ಸಿಂಗಲ್‌ ಮದರ್ಸ್‌ಗೇ ಸ್ಫೂರ್ತಿ ಈ ಸೀತಾ ದೇವಸ್ಥಾನ, ಇಲ್ಲಿ ರಾಮನ ಮೂರ್ತಿಯೂ ಇಲ್ಲ!

By Suvarna News  |  First Published Nov 15, 2023, 11:35 AM IST

ರಾಮಾಯಣದಲ್ಲಿ ಬರುವ ಸೀತೆ ಒಬ್ಬ ಸಿಂಗಲ್ ಮದರ್‌ ಆಗಿ ತನ್ನಿಬ್ಬರು ಮಕ್ಕಳನ್ನು ಬೆಳೆಸಿದವಳು. ಅವಳನ್ನೇ ಸ್ಫೂರ್ತಿಯಾಗಿಟ್ಟು ನಿರ್ಮಿಸಿರುವ ಈ ದೇವಸ್ಥಾನ ಎಲ್ಲ ಸಿಂಗರ್ ಮದರ್‌ಗಳಿಗೆ ಸ್ಫೂರ್ತಿ ತುಂಬುವಂತಿದೆ. ಅಷ್ಟಕ್ಕೂ ಆ ದೇವಸ್ಥಾನ ಯಾವುದು? ಅದೆಲ್ಲಿದೆ?


ಸಿಂಗಲ್ ಮದರ್ ಕಾಂಸೆಪ್ಟ್ ಆಧುನಿಕ ಕಾಲದ್ದು ಅಂತ ಬಹಳ ಜನ ಅಂದುಕೊಂಡಿದ್ದಾರೆ. ಆದರೆ ಅದು ಪೂರ್ತಿ ಸತ್ಯ ಅಲ್ಲ ಅನ್ನೋದು ಇದೀಗ ಸಾಬೀತಾಗಿದೆ. ಬರೀ ಸೀತೆಯನ್ನಷ್ಟೇ ಆರಾಧಿಸುವ, ರಾಮನ ಏಕೈಕ ವಿಗ್ರಹವೂ ಇಲ್ಲದ ಅಪರೂಪದ ಪುರಾತನ ದೇವಾಲಯವೊಂದು ಸಿಂಗರ್‌ ಮದರ್‌ಗಳಿಗೆ ಸ್ಪೂರ್ತಿ ತುಂಬುವ ಹಾಗಿದೆ. ಇವತ್ತು ನಾವೆಷ್ಟೇ ಆಧುನಿಕ ಯುಗ ಅಂದುಕೊಂಡರೂ ನಮ್ಮ ಮನಸ್ಸು ವಿಶಾಲವಾಗಿಲ್ಲ. ತಂದೆಯನ್ನು ಬಿಟ್ಟು ತಾಯಿಯೊಬ್ಬಳೇ ಮಗುವನ್ನು ಪೋಷಿಸುವುದು ತೀರಾ ಆಧುನಿಕ ಅಂದುಕೊಂಡ ಈ ಯುಗದಲ್ಲೂ ಕಷ್ಟವೇ. ಆದರೆ ಈ ಸಿಂಗಲ್ ಮದರ್ ಕಾಂಸೆಪ್ಟ್ ಬಹಳ ಹಿಂದಿನಿಂದಲೂ ನಮ್ಮಲ್ಲಿ ಜಾರಿಯಲ್ಲಿತ್ತು. ನಮ್ಮ ಗಟ್ಟಿಗಿತ್ತಿ ಹೆಣ್ಣುಮಕ್ಕಳು ಗಂಡನ ಸಹಾಯವಿಲ್ಲದೇ ಮಕ್ಕಳನ್ನು ಪೋಷಿಸುತ್ತಿದ್ದರು ಅನ್ನುವುದಕ್ಕೆ ಸಾಕಷ್ಟು ಉದಾಹರಣೆಗಳು ನಮ್ಮ ಪುರಾಣಗಳಿಂದಲೇ ದೊರೆಯುತ್ತವೆ. 

