ಭಟ್ಕಳ ತಾಲೂಕಿನಾದ್ಯಂತ ಶನಿವಾರ ಶಿವಾಲಯ ಹಾಗೂ ಇನ್ನಿತರ ದೇವಸ್ಥಾನಗಳಲ್ಲಿ ಶ್ರದ್ಧಾಭಕ್ತಿಯಿಂದ ಮಹಾಶಿವರಾತ್ರಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಭಟ್ಕಳ (ಫೆ.19) : ತಾಲೂಕಿನಾದ್ಯಂತ ಶನಿವಾರ ಶಿವಾಲಯ ಹಾಗೂ ಇನ್ನಿತರ ದೇವಸ್ಥಾನಗಳಲ್ಲಿ ಶ್ರದ್ಧಾಭಕ್ತಿಯಿಂದ ಮಹಾಶಿವರಾತ್ರಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಪಂಚ ಶಿವಕ್ಷೇತ್ರಗಳಲ್ಲೊಂದಾದ ಮುರ್ಡೇಶ್ವರ(Murdeshwar)ದಲ್ಲಿ ಶಿವರಾತ್ರಿ ಪ್ರಯುಕ್ತ ಶನಿವಾರ ಬೆಳಗಿನಜಾವದಿಂದ ರಾತ್ರಿವರೆಗೂ ಭಕ್ತಸಾಗರವೇ ಹರಿದು ಬಂದಿತ್ತು. ಎಲ್ಲರೂ ಶ್ರೀ ಮುರ್ಡೇಶ್ವರನಿಗೆ ಪೂಜೆ ಸಲ್ಲಿಸಿದರು. ಶ್ರೀ ದೇವರಿಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ಸರ್ವ ದೇವರ ಪೂಜೆ, ಮಹಾಪೂಜೆ ನೆರವೇರಿಸಲಾಯಿತು.
Panini Maharshi: ಪಾಣಿನಿಯೇ ವಿಶ್ವದ ಮೊದಲ ಕಂಪ್ಯೂಟರ್ ತಂತ್ರಜ್ಞಾನಿ: ತರಳಬಾಳು ಶ್ರೀ...
ಸಂಜೆ ಶ್ರೀ ದೇವರ ಸ್ವರ್ಣ ರಥೋತ್ಸವ ವಿಜೃಂಭಣೆಯಿಂದ ನೆರವೇರಿಸಲಾಯಿತು. ದೇವಸ್ಥಾನದ ಆಡಳಿತ ಮಂಡಳಿ ಭಕ್ತರಿಗೆ ನೂಕು ನುಗ್ಗಲು ಆಗದಂತೆ ಪೂಜೆ ಸಲ್ಲಿಸಲು ಅಚ್ಚುಕಟ್ಟಾದ ವ್ಯವಸ್ಥೆ ಮಾಡಿತ್ತು.
ಭಟ್ಕಳ(Bhatkal) ಬಂದರುವಿನ ಗುಡ್ಡದ ಮೇಲಿರುವ ಪುರಾಣ ಪ್ರಸಿದ್ಧ ಕುಟುಮೇಶ್ವರ ದೇವಸ್ಥಾನ(Kutumeshwar temple)ದಲ್ಲೂ ಶಿವರಾತ್ರಿ ಪ್ರಯುಕ್ತ ಸಹಸ್ರ ಬಿಲ್ವಾರ್ಚನೆ ಮುಂತಾದವು ನಡೆದವು. ಪಟ್ಟಣದ ಪುರಾತನ ಚೋಳೇಶ್ವರ ದೇವಸ್ಥಾನ, ಲಕ್ಷ್ಮೇನಾರಾಯಣ, ರಾಮನಾಥ, ಶಾಂತೇರಿ ಕಾಮಾಕ್ಷಿ, ಬೇತಾಳ ದೇವಸ್ಥಾನ, ಆಸರಕೇರಿಯ ವಿರೂಪಾಕ್ಷ ದೇವಸ್ಥಾನ, ಪಶುಪತಿ ದೇವಸ್ಥಾನ, ಮೂಡಭಟ್ಕಳದ ಈಶ್ವರ ದೇವಸ್ಥಾನ, ಬೈಲೂರಿನ ಮಾರ್ಕಾಂಡೇಶ್ವರ, ಮಾರುಕೇರಿಯ ಕೊಡಕಿಯ ಶಂಭುಲಿಂಗೇಶ್ವರ ದೇವಸ್ಥಾನ ಸೇರಿದಂತೆ ತಾಲೂಕಿನ ಎಲ್ಲ ಶಿವಾಲಯಕ್ಕೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.
