಿಗೆ ಏನಾದರೂ ಒಳ್ಳೆಯ ಸುದ್ದಿ ಸಿಗುತ್ತದೆ ಎಂದರ್ಥ.

Chanakya Niti: ಲೈಂಗಿಕ ಬಯಕೆ ಈಡೇರದ ಮಹಿಳೆ ಬೇಗ ಮುದುಕಿಯಾಗ್ತಾಳಂತೆ!

ಹಕ್ಕಿ ತಾಕಿದರೆ
ಅದೃಷ್ಟವಂತರ ಮೇಲೆ ಮಾತ್ರ ಹಕ್ಕಿ ಡಿಕ್ಕಿ ಹೊಡೆಯುತ್ತದೆ ಎಂದು ನಂಬಲಾಗಿದೆ. ಇದ್ದಕ್ಕಿದ್ದಂತೆ ಹಕ್ಕಿ ನಿಮಗೆ ತಾಕಿದರೆ, ನೀವು ಅದೃಷ್ಟದಲ್ಲಿ ಶ್ರೀಮಂತರು ಎಂದು ಅರ್ಥ ಮಾಡಿಕೊಳ್ಳಬೇಕು.

ಹಣ ಬರುವ ಚಿಹ್ನೆಗಳು
ನೀವು ಪ್ರಯಾಣಿಸುವಾಗ ಬಲಭಾಗದಲ್ಲಿ ಹಾವುಗಳು, ನಾಯಿಗಳು ಅಥವಾ ಮಂಗಗಳನ್ನು ನೋಡಿದಾಗ, ಅವು ನಿಮಗೆ ಹಣ ಬರುತ್ತಿವೆ ಎಂದು ಸೂಚಿಸುತ್ತವೆ.

ಮಳೆಯಲ್ಲಿ ಬಿಸಿಲು
ಮಳೆಯ ನಡುವೆ ಸೂರ್ಯನು ಆಕಾಶದಲ್ಲಿ ಹೊಳೆಯುತ್ತಿರುವುದು ಶೀಘ್ರದಲ್ಲೇ ಶ್ರೀಮಂತರಾಗುವ ಸಂಕೇತವೆಂದು ಪರಿಗಣಿಸಲಾಗಿದೆ.

ಕೋಗಿಲೆ
ಕೋಗಿಲೆಯು ಮನೆಯ ಮೇಲ್ಛಾವಣಿ ಅಥವಾ ಸೂರುಗಳ ಮೇಲೆ ಕುಳಿತು ಕೂಗುತ್ತಿದ್ದರೆ, ಆರ್ಥಿಕ ಬೆಳವಣಿಗೆಯ ಸಾಧ್ಯತೆಯು ಹೆಚ್ಚಾಗುತ್ತದೆ.

ಮೊಸರು ಅಥವಾ ಹಾಲು
ಬೆಳಿಗ್ಗೆ ಎದ್ದ ತಕ್ಷಣ ಮೊಸರು ಅಥವಾ ಹಾಲನ್ನು ನೋಡುವುದು ಕೂಡ ಅದೃಷ್ಟದ ಸಂಕೇತವಾಗಿದೆ.

ಚಿನ್ನದ ಹಾವು
ರಾತ್ರಿ ಕನಸಿನಲ್ಲಿ ಬಿಳಿ ಅಥವಾ ಚಿನ್ನದ ಹಾವು ಕಾಣಿಸಿಕೊಂಡರೆ ಅದು ಅದೃಷ್ಟದ ಸಂಕೇತವಾಗಿದೆ.

ಬೀಳುವ ನಕ್ಷತ್ರಗಳು
ಬೀಳುವ ನಕ್ಷತ್ರಕ್ಕೆ ಮಾಡಿದ ಪ್ರಾರ್ಥನೆಗಳು 30 ದಿನಗಳಲ್ಲಿ ನಿಜವಾಗುತ್ತವೆ ಎಂದು ನಂಬಲಾಗಿದೆ. ಅವುಗಳ ನೋಟವು ಮಂಗಳಕರ ಸಂಕೇತವಾಗಿದೆ.

ಆನೆಯ ಸೊಂಡಿಲು
ಮನೆ ಬಾಗಿಲಿಗೆ ಬಂದ ಆನೆಯು ತನ್ನ ಸೊಂಡಿಲನ್ನು ಎತ್ತರಕ್ಕೆ ಎತ್ತುತ್ತಿದ್ದರೆ, ಆ ಮನೆಯಲ್ಲಿ ಪ್ರಗತಿ ಮತ್ತು ಬೆಳವಣಿಗೆ ಖಂಡಿತಾ ಕಂಡು ಬರುತ್ತದೆ.

Rahu-Ketu Transit: ಕೆಟ್ಟ ಗ್ರಹಗಳು ಈ 5 ರಾಶಿಗಳಿಗೆ ಕೊಟ್ಟ ವರ ನೋಡಿ..

ಕಬ್ಬು
ಮುಂಜಾನೆ ದಾರಿಯಲ್ಲಿ ಕಬ್ಬು ಕಂಡರೆ ಎಲ್ಲಿಂದಲೋ ಹಣ ಬರುತ್ತಿದೆ ಎಂಬ ಸೂಚನೆ.

ನವಿಲು
ಮನೆಯ ಸರಹದ್ದಿನಲ್ಲಿ ನವಿಲು ಕಾಣಿಸಿಕೊಂಡು ರೆಕ್ಕೆಗಳನ್ನು ಚಾಚುವುದು ಶುಭ ಸಂದರ್ಭದ ಸಂಕೇತ.

ಮುತ್ತು
ಸಮುದ್ರ ತೀರದಲ್ಲಿ ಮುತ್ತುಗಳು ಅಪರೂಪವಾಗಿ ಕಂಡುಬರುತ್ತವೆ. ಇದು ನಿಮಗೆ ಸಂಭವಿಸಿದರೆ, ನಿಮ್ಮ ಅದೃಷ್ಟವು ಬೆಳಗಲಿದೆ ಎಂದು ಅರ್ಥ ಮಾಡಿಕೊಳ್ಳಿ.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

PREV
Read more Articles on
click me!

Recommended Stories

ಈ 4 ರಾಶಿಯವರಲ್ಲಿ ಒಳ್ಳೆಯದಕ್ಕಿಂತ ಕೆಟ್ಟ ಗುಣಗಳೇ ಹೆಚ್ಚು, ದ್ವೇಷ ಸಾಧಿಸೋದ್ರಲ್ಲಿ ನಿಸ್ಸೀಮರು
ಹೊಸ ವರ್ಷದಲ್ಲಿ 3 ರಾಜಯೋಗ, 3 ರಾಶಿಗೆ ಬಹಳಷ್ಟು ಹಣ