ಶಿವರಾತ್ರಿಗೆ ಸಿದ್ದಗೊಂಡ ವಿಜಯಪುರದ ಶಿವಗಿರಿ: ಪ್ರಪ್ರಥಮ ಬಾರಿಗೆ ತೇರು ಎಳೆಯಲಿರುವ ಅತ್ತೆ-ಸೊಸೆಯಂದಿರು!

By Govindaraj SFirst Published Feb 18, 2023, 2:00 AM IST
Highlights

ಇಂದು ಪರಮಾತ್ಮ ಶಿವನ ಆರಾಧಿಸುವ ದಿನ. ಒಂದು ದಿನ ಪೂರ್ಣ ಉಪವಾಸವಿದ್ದು, ರಾತ್ರಿಯಿಡಿ ಜಾಗರಣೆ ಮಾಡುವ ಶುಭದಿನ. ಶಿವನ ದೇವಸ್ಥಾನಕ್ಕೆ ತೆರಳಿ ತೆರಳಿ ದರ್ಶನ ಪಡೆದು ಧನ್ಯತೆ ಅನುಭವಿಸುವ ವಿಶೇಷ ದಿನವಿದು. 

ಷಡಕ್ಷರಿ‌ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್, ವಿಜಯಪುರ

ವಿಜಯಪುರ (ಫೆ.18): ಇಂದು ಪರಮಾತ್ಮ ಶಿವನ ಆರಾಧಿಸುವ ದಿನ. ಒಂದು ದಿನ ಪೂರ್ಣ ಉಪವಾಸವಿದ್ದು, ರಾತ್ರಿಯಿಡಿ ಜಾಗರಣೆ ಮಾಡುವ ಶುಭದಿನ. ಶಿವನ ದೇವಸ್ಥಾನಕ್ಕೆ ತೆರಳಿ ತೆರಳಿ ದರ್ಶನ ಪಡೆದು ಧನ್ಯತೆ ಅನುಭವಿಸುವ ವಿಶೇಷ ದಿನವಿದು. ಇಂತಹ ದಿನವನ್ನ ಸಂಭ್ರಮಿಸಲು ವಿಜಯಪುರ ನಗರದ ಹೊರವಲಯದಲ್ಲಿರುವ ಶಿವಗಿರಿಯಲ್ಲಿ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ.

Latest Videos

ಶಿವರಾತ್ರಿ ಸಂಭ್ರಮಿಸಲು ಶಿವಗಿರಿ ಸಿದ್ಧ‌: ಹೌದು! ಐತಿಹಾಸಿಕ ವಿಜಯಪುರ ನಗರದ ಹೊರ ವಲಯದಲ್ಲಿರುವ ಶಿವಗಿರಿ ಮಹಾ ಶಿವರಾತ್ರಿಗೆ ಸಜ್ಜುಗೊಂಡಿದೆ. ಶಿವಗಿರಿಯಲ್ಲಿ ಪ್ರತಿಷ್ಠಾಪನೆ ಗೊಂಡಿರುವ 85 ಅಡಿ ಎತ್ತರದ ಶಿವನ ಮೂರ್ತಿಯ ದರ್ಶನಕ್ಕಾಗಿ ಹಬ್ಬದ ದಿನದಂದು ನಗರ, ಜಿಲ್ಲೆಯ ಜನರು ಸೇರಿದಂತೆ ನೆರೆ ಹೊರೆಯ ಜಿಲ್ಲೆಗಳ ಭಕ್ತ ಸಮೂಹ, ದೂರದ ಪ್ರದೇಶಗಳ ಭಕ್ತರು ಇಲ್ಲಿಗೆ ಭೇಟಿ ನೀಡುವುದು ವಿಶೇಷತೆಯಾಗಿದೆ‌. ವಿಜಯಪುರ ನಗರವೂ ಸೇರಿದಂತೆ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲೂ ಶ್ರದ್ಧಾ ಭಕ್ತಿಯ ಸಂಗಮ ಗೋಚರಿಸುತ್ತಿದೆ. ಎಲ್ಲ ದೇಗುಲಗಳಲ್ಲೂ ವಿಶೇಷ ಪೂಜೆ, ಅಭಿಷೇಕ, ಜಾಗರಣೆಯ ಸಿದ್ಧತೆ ಭರದಿಂದ ನಡೆದಿವೆ. ನಗರ ಹೊರವಲಯದ ಶಿವಗಿರಿಯಲ್ಲೂ ಮಹಾ ಶಿವರಾತ್ರಿಯ ಆಚರಣೆಗೆ ಸಕಲ ಸಿದ್ಧತೆ ಬಿರುಸುಗೊಂಡಿವೆ.

