Mahashivaratri 2023: ಕೋಟೆ ನಾಡಲ್ಲಿ ಮಾರ್ದನಿಸಿದ ಶಿವನಾಮ ಸ್ಮರಣೆ

By Kannadaprabha News  |  First Published Feb 19, 2023, 4:51 AM IST

ಮಹಾ ಶಿವರಾತ್ರಿ ಅಂಗವಾಗಿ ಕೋಟೆ ನಾಡು ಚಿತ್ರದುರ್ಗದಲ್ಲಿ ಶನಿವಾರ ಶಿವನಾಮಸ್ಮರಣೆ ಮಾರ್ದನಿಸಿತು. ನಗರದ ನೀಲಕಂಠೇಶ್ವ ರ ದೇವಸ್ಥಾನದಲ್ಲಿ ಮುಂಜಾನೆಯಿಂದಲೇ ಶಿವನ ಸ್ಮರಣೆಗೆ ಸಿದ್ದತೆ ನಡೆದಿದ್ದವು. ಶಿವರಾತ್ರಿ ಅಂಗವಾಗಿ ವಿಶೇಷ ರುದ್ರಾಭಿಷೇಕ ಆಯೋಜಿಸಲಾಗಿತ್ತು. ಬೆಳಿಗ್ಗೆ 5 ಗಂಟೆಯಿಂದಲೇ ವಿಶೇಷ ಪೂಜೆಗೆ ಭಕ್ತರು ಸರದಿಯಲ್ಲಿ ನಿಂತಿದ್ದರು.


ಚಿತ್ರದುರ್ಗ (ಫೆ.19) : ಮಹಾ ಶಿವರಾತ್ರಿ ಅಂಗವಾಗಿ ಕೋಟೆ ನಾಡು ಚಿತ್ರದುರ್ಗದಲ್ಲಿ ಶನಿವಾರ ಶಿವನಾಮಸ್ಮರಣೆ ಮಾರ್ದನಿಸಿತು. ನಗರದ ನೀಲಕಂಠೇಶ್ವ ರ ದೇವಸ್ಥಾನದಲ್ಲಿ ಮುಂಜಾನೆಯಿಂದಲೇ ಶಿವನ ಸ್ಮರಣೆಗೆ ಸಿದ್ದತೆ ನಡೆದಿದ್ದವು. ಶಿವರಾತ್ರಿ ಅಂಗವಾಗಿ ವಿಶೇಷ ರುದ್ರಾಭಿಷೇಕ ಆಯೋಜಿಸಲಾಗಿತ್ತು. ಬೆಳಿಗ್ಗೆ 5 ಗಂಟೆಯಿಂದಲೇ ವಿಶೇಷ ಪೂಜೆಗೆ ಭಕ್ತರು ಸರದಿಯಲ್ಲಿ ನಿಂತಿದ್ದರು.

ಪ್ರಧಾನ ಅಂಚೆ ಕಚೇರಿ ಬಳಿಯಿಂದಲೇ ಸರತಿ ಆರಂಭವಾಗಿತ್ತು. ಸಂಜೆ ಆರು ಗಂಟೆಯ ನಂತರ ಶಿವನ ದರ್ಶನಕ್ಕೆ ಮತ್ತೆ ಸರತಿ ಆರಂಭವಾಯಿತು. ಸಂಜೆ ನಂತರ ಮಹಿಳೆಯರು ಅಪಾರ ಸಂಖ್ಯೆಯಲ್ಲಿ ಆಗಮಿಸಿ ಶಿವನ ದರ್ಶನ ಪಡೆದರು. ಚಿತ್ರದುರ್ಗ ಕೆಳಗೋಟೆಯಲ್ಲಿರುವ ಬೇಡರ ಕಣ್ಣಪ್ಪ ದೇವಸ್ಥಾನದಲ್ಲಿಯೂ ಕೂಡಾ ಶಿವಭಕ್ತರು ಶಿವದರ್ಶನಕ್ಕೆ ಸರತಿಯಲ್ಲಿ ನಿಂತಿದ್ದರು.

Latest Videos

undefined

ಏತನ್ಮಧ್ಯೆ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ(Brahmakumari Eshwariya University)ದವರು ನಗರದ ಪ್ರಮುಖ ಬೀದಿಯಲ್ಲಿ ಶಿವಲಿಂಗ(Shivalinga) ಮೆರವಣಿಗೆ ನಡೆಸಿದರು. ಐವತ್ತಕ್ಕೂ ಹೆಚ್ಚು ಕಾರುಗಳ ಮೇಲೆ ಈಶ್ವರಲಿಂಗ ಇಟ್ಟು ಮೆರವಣಿಗೆ ನಡೆಸಿದರು. ಹಳೇ ಮಾಧ್ಯಮಿಕ ಶಾಲಾ ಆವರಣದಿಂದ ಹೊರಟ ಮೆರವಣಿಗೆ ಪ್ರಮುಖ ಬೀದಿಯಲ್ಲಿ ಸಂಚರಿಸಿತು. ಅಂಬೇಡ್ಕರ್‌ ವೃತ್ತ, ಒನಕೆ ಓಬವ್ವ ವೃತ್ತ, ಜಿಲ್ಲಾ ನ್ಯಾಯಾಲಯದ ಮುಂಭಾಗದಿಂದ ಸಾಗಿದ ಈಶ್ವರಲಿಂಗ ಮೆರವಣಿಗೆ ಅಂತಿಮವಾಗಿ ಈಶ್ವರೀಯ ವಿವಿ ಮುಂಭಾಗ ಅಂತ್ಯಗೊಂಡಿತು.