ತಾಲೂಕಿನ ಶಿವತಾಣವಷ್ಟೇ ಅಲ್ಲದೇ ಬೇರೆ ಬೇರೆ ದೇವಸ್ಥಾನಗಳಿಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಭಕ್ತಿ ಮೆರೆದರು. ವರ್ಷಂಪ್ರತಿಯಂತೆ ಭಟ್ಕಳದಿಂದ ನೂರಾರು ಜನರು ಸಾಗರ ತಾಲೂಕಿನ ಭೀಮೇಶ್ವರದ ಅತಿ ಪುರಾತನ ದೇವಾಲಯವಾದ ಭೀಮೇಶ್ವರಕ್ಕೆ ತೆರಳಿ ತೀರ್ಥ ಸ್ನಾನ, ಪೂಜೆ ಸಲ್ಲಿಸಿದರು.
ನಾಗವಳ್ಳಿ ಸಮೀಪದ ಘಾಟೇಶ್ವರದ ದೇವ ದೇವೇಶ್ವರ ದೇವಸ್ಥಾನದಲ್ಲೂ ಮಹಾಶಿವರಾತ್ರಿ ಉತ್ಸವ ವಿಜೃಂಭಣೆಯಿಂದ ನಡೆಯಿತು. ತಾಲೂಕಿನಲ್ಲಿ ಶಿವರಾತ್ರಿಯ ಉತ್ಸವಗಳು ಶಾಂತಿಯುತವಾಗಿ ನಡೆದಿದ್ದು, ಹಲವೆಡೆ ರಾತ್ರಿ ಅಖಂಡ ಭಜನೆ, ಧಾರ್ಮಿಕ ಕಾರ್ಯಕ್ರಮಗಳು, ಜಾಗರಣೆಗಳನ್ನು ಹಮ್ಮಿಕೊಳ್ಳಲಾಗಿತ್ತು.
2023 ರ ಈಶ ಮಹಾಶಿವರಾತ್ರಿಗೆ ಸಿದ್ಧರಾಗಿ..! ಫೆಬ್ರವರಿ 18 ರಂದು ನಡೆಯಲಿರುವ ಪ್ರಮುಖ ಉತ್ಸವಗಳು ಹೀಗಿದೆ..
ಡೆಕ್ಕಿ ಕುಣಿತ:
ಶಿವರಾತ್ರಿ(Shivaratri) ಹಬ್ಬದ ಪ್ರಯುಕ್ತ ತಾಲೂಕಿನ ಗೊಂಡ ಸಮುದಾಯದ(Gonda Community)ವರು ತಲೆತಲಾಂತರದಿಂದ ಬಂದ ಪದ್ಧತಿಯಂತೆ ಮೂರು ದಿನಗಳ ಕಾಲ ಗ್ರಾಮಗಳಲ್ಲಿ ಮನೆ ಮನೆಗೆ ತೆರಳಿ ಡೆಕ್ಕೆ ಕುಣಿತ(Dekke dance) ಮಾಡುವ ಸಂಪ್ರದಾಯ ಹೊಂದಿದ್ದು, ಈ ಸಲವೂ ಡೆಕ್ಕೆ ಕುಣಿತಕ್ಕೆ ಶನಿವಾರ ರಾತ್ರಿ ಗ್ರಾಮದ ದೇವರಿಗೆ ಪೂಜೆ ಸಲ್ಲಿಸುವುದರ ಮೂಲಕ ಆರಂಭಿಸಲಾಗಿದೆ.