ಮನೆಯಲ್ಲಿರುವ ಹಿರಿಯರ ಪಾದ ಮುಟ್ಟಿ ನಮಸ್ಕರಿಸುವಂತೆ ಬಾಲ್ಯದಲ್ಲಿಯೇ ನಮಗೆ ಕಲಿಸಲಾಗುತ್ತದೆ. ದೊಡ್ಡವರು ಹೇಳಿದ್ದಾರೆನ್ನುವ ಕಾರಣಕ್ಕೆ ನಾವು ಅವರಿಗೆ ನಮಸ್ಕಾರ ಮಾಡ್ತಿರುತ್ತೇವೆ. ಆದ್ರೆ ಅದ್ರಿಂದಾಗುವ ಲಾಭ ತಿಳಿದಿರೋದಿಲ್ಲ.
ಭಾರತೀಯ ಸಂಸ್ಕೃತಿಯಲ್ಲಿ ಅಸಂಖ್ಯಾತ ಪದ್ಧತಿಗಳಿವೆ. ದೇವರ ಪೂಜೆಯಿಂದ ಹಿಡಿದು ಗುರು ಹಿರಿಯರಿಗೆ ಗೌರವ ನೀಡುವವರೆಗೆ ಅನೇಕ ಪದ್ಧತಿಗಳನ್ನು ಆಚರಿಸಿಕೊಂಡು ಬರಲಾಗ್ತಿದೆ. ಈ ಪದ್ಧತಿ, ಸಂಪ್ರದಾಯದ ಹಿಂದೆ ಅದರ ಆದ ಉದ್ದೇಶವಿದೆ. ಇದು ನಮ್ಮ ಜೀವನವನ್ನು ಮತ್ತಷ್ಟು ಸರಳ ಹಾಗೂ ಸುಖಕರಗೊಳಿಸಲು ದಾರಿ ಮಾಡಿಕೊಡುತ್ತದೆ.
ಹಿಂದೂ (Hindu) ಧರ್ಮದಲ್ಲಿ ಮನೆಯ ಹಿರಿಯರಿಗೆ ಅತ್ಯುನ್ನತ ಸ್ಥಾನವಿದೆ. ಅವರನ್ನು ಭಯ- ಭಕ್ತಿಯಿಂದ ನೋಡುವ ಕಾಲವೊಂದಿತ್ತು. ಬೆಳಿಗ್ಗೆ ಎದ್ದ ತಕ್ಷಣ ಚಿಕ್ಕವರು, ಹಿರಿಯರ ಕಾಲನ್ನು ಸ್ಪರ್ಶಿಸಿ ಆಶೀರ್ವಾದ ಪಡೆಯುತ್ತಿದ್ದರು. ಯಾವುದೇ ವಿಶೇಷ ಕೆಲಸಕ್ಕೆ ಇರಲಿ ಅಥವಾ ನಿತ್ಯದ ಕೆಲಸಕ್ಕೆ ಇರಲಿ ಮನೆಯಿಂದ ಹೊರಗೆ ಹೋಗುವ ಮೊದಲು ದೇವರು (God) ಹಾಗೂ ಹಿರಿಯರಿಗೆ ನಮಸ್ಕಾರ ಮಾಡುವ ಪದ್ಧತಿ ಇತ್ತು. ಈಗ್ಲೂ ಅನೇಕರ ಮನೆಯಲ್ಲಿ ಈ ಪದ್ಧತಿ ರೂಢಿಯಲ್ಲಿದೆ. ಶುಭ ಕಾರ್ಯಗಳ ಸಂದರ್ಭದಲ್ಲಿ ತಮಗಿಂತ ಹಿರಿಯ ವ್ಯಕ್ತಿಗಳಿಗೆ ನಮಸ್ಕರಿಸಿ ಆಶೀರ್ವಾದ ಪಡೆಯಲಾಗುತ್ತದೆ. ಚಿಕ್ಕ ಮಕ್ಕಳಿಗೆ ಕೂಡ, ಎದ್ದ ತಕ್ಷಣ ಹಿರಿಯರ, ತಂದೆ – ತಾಯಿಗಳ ಆಶೀರ್ವಾದ (Blessing) ಪಡೆಯುಂತೆ ಹೇಳಿಕೊಡಲಾಗುತ್ತದೆ. ಧರ್ಮದಲ್ಲಿ ಈ ಶಾಸ್ತ್ರವನ್ನು ಸಖಾಸುಮ್ಮನೆ ಮಾಡಿಲ್ಲ. ಇದಕ್ಕೂ ಕೆಲ ಅರ್ಥವಿದೆ. ಇದ್ರಿಂದಲೂ ಅನೇಕ ಪ್ರಯೋಜನವಿದೆ. ನಾವಿಂದು ಪಾದ (Foot) ಸ್ಪರ್ಶಿಸಿ ನಮಸ್ಕಾರ ಮಾಡುವುದ್ರಿಂದ ಆಗುವ ಲಾಭವೇನು ಎಂಬುದನ್ನು ನಿಮಗೆ ಹೇಳ್ತೆವೆ.
