ಅಣ್ಣ ರಾವಣನ ಸಾವಿಗೆ ಸಂಚು ಮಾಡಿದಳೇ ಶೂರ್ಪನಖಿ?!

By Suvarna News  |  First Published May 9, 2022, 4:42 PM IST

ರಾವಣನ ಸಹೋದರಿ ಶೂರ್ಪನಖಿಯದು ರಾಮಾಯಣದಲ್ಲಿ ಮಹತ್ವದ ಪಾತ್ರ. ಒಂದು ರೀತಿಯಲ್ಲಿ ನೋಡಿದರೆ ರಾಮ ರಾವಣ ಯುದ್ಧಕ್ಕೆ ಕಾರಣವಾದವಳೇ ಆಕೆ. ಅವಳು ಲಕ್ಷ್ಮಣನನ್ನು ಮೋಹಿಸಿದಳು ಎಂದು ಬಹುತೇಕರು ನಂಬಿದ್ದಾರೆ. ಆದರೆ, ಅಸಲೀ ಕತೆಯೇ ಬೇರೆ ಇದೆ. ಶೂರ್ಪನಖಿಯ ಕುರಿತ ಆಸಕ್ತಿಕರ ಸಂಗತಿಗಳು ಇಲ್ಲಿವೆ. 


ರಾಮಾಯಣ(Ramayana)ವು ಜಗತ್ಪಸಿದ್ಧ ಮಹಾಕಾವ್ಯ. ಇದು ಕೇವಲ ರಾಮ ಸೀತೆಯ ಪ್ರೇಮಕತೆಯಲ್ಲ, ರಾಮ(Lord Rama)ನ ಆದರ್ಶ ವ್ಯಕ್ತಿತ್ವದ ಕತೆಯಷ್ಟೆಯೂ ಅಲ್ಲ, ಬಹಳ ವೈವಿಧ್ಯಮಯವಾದ ಭಾವಲೋಕವನ್ನಿದು ಒಳಗೊಂಡಿದೆ. ಕೋಪತಾಪ, ಹೊಟ್ಟೆಕಿಚ್ಚು, ಪ್ರೀತಿ, ಕರುಣೆ, ಸಹನೆ, ಕ್ಷಮೆ, ನೋವುನಲಿವುಗಳೆಲ್ಲವೂ ಇದರಲ್ಲಡಗಿವೆ. ಇಂಥ ಅದ್ಭುತ ಮಹಾಕಾವ್ಯದ ಪ್ರಮುಖ ಪಾತ್ರಗಳಲ್ಲೊಂದು ಶೂರ್ಪನಖಿ(Shoorpanakha). 
ರಾಮ, ಲಕ್ಷ್ಮಣರನ್ನು ಮೋಹಿಸಿ ಮೂಗು ಕುಯ್ಯಿಸಿಕೊಂಡ ಶೂರ್ಪನಖಿಯ ಕತೆ ಯಾರಿಗೆ ತಾನೇ ಗೊತ್ತಿಲ್ಲ? ಒಂದು ರೀತಿಯಲ್ಲಿ ನೋಡಿದರೆ ಇಡೀ ರಾಮಾಯಣಕ್ಕೆ ಕಾರಣವಾದ ಎರಡು ಪಾತ್ರಗಳಲ್ಲಿ ಶೂರ್ಪನಖಿಯೂ ಒಬ್ಬಳು. ಇನ್ನೊಬ್ಬಳು ಕೈಕೇಯಿ. 

ರಾವಣ(Ravan)ನ ತಂಗಿಯಾಗಿ ಗುರುತಿಸಿಕೊಂಡಿರುವ ಶೂರ್ಪನಖಿಯು ಋಷಿ ವಿಶ್ರವ ಹಾಗೂ ಅವರ ಎರಡನೇ ಪತ್ನಿ ಕೈಕೇಸಿಯ ಕೊನೆಯ ಮಗಳು. ಆಕೆಯ ಹುಟ್ಟು ಹೆಸರು ಮೀನಾಕ್ಷಿ ದೀಕ್ಷ. ನಂತರದಲ್ಲಿ ಮೊರದಂಥ ಉಗುರುಗಳನ್ನುಳ್ಳವಳು ಎಂಬ ಕಾರಣಕ್ಕೆ ಶೂರ್ಪನಖಿಯಾಗಿ ಬದಲಾಯಿತು. ಶೂರ್ಪನಖಿಯ ಕುರಿತ ಕೆಲ ಆಸಕ್ತಿಕರ ಕತೆಗಳು, ವಿಚಾರಗಳನ್ನಿಲ್ಲಿ ನೀಡಲಾಗಿದೆ. 