ವಾಲ್ಮೀಕಿ ರಾಮಾಯಣ ರಾಮ ಸೀತೆ ಅಯೋಧ್ಯೆಗೆ ಮರಳುವುದರೊಂದಿಗೆ ಕೊನೆಯಾಗುತ್ತದೆ. ಆದರೆ ಆ ಬಳಿಕ ಬಂದ ರಾಮಾಯಣದಲ್ಲಿ ರಾಮ ಅಗಸನೊಬ್ಬನ ಮಾತು ಕೇಳಿ ಪತ್ನಿ ಸೀತೆಯನ್ನು ಕಾಡಿಗೆ ಕಳುಹಿಸುತ್ತಾನೆ. ಆ ಹೊತ್ತಿಗೆ ಆಕೆ ತುಂಬು ಗರ್ಭಿಣಿ. ಕಾಡಿನ ನಡುವೆ ವಾಲ್ಮೀಖಿ ಋಷಿಯ ಆಶ್ರಮದಲ್ಲಿ ತನ್ನ ಮಕ್ಕಳಿಗೆ ಜನ್ಮ ನೀಡಿ ಅಲ್ಲೇ ಮಕ್ಕಳನ್ನು ಪೋಷಿಸಿ ಬೆಳೆಸುತ್ತಾಳೆ. ಹಾಗೆ ನೋಡಿದರೆ ಸೀತೆ ನಮ್ಮ ಪರಂಪರೆಯ ಅತೀ ಪುರಾತನ ಸಿಂಗಲ್ ಮದರ್ ಅನ್ನಬಹುದು. ಆದರೆ ಈ ಸೂಕ್ಷ್ಮವನ್ನು ಗುರುತಿಸುವ ಕೆಲಸ ನಮ್ಮಲ್ಲಾಗಲಿಲ್ಲ. ಸೀತೆಯ ಗಟ್ಟಿತನವನ್ನು ಪ್ರಶಂಸಿಸುವ ಬದಲಿಗೆ ಆಕೆಯ ಬಗ್ಗೆ ಅನುಕಂಪ ದೃಷ್ಟಿಯನ್ನಷ್ಟೇ ನಮ್ಮ ಕಥೆಗಳು ಬೀರುತ್ತವೆ. 

Tap to resize

Latest Videos

ಕಾಸರಗೋಡಿನ ಅನಂತಪುರ ಸರೋವರ ಕ್ಷೇತ್ರದಲ್ಲಿ ಅಚ್ಚರಿ, ಬಬಿಯಾ ಬಳಿಕ ಮರಿ ಮೊಸಳೆ ಪ್ರತ್ಯಕ್ಷ!

ಆದರೆ ಸೀತೆಯ ಗಟ್ಟಿತನವನ್ನು ಒಂದು ಕಾಲದ ಜನ ಪ್ರಶಂಸೆ ಮಾಡಿದ್ದರು ಅನ್ನುವುದಕ್ಕೆ ಉದಾಹರಣೆಯಾಗಿ ಸೀತೆಗೆಂದೇ ನಿರ್ಮಿಸಲಾದ ಒಂದು ದೇವಾಲಯವಿದೆ. ಇಲ್ಲಿ ಸೀತಾಮಾತೆಯೇ ಆರಾಧ್ಯ ದೈವ. ರಾಮನಿಗಾಗಲೀ, ಆತನ ಪರಿವಾರಕ್ಕಾಗಲೀ ಇಲ್ಲಿ ಸ್ಥಾನವಿಲ್ಲ. ನೂರಾರು ವರ್ಷ ಹಳೆಯ ಈ ದೇವಾಲಯ ಕಾಲ ಗರ್ಭದಲ್ಲಿ ಸೇರಿ ಹೋದಂತಿತ್ತು. ಇತ್ತೀಚೆಗೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಹೊತ್ತಿಗೆ ಈ ಸೀತಾ ಮಾತೆಯ ದೇವಾಲಯದ ಬಗ್ಗೆ ಒಂದಿಷ್ಟು ಜನ ಬೆಳಕು ಚೆಲ್ಲುವ ಕೆಲಸ ಮಾಡಿದರು. ಇದು ಅಯೋಧ್ಯೆಗಿಂತ 900 ಕಿಮೀ ದೂರದಲ್ಲಿದೆ. ಮಹಾರಾಷ್ಟ್ರದ ಯಾವತ್ಮಾಲ್ ಅನ್ನೋ ಜಿಲ್ಲೆಯಲ್ಲಿ ಸೀತೆಗೆಂದೇ ನಿರ್ಮಿಸಲಾದ ಈ ವಿಶೇಷ ದೇವಾಲಯವಿದೆ. ಇಲ್ಲಿನ ಮತ್ತೊಂದು ವಿಶೇಷ ಅಂದರೆ ಇಲ್ಲಿ ಸೀತೆಯ ವಿಗ್ರಹದ ಜೊತೆಗೆ ಅವಳ ಅವಳಿ ಮಕ್ಕಳಾದ ಲವ ಕುಶರ ವಿಗ್ರಹಗಳೂ ಇವೆ. ಆದರೆ ರಾಮನ ಒಂದೇ ಒಂದು ಮೂರ್ತಿಯೂ ಇಲ್ಲಿ ಇಲ್ಲ.

