ಜೋತಿಷ್ಯ ಶಾಸ್ತ್ರ ಪ್ರಕಾರ ವ್ಯಕ್ತಿ ಜನಿಸಿದ ದಿನದ ಅನುಗುಣವಾಗಿ ಅವನ ವ್ಯಕ್ತಿತ್ವ ರೂಪಗೊಳ್ಳುತ್ತದೆ. ಅದೇ ರೀತಿ ಶನಿವಾರ ಜನಿಸಿದ ಜನಿಸಿದ ವ್ಯಕ್ತಿಗಳ ಮೇಲೆ ಶನಿ ದೇವನ ವಿಶೇಷ ಪ್ರಭಾವ ಇರುತ್ತದೆ. ಹಾಗೂ ಇವರಲ್ಲಿ ವಿಶೇಷ ಗುಣಗಳು ಇರುತ್ತವೆ.
ಜೋತಿಷ್ಯ ಶಾಸ್ತ್ರ ಪ್ರಕಾರ ವ್ಯಕ್ತಿ ಜನಿಸಿದ ದಿನದ ಅನುಗುಣವಾಗಿ ಅವನ ವ್ಯಕ್ತಿತ್ವ ರೂಪಗೊಳ್ಳುತ್ತದೆ. ಅದೇ ರೀತಿ ಶನಿವಾರ ಜನಿಸಿದ ಜನಿಸಿದ ವ್ಯಕ್ತಿಗಳ ಮೇಲೆ ಶನಿ ದೇವನ ವಿಶೇಷ ಪ್ರಭಾವ ಇರುತ್ತದೆ. ಹಾಗೂ ಇವರಲ್ಲಿ ವಿಶೇಷ ಗುಣಗಳು ಇರುತ್ತವೆ.
ಶನಿಯು ನಮ್ಮ ಕರ್ಮಗಳನುಸಾರ ಒಳಿತು ಇಲ್ಲವೇ ಕೆಡುಕನ್ನುಂಟು ಮಾಡುತ್ತಾನೆ. ಈ ವಿಷಯದಲ್ಲಿ ಆತನಿಗೆ ಯಾವ ಬೇಧಭಾವವೂ ಇಲ್ಲ. ಅತ್ಯಂತ ನಿಧಾನವಾಗಿ ಚಲಿಸುವ ಗ್ರಹಗಳಲ್ಲೊಬ್ಬನಾದ ಶನಿಯು ಒಂದು ರಾಶಿಯಿಂದ ಮತ್ತೊಂದಕ್ಕೆ ಚಲಿಸಲು ಕನಿಷ್ಠ ಎರಡೂವರೆ ವರ್ಷ ಕಾಲ ಬೇಕು. ಆತನ ಸಾಡೇಸಾತಿಯಂತೂ ಏಳೂವರೆ ವರ್ಷ ಕಾಲ ಸಾಕಷ್ಟು ಕಾಡಿಸುತ್ತದೆ.
ಶನಿ ಎಂದರೆ ಬಹುತೇಕರಿಗೆ ಭಯ ಹೆಚ್ಚು. ಆತನನ್ನು ಒಲಿಸಲು ಸಾಕಷ್ಟು ಕಷ್ಟ ಪಡುತ್ತಾರೆ. ನಾನಾ ಪೂಜಾ ವಿಧಾನಗಳನ್ನು ಅನುಸರಿಸುತ್ತಾರೆ. ಬಡಬಗ್ಗರಿಗೆ ದಾನ ಮಾಡುತ್ತಾರೆ. ಆದರೆ ಶನಿವಾರ ಜನಿಸಿದ ಮೇಲೆ ಶನಿದೇವನ ವಿಶೇಷ ಅನುಗ್ರ ಇರಲಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ ಶನಿವಾರ, ಶನಿದೇವನಿಗೆ ಸಮರ್ಪಿತ ದಿನವಾಗಿದೆ. ಈ ಕಾರಣದಿಂದ ಶನಿದೇವನ ಪ್ರಭಾವ ವ್ಯಕ್ತಿಗಳ ಮೇಲೆ ಇರುತ್ತದೆ. ಈ ಕುರಿತು ಹೆಚ್ಚಿನ ಮಾಹಿತಿ ತಿಳಿದುಕೊಳ್ಳೋಣ ಬನ್ನಿ.