Tap to resize

Latest Videos

ಸೀತೆಯ ಅಪಹರಣಕ್ಕೆ ಕಾರಣಕರ್ತೆ
ಶೂರ್ಪನಖಿಯನ್ನು ದುಷ್ಟಬುದ್ಧಿ ಎಂಬ ರಾಕ್ಷಸನಿಗೆ ಮದುವೆ ಮಾಡಿಕೊಡಲಾಗಿತ್ತು. ದುಷ್ಟಬುದ್ದಿಯನ್ನು ರಾವಣ ಕೊಲ್ಲಿಸಿದ ನಂತರ ಅಣ್ಣನ ಮೇಲೆ ಸಿಟ್ಟಾಗಿ ಶೂರ್ಪನಖಿ ದಂಡಕಾರಣ್ಯ ದ ಕಾಡುಗಳಲ್ಲಿ ತಿರುಗಾಡುತ್ತಿದ್ದಳು. ಹೀಗೆ ತಿರುಗಾಡುತ್ತಿದ್ದಾಗ ರಾಮನನ್ನು ಕಂಡು ಮೋಹಿಸುತ್ತಾಳೆ. ತನ್ನನ್ನು ಮದುವೆಯಾಗಲು ಪೀಡಿಸುತ್ತಾಳೆ. ಆಗ ರಾಮನು ತನಗಾಗಲೇ ವಿವಾಹವಾಗಿದೆ ಎಂದು ಹೇಳಿ ತಮ್ಮ ಲಕ್ಷ್ಮಣ(Lakshman)ನಲ್ಲಿಗೆ ಆಕೆಯನ್ನು ಕಳುಹಿಸುತ್ತಾನೆ. ಅವನೂ ಒಪ್ಪದಿದ್ದಾಗ ಸಿಟ್ಟಾಗಿ ಸೀತೆಯ ಮೇಲೆ ಏರಿ ಹೋಗುತ್ತಾಳೆ. ಇದನ್ನು ತಡೆದ ಲಕ್ಷಣ ಕೋಪದಲ್ಲಿ ಶೂರ್ಪನಖಿಯ ಮೂಗು ಕತ್ತರಿಸುತ್ತಾನೆ. 

ಈ ಅಪಮಾನ ತಾಳಲಾಗದ ಶೂರ್ಪನಖಿ ಅಣ್ಣ ಖರಾಸುರನಲ್ಲಿಗೆ ಹೋಗಿ ದೂರು ಕೊಡುತ್ತಾಳೆ. ಖರಾಸುರನು ರಾಮನೊಂದಿಗೆ ಯುದ್ದ ಮಾಡಿ ಜೀವ ಬಿಡುತ್ತಾನೆ. ಅಲ್ಲಿಂದ ನೇರ ಶೂರ್ಪನಖಿ ತನ್ನ ಅಣ್ಣ ರಾವಣನಲ್ಲಿ ದೂರು ಕೊಡಲು ಲಂಕೆಗೆ ಹೋಗುತ್ತಾಳೆ. ರಾವಣನಲ್ಲಿ ತನ್ನ ಬವಣೆಯನ್ನು ಹೇಳಿಕೊಂಡು ಸೀತೆಯ ಗುಣ ಹಾಗೂ ಸೌಂದರ್ಯವನ್ನು ಉತ್ಪ್ರೇಕ್ಷೆ ಮಾಡಿ ವರ್ಣಿಸಿ ರಾವಣನು ಸೀತೆಯನ್ನು ಅಪಹರಿಸುವಂತೆ ಮಾಡುತ್ತಾಳೆ. ಇದು ಮುಂದೆ ರಾಮ ರಾವಣರ ಯುದ್ಧದಲ್ಲಿ ಕೊನೆಗೊಳ್ಳುತ್ತದೆ.

