ಹಿಂದೂಗಳ ದೇವರ ಮನೆಯಲ್ಲಿ ಸಾಲಿಗ್ರಾಮ ಇರೋದನ್ನು ನೀವು ನೋಡಿರಬಹುದು. ದೇವರ ಪೀಠದಲ್ಲಿರುವ ಸಾಲಿಗ್ರಾಮ ವಿಷ್ಣು ಸ್ವರೂಪ. ಅದನ್ನು ಭಯ- ಭಕ್ತಿಯಿಂದ ಪೂಜೆ ಮಾಡಿದ್ರೆ ಲಾಭ ಹೆಚ್ಚು. ಸಾಲಿಗ್ರಾಮದಿಂದ ಏನೆಲ್ಲ ಪ್ರಯೋಜನವಿದೆ ಎಂಬುದನ್ನು ನಾವಿಂದು ಹೇಳ್ತೆವೆ.
ಹಿಂದೂ ಧರ್ಮದಲ್ಲಿ ಸಾಲಿಗ್ರಾಮದ ಆರಾಧನೆಗೆ ವಿಶೇಷ ಮಹತ್ವವಿದೆ. ಸಾಲಿಗ್ರಾಮ ಕಪ್ಪು ಬಣ್ಣದ ದುಂಡಗಿನ ನಯವಾದ ಕಲ್ಲುಗಳ ರೂಪದಲ್ಲಿರುತ್ತದೆ. ಸಾಲಿಗ್ರಾಮದಲ್ಲಿ ವಿಷ್ಣು ನೆಲೆಸಿದ್ದಾನೆಂದು ಹೇಳಲಾಗುತ್ತದೆ.
ಧಾರ್ಮಿಕ (Religious) ಗ್ರಂಥಗಳ ಪ್ರಕಾರ, ಸಾಲಿಗ್ರಾಮ (Shaligram) ವನ್ನು ತುಳಸಿ (Tulsi) ಪತಿ ಎನ್ನಲಾಗುತ್ತದೆ. ಸಾಲಿಗ್ರಾಮವನ್ನು ದೇವರ ಮನೆಯಲ್ಲಿಟ್ಟು ಪೂಜೆ ಮಾಡಲಾಗುತ್ತದೆ. ಸಾಲಿಗ್ರಾಮವನ್ನು ಪೂಜಿಸುವ ಮನೆಗಳಲ್ಲಿ ವಿಷ್ಣುವಿನ ಆಶೀರ್ವಾದ ಯಾವಾಗಲೂ ಇರುತ್ತದೆ ಎಂದು ನಂಬಲಾಗಿದೆ. ಮನೆಯಲ್ಲಿ ಇಟ್ಟು ನಿತ್ಯ ಪೂಜಿಸುವುದರಿಂದ ಹಲವು ರೀತಿಯ ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ. ಇದರೊಂದಿಗೆ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಬರುತ್ತದೆ. ನಾವಿಂದು ಸಾಲಿಗ್ರಾಮದ ಬಗ್ಗೆ ಒಂದಿಷ್ಟು ಮಾಹಿತಿಯನ್ನು ನೀಡ್ತೇವೆ.
ಸಾಲಿಗ್ರಾಮ ಯಾರು? : ಮೊದಲೇ ಹೇಳಿದಂತೆ ಸಾಲಿಗ್ರಾಮವನ್ನು ವಿಷ್ಣುವಿನ ರೂಪವೆಂದು ಹೇಳಲಾಗುತ್ತದೆ. ಆದ್ರೆ ಸಾಲಿಗ್ರಾಮ ಎನ್ನುವುದು ಒಂದು ಊರಿನ ಹೆಸರು. ಸಾಲಿಗ್ರಾಮ ಒಂದು ಕಲ್ಲು. ನೇಪಾಳದ ಗಂಡಕ್ ನದಿಯ ತಳದಲ್ಲಿ ಇದು ಕಂಡುಬರುತ್ತವೆ. ಇಲ್ಲಿ ಸಾಲ್ಗ್ರಾಮ್ ಎಂಬ ಸ್ಥಳದಲ್ಲಿ ವಿಷ್ಣುವಿನ ದೇವಾಲಯವಿದೆ. ಅಲ್ಲಿ ವಿಷ್ಣುವಿನ ಈ ರೂಪವನ್ನು ಪೂಜಿಸಲಾಗುತ್ತದೆ. ಈ ಗ್ರಾಮದ ಹೆಸರಿನಿಂದಲೇ ಇದಕ್ಕೆ ಸಾಲಿಗ್ರಾಮ ಎಂದು ಹೆಸರು ಬಂದಿದೆ ಎಂದು ನಂಬಲಾಗಿದೆ.