Mahashivaratri 2023: ಉಜ್ಜಯನಿ ಮಹಾಕಾಲನಿಗೆ 21 ಲಕ್ಷ ದೀಪಗಳ ಸೇವೆ

ಶಿವಲಿಂಗಾನಂದ ಸ್ವಾಮೀಜಿ ಅಡ್ಡ ಪಲ್ಲಕ್ಕಿ ಉತ್ಸವ

ಮಹಾಶಿವರಾತ್ರಿ ಮಹೋತ್ಸವದ ಅಂಗವಾಗಿ ಕಬೀರಾನಂದ ಆಶ್ರಮದ ಶಿವಲಿಂಗಾನಂದ ಮಹಾಸ್ವಾಮಿಗಳ ಅಡ್ಡ ಪಲ್ಲಕ್ಕಿ ಮಹೋತ್ಸವ ಶನಿವಾರ ಚಿತ್ರದುರ್ಗದ ಪ್ರಮುಖ ಬೀದಿಯಲ್ಲಿ ವಿಜೃಂಭಣೆಯಿಂದ ನೆರವೇರಿತು.

ಕಬೀರಾನಂದಸ್ವಾಮಿ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ನಡೆದ ಶ್ರೀಗಳ ಪಲ್ಲಕ್ಕಿ ಹಾಗೂ ಜಾನಪದ ಉತ್ಸವಕ್ಕೆ ಬಿಜೆಪಿ ಮುಖಂಡ ರಾದ ಜಿ.ಎಸ್‌.ಅನಿತ್‌ ಕುಮಾರ್‌ ಚಾಲನೆ ನೀಡಿದರು.

ಮುಖಂಡರಾದ ನಂದಿ ನಾಗರಾಜ್‌, ಪ್ರಶಾಂತ್‌, ನಾಗರಾಜ್‌ ಸಗಂ, ಸತೀಶ್‌, ಓಂಕಾರ್‌, ರುದ್ರೇಶ್‌ ಪ್ರಭಂಜನ್‌, ಪೈಲ್ವಾನ್‌ ತಿಪ್ಪೇಸ್ವಾಮಿ ನಿರಂಜನ ಮೂರ್ತಿ, ಶಾಸ್ತ್ರಿ, ತಿಪ್ಪೇಸ್ವಾಮಿ ಯೋಗಿಶ್‌ ಸೇರಿದಂತೆ ಹಲವು ಗಣ್ಯರು ಈ ವೇಳೆ ಉಪಸ್ಥಿತರಿದ್ದರು.

ಮಠದಿಂದ ಮಧ್ಯಾಹ್ನ ಹೊರಟ ಅಡ್ಡ ಪಲ್ಲಕ್ಕಿ ಉತ್ಸವ ಪ್ರಮುಖ ಬೀದಿಯಲ್ಲಿ ಸಂಚರಿಸಿತು.

ಪಲ್ಲಕ್ಕಿ ಉತ್ಸವದಲ್ಲಿ ಕೀಲು ಕುದುರೆ, ತಮಟೆ, ಜಾಂಜ್‌ ನೃತ್ಯ, ಲಂಬಾಣಿ ನೃತ್ಯ, ಖಾಸಬೇಡರ ಪಡೆ, ಡೊಳ್ಳು ಕುಣಿತ, ಕೋಲಾಟ, ಭಜನೆ, ಶಾರದಾ ಬ್ರಾಸ್‌ ಬ್ಯಾಂಡ್‌, ಕಹಳೆ, ಉರಿಮೆ, ಗೂರವಪ್ಪ, ಛತ್ರಿ ಚಾಮರ ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳು ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶನ ಮಾಡಿದರು.

Mahashivratri 2023: ಶಿವ ಮುಕ್ಕಣ್ಣನಾದುದು ಹೇಗೆ? ಮೂರನೇ ಕಣ್ಣಲ್ಲಿದೆ ಜ್ಞಾನದ ಶಕ್ತಿ

ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಜ್ಞಾನ ವಿಕಾಸ ಪಾಲಿಟೆಕ್ನಿಕ್‌ ಕಾಲೇಜಿನ ಸಿಬ್ಬಂದಿ, ಸದ್ಗುರು ಕಬೀರಾನಂದಸ್ವಾಮಿ ನರ್ಸಿಂಗ್‌ ಕಾಲೇಜು, ಪ್ರಥಮ ದರ್ಜೆ ಕಾಲೇಜು ಬಿಇಡಿ. ಪಿಯು ಕಾಲೇಜು ಆಂಗ್ಲ ಶಾಲೆಯ ವಿದ್ಯಾರ್ಥಿಗಳು ಉತ್ಸವದಲ್ಲಿ ಪಾಲ್ಗೊಂಡಿದ್ದರು.

click me!