ಸುಂದರಿ
ಮಹಾಕಾವ್ಯದಲ್ಲಿ ಹೆಚ್ಚು ತಪ್ಪಾಗಿ ಅರ್ಥೈಸಲ್ಪಟ್ಟ ಪಾತ್ರಗಳಲ್ಲಿ ಅವಳು ಒಬ್ಬಳು. ಸಾಮಾನ್ಯವಾಗಿ ಶೂರ್ಪನಖಿ ಎಂದರೆ ರಾಕ್ಷಸಿ, ವಿಕಾರವಾಗಿದ್ದವಳು, ಅವಳು ತುಂಬಾ ಕಪ್ಪು ಮತ್ತು ಕೊಳಕು ಎಂದು ಅಂದುಕೊಳ್ಳುವವರೇ ಹೆಚ್ಚು. ಆದರೆ, ನಿಜವಾಗಿ ಶೂರ್ಪನಖಿ ಬಹಳ ಸುಂದರಿ(pretty). ತೆಳು ಕಾಯದ ಕಂದು ಬಣ್ಣದ ಕಣ್ಣಿನ ದಟ್ಟ ಕಪ್ಪು ಉದ್ದ ಕೂದಲಿನ, ಇಂಪಾದ ದನಿಯ ಸುಂದರಿ ಶೂರ್ಪನಖಿ ಎಂದು ಮಹಾಕಾವ್ಯವೇ ವರ್ಣಿಸುತ್ತದೆ. ಆಕೆ ತನ್ನ ತಾಯಿಯಂತೆ ಸುಂದರಳಾಗಿದ್ದಳು. ಆದರೆ, ಶೂರ್ಪನಖಿಗೆ ರಾಮನ ಪರಿಚಯವಾಗುವ ಸಮಯಕ್ಕಾಗಲೇ ಅವಳು ಮಧ್ಯವಯಸ್ಕ ಮಹಿಳೆಯಾಗಿದ್ದಳು. ಹೀಗಾಗಿ ಯುವ ಸೀತೆಯಷ್ಟು ಆಕರ್ಷಕವಾಗಿರಲಿಲ್ಲ.

ಭಾರತ ನೆಲ ಕಂಡ ಅಪರೂಪದ ದಾರ್ಶನಿಕ ಆದಿ ಶಂಕರಾಚಾರ್ಯರು

ರಾವಣನ ವಧೆಯ ಸಂಚು
ಎಲ್ಲರೂ ತಿಳಿದಿರುವಂತೆ ಅವಳು ಅಯೋಧ್ಯೆ ರಾಜಕುಮಾರರನ್ನು ಮದುವೆಯಾಗಲು ಬಯಸಲಿಲ್ಲ. ಇದು ರಾವಣನನ್ನು ಕೊಲ್ಲಲು ಮತ್ತು ದೀರ್ಘಕಾಲದವರೆಗೆ ರಾಜನನ್ನು ಕೊನೆಗೊಳಿಸಲು ಅವಳು ರೂಪಿಸಿದ ಸಂಚಾಗಿತ್ತು. ಹೌದು, ರಾವಣನು ತನ್ನ ಪತಿ ದುಷ್ಟಬುದ್ಧಿಯನ್ನು ಕೊಲ್ಲಿಸಿದ್ದ ಕೋಪ ಶೂರ್ಪನಖಿಗಿತ್ತು. ರಾಮನು ತಾಟಕ ಮತ್ತು ಸುಬಾಹುವನ್ನು ಕೊಂದನೆಂದು ತಿಳಿದ ನಂತರ, ರಾಮನು ಅಜೇಯನು ಮತ್ತು ರಾವಣನನ್ನು ಕೊಲ್ಲಬಲ್ಲನು ಎಂದು ಅವಳು ಭಾವಿಸಿದಳು. ಹೀಗಾಗಿ, ರಾವಣ ಸೀತೆಯನ್ನು ಅಪಹರಿಸುವಂತೆ ಮಾಡಿ ಯುದ್ಧಕ್ಕೆ ನಾಂದಿ ಹಾಡಿದಳು. 

