ಮಹಾಭಾರತದ ಶಕುನಿಗಿತ್ತು ತಾಲಿಬಾನಿಗಳ ಅಫ್ಘಾನಿಸ್ತಾನದೊಂದಿಗೆ ನಂಟು!

By Reshma Rao  |  First Published May 14, 2024, 5:15 PM IST

ಶಕುನಿ ಮಹಾಭಾರತದ ಪ್ರಮುಖ ಪಾತ್ರಗಳಲ್ಲಿ ಒಂದು. ಶಕುನಿಯು ಹಸ್ತಿನಾಪುರದಲ್ಲಿ ಇದ್ದುಕೊಂಡು ಮಹಾಭಾರತ ಯುದ್ಧಕ್ಕೆ ಸಂಚು ಹೂಡಿದ್ದರೂ, ಶಕುನಿಗೆ ಆಫ್ಘಾನಿಸ್ತಾನದೊಂದಿಗೆ ಸಂಬಂಧವಿತ್ತು.
 


ಮಹಾಭಾರತದ ಬಹು ದೊಡ್ಡ ಪಾತ್ರ ಶಕುನಿಯದು. ಕತೆಯ ಸಾಕಷ್ಟು ತಿರುವುಗಳು ಸಂಭವಿಸುವುದೇ ಶಕುನಿಯ ಕುತಂತ್ರದಿಂದ. ಶಕುನಿ ಮಾಮ ಎಂದೇ ಪ್ರಸಿದ್ಧವಾಗಿರುವ ಆತ ಮಹಾಭಾರತ ಯುದ್ಧದಲ್ಲಿ, ಕೌರವರ ಪರವಾಗಿ ಹೋರಾಡಿದನು. ಆದರೆ ಈ ಯುದ್ಧದಲ್ಲಿ ಕೌರವರು ಸೋಲುತ್ತಾರೆ ಎಂದು ಶಕುನಿಗೆ ತಿಳಿದಿತ್ತು, ಇದರ ಹೊರತಾಗಿಯೂ ಅವನು ತನ್ನ ಸೇಡು ತೀರಿಸಿಕೊಳ್ಳಲು ತನ್ನ ಸಹೋದರಿಯ ಕುಟುಂಬವನ್ನು ನಾಶಪಡಿಸಿದನು.

ಈ ಮಹಾಭಾರತದ ಖಳನಾಯಕನಿಗೂ ಇಂದಿನ ತಾಲಿಬಾನಿಗಳ ಆಫ್ಘಾನಿಸ್ತಾನಕ್ಕೂ ನಂಟಿದೆ ಎಂದರೆ ಅಚ್ಚರಿ ಎನಿಸಬಹುದು. ಹೆಚ್ಚಿನ ಸಮಯವನ್ನು ಭಾರತದ ಹಸ್ತಿನಾಪುರದಲ್ಲೇ ಕಳೆದ ಶಕುನಿಗೆ ತಾಲಿಬಾನಿಗಳ ನಾಡಿನೊಂದಿಗೆ ಏನು ಸಂಬಂಧವಿತ್ತು ಗೊತ್ತೇ?


 

Tap to resize

Latest Videos

ಅಫ್ಘಾನಿಸ್ತಾನದೊಂದಿಗೆ ಶಕುನಿಯ ಸಂಬಂಧ
ಶಕುನಿಯು ಗಾಂಧಾರ (ಇಂದಿನ ಕಂದಹಾರ್) ಸಾಮ್ರಾಜ್ಯದ ರಾಜನಾಗಿದ್ದನು. ಕಂದಹಾರ್ ಅಫ್ಘಾನಿಸ್ತಾನದಲ್ಲಿದೆ. ಮಹಾಭಾರತದ ಕಾಲದಲ್ಲಿ ಗಾಂಧಾರ ಪ್ರಬಲ ಸಾಮ್ರಾಜ್ಯವಾಗಿತ್ತು. ಇತ್ತೀಚಿನ ದಿನಗಳಲ್ಲಿ, ಅಫ್ಘಾನಿಸ್ತಾನದ ಕಂದಹಾರ್ ಅನ್ನು ತಾಲಿಬಾನ್‌ನ ಭದ್ರಕೋಟೆ ಎಂದು ಪರಿಗಣಿಸಲಾಗಿದೆ. ಇಲ್ಲಿ ತಾಲಿಬಾನ್ ಆಡಳಿತ ನಡೆಯುತ್ತಿದೆ.

ಕಂದಹಾರ್ ಪ್ಲೇನ್ ಹೈಜಾಕ್‌ನಲ್ಲಿ ಭಾಗಿಯಾಗಿದ್ದ ತಾಲಿಬಾನ್ ಸಂಸ್ಥಾಪಕ ಮೌಲಾನಾ ಮುಲ್ಲಾ ಒಮರ್ ಕೂಡ ಕಂದಹಾರ್‌ನಲ್ಲಿ ಜನಿಸಿದರು. ಕಂದಹಾರ್ 90ರ ದಶಕದಲ್ಲಿ ಎರಡು ಘಟನೆಗಳಿಗೆ ಹೆಸರುವಾಸಿಯಾಗಿದೆ. ಅವುಗಳಲ್ಲಿ ಒಂದು ತಾಲಿಬಾನ್‌ನ ಉದಯ ಮತ್ತು ಇನ್ನೊಂದು ಭಾರತೀಯ ವಿಮಾನವನ್ನು ಹೈಜಾಕ್ ಮಾಡಿ ಕಂದಹಾರ್‌ಗೆ ಕೊಂಡೊಯ್ಯುವುದು.