ಭೀಮಾತೀರದ ವೈಷಮ್ಯಕ್ಕೆ ತೆರೆ ಎಳೆದ ಅಲೋಕ್‌ ಕುಮಾರ್‌: ಚಡಚಣ-ಬೈರಗೊಂಡ ಗ್ಯಾಂಗ್‌ಗಳ ನಡುವೆ ಸಂಧಾನ ಯಶಸ್ವಿ

ಶಿವಗಿರಿ ಶಿವನ ಜಾತ್ರೆಗೆ ಭರ್ತಿ 17 ವರ್ಷ: ಶಿವಗಿರಿಯಲ್ಲಿನ ಮಹಾ ಶಿವರಾತ್ರಿ ಜಾತ್ರಾ ಮಹೋತ್ಸವಕ್ಕೆ ಈಗ ಭರ್ತಿ 17 ವರ್ಷ. ಶಿವರಾತ್ರಿಯ ದಿನ ಜಾತ್ರೆಯ 17ನೇ ವಾರ್ಷಿಕೋತ್ಸವದ ಸಂಭ್ರಮ ಮನೆ ಮಾಡಿದೆ. ಶಿವಗಿರಿಯ ಉಸ್ತುವಾರಿ ನಿರ್ವಹಿಸುತ್ತಿರುವ ಟಿ.ಕೆ.ಪಾಟೀಲ (ಬೆನಕಟ್ಟಿ) ಚಾರಿಟೆಬಲ್‌ ಟ್ರಸ್ಟ್‌ ಈ ವರ್ಷದ ಉತ್ಸವವನ್ನು ಧಾರ್ಮಿಕ ಶ್ರದ್ಧಾ–ಭಕ್ತಿಯ ಜೊತೆಗೆ ಆಚರಿಸಲು ಕಾರ್ಯಕ್ರಮ ಆಯೋಜಿಸಿದೆ.

ತಾಸಿಗೊಮ್ಮೆ ನಡೆಯಲಿದೆ ಪರಶಿವನಿಗೆ ಪೂಜೆ: ಶಿವರಾತ್ರಿಯ ನಸುಕಿನ ಜಾವ 4.30ಕ್ಕೆ ಶಿವನಿಗೆ ರುದ್ರಾಭಿಷೇಕ, ಭಸ್ಮಾರ್ಚನೆ, ಬಿಲ್ವಾರ್ಚನೆ, ಪುಷ್ಪಾರ್ಚನೆ, ಪಂಚ ಕಳಸಾರ್ಚನೆ ಬಳಿಕ ಪ್ರತಿ ತಾಸಿಗೊಮ್ಮೆ ಪೂಜೆ ನಡೆಯಲಿದೆ. ಇದು ಅಹೋರಾತ್ರಿ ನೆರವೇರಲಿದೆ. ಬೆಳಿಗ್ಗೆ 6.30 ಕ್ಕೆ ಮಂಗಳ ವಾದ್ಯಗಳೊಂದಿಗೆ ಶಹನಾಯಿ ಕಾರ್ಯಕ್ರಮ, 8.30 ಕ್ಕೆ ಜಾತ್ರಾ ಉತ್ಸವದ ಧ್ವಜಾರೋಹಣ, 9.00 ಕ್ಕೆ ಅಮ್ಮನವರ ಪೂಜೆ ನಡೆಯಲಿದೆ‌. ಮಧ್ಯಾಹ್ನ 3.30 ಕ್ಕೆ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ, ಸಂಜೆ 4.30ಕ್ಕೆ ಪಂಚಲೋಹದ ಬಂಗಾರ ಲೇಪಿತ 23 ಅಡಿ ಎತ್ತರದ ರಥದಲ್ಲಿ ಶಿವನ ಬೆಳ್ಳಿ ಮೂರ್ತಿಯನ್ನು ಪ್ರತಿಷ್ಠಾಪನೆ ನಡೆಯಲಿದೆ.

ರಥ ಎಳೆಯಲಿರುವ ಅತ್ತೆ-ಸೊಸೆ: ವಿಜಯಪುರದ ಮುತ್ತೈದೆಯರು ರಥದ ಹಗ್ಗ ಎಳೆದರೆ, ಇನ್ನೊಂದೆಡೆ ಸೊಸೆಯರು ಹಗ್ಗ ಎಳೆಯಲಿದ್ದಾರೆ. ವಿಜಯಪುರ ಜಿಲ್ಲೆಯಲ್ಲಿ ವಿಶಿಷ್ಠವಾದ  ಮಹಿಳೆಯರೇ ಥೇರು ಎಳೆಯುವ ಕಾರ್ಯಕ್ರಮ ಇದಾಗಿದೆ. 

ಗೋಡ್ಸೆ ಪೂಜಿಸುವವರು ನಮಗೇನು ಪಾಠ ಮಾಡ್ತಾರೆ?: ಸಿದ್ದರಾಮಯ್ಯ

ಸಿದ್ದೇಶ್ವರ ಶ್ರೀಗಳ ನಿಧನ, ಮನರಂಜನಾ ಕಾರ್ಯಕ್ರಮಗಳಿಗೆ ಬ್ರೇಕ್: ಸಿದ್ದೇಶ್ವರ ಶ್ರೀಗಳು ಲಿಂಗೈಕ್ಯರಾಗಿರುವ ಹಿನ್ನೆಲೆಯಲ್ಲಿ ಈ ಬಾರಿ ಮನರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳದೇ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶಿವನ ಪೂಜೆ, ಆರಾಧನೆ, ಭಜನೆ ಪ್ರತಿವರ್ಷದಂತೆ ನಡೆಯಲಿದೆ. ಶಿವರಾತ್ರಿಗೆ ಶಿವಗಿರಿಯಲ್ಲಿ ಭರ್ಜರಿ ಸಿದ್ಧತೆ ನಡೆದಿವೆ. ಇನ್ನೂ ಭಕ್ತರು ಜಗದೊಡೆಯನ ಆರಾಧಿಸಲು ಶ್ರದ್ಧೆ, ಭಕ್ತಿಯಿಂದ ತಯಾರಾಗುತ್ತಿದ್ದಾರೆ.

click me!