ಶನೈಶ್ಚರಿ ಅಮಾವಾಸ್ಯೆ 2022 ಯಾವಾಗ? ಶನಿ ದೋಷದ ಸಮಸ್ಯೆಗಳಿಂದ ಮುಕ್ತರಾಗಲು ನೀವೇನು ಮಾಡಬೇಕು?

Published : Apr 28, 2022, 11:29 AM ISTUpdated : Apr 28, 2022, 03:14 PM IST
ಶನೈಶ್ಚರಿ ಅಮಾವಾಸ್ಯೆ 2022 ಯಾವಾಗ? ಶನಿ ದೋಷದ ಸಮಸ್ಯೆಗಳಿಂದ ಮುಕ್ತರಾಗಲು ನೀವೇನು ಮಾಡಬೇಕು?

ಸಾರಾಂಶ

ಈ ಬಾರಿ ಶನೀಶ್ಚರಿ ಅಮಾವಾಸ್ಯೆ ಹಾಗೂ ಸೂರ್ಯಗ್ರಹಣ ಒಂದೇ ದಿನ ಬರುತ್ತಿದೆ. ಈ ದಿನ ಕೆಲವೊಂದು ಕಾರ್ಯಗಳನ್ನು ಕೈಗೊಳ್ಳುವುದರಿಂದ ಮನೆಯ ಸಂಕಷ್ಟಗಳಿಂದ ಪಾರಾಗಿ ಉತ್ತಮ ದಿನಗಳನ್ನು ನೋಡಬಹುದು. 

ಈ ಮಾಸದ ಕೃಷ್ಣಪಕ್ಷದ ಕಡೆಯ ದಿನ ಅಮಾವಾಸ್ಯೆ ಬರುತ್ತಿದೆ. ಅಂದರೆ ಏಪ್ರಿಲ್ 30ರ ಶನಿವಾರ ಅಮಾವಾಸ್ಯೆ ಬರುತ್ತಿದೆ. ಹಾಗಾಗಿ ಇದನ್ನು ಶನೀಶ್ಚರ ಅಮಾವಾಸ್ಯೆ ಎನ್ನಲಾಗುತ್ತದೆ. ಇದೇ ದಿನ ಸೂರ್ಯ ಗ್ರಹಣವೂ ಇರಲಿದೆ. ಶನೀಶ್ವರ ಅಮಾವಾಸ್ಯೆಗೆ ನಮ್ಮ ಪುರಾಣಗಳಲ್ಲಿ ಬಹಳ ಪ್ರಾಮುಖ್ಯತೆ ನೀಡಲಾಗಿದೆ. ಈ ದಿನ ಪಿತೃಗಳನ್ನು ಪೂಜಿಸುವ ಜೊತೆಗೆ ಶನಿಯನ್ನೂ ಪೂಜಿಸಬೇಕು. ಈ ದಿನದಂದು ಶನಿಯನ್ನು ಪೂಜಿಸುವುದರಿಂದ ಶುಭವಾಗಲಿದೆ. ಅದೂ ಅಲ್ಲದೆ, ಶನೈಶ್ಚರಿ ಅಮಾವಾಸ್ಯೆಯಂದು ಕೆಲವೊಂದು ಪರಿಹಾರ ಕಾರ್ಯಗಳನ್ನು ಕೈಗೊಳ್ಳುವುದರಿಂದ ಶನಿಯ ಮಹಾದೆಶೆಯಿಂದ ತಪ್ಪಿಸಿಕೊಳ್ಳಬಹುದು. |

ಶನಿ ಅಮಾವಾಸ್ಯೆ ಸಮಯ ಮತ್ತು ತಾರೀಖು(Amavasya 2022 Date and Time)
ಶನಿವಾರದಂದು ಶನೈಶ್ಚರಿ ಅಮಾವಾಸ್ಯೆ ಬರುವುದರಿಂದ ಅಮಾವಾಸ್ಯೆಯ ತಿಥಿಯು ಏಪ್ರಿಲ್ 30 ರಂದು ತಡರಾತ್ರಿ 1.57 ನಿಮಿಷಗಳವರೆಗೆ ಇರುತ್ತದೆ. ಅದರ ನಂತರ, ವೈಶಾಖ ಶುಕ್ಲ ಪಕ್ಷದ ಪ್ರತಿಪದ ದಿನಾಂಕವನ್ನು ತೆಗೆದುಕೊಳ್ಳಲಾಗುತ್ತದೆ.  ಈ ದಿನದ ಸ್ನಾನ, ಶ್ರಾದ್ಧ ಇತ್ಯಾದಿ ಕಾರ್ಯಗಳಿಗೆ ವಿಶೇಷ ಮಹತ್ವವಿದೆ. ವಿಶೇಷವಾಗಿ ಈ ದಿನ ನೀವು ಮಾಡಬೇಕಾದ ಪರಿಹಾರ ಕಾರ್ಯಗಳನ್ನು ಇಲ್ಲಿ ಕೊಡಲಾಗಿದೆ.