Mahashivratri 2023: ಕನಸಿನಲ್ಲಿ ಹಾವು ಬರುತ್ತಾ? ಹಬ್ಬಕ್ಕೂ ಮುನ್ನ ಹಾವಿನ ಕನಸು ಬಿದ್ದರೆ ಸಂಪತ್ತಿನ ಸೂಚನೆ!
ಸಾಲಿಗ್ರಾಮದಲ್ಲಿದೆ ಇಷ್ಟೊಂದು ರೂಪ : ಪುರಾಣಗಳು 33 ವಿಧದ ಸಾಲಿಗ್ರಾಮ ದೇವರನ್ನು ಉಲ್ಲೇಖಿಸುತ್ತವೆ. ಅದರಲ್ಲಿ 24 ವಿಧದ ಸಾಲಿಗ್ರಾಮವು ವಿಷ್ಣುವಿನ 24 ಅವತಾರಗಳ ಸಂಕೇತವೆಂದು ಪರಿಗಣಿಸಲಾಗಿದೆ. ಉದಾಹರಣೆಗೆ, ಸಾಲಿಗ್ರಾಮದ ಆಕಾರವು ದುಂಡಾಗಿದ್ದರೆ, ಅದನ್ನು ದೇವರ ಗೋಪಾಲ ರೂಪವೆಂದು ಪರಿಗಣಿಸಲಾಗುತ್ತದೆ. ಮತ್ತೊಂದೆಡೆ, ಮೀನಿನ ಆಕಾರದ ಉದ್ದವಾದ ಸಾಲಿಗ್ರಾಮವನ್ನು ಮತ್ಸ್ಯ ಅವತಾರದ ಸಂಕೇತ ಎನ್ನಲಾಗುತ್ತದೆ. ಇದಲ್ಲದೆ ಆಮೆಯ ಆಕಾರದ ಸಾಲಿಗ್ರಾಮವನ್ನು ವಿಷ್ಣುವಿನ ಕಚಪ ಅಥವಾ ಕೂರ್ಮ ಅವತಾರದ ಸಂಕೇತವೆಂದು ಪರಿಗಣಿಸಲಾಗಿದೆ.
ಸಾಲಿಗ್ರಾಮವನ್ನು ಮನೆಯಲ್ಲಿಡುವ ನಿಯಮ :
ಸಾಲಿಗ್ರಾಮವನ್ನು ಮನೆಯಲ್ಲಿ ಪವಿತ್ರ ಸ್ಥಳದಲ್ಲಿ ಇಡಬೇಕು. ಅದನ್ನು ದೇವರ ಮನೆಯಲ್ಲಿ ಇಟ್ಟು ಪೂಜೆ ಮಾಡುವುದು ಒಳ್ಳೆಯದು.
ಸಾಲಿಗ್ರಾಮಕ್ಕೆ ತುಳಸಿ ದಳವನ್ನು ಹಾಕಿ ಪ್ರತಿ ದಿನ ಪೂಜೆ ಮಾಡಬೇಕಾಗುತ್ತದೆ.
ಧಾರ್ಮಿಕ ನಂಬಿಕೆಗಳ ಪ್ರಕಾರ, ಸಾಲಿಗ್ರಾಮ ದೇವರ ಪೂಜೆಯನ್ನು ಸಾಕಷ್ಟು ನಿಯಮಗಳೊಂದಿಗೆ ಮಾಡಬೇಕು. ಇಲ್ಲದಿದ್ದರೆ ಮನೆಯಲ್ಲಿ ಸಮಸ್ಯೆ ಎದುರಾಗುತ್ತದೆ.
ದೇವರ ಮನೆಯಲ್ಲಿ ಒಂದಕ್ಕಿಂತ ಹೆಚ್ಚು ಸಾಲಿಗ್ರಾಮಗಳನ್ನು ಎಂದಿಗೂ ಇಡಬಾರದು. ಇದ್ರಿಂದ ಆರ್ಥಿಕ ಬಿಕ್ಕಟ್ಟು ಮತ್ತು ರೋಗಗಳನ್ನು ಎದುರಿಸಬೇಕಾಗುತ್ತದೆ.