ರಾಕ್ಷಸಿ ಗುಣವಲ್ಲ
ಶೂರ್ಪನಖಾಗೆ ಹೆಚ್ಚಿನ ರಾಕ್ಷಸ ಪ್ರವೃತ್ತಿ ಇರಲಿಲ್ಲ. ಅವಳು ಇತರ ರಾಕ್ಷಸರಿಗಿಂತ ಭಿನ್ನವಾಗಿ ಪ್ರೀತಿ ಮತ್ತು ಮೌಲ್ಯಯುತ ಭಾವನೆಗಳಿಗಾಗಿ ಬಾಯಾರಿದ್ದಳು. ಆಕೆಗೆ ರಾಮ, ಲಕ್ಷ್ಮಣರ ಮೇಲೆ ಮನಸಾದ ಕಾರಣಕ್ಕೆ ಅವಳು ಕೆಟ್ಟವಳಾಗಬೇಕಿಲ್ಲ ಎನ್ನುತ್ತಾರೆ ಬಹಳಷ್ಟು ವಿಮರ್ಶಕರು. ಆದರೆ, ರಾಮ ಲಕ್ಷ್ಮಣರು ಅವಳ ಭಾವನೆಗಳನ್ನು ಅಪಹಾಸ್ಯ ಮಾಡಿದರು. ಅವಳ ದೃಷ್ಟಿಯಿಂದ ನೋಡಿದಾಗ ಅದು ತಪ್ಪಾಗಿಯೇ ಕಾಣುವುದು. ಶೂರ್ಪನಖಿಗೆ ಶಂಬ್ರಿ ಎಂಬ ಮಗನಿದ್ದನು, ಅವನು ಕಾಡಿನಲ್ಲಿ ಆಕಸ್ಮಿಕವಾಗಿ ಲಕ್ಷ್ಮಣನಿಂದ ಕೊಲ್ಲಲ್ಪಟ್ಟನು.

ಸೀತೆಯ ಭೇಟಿ
ರಾಮಾಯಣದ ಒಂದು ಆವೃತ್ತಿಯ ಪ್ರಕಾರ, ರಾಮನು ಸೀತೆಯನ್ನು ಗಡಿಪಾರು ಮಾಡಿದ ನಂತರ ಶೂರ್ಪನಖಾ ಸೀತೆಯನ್ನು ಭೇಟಿಯಾದಳು. ಶೂರ್ಪನಖಾಗೆ ಸೀತೆ ಇನ್ನೂ ಕಹಿಯಾಗಿದ್ದರೂ, ಅವಳು ಅವಳನ್ನು ನೋಯಿಸಲಿಲ್ಲ. ರಾಮನು ತನ್ನ ಜೊತೆ ವ್ಯವಹರಿಸಿದಂತೆಯೇ ಸೀತೆಯೊಂದಿಗೂ ನಡೆದುಕೊಂಡನು ಎಂದು ಆಕೆ ಹೇಳಿದಳು. ಸ್ವಲ್ಪ ಸಮಯದ ನಂತರ, ಸೀತೆ ಮತ್ತು ಶೂರ್ಪನಖಿ ಇಬ್ಬರೂ ಸ್ನೇಹಿತೆಯರಾದರು.

ಯಾರು ಈ Laughing Buddha? ಮನೆಯಲ್ಲಿಡುವ ಲಾಭಗಳೇನು?

ಕೃಷ್ಣನ ಪತ್ನಿ
ಬ್ರಹ್ಮವೈವ್ರತ ಪುರಾಣದ ಪ್ರಕಾರ, ಮುಂದಿನ ಜನ್ಮದಲ್ಲಿ ರಾಮನನ್ನು ತನ್ನ ಪತಿಯಾಗಿ ಪಡೆಯಲು ಶೂರ್ಪನಖಾ ಪ್ರಾರ್ಥನೆಯನ್ನು ಸಲ್ಲಿಸಿ ಬ್ರಹ್ಮನಲ್ಲಿ ತಪಸ್ಸು ಮಾಡಿದಳು. ಹಾಗಾಗಿ ನಂತರ ಕುಬ್ಜಾ ಆಗಿ ಪುನರ್ಜನ್ಮ ಪಡೆದಳು, ಅವಳು ಕೃಷ್ಣನ ಬಗ್ಗೆ ಪ್ರಾಮಾಣಿಕ ಭಕ್ತಿ ಹೊಂದಿದ್ದಳು ಮತ್ತು ಕೃಷ್ಣನ 16,108 ಪತ್ನಿಯರಲ್ಲಿ ಒಬ್ಬಳಾದಳು.

click me!