ಚಿತ್ರದುರ್ಗ: ಮುರುಘಾ ಶ್ರೀ ಇಲ್ಲದ ಮೊದಲ ಶರಣ ಸಂಸ್ಕೃತಿ ಉತ್ಸವಕ್ಕೆ ಚಾಲನೆ

By Girish Goudar  |  First Published Oct 4, 2022, 10:00 PM IST

ಚಿತ್ರದುರ್ಗದ ಮುರುಘಾ ಶ್ರೀಗಳು ಫೋಕ್ಸೋ ಕೇಸಲ್ಲಿ ಬಂಧನವಾದ ಹಿನ್ನೆಲೆಯಲ್ಲಿ ಶರಣ ಸಂಸ್ಕೃತಿ ಉತ್ಸವವನ್ನ ಸರಳವಾಗಿ ಆಚರಿಸಲು ನಿರ್ಧರಿಸಿದ ಶ್ರೀ ಮಠ 


ಚಿತ್ರದುರ್ಗ(ಅ.04):  ನಗರದ ಮುರುಘಾಮಠದಲ್ಲಿ ಶರಣ ಸಂಸ್ಕೃತಿ ಉತ್ಸವಕ್ಕೆ ಮಠದ ಪ್ರಭಾರ ಪೀಠಾಧ್ಯಕ್ಷ ಮಹಾಂತ ರುದ್ರೇಶ್ವರ ಶ್ರೀಗಳು ಇಂದು(ಮಂಗಳವಾರ) ಚಾಲನೆ ನೀಡಿದ್ದಾರೆ. ಮುರುಘಾ ಶ್ರೀಗಳು ಇಲ್ಲದ ಮೊದಲ ಶರಣ ಸಂಸ್ಕೃತಿ ಉತ್ಸವ ಕಾರ್ಯಕ್ರಮದಲ್ಲಿ ಸಸಿಗೆ ನೀರು ಹಾಕಿ ಶರಣ ಸಂಸ್ಕೃತಿ ಉತ್ಸವಕ್ಕೆ ಚಾಲನೆ ನೀಡಲಾಗಿದೆ.  

ಚಿತ್ರದುರ್ಗದ ಮುರುಘಾ ಶ್ರೀಗಳು ಫೋಕ್ಸೋ ಕೇಸಲ್ಲಿ ಬಂಧನವಾದ ಹಿನ್ನೆಲೆಯಲ್ಲಿ ಶರಣ ಸಂಸ್ಕೃತಿ ಉತ್ಸವವನ್ನ ಸರಳವಾಗಿ ಆಚರಿಸಲು ಶ್ರೀ ಮಠ ನಿರ್ಧರಿಸಿದೆ.  ಉತ್ಸವ ಕಾರ್ಯಕ್ರಮದಲ್ಲಿ ಬಹುತೇಕ ಕುರ್ಚಿಗಳು ಖಾಲಿ ಖಾಲಿಯಾಗಿವೆ. ಜನರೂ ಕೂಡ ಕಾರ್ಕಕ್ರಮಕ್ಕೆ ಬರಲು ಹಿಂದೇಟು ಹಾಕಿದ್ದಾರೆ. ಇಂದಿನಿಂದ ಮೂರು ದಿನಗಳ ಕಾಲ ಶರಣಸಂಸ್ಕೃತಿ ಉತ್ಸವ ನಡೆಯಲಿದೆ.  

Latest Videos

undefined

ಕಾಶ್ಮೀರದ ದೇವಾಲಯಕ್ಕೆ ಶೃಂಗೇರಿಯಿಂದ ಪಂಚಲೋಹ ಮೂರ್ತಿ ಹಸ್ತಾಂತರ

ಮುರುಘಾಮಠದ ಆವರಣದ ಅನುಭವ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉತ್ಸವ ಸಮಿತಿ ಗೌರವಾಧ್ಯಕ್ಷ ಬಸವಕುಮಾರ ಶ್ರೀಗಳು, ವಿವಿಧ ಮಠಾಧೀಶರು, ಎಸ್‌ಜೆಎಮ್ ವಿದ್ಯಾಪೀಠದ ಕಾರ್ಯದರ್ಶಿ ನಿವೃತ್ತ ನ್ಯಾ. ಎಸ್.ಬಿ.ವಸ್ತ್ರದಮಠ ಸೇರಿದಂತೆ ಮತ್ತಿತರರು ಭಾಗಿಯಾಗಿದ್ದಾರೆ. 
 

click me!