ಮನೆಯಲ್ಲಿ ಸಾಲಿಗ್ರಾಮವಿದ್ರೆ ಪೂಜೆಯನ್ನು ಭಕ್ತಿಯಿಂದ ಮಾಡ್ಬೇಕು. ಮಾಂಸ ಮತ್ತು ಮದ್ಯ ಸೇವಿಸಬಾರದು. ಮನೆಯಲ್ಲಿ ಸಾಲಿಗ್ರಾಮವಿದ್ರೆ ನಿತ್ಯ ಪೂಜೆ ಮಾಡುವುದು ಮುಖ್ಯವಾಗುತ್ತದೆ.
ಶನಿವಾರ ನಿಮ್ಮ ಕಣ್ಣಿಗೆ ಈ ವಿಷಯಗಳು ಬಿದ್ದರೆ ಶನಿಯ ಆಶೀರ್ವಾದ ಇದೆ ಎಂದರ್ಥ!
ಸಾಲಿಗ್ರಾಮ ಪೂಜೆ ಮಾಡುವುದ್ರಿಂದ ಆಗುವ ಲಾಭಗಳು :
ಸಾಲಿಗ್ರಾಮವನ್ನು ತುಳಸಿ ಜೊತೆ ಪೂಜೆ ಮಾಡಿದ್ರೆ ಮನೆಯಲ್ಲಿ ಆರ್ಥಿಕ ಸಮಸ್ಯೆ ಕಾಡುವುದಿಲ್ಲ. ಬಡತನ ದೂರವಾಗುತ್ತದೆ. ಸಂಸಾರದಲ್ಲಿ ಸುಖ, ಶಾಂತಿ ನೆಲೆಸುತ್ತದೆ.
ಸಾಲಿಗ್ರಾಮ ಮತ್ತು ತುಳಸಿ ಪ್ರತಿ ವರ್ಷ ಕಾರ್ತಿಕ ಮಾಸದಲ್ಲಿ ವಿವಾಹವಾಗುತ್ತಾರೆ. ಕಲ್ಲಿನ ರೂಪದಲ್ಲಿ ಭೂಮಿಯ ಮೇಲೆ ನೆಲೆಸಿರುವ ಸಾಲಿಗ್ರಾಮದ ರೂಪದಲ್ಲಿರುವ ವಿಷ್ಣುವನ್ನು, ತುಳಸಿ ಜೊತೆ ಮದುವೆ ಮಾಡುವುದ್ರಿಂದ ಹಣದ ಕೊರತೆ, ಗಲಾಟೆ, ನೋವು, ರೋಗ ದೂರವಾಗುತ್ತದೆ.
ಸಾಲಿಗ್ರಾಮಕ್ಕೆ ಪೂಜೆ ಮಾಡಿದ್ರೆ ತೀರ್ಥಕ್ಷೇತ್ರದ ದರ್ಶನ ಪಡೆಯಬೇಕಾಗಿಲ್ಲ. ಎಲ್ಲ ಕ್ಷೇತ್ರಗಳಿಗೆ ಭೇಟಿ ನೀಡಿದ ಪುಣ್ಯ ಸಿಗುತ್ತದೆ. ನಿಯಮಿತ ಪೂಜೆಯಿಂದ ಸಕಲ ಆನಂದ ಪ್ರಾಪ್ತಿಯಾಗುತ್ತದೆ. ಇದ್ರಿಂದ ಮನೆಯಲ್ಲಿ ಸದಾ ಲಕ್ಷ್ಮಿ ನೆಲೆ ನಿಲ್ಲುತ್ತಾಳೆ.
ಸಾಲಿಗ್ರಾಮದ ಮೇಲೆ ಬಿದ್ದ ನೀರನ್ನು ನಿಮ್ಮ ಮೈ ಮೇಲೆ ಚಿಮುಕಿಸಿಕೊಂಡ್ರೆ ತೀರ್ಥಸ್ನಾನ ಮಾಡಿದ ಪುಣ್ಯ ಲಭಿಸುತ್ತದೆ ಎಂದು ನಂಬಲಾಗಿದೆ.
ವಾಸ್ತು ಶಾಸ್ತ್ರದ ಪ್ರಕಾರ, ಸಾಲಿಗ್ರಾಮವನ್ನು ನಿಯಮಿತವಾಗಿ ಪೂಜಿಸುವ ಮನೆಯಲ್ಲಿ ವಾಸ್ತು ದೋಷ ನಿವಾರಣೆಯಾಗುತ್ತದೆ.
ನಿತ್ಯವೂ ಸಾಲಿಗ್ರಾಮಕ್ಕೆ ಜಲಾಭಿಷೇಕ ಮಾಡುವವನಿಗೆ ಸಕಲ ಸುಖವೂ ಲಭಿಸುತ್ತದೆ.