ನಾಯಿ ಎಂದ್ರೆ ನಂಬಿಕೆ ಮಾತ್ರ ಅಲ್ಲ, ಅದು ಆಪತ್ಭಾಂದವ; ಮುದ್ದಿನ ಶ್ವಾನದಿಂದ ಈ ಸಮಸ್ಯೆಗಳೇ ಇರಲ್ಲ..!
ಜೋತಿಷ್ಯ ಶಾಸ್ತ್ರದ ನಂಬಿಕೆಗಳ ಪ್ರಕಾರ ಶನಿವಾರ ಜನಿಸಿದ ವ್ಯಕ್ತಿಗಳ ಜೀವನ ಏರಿಳಿತದಿಂದ ಕೂಡಿರುತ್ತದೆ. ಈ ವ್ಯಕ್ತಿಗಳ ಜೀವನದಲ್ಲಿ ಹಲವು ರೀತಿಯ ಸಮಸ್ಯೆಗಳು ಎದುರಾಗುತ್ತವೆ. ಆದರೆ, ಕೊನೆಗೆ ಇವರು ಗೆದ್ದೇ ಗೆಲ್ಲುತ್ತಾರೆ. ಇವರಿಗೆ ಕ್ರೋಧ ಹೆಚ್ಚಾಗಿರುತ್ತದೆ. ಶನಿವಾರ ಜನಿಸಿದ ಜನರು ಹೆಚ್ಚು ಕೋಪಿಷ್ಠರಾಗಿರುತ್ತಾರೆ. ಆದರೆ ಇವರ ಮೇಲೆ ಶನಿದೇವನ ವಿಶೇಷ ಅನುಗ್ರಹ ಇರಲಿದೆ.
ಶನಿವಾರ ಜನಿಸಿದವರು ಪರಿಶ್ರಮ ಜೀವಿಗಳಾಗಿರುತ್ತಾರೆ. ತಮ್ಮ ಪರಿಶ್ರಮದಿಂದ ಇವರು ಯಶಸ್ಸನ್ನು ಸಾಧಿಸುತ್ತಾರೆ. ಇವರ ಜೀವನದಲ್ಲಿ ಸಾಕಷ್ಟು ಸಮಸ್ಯೆಗಳಿರುತ್ತವೆ. ಆದರೆ, ಇವರ ಮೇಲೆ ಶನಿದೇವನ ವಿಶೇಷ ಕೃಪೆ ಇರುವುದರಿಂದ ಇವರು ಎಲ್ಲಾ ರೀತಿಯ ಸಮಸ್ಯೆಗಳಿಂದ ಪಾರಾಗುತ್ತಾರೆ. ಎಲ್ಲಾ ಕಾರ್ಯಗಳನ್ನು ಸಂಪೂರ್ಣ ಶ್ರದ್ಧೆಯಿಂದ ನಿರ್ವಹಿಸುತ್ತಾರೆ. ಶನಿವಾರ ಜನಿಸಿದ ಜನರು ಯಾವುದೇ ಕೆಲಸ ಮಾಡಿದರು ಕೂಡ ಅದನ್ನು ಸಂಪೂರ್ಣ ಶ್ರದ್ಧೆ ಹಾಗೂ ನಿಷ್ಠೆಯಿಂದ ಪೂರ್ಣಗೊಳಿಸುತ್ತಾರೆ.
ಶನಿವಾರ ಹುಟ್ಟಿದವರು ಪರರಿಗೆ ಸಹಾಯ ಮಾಡುತ್ತಾರೆ. ದಾನ-ಪುಣ್ಯ ಕಾರ್ಯಗಳನ್ನು ಮಾಡುವಲ್ಲಿ ಇವರು ಯಾವತ್ತು ಮುಂದಿರುತ್ತಾರೆ. ಇವರ ಜೀವನದ ಆರಂಭದ ದಿನಗಳು ಕಷ್ಟದಿಂದ ಕೂಡಿರುತ್ತವೆ. ಶನಿವಾರ ಹುಟ್ಟಿದ ಜನರು ತಮ್ಮ ಜೀವನದ ಆರಂಭದ ದಿನಗಳಲ್ಲಿ ತುಂಬಾ ಕಷ್ಟವನ್ನು ಅನುಭವಿಸುತ್ತಾರೆ. ಆದರೆ ನಂತರ ಇವರ ಜೀವನ ಖುಷಿಯಿಂದ ತುಂಬಿರುತ್ತದೆ. ಶನಿದೇವ ಇವರನ್ನು ಸದಾ ಕಾಪಾಡುತ್ತಾರೆ.