Shani Jayanti 2023ರಂದು 3 ಯೋಗಗಳ ಸಂಯೋಗ, 3 ರಾಶಿಗಳಿಗೆ ಸುಯೋಗ!

Published : May 14, 2023, 02:59 PM ISTUpdated : May 14, 2023, 04:06 PM IST
Shani Jayanti 2023ರಂದು 3 ಯೋಗಗಳ ಸಂಯೋಗ, 3 ರಾಶಿಗಳಿಗೆ ಸುಯೋಗ!

ಸಾರಾಂಶ

ಶನಿ ಜಯಂತಿಯನ್ನು 19 ಮೇ 2023ರಂದು ಜ್ಯೇಷ್ಠ ಅಮವಾಸ್ಯೆಯಂದು ಆಚರಿಸಲಾಗುತ್ತದೆ. ಈ ಬಾರಿ ಶನಿ ಜಯಂತಿಯಂದು 3 ವಿಶೇಷ ಯೋಗಗಳು ರಚನೆಯಾಗುತ್ತಿವೆ. ಈ ಯೋಗಗಳು ಮತ್ತು ಶನಿಯ ಅನುಗ್ರಹದಿಂದ ಕೆಲವು ರಾಶಿಚಕ್ರದವರಿಗೆ ಲಾಭಗಳು ಸಿಗುತ್ತವೆ.

ಶನಿ ಜಯಂತಿಯನ್ನು 19 ಮೇ 2023ರ ಜ್ಯೇಷ್ಠ ಅಮವಾಸ್ಯೆಯಂದು ಆಚರಿಸಲಾಗುತ್ತದೆ. ಅಮವಾಸ್ಯೆಯು ಶನಿದೇವನ ಜನ್ಮದಿನವಾಗಿದೆ. ಆದ್ದರಿಂದ ಶನಿದೇವನನ್ನು ಮೆಚ್ಚಿಸಲು ಜ್ಯೇಷ್ಠ ಅಮವಾಸ್ಯೆಯ ದಿನವನ್ನು ವರ್ಷದಲ್ಲಿ ಅತ್ಯಂತ ವಿಶೇಷವೆಂದು ಪರಿಗಣಿಸಲಾಗಿದೆ. ಶನಿಯ ಸಾಡೇಸಾತಿ, ಧೈಯ, ಮಹಾದಶ ಇರುವವರು ಈ ದಿನ ನ್ಯಾಯಪ್ರಿಯ ಶನಿ ದೇವರನ್ನು ವಿಧಿವತ್ತಾಗಿ ಪೂಜಿಸಿದರೆ ಆರ್ಥಿಕ, ಮಾನಸಿಕ ಮತ್ತು ದೈಹಿಕ ಸಮಸ್ಯೆಗಳು ದೂರವಾಗುತ್ತವೆ.

ಈ ವರ್ಷ ಶನಿ ಜಯಂತಿ ಬಹಳ ವಿಶೇಷವಾಗಿದೆ. ಏಕೆಂದರೆ ಈ ದಿನ ಗಜಕೇಸರಿ ಯೋಗ, ಶೋಭನ ಯೋಗ ಮತ್ತು ಶಶರಾಜ ಯೋಗವೂ ಇರುತ್ತದೆ. ಈ ವಿಶೇಷ ಯೋಗಗಳು ಮತ್ತು ಶನಿಯ ಅನುಗ್ರಹದಿಂದ, ಕೆಲವು ರಾಶಿಚಕ್ರ ಚಿಹ್ನೆಗಳು ಲಾಭವನ್ನು ಪಡೆಯುತ್ತವೆ.

