ಮದುವೆ ಒಂದು ಪವಿತ್ರ ಬಂಧವಾಗಿದ್ದು, ಇದರಲ್ಲಿ ದಂಪತಿಯ ಸಮ್ಮಿಲನ (amalgamation) ವಷ್ಟೇ ಅಲ್ಲ, ಜವಾಬ್ದಾರಿಗಳ ಈಡೇರಿಕೆಯೂ ಇರುತ್ತದೆ. ಈ ವಿವಾಹ ಸಮಾರಂಭದಲ್ಲಿ 7ನೇ ಸಂಖ್ಯೆ (7th number) ಗೆ ವಿಶೇಷ ಮಹತ್ವವಿದೆ. 7 ಸುತ್ತುಗಳು, 7 ಪದಗಳು, 7 ಜನ್ಮಗಳು ಹಿಂದೂ ವಿವಾಹದಲ್ಲಿ ಬಹಳ ಮುಖ್ಯವಾಗಿವೆ.
ಮದುವೆ ಒಂದು ಪವಿತ್ರ ಬಂಧವಾಗಿದ್ದು, ಇದರಲ್ಲಿ ದಂಪತಿಯ ಸಮ್ಮಿಲನ (amalgamation) ವಷ್ಟೇ ಅಲ್ಲ, ಜವಾಬ್ದಾರಿಗಳ ಈಡೇರಿಕೆಯೂ ಇರುತ್ತದೆ. ಈ ವಿವಾಹ ಸಮಾರಂಭದಲ್ಲಿ 7ನೇ ಸಂಖ್ಯೆ (7th number) ಗೆ ವಿಶೇಷ ಮಹತ್ವವಿದೆ. 7 ಸುತ್ತುಗಳು, 7 ಪದಗಳು, 7 ಜನ್ಮಗಳು ಹಿಂದೂ ವಿವಾಹದಲ್ಲಿ ಬಹಳ ಮುಖ್ಯವಾಗಿವೆ. ಅವುಗಳ ಮಾಹಿತಿ ಇಲ್ಲಿದೆ.
ಮದುವೆ ಎರಡು ಎರಡು ಆತ್ಮ (soul) ಗಳ ನಡುವಿನ ಸಂಬಂಧ ಎನ್ನುತ್ತಾರೆ ಹಿರಿಯರು. ಹಿಂದೂಗಳ ವಿವಾಹಗಳಲ್ಲಿ ವಧು-ವರರು ಕೈ ಹಿಡಿದು ಅಗ್ನಿಕುಂಡಕ್ಕೆ 7 ಸುತ್ತುತ್ತಾರೆ. ಇದನ್ನನೇ ಸಪ್ತಪದಿ (Saptapadi ) ಎನ್ನುತ್ತೇವೆ. ಪ್ರತಿಯೊಂದು ಹೆಜ್ಜೆಯು ತನ್ನದೇ ಆದ ಮಹತ್ವ ೯Significance) ವನ್ನು ಹೊಂದಿದ್ದು, ಏಳೇಳು ಜನ್ಮದಲ್ಲೂ ಜೊತೆಯಾಗಿರುವೆ ಎಂಬುವ ಸಂಕೇತ ಸೂಚಿಸುತ್ತದೆ.
ಈ ಸಂಖ್ಯೆ 7ರ ಮಹತ್ವ
ಹಿಂದೂ ಧರ್ಮಗ್ರಂಥ (scripture) ಗಳ ಪ್ರಕಾರ, ಭೂಮಿಯ ಮೇಲೆ ಕಂಡುಬರುವ ಎಲ್ಲಾ ಪ್ರಮುಖ ವಸ್ತುಗಳ ಸಂಖ್ಯೆ 7 ಆಗಿದೆ. ಏಳು ರಾಗಗಳಂತೆ, ಮಳೆ ಬಿಲ್ಲಿನ 7 ಬಣ್ಣಗಳು, 7 ನಕ್ಷತ್ರಗಳು, 7 ಸಾಗರಗಳು, 7 ಋಷಿಗಳು, 7 ದಿನಗಳು, 7 ಚಕ್ರಗಳು ಇತ್ಯಾದಿ. ಅದಕ್ಕಾಗಿಯೇ ವೈದಿಕ ಮತ್ತು ಪುರಾಣ (mythology) ದ ನಂಬಿಕೆಗಳ ಪ್ರಕಾರ ಸಂಖ್ಯೆ 7 ಅನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ಮದುವೆ (marriage) ಯ ಸಮಯದಲ್ಲಿ 7 ಸುತ್ತುಗಳನ್ನು ತೆಗೆದುಕೊಳ್ಳಲಾಗುತ್ತದೆ.
ಆತಂಕ ಎಂಬ ಅಸ್ವಸ್ಥತೆ: ಈ ರಾಶಿಯವರು ಹುಷಾರಾಗಿ ಇರಬೇಕು
ಸಪ್ತಪದಿ ಯಾಕೆ ತುಳಿಯಬೇಕು?