ಇತ್ತೀಚೆಗೆ ಈ ದೇವಸ್ಥಾನದ ನವೀಕರಣವಾಯ್ತು. ಇಲ್ಲಿನ ಜನ ಬಹು ಸಡಗಡದಿಂದ ದೇವಾಲಯದ ಜೀರ್ಣೋದ್ಧಾರ ಮಾಡಿದ್ದಾರೆ. ಅವರಿಗೆಲ್ಲ ತಾವು ಆರಾಧಿಸುವ ಸೀತಾ ಮಾತೆ ಹಾಗೂ ಆಕೆಯ ಅವಳಿ ಮಕ್ಕಳ ಬಗ್ಗೆ ಭಯ, ಭಕ್ತಿ, ಗೌರವಗಳಿವೆ. ತಾಯಿ ಸೀತೆಯನ್ನು ಇಲ್ಲಿಯ ಮಂದಿ ಆರಾಧ್ಯ ದೈವವೆಂದೇ ಪೂಜಿಸುತ್ತಾರೆ. ಲವ ಕುಶರಿಗೂ ಪೂಜೆ ಸಲ್ಲುತ್ತದೆ. ಆದರೆ ಜೀವನ ಸಂಗಾತಿ ಸೀತೆಯ ಮೇಲೆ ಅನುಮಾನ ಪಟ್ಟು ಆರೋಪ ಹೊರಿಸಿದ, ತುಂಬು ಗರ್ಭಿಣಿಯನ್ನು ಕಾಡಿಗೆ ಕಳುಹಿಸಿದ ರಾಮನನ್ನು ಇಲ್ಲಿಯ ಜನ ಪೂಜಿಸುವುದಿಲ್ಲ. ಹೆಚ್ಚಿನ ರಾಮ ದೇವಾಲಯದಲ್ಲಿ ಸೀತೆಯ ವಿಗ್ರಹ ಇರುವುದು ರೂಢಿ. ಆದರೆ ಅದಕ್ಕೆ ಭಿನ್ನವಾಗಿ ಇಲ್ಲಿ ಸೀತೆಯನ್ನು ಮಾತ್ರ ಪೂಜಿಸುತ್ತಾರೆ. 

ಈ ದೇವಾಲಯ ಸಿಂಗರ್ ಮದರ್‌ಗಳಲ್ಲಿ ಆತ್ಮವಿಶ್ವಾಸವನ್ನೂ ತುಂಬುವಂತಿದೆ. 

ಜಿಬುಟಿಯಲ್ಲಿ ತಯಾರಿಸೋ ಫ್ರೆಂಚ್ ಬ್ರೆಡ್ ಮಹತ್ವ ತಿಳಿಸಿದ ಡಾ. ಬ್ರೋ
 

click me!