ಧನಲಾಭಕ್ಕಾಗಿ
ಸಮೃದ್ಧಿ ಹೆಚ್ಚಬೇಕೆಂದರೆ, ತೆಂಗಿನಕಾಯಿ(coconut) ತೆಗೆದುಕೊಂಡು ಅಮಾವಾಸ್ಯೆಯ ರಾತ್ರಿ ಶಿವನ ಎದುರು ನೆಲದಲ್ಲಿ ಒಡೆಯಿರಿ. ಹೀಗೆ ತುಂಡಾದ ತೆಂಗಿನಕಾಯಿಯನ್ನು ಶಿವನ ವಿಗ್ರಹದೆದುರು ಇಡಿ. ಮರು ಬೆಳಗ್ಗೆ ಮನೆಯ ಎಲ್ಲ ಸದಸ್ಯರಿಗೆ ಈ ತೆಂಗಿನಕಾಯಿಯನ್ನು ತಿನ್ನಲು ಹಂಚಿ. 

Saturn Transit: 30 ವರ್ಷಗಳ ನಂತರ ಕುಂಭ ರಾಶಿಗೆ ಶನಿ ಪ್ರವೇಶ, ದ್ವಾದಶ ರಾಶಿಗಳ ಮೇಲೆ ಹೀಗಿವೆ ಪ್ರಭಾವ

ಯಾವುದೇ ಸಮಸ್ಯೆಗೆ
ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆ ಇದ್ದರೆ, ದಪ್ಪನೆಯ ಕೆಂಪು ಬಣ್ಣದ ದಾರ(red coloured thread)ವನ್ನು ಕತ್ತಿನ ಸುತ್ತ ಕಟ್ಟಿ. ಮುಂದಿನ ತಿಂಗಳ ಅಮಾವಾಸ್ಯೆಯವರೆಗೆ ಅಂದರೆ ಮೇ 30ರವರೆಗೆ ಅದನ್ನು ತೆಗೆಯಬೇಡಿ. ಅಂದು ಅಮಾವಾಸ್ಯೆಯ ರಾತ್ರಿ ಈ ದಾರವನ್ನು ಕತ್ತಿನಿಂದ ತೆಗೆದು ಮನೆಯ ಹೊರಗೆ ಸಣ್ಣದಾಗಿ ಹೊಂಡ ತೋಡಿ ಅಲ್ಲಿ ದಾರವನ್ನು ಹೂತು ಹಾಕಿ. ಇದರಿಂದ ನೀವು ಎದುರಿಸುತ್ತಿರುವ ಸಮಸ್ಯೆ ಪರಿಹಾರವಾಗುವುದು.

ವೈವಾಹಿಕ ಸಮಸ್ಯೆಗಳಿಗೆ
ವೈವಾಹಿಕ ಜೀವನದಲ್ಲಿ ಸಮಸ್ಯೆ, ಆತಂಕ ಹೆಚ್ಚಿದ್ದರೆ, ಶನೈಶ್ಚರಿ ಅಮಾವಾಸ್ಯೆಯಂದು ಹಾಲಿಗೆ ಸ್ವಲ್ಪ ಸಕ್ಕರೆ ಬೆರೆಸಿ ಅದನ್ನು ಬಾವಿಯಲ್ಲಿ ಹಾಕಿ. ಮನೆಯ ಬಳಿ ಬಾವಿ ಇಲ್ಲವೆಂದರೆ, ಮನೆಯ ಹೊರಗೆ ಹಸಿ ಮಣ್ಣಿನ ಮೇಲೆ ಸುರಿದ ಮೇಲಿಂದ ಮತ್ತಷ್ಟು ಮಣ್ಣನ್ನು ಮುಚ್ಚಿ. ಹೀಗೆ ಮಾಡುವುದರಿಂದ ನಿಮ್ಮ ಹಾಗೂ ಸಂಗಾತಿಯ ನಡುವಿನ ಸಂಬಂಧ ಸುಧಾರಿಸುತ್ತದೆ. 

