ಈ ವರ್ಷ ಸುಧೀರ್ಘ ಶ್ರಾವಣ: ಈ ಮಾಸವು ಶಿವನಿಗೆ ಏಕೆ ಪ್ರಿಯ?

By Sushma HegdeFirst Published Jun 29, 2023, 2:00 PM IST
Highlights

ಶ್ರಾವಣ ಮಾಸವು ಹಿಂದೂಗಳಿಗೆ ಬಹಳ ಮಹತ್ವ. ಶ್ರಾವಣ ಮಾಸವು ವಿಶೇಷವಾಗಿ ಭಗವಾನ್ ಶಂಕರನಿಗೆ ಅಂದರೆ ಮಹಾದೇವನಿಗೆ ಸಮರ್ಪಿತವಾಗಿದೆ. ಆದ್ದರಿಂದ ಈ ಅವಧಿಯಲ್ಲಿ ಮಹಾದೇವನನ್ನು ವಿಶೇಷವಾಗಿ ಪೂಜಿಸಲಾಗುತ್ತದೆ. ಶ್ರಾವಣ ಮಾಸ (Shravan month)  ಶಿವನಿಗೆ ಏಕೆ ಪ್ರಿಯ ಎಂಬ ಮಾಹಿತಿ ಇಲ್ಲಿದೆ.

ಶ್ರಾವಣ ಮಾಸವು ಹಿಂದೂಗಳಿಗೆ ಬಹಳ ಮಹತ್ವ. ಶ್ರಾವಣ ಮಾಸವು ವಿಶೇಷವಾಗಿ ಭಗವಾನ್ ಶಂಕರನಿಗೆ ಅಂದರೆ ಮಹಾದೇವನಿಗೆ ಸಮರ್ಪಿತವಾಗಿದೆ. ಆದ್ದರಿಂದ ಈ ಅವಧಿಯಲ್ಲಿ ಮಹಾದೇವನನ್ನು ವಿಶೇಷವಾಗಿ ಪೂಜಿಸಲಾಗುತ್ತದೆ. ಶ್ರಾವಣ ಮಾಸ (Shravan month)  ಶಿವನಿಗೆ ಏಕೆ ಪ್ರಿಯ ಎಂಬ ಮಾಹಿತಿ ಇಲ್ಲಿದೆ.

ಶ್ರಾವಣದಲ್ಲಿ ಪ್ರಕೃತಿಯ ತೆರೆದ ಸೌಂದರ್ಯ ಮನಸೆಳೆಯುತ್ತದೆ. ಅಂತೆಯೇ, ಈ ಸುಂದರವಾದ ಶ್ರಾವಣ ಮಾಸವು ಭಗವಾನ್ ಮಹಾದೇವನಿಗೆ ಬಹಳ ಪ್ರಿಯವಾಗಿದೆ. ಆದುದರಿಂದ ಶ್ರಾವಣದ ಸೋಮವಾರದಂದು ಉಪವಾಸವಿದ್ದು ಮಹಾದೇವನನ್ನು ಮೆಚ್ಚಿಸಬಹುದು. ಈ ಅವಧಿಯಲ್ಲಿ ಭಗವಾನ್ ಮಹಾದೇವ (Mahadeva) ನನ್ನು ಪೂಜಿಸುವುದರಿಂದ ಆತನ ಕೃಪೆಯು ದೊರಕಲಿದ್ದು, ಭಕ್ತರ ಇಷ್ಟಾರ್ಥಗಳು ಈಡೇರುತ್ತವೆ.

Latest Videos

ಈ ವರ್ಷ ಎರಡು ತಿಂಗಳ ಶ್ರಾವಣ ಮಾಸ

ಈ ವರ್ಷ ಮಹಾದೇವನ ಆರಾಧನೆಗೆ ಭಕ್ತರಿಗೆ ಹೆಚ್ಚಿನ ಅವಕಾಶ ದೊರೆಯಲಿದೆ. ಏಕೆಂದರೆ ಈ ವರ್ಷ ಶ್ರಾವಣ ಮಾಸ ಎರಡು ತಿಂಗಳಾಗಲಿದೆ. 19 ವರ್ಷಗಳ ನಂತರ ಯೋಗ ಬಂದಿದೆ. 