ಹಿರಿಯರ ಪಾದ ಸ್ಪರ್ಶ : ಹಿರಿಯರ ಪಾದ ಸ್ಪರ್ಶವನ್ನು ಚರಣ ಸ್ಪರ್ಶ ಎಂದೂ ಕರೆಯಲಾಗುತ್ತದೆ. ವೇದಗಳ ಕಾಲದಿಂದಲೂ ಈ ಪದ್ಧತಿ ನಡೆದುಕೊಂಡು ಬಂದಿದೆ. ಹಿಂದೂ ಧರ್ಮದಲ್ಲಿ ಹಿರಿಯರ ಪಾದಗಳನ್ನು ಸ್ಪರ್ಶಿಸುವುದು ಗೌರವವನ್ನು ವ್ಯಕ್ತಪಡಿಸುವ ಒಂದು ಮಾರ್ಗವಾಗಿದೆ. ಹಿರಿಯರ ಪಾದಗಳನ್ನು ಸ್ಪರ್ಶಿಸುವುದು ವ್ಯಕ್ತಿ ಕಲಿತ ಮೌಲ್ಯಗಳನ್ನು ತೋರಿಸುತ್ತದೆ. ನೀವು ಹಿರಿಯರ ಪಾದಗಳನ್ನು ಸ್ಪರ್ಶಿಸಿದರೆ ಅವರು ಅದಕ್ಕೆ ಪ್ರತಿಯಾಗಿ ಆಶೀರ್ವಾದ ನೀಡುತ್ತಾರೆ. ಅವರ ಆಶೀರ್ವಾದ ನಮ್ಮ ಯಶಸ್ಸಿಗೆ ಕಾರಣವಾಗುತ್ತದೆ.
MAKAR SANKRANTI 2023: ಸೂರ್ಯನಂತೆ ಹೊಳೆವ 4 ರಾಶಿಗಳ ಅದೃಷ್ಟ
ಹಿರಿಯರ ಪಾದ ಸ್ಪರ್ಶದಿಂದ ಆಗುವ ಪ್ರಯೋಜನಗಳು :
ದೇಹಕ್ಕೆ ವ್ಯಾಯಾಮ (Physical Exercise) : ಮೊದಲೇ ಹೇಳಿದಂತೆ ಹಿರಿಯರ ಪಾದಗಳನ್ನು ಸ್ಪರ್ಶಿಸುವುದು ಗೌರವದ ಸಂಕೇತ. ನಾವು ಬಗ್ಗಿ ಅವರ ಪಾದ ಮುಟ್ಟುವುದ್ರಿಂದ ನಮ್ಮ ದೇಹಕ್ಕೆ ವ್ಯಾಯಾಮವಾಗುತ್ತದೆ. ಸಂಪೂರ್ಣವಾಗಿ ಕೆಳಗೆ ಬಾಗಿ ನಾವು ಹಿಡಿಯರ ಪಾದ ಮುಟ್ಟುವುದ್ರಿಂದ ನಮ್ಮ ಇಡೀ ದೇಹಕ್ಕೆ ವ್ಯಾಯಾಮ ಸಿಗುತ್ತದೆ. ಶಕ್ತಿಯ ಹರಿವು ಕೂಡ ಮೇಲಿನಿಂದ ಕೆಳಕ್ಕಾಗುತ್ತದೆ.