ಈ ರಾಶಿಯವರಿಗೆ ಲಾಭ

ತುಲಾ ರಾಶಿ (Libra)
ಜ್ಯೋತಿಷ್ಯ ಗ್ರಂಥಗಳ ಪ್ರಕಾರ, ಶನಿ ಮತ್ತು ಶುಕ್ರ ಇಬ್ಬರೂ ಪರಸ್ಪರ ಸ್ನೇಹಿತರಾಗಿದ್ದಾರೆ. ಶನಿಯು ವಾಯು ಪ್ರಾಬಲ್ಯದ ಗ್ರಹವೆಂದು ಪರಿಗಣಿಸಲ್ಪಟ್ಟರೆ, ತುಲಾವು ವಾಯು ಪ್ರಾಬಲ್ಯದ ಸಂಕೇತವಾಗಿದೆ. ಅಲ್ಲದೆ, ತುಲಾ ಶನಿಯ ಉತ್ಕೃಷ್ಟ ಚಿಹ್ನೆ. ಶನಿದೇವನು ತುಲಾ ರಾಶಿಯವರಿಗೆ ಯಾವಾಗಲೂ ದಯೆ ತೋರುತ್ತಾನೆ, ಅಂತಹ ಪರಿಸ್ಥಿತಿಯಲ್ಲಿ, ಈ ವಿಶೇಷ ಯೋಗದಲ್ಲಿ ಶನಿಯನ್ನು ಪೂಜಿಸುವುದರಿಂದ, ನೀವು ಯಶಸ್ಸು, ಸಮೃದ್ಧಿ ಮತ್ತು ಹಣವನ್ನು ಪಡೆಯುತ್ತೀರಿ. ಶನಿದೇವನ ಆಶೀರ್ವಾದದಿಂದ ನೀವು ಉದ್ಯೋಗ ಮತ್ತು ವ್ಯವಹಾರದಲ್ಲಿ ಎತ್ತರವನ್ನು ಮುಟ್ಟುವಿರಿ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ, ಅದು ನಿಮಗೆ ದೈಹಿಕ ಸಂತೋಷವನ್ನು ನೀಡುತ್ತದೆ.

ಯಾರಾಗ್ತಾರೆ ಸಿಎಂ? ನಿಜವಾಗುತ್ತಾ ಮೈಲಾರಲಿಂಗೇಶ್ವರನ ಭವಿಷ್ಯವಾಣಿ?

ಮೇಷ ರಾಶಿ (Aries)
ಶನಿ ಜಯಂತಿಗೆ ಮುನ್ನವೇ ಮೇಷ ರಾಶಿಯಲ್ಲಿ ಗುರು-ಚಂದ್ರನ ಉಪಸ್ಥಿತಿಯಿಂದಾಗಿ ಗಜ ಕೇಸರಿ ಯೋಗವು ರೂಪುಗೊಳ್ಳುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಮೇಷ ರಾಶಿಯವರಿಗೆ ಶನಿ ಜಯಂತಿಯಂದು ಸಂಪತ್ತು ಮತ್ತು ಸಮೃದ್ಧಿ ದೊರೆಯುತ್ತದೆ. ನೀವು ಕೆಲಸ ಮಾಡುವ ಕ್ಷೇತ್ರದಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ. ಮನೆಯಲ್ಲಿ ಸಂತೋಷವು ಬರುತ್ತದೆ ಮತ್ತು ಕುಟುಂಬದಲ್ಲಿ ಶಾಂತಿ ನೆಲೆಸುತ್ತದೆ. ಸಾಲದಿಂದ ಮುಕ್ತಿ ಸಿಗಲಿದೆ. ಆದಾಯದ ಮೂಲದಲ್ಲಿ ಹೆಚ್ಚಳವಾಗಲಿದೆ.

ಮಿಥುನ ರಾಶಿ (Gemini)
ಶನಿ ಜಯಂತಿಯಂದು ಗಜಕೇಸರಿ ಯೋಗದ ಪ್ರಭಾವದಿಂದ ಮಿಥುನ ರಾಶಿಯವರಿಗೆ ಉನ್ನತ ಸ್ಥಾನದ ಲಾಭ ದೊರೆಯಲಿದೆ. ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ, ನಿಮ್ಮ ಕಾರ್ಯಶೈಲಿಯಿಂದ ಜನರು ಸಂತೋಷವಾಗಿರುತ್ತಾರೆ. ಶನಿದೇವನ ಕೃಪೆಯಿಂದ ನಿಮ್ಮ ಬಹುಕಾಲದ ಕೆಲಸಗಳು ಪೂರ್ಣಗೊಳ್ಳಲಿವೆ. ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ಒಳ್ಳೆಯ ಸುದ್ದಿ ಸಿಗಲಿದೆ. ಹೊಸ ಉದ್ಯೋಗದ ಹುಡುಕಾಟವೂ ಪೂರ್ಣಗೊಳ್ಳಬಹುದು.

Shani Jayanti 2023: ಶನಿ ಕೋಪದಿಂದ ಮುಕ್ತರಾಗೋಕೆ ಇಲ್ಲಿದೆ ನೋಡಿ ಸುದಿನ

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

PREV
Read more Articles on
click me!

Recommended Stories

ಈ 4 ರಾಶಿಯವರಲ್ಲಿ ಒಳ್ಳೆಯದಕ್ಕಿಂತ ಕೆಟ್ಟ ಗುಣಗಳೇ ಹೆಚ್ಚು, ದ್ವೇಷ ಸಾಧಿಸೋದ್ರಲ್ಲಿ ನಿಸ್ಸೀಮರು
ಹೊಸ ವರ್ಷದಲ್ಲಿ 3 ರಾಜಯೋಗ, 3 ರಾಶಿಗೆ ಬಹಳಷ್ಟು ಹಣ