ಕೆಟ್ಟ ಕಣ್ಣುಗಳಿಂದ ರಕ್ಷಿಸಿಕೊಳ್ಳಲು
ನಿಮ್ಮ ಬೆಳವಣಿಗೆ ನೋಡಲಾಗದೆ ಕೆಲವರಿಗೆ ನಿಮ್ಮ ಮೇಲೆ ಹೊಟ್ಟೆಕಿಚ್ಚಾಗಿದ್ದರೆ, ಅವರು ನಿಮ್ಮ ವಿರುದ್ಧ ಕೆಲ ಬೇಡದ ಕೆಲಸ ಮಾಡಿಸಬಹುದು. ಅಂಥವರಿಂದ ದೂರ ಸರಿಯಲು ಚಪಾತಿಯ ಮೇಲೆ ಸಾಸಿವೆ ಎಣ್ಣೆ ಸುರಿಯಿರಿ. ನಂತರ ಮತ್ತೊಂದು ಚಪಾತಿಯ ಸಹಾಯದಿಂದ ಎಣ್ಣೆಯನ್ನು ಎಲ್ಲೆಡೆ ಹಚ್ಚಿ. ಬಳಿಕ ಈ ಎರಡು ಚಪಾತಿಗಳನ್ನು ಕಪ್ಪು ಬಣ್ಣದ ನಾಯಿಗೆ ನೀಡಿ. ಇದರಿಂದ ದುಷ್ಟ ಜನರು ನಿಮ್ಮಿಂದ ದೂರ ಸರಿಯುತ್ತಾರೆ. 

15 ದಿನಗಳ ಅಂತರದಲ್ಲಿ ಎರಡು ಗ್ರಹಣಗಳು, ಯಶಸ್ಸಿನ ಉತ್ತುಂಗ ನೋಡುವ 3 ರಾಶಿಗಳು

ಸಾಲ ಹೆಚ್ಚಿದ್ದರೆ
ಸಾಲದ ಸಮಸ್ಯೆ ಹೆಚ್ಚಾಗಿದ್ದರೆ, ಆಗ ಶನೈಶ್ಚರಿ ಅಮಾವಾಸ್ಯೆಯಂದು ಸ್ವಲ್ಪ ಸಾಸಿವೆಯನ್ನು  ಕೈಲಿ ತೆಗೆದುಕೊಂಡು ಮನೆಯ ಚೌಕಿಗೆ ಹೋಗಿ ಇಲ್ಲವೇ, ಮನೆಯ ಮೇಲಿನ ಅಂಗಳಕ್ಕೆ ಮಧ್ಯರಾತ್ರಿಯಲ್ಲಿ ಹೋಗಿ ಗಡಿಯಾರಕ್ಕೆ ವಿರುದ್ಧ ರೀತಿಯಲ್ಲಿ ಮೂರು ಸುತ್ತು ಬನ್ನಿ. ಬಳಿಕ ಸಾಸಿವೆಕಾಳನ್ನು 10 ವಿವಿಧ ದಿಕ್ಕಿನಲ್ಲಿ ಎಸೆಯಿರಿ. ಇದರಿಂದ ಆದಷ್ಟು ಶೀಘ್ರವಾಗಿ ಸಾಲದಿಂದ ಮುಕ್ತಿ ಪಡೆಯುವಿರಿ. 

ಅನಾರೋಗ್ಯದಿಂದ ಮುಕ್ತರಾಗಲು
ಮನೆಯಲ್ಲಿ ಯಾವುದೋ ಸದಸ್ಯರು ಧೀರ್ಘಕಾಲೀನ ಅನಾರೋಗ್ಯದಿಂದ ಬಳಲುತ್ತಿದ್ದರೆ, ಆಗ ಶನೈಶ್ಚರಿ ಅಮಾವಾಸ್ಯೆಯಂದು ಸ್ನಾನದ ಬಳಿಕ, ಯಾರಿಗೆ ಹುಷಾರಿಲ್ಲವೋ ಅವರ ಬಟ್ಟೆಯಿಂದ ಒಂದೆಳೆ ದಾರ ತೆಗೆದು ಹತ್ತಿಯೊಂದಿಗೆ ಸೇರಿಸಿ. ಬಳಿಕ ಅದರಿಂದ ಬತ್ತಿ ಹೆಣೆಯಿರಿ. ಸಾಸಿವೆ ಎಣ್ಣೆಯನ್ನು ಮಣ್ಣಿನ ದೀಪಕ್ಕೆ ಹಾಕಿ ಅದರಲ್ಲಿ ಈ ಬತ್ತಿ ಇಟ್ಟು ಮನೆಯ ಹೊರಗೆ ದೀಪವಿಟ್ಟು ಹಚ್ಚಿರಿ. ಇದರಿಂದ ವ್ಯಕ್ತಿಯ ಅನಾರೋಗ್ಯ ಸಮಸ್ಯೆ ತೀರುವುದು. 
 

PREV
Read more Articles on
click me!

Recommended Stories

ಈ 4 ರಾಶಿಯವರಲ್ಲಿ ಒಳ್ಳೆಯದಕ್ಕಿಂತ ಕೆಟ್ಟ ಗುಣಗಳೇ ಹೆಚ್ಚು, ದ್ವೇಷ ಸಾಧಿಸೋದ್ರಲ್ಲಿ ನಿಸ್ಸೀಮರು
ಹೊಸ ವರ್ಷದಲ್ಲಿ 3 ರಾಜಯೋಗ, 3 ರಾಶಿಗೆ ಬಹಳಷ್ಟು ಹಣ