ಈ ವರ್ಷ ಹೆಚ್ಚುವರಿ ಮಾಸ ಇರುವುದರಿಂದ ಶ್ರಾವಣ ಮಾಸ 59 ದಿನ ಇರುತ್ತದೆ. ಸುಮಾರು 19 ವರ್ಷಗಳ ನಂತರ, ಶ್ರಾವಣ ಮಾಸ ಇಷ್ಟು ದೀರ್ಘಾವಧಿಗೆ ಅಂದರೆ 2 ತಿಂಗಳು ಬಂದಿದೆ.

ಹಿಂದೂ ಪಂಚಾಂಗದ ಪ್ರಕಾರ, ಶ್ರಾವಣವು ಜುಲೈ 18, 2023 ರಿಂದ ಪ್ರಾರಂಭವಾಗುತ್ತದೆ ಮತ್ತು ಶ್ರಾವಣ ಮಾಸವು ಸೆಪ್ಟೆಂಬರ್ 15 ರಂದು ಇರುತ್ತದೆ. ಅಂದರೆ ಈ ವರ್ಷ ಸುಮಾರು 2 ತಿಂಗಳ ಕಾಲ ಮಹಾದೇವನನ್ನು ಪೂಜಿಸಿ ಸೇವೆ ಮಾಡುವ ಭಾಗ್ಯ ಭಕ್ತರಿಗೆ ಲಭಿಸಿದೆ. ಪ್ರತಿ ವರ್ಷ ಶ್ರಾವಣದಲ್ಲಿ 4-5 ಶ್ರಾವಣ ಸೋಮವಾರಗಳಿರುತ್ತವೆ. ಈ ವರ್ಷ ಶ್ರಾವಣದಲ್ಲಿ 8 ಶ್ರಾವಣ ಸೋಮವಾರ (Monday) ಗಳಿವೆ. ಜುಲೈ 24 ಮೊದಲ ಶ್ರಾವಣ ಸೋಮವಾರ ಮತ್ತು ಸೆಪ್ಟೆಂಬರ್ 11 ಕೊನೆಯ ಶ್ರಾವಣ ಸೋಮವಾರವಾಗಿರುತ್ತದೆ.

ಇವರೇ ಅದೃಷ್ಟವಂತರು; ಪಾದದ ಅಡಿಭಾಗದ ಮೇಲೆ ನಿಂತಿದೆ ನಿಮ್ಮ ಭವಿಷ್ಯ..!

 

ಮಹಾದೇವನಿಗೆ ಶ್ರಾವಣ ಮಾಸ ಏಕೆ ಪ್ರಿಯ?

ಪುರಾಣದ ಕಥೆಯ ಪ್ರಕಾರ, ದಕ್ಷಪುತ್ರಿ ಸತಿಯು ತನ್ನ ಪ್ರಾಣವನ್ನು ತ್ಯಜಿಸಿದಾಗ, ಮಹಾದೇವನ ಮೇಲೆ ದುಃಖದ ಪರ್ವತವು ಬಿದ್ದಿತು. ಅವನು ತೀವ್ರ ತಪಸ್ಸಿನಲ್ಲಿ ತನ್ನನ್ನು ತಾನು ತೊಡಗಿಸಿಕೊಂಡನು. ಆಗ ಸತಿಯು ಹಿಮಾಲಯದ ಮಗಳು ಪಾರ್ವತಿಯ ರೂಪದಲ್ಲಿ ಜನ್ಮವಿತ್ತಳು ಮತ್ತು ಮಹಾದೇವನಿಗೆ ತನ್ನ ಪತಿಯಾಗಲು ಕಠಿಣ ತಪಸ್ಸು ಮಾಡಿದಳು. ಪಾರ್ವತಿಯ ಭಕ್ತಿಗೆ ಸಂತಸಗೊಂಡ ಮಹಾದೇವನು ಅವಳ ಆಸೆಯನ್ನು ಪೂರೈಸಿದನು. ನಂತರ ಪಾರ್ವತಿಯನ್ನು ವಿವಾಹವಾದರು ಎಂಬ ಪ್ರತೀತಿ ಇದೆ.