ಧನಾತ್ಮಕ ಶಕ್ತಿಯ ಪ್ರವೇಶ (Positive Energy) : ಗೌರವಾನ್ವಿತರಾದವರ ಪಾದಗಳನ್ನು ಸ್ಪರ್ಶಿಸುವುದರಿಂದ ಅವರ ಧನಾತ್ಮಕ ಶಕ್ತಿ ನಮ್ಮ ದೇಹವನ್ನು ಪ್ರವೇಶಿಸುತ್ತದೆ. ಇದ್ರಿಂದ ನಾವು ಸಂಪೂರ್ಣ ಪ್ರಯೋಜನಗಳನ್ನು ಪಡೆಯುತ್ತೇವೆ ಎಂದು ನಂಬಲಾಗಿದೆ. ನಮ್ಮ ದೇಹದಲ್ಲಿ ನಕಾರಾತ್ಮಕ ಮತ್ತು ಸಕಾರಾತ್ಮಕ ಶಕ್ತಿಯ ಹರಿವು ಇರುತ್ತದೆ. ದೇಹದ ಎಡಭಾಗವು ನಕಾರಾತ್ಮಕ ಪ್ರವಾಹವನ್ನು ರವಾನಿಸುತ್ತದೆ ಮತ್ತು ಬಲಭಾಗವು ಧನಾತ್ಮಕ ಪ್ರವಾಹವನ್ನು ರವಾನಿಸುತ್ತದೆ. ಹಾಗಾಗಿಯೇ ಹಿರಿಯರ ಪಾದವನ್ನು ಸ್ಪರ್ಶಿಸುವಾಗ ನಾವು ಕೈಗಳನ್ನು ಕ್ರಾಸ್ ಮಾಡ್ಬೇಕು ಎನ್ನಲಾಗುತ್ತದೆ. ಹಿರಿಯರ ಪಾದ ಸ್ಪರ್ಶಿಸಿದಾಗ ಅವರ ಧನಾತ್ಮಕ ಶಕ್ತಿ ನಮ್ಮ ದೇಹವನ್ನು ಕೈಗಳ ಮೂಲಕ ಪ್ರವೇಶ ಮಾಡುತ್ತದೆ. ಹಾಗಾಗಿಯೇ ಸ್ಪರ್ಶಿಸಿ ನಮಸ್ಕರಿಸಲು ಸಲಹೆ ನೀಡಲಾಗುತ್ತದೆ.
ಪತಿ ಪತ್ನಿ ನಡುವೆ ಕಲಹ ತಂದಿಡೋ ಅಶುಭ ಯೋಗಗಳು! ಪರಿಹಾರವಿಲ್ಲಿದೆ..
ಚರಣಸ್ಪರ್ಶನ ಮಾಡುವುದು ಹೇಗೆ? : ಹಿರಿಯರಿಗೆ ಅಥವಾ ಗೌರವಾನ್ವಿತ ವ್ಯಕ್ತಿಗೆ ನಮಸ್ಕರಿಸುವ ವೇಳೆ ನಿಮ್ಮ ಮೊಣಕಾಲುಗಳನ್ನು ಬಗ್ಗಿಸಬಾರದು. ದೇಹದ ಮೇಲಿನ ಭಾಗವನ್ನು ಹಿಗ್ಗಿಸಿ, ತೋಳುಗಳನ್ನು ಮುಂದಕ್ಕೆ ಚಾಚಿ, ಹಿರಿಯರ ಪಾದವನ್ನು ಸ್ಪರ್ಶಿಸಬೇಕು. ಬಲಗೈ ಹಿರಿಯರ ಎಡ ಪಾದ ಮತ್ತು ಎಡಗೈ ಹಿರಿಯರ ಬಲ ಪಾದವನ್ನು ಸ್ಪರ್ಶಿಸುವಂತೆ ನೋಡಿಕೊಳ್ಳಬೇಕು. ಆಗ ಹಿರಿಯರು ತಮ್ಮ ಬಲಗೈನಿಂದ ನಿಮ್ಮ ತಲೆಯ ಮೇಲೆ ಕೈ ಇಡುತ್ತಾರೆ.