ಮಹಾಭಾರತದ ಮಾಸ್ಟರ್ ಮೈಂಡ್
ಶಕುನಿ ಗಾಂಧಾರಿಯ ಸಹೋದರ, ಅಂದರೆ ಕೌರವರ ತಾಯಿಯ ಚಿಕ್ಕಪ್ಪ. ದುರ್ಯೋಧನನ ದುಷ್ಟ ನೀತಿಗಳ ಹಿಂದೆ ಶಕುನಿ ಇದ್ದ.

ಶಕುನಿಯು ಹಸ್ತಿನಾಪುರದ ರಾಜ ಧೃತರಾಷ್ಟ್ರನಿಂದ ತನಗಾದ ಅವಮಾನವನ್ನು ತೀರಿಸಿಕೊಳ್ಳಲು ಬಯಸಿದನು, ಆದ್ದರಿಂದ ಅವನು ಕೌರವರು ಮತ್ತು ಪಾಂಡವರನ್ನು ತಮ್ಮತಮ್ಮಲ್ಲೇ ಹೋರಾಡುವಂತೆ ಮಾಡಿದನು.

ರವಿಶಂಕರ್ ಗುರೂಜಿ ಬಾಲ್ಯ, ಓದು, ಆಶ್ರಮ.. ನೀವು ತಿಳಿಯಬೇಕಾದ ಎಲ್ಲವೂ ಇಲ್ಲಿದೆ
 

ಶಕುನಿ ಯಾವ ಸೇಡನ್ನು ತೀರಿಸಿಕೊಳ್ಳಲು ಬಯಸಿದನು?
ಶಕುನಿಗೆ ತನ್ನ ತಂಗಿ ಗಾಂಧಾರಿ ಅಂಧ ಧೃತರಾಷ್ಟ್ರನನ್ನು ಮದುವೆಯಾಗುವುದು ಇಷ್ಟವಿರಲಿಲ್ಲ. ಭೀಷ್ಮನ ಒತ್ತಡದಲ್ಲಿ ಗಾಂಧಾರಿ ಧೃತರಾಷ್ಟ್ರನನ್ನು ಮದುವೆಯಾಗಬೇಕಾಯಿತು. ಎರಡನೆಯ ಕಾರಣವೆಂದರೆ ಗಾಂಧಾರಿ ಮೇಕೆಯ ವಿಧವೆ ಎಂದು ಧೃತರಾಷ್ಟ್ರನಿಗೆ ತಿಳಿದಿರಲಿಲ್ಲ. ಧೃತರಾಷ್ಟ್ರನ ಕೈ ಹಿಡಿವ ಮೊದಲು ಆಕೆಯ ದೌರ್ಭಾಗ್ಯ ನೀಗಿಸಲು ಮೇಕೆಯೊಂದಿಗೆ ವಿವಾಹ ಮಾಡಲಾಗಿತ್ತು. ಈ ವಿಷಯವು ಬೆಳಕಿಗೆ ಬಂದಾಗ, ಧೃತರಾಷ್ಟ್ರನು ತನ್ನ ಮಾವ ಸುಬಲ ಮತ್ತು ಶಕುನಿ ಮತ್ತು ಅವನ 100 ಮಕ್ಕಳನ್ನು ಬಂಧಿಸಿದನು.

ಅವರನ್ನು ತುಂಬಾ ಕೆಟ್ಟದಾಗಿ ನಡೆಸಿಕೊಳ್ಳಲಾಯಿತು. ರಾಜನ ಮಕ್ಕಳೆಲ್ಲರೂ ಕೊಲ್ಲಲ್ಪಟ್ಟರು ಮತ್ತು ಅವನ ಕೋರಿಕೆಯ ಮೇರೆಗೆ ಶಕುನಿಯನ್ನು ಬಿಡುಗಡೆ ಮಾಡಲಾಯಿತು. ಶಕುನಿ ಯಾವಾಗಲೂ ಕೌರವರ ಜೊತೆ ಇರುತ್ತಾನೆ ಎಂದು ಸುಬಲನು ಧೃತರಾಷ್ಟ್ರನಿಗೆ ಭರವಸೆ ನೀಡಿದ್ದನು. ಆದರೆ ಶಕುನಿ ಈ ಅವಮಾನವನ್ನು ಎಂದಿಗೂ ಮರೆಯಲಿಲ್ಲ ಮತ್ತು ಅವನು ಮಹಾಭಾರತ ಯುದ್ಧವನ್ನು ನಡೆಸಲು ಸಂಚು ಹೂಡಿದನು.

click me!