ಈ ಮಾಸದಲ್ಲಿ ಮಹಾದೇವ ಮತ್ತು ಪಾರ್ವತಿ ಮಾತೆಯರು ಒಂದಾಗುವುದರಿಂದ ಈ ಮಾಸವನ್ನು ಮಹಾದೇವನಿಗೆ ಪ್ರಿಯವೆಂದು ಪರಿಗಣಿಸಲಾಗಿದೆ. ಹಾಗಾಗಿ ಈ ಮಾಸದಲ್ಲಿ ಮಹಾದೇವನೊಂದಿಗೆ ಪಾರ್ವತಿ ದೇವಿಯನ್ನೂ ಪೂಜಿಸಲಾಗುತ್ತದೆ. ಆದ್ದರಿಂದಲೇ ಶ್ರಾವಣ ಮಾಸದಲ್ಲಿ ಶ್ರಾವಣ ಸೋಮವಾರದ ವ್ರತ (Vrata) ದ ಜೊತೆಗೆ  ಪಾರ್ವತಿ ಮಾತೆಯನ್ನೂ ಪೂಜಿಸಲಾಗುತ್ತದೆ.

ವಿಷ ಕುಡಿದ ವಿಷಕಂಠ

ಶ್ರಾವಣ ಮಾಸದ ಬಗ್ಗೆ ಪುರಾಣಗಳಲ್ಲಿ ವಿವಿಧ ಕಥೆಗಳು ಕಂಡುಬರುತ್ತವೆ. ಸಹಜವಾಗಿ, ಮಹಾದೇವನ ಭಕ್ತಿಯ ಮಹಿಮೆ ಅಥವಾ ಮಹಾದೇವನ ಪೂಜೆಯ ಮಹತ್ವವನ್ನು ವಿವಿಧ ಕಥೆಗಳ ಮೂಲಕ ನಮಗೆ ಮಾಹಿತಿ ದೊರೆಯುತ್ತದೆ.

ಕೆಲವು ಪೌರಾಣಿಕ ಕಥೆಗಳ ಪ್ರಕಾರ, ಮಹಾದೇವನು ಶ್ರಾವಣ ಮಾಸದಲ್ಲಿ ಸಾಗರವನ್ನು ಮಂಥನ ಮಾಡಿದನು. ಈ ವೇಳೆ ಮಹಾದೇವನು ಸಮುದ್ರ  (sea) ಮಂಥನದಿಂದ ಹೊರಬಂದ ಹಲಾಲ್ ಅಂದರೆ ವಿಷವನ್ನು ಕುಡಿದು ಸೃಷ್ಟಿ ಮತ್ತು ದೇವತೆಗಳನ್ನು ರಕ್ಷಿಸಿದನು.

ವಿಷ ಸೇವಿಸಿದ ಬಳಿಕ ಅದನ್ನು ತನ್ನ ಗಂಟಲಲ್ಲಿ ಶೇಖರಿಸಿಕೊಂಡಿದ್ದಾನೆ. ಆಗ ದೇವತೆಗಳು ಈ ವಿಷದ ಪ್ರಭಾವವನ್ನು ಕಡಿಮೆ ಮಾಡಲು ಮಹಾದೇವನಿಗೆ ಜಲಾಭಿಷೇಕವನ್ನು ಮಾಡಿದರು. ಅದಕ್ಕಾಗಿಯೇ ಶ್ರಾವಣಮಾಸದಲ್ಲಿ ಮಹಾದೇವನಿಗೆ ಅಭಿಷೇಕ (anointing) ಮಾಡಿ ಸಂತೈಸುತ್ತಾರೆ.

ಈ ರಾಶಿಯವರು ಜಾಸ್ತಿ ಚಿಂತೆ ಮಾಡ್ತಾರೆ; ನೀವು ಅವರಲ್ಲಿ ಒಬ್ಬರಾ?

 

ಶಿವನಿಗೆ ಬ್ರಹ್ಮಾಂಡದ ಜವಾಬ್ದಾರಿ

ಶಾಸ್ತ್ರಗಳಲ್ಲಿ ವಿವರಿಸಿದಂತೆ ಶ್ರಾವಣಮಾಸದ ಸಮಯದಲ್ಲಿ ಭಗವಾನ್ ವಿಷ್ಣುವು ಯೋಗ ನಿದ್ರೆಗೆ ಹೋಗುತ್ತಾನೆ. ವಿಷ್ಣುವು ಯೋಗ ನಿದ್ರೆ (sleep) ಯಲ್ಲಿರುವುದರಿಂದ, ಶಿವನು ಬ್ರಹ್ಮಾಂಡವನ್ನು ನಡೆಸುವ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಾನೆ. ಆದ್ದರಿಂದಲೇ ಮಹಾದೇವನನ್ನು ಶ್ರಾವಣದ ಮುಖ್ಯಸ್ಥನೆಂದು ಪರಿಗಣಿಸಲಾಗಿದೆ.

click me!