ಹಿಂದೂ ಧರ್ಮದಲ್ಲಿ ಮದುವೆಯನ್ನು 7 ಜನ್ಮಗಳ ಬಂಧ (bond) ವೆಂದು ಪರಿಗಣಿಸಲಾಗುತ್ತದೆ. ಮದುವೆಯಲ್ಲಿ, ವಧು ಮತ್ತು ವರರು ಸಾಕ್ಷಿಯಾಗಿ ಅಗ್ನಿ (fire) ಯ ಸುತ್ತ ಈ ಸುತ್ತುಗಳನ್ನು ತೆಗೆದುಕೊಳ್ಳುತ್ತಾರೆ. ಅದೇ ಸಮಯದಲ್ಲಿ, ಜೀವನದುದ್ದಕ್ಕೂ ದೇಹ, ಮನಸ್ಸು ಮತ್ತು ಆತ್ಮದ ಮೇಲೆ ಏಳು ಸುತ್ತುಗಳನ್ನು ನಡೆಸಲಾಗುತ್ತದೆ ಮತ್ತು ಗಂಡ (husband) ಮತ್ತು ಹೆಂಡತಿಯ ಸಂಬಂಧವನ್ನು ಕಾಪಾಡಿಕೊಳ್ಳಲು ವಧು ಪ್ರತಿಜ್ಞೆ ಮಾಡುತ್ತಾರೆ. ಈ ಏಳು ಸುತ್ತುಗಳನ್ನು ಹಿಂದೂ ವಿವಾಹದ ಸ್ಥಿರತೆಯ ಮುಖ್ಯ ಸ್ತಂಭಗಳೆಂದು ಪರಿಗಣಿಸಲಾಗಿದೆ.
ಮದುವೆಯ 7 ಭರವಸೆಗಳು
ಲಗ್ನದ ಸಪ್ತಪದಿಯಲ್ಲಿ 7 ಭರವಸೆ (hope) ಗಳನ್ನು ಮಾಡಲಾಗುತ್ತದೆ. ಪ್ರತಿ ಸುತ್ತಿನಲ್ಲಿ ವಧು ಮತ್ತು ವರರು ಜೀವನಕ್ಕಾಗಿ ಪರಸ್ಪರ ಬೆಂಬಲಿಸುವ ಭರವಸೆ ನೀಡುತ್ತಾರೆ. ಈ ಸುತ್ತುಗಳು ಮತ್ತು ಪ್ರತಿಜ್ಞೆ (oath) ಗಳು ಹಿಂದೂ ಧರ್ಮಕ್ಕೆ ಬಹಳ ಮುಖ್ಯ . ಇದರ ಪ್ರಕಾರ ಇಬ್ಬರು ಪರಸ್ಪರ ಗೌರವಿಸುತ್ತಾರೆ ಮತ್ತು ದೈಹಿಕವಾಗಿ (Physically) ಮತ್ತು ಆಧ್ಯಾತ್ಮಿಕವಾಗಿ ಒಂದಾಗುತ್ತಾರೆ. ಇದನ್ನು ವಿವಾಹದ ಪವಿತ್ರ ಬಂಧವೆಂದು ಪರಿಗಣಿಸಲಾಗಿದೆ. ಈ ಕಾರಣದಿಂದಾಗಿ ಒಬ್ಬ ವ್ಯಕ್ತಿಯು 7 ಜನ್ಮಗಳು ಮತ್ತು 7 ಸುತ್ತುಗಳ ಮೂಲಕ ಹೋಗುತ್ತಾನೆ ಎಂದು ಹೇಳಲಾಗುತ್ತದೆ, ಆದ್ದರಿಂದ ಇದನ್ನು 7 ಜನ್ಮಗಳ ಸಾಥ್ ಎಂದು ಕರೆಯಲಾಗುತ್ತದೆ.
ದಾಂಪತ್ಯ ಮುರಿಯಲು ‘ಈ ರಾಶಿಗಳು’ ಕಾರಣ: ಪರಿಹಾರ ಏನು?
ಪ್ರತಿಯೊಂದು ಸುತ್ತಿಗೂ ಮಹತ್ವ
ಹಿಂದೂ ಧರ್ಮದಲ್ಲಿ ಸಪ್ತಪದಿಗೆ ವಿಶೇಷವಾದ ಮಹತ್ವ (Significance) ವಿದೆ. ಹಿಂದೂ ಧರ್ಮದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡುವ ಪ್ರತಿಯೊಂದು ಜೋಡಿ ಕೂಡ ಸಪ್ತಪದಿ ತುಳಿಯಬೇಕು. ಮದುವೆ ವೇಳೆ ವಧು ಹಾಗೂ ವರ ಅಗ್ನಿಯನ್ನು ಸಾಕ್ಷಿಯಾಗಿ (witness) ಸಿಕೊಂಡು ಸಪ್ತಪದಿ ತುಳಿಯುತ್ತಾರೆ. ಆದರೆ ಇದರ ಮಹತ್ವ ಹಾಗೂ ಸರಿಯಾದ ಅರ್ಥ ಹೆಚ್ಚಿನವರಿಗೆ ತಿಳಿದಿರುವುದಿಲ್ಲ. ಅಗ್ನಿ ದೇವರನ್ನು ಸಾಕ್ಷಿಯಾಗಿಸಿಕೊಂಡು ತೆಗೆದುಕೊಳ್ಳುವ ಪ್ರತಿಯೊಂದು ಸುತ್ತಿಗೂ ಮಹತ್ವವಿದೆ. ಸಂಬಂಧಗಳ ಮಹತ್ವ ಕಡಿಮೆಯಾಗುತ್ತಿರುವ ಇಂದಿನ ದಿನಗಳಲ್ಲಿ ಸಪ್ತಪದಿಯ ಮಹತ್ವ ಅರಿತುಕೊಳ್ಳುವುದು ಅತೀ ಅಗತ್ಯ.