ಜು.10ರಿಂದ ಚಾಮುಂಡಿ ವರ್ಧಂತಿ; ಶಕ್ತಿಪೀಠದ ಪುರಾಣ ಬಲ್ಲಿರಾ?

By Suvarna News  |  First Published Jun 12, 2023, 3:51 PM IST

ಜೂನ್ 23ರಿಂದ ಆಷಾಢ ಶುಕ್ರವಾರ ಆರಂಭ
ಜುಲೈ‌ 10 ಚಾಮುಂಡಿ ತಾಯಿಯ ವರ್ಧಂತಿ
ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಸಿದ್ಧತೆಗಳು ಆರಂಭ


ಜೂನ್ 23ರಿಂದ ಆಷಾಢ ಶುಕ್ರವಾರ ಆರಂಭಲವಾಗುತ್ತಿದೆ. ಆಷಾಢ ಮಾಸದ ಮೂರನೇ ಶುಕ್ರವಾರ ಅಂದರೆ ಜುಲೈ‌ 10 ಚಾಮುಂಡೇಶ್ವರಿ ತಾಯಿಯ ವರ್ಧಂತಿ ಉತ್ಸವ ಜರುಗಲಿದೆ. ಇದಕ್ಕಾಗಿ ಈಗಾಗಲೇ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಸಿದ್ಧತೆಗಳು ಆರಂಭವಾಗಿದೆ.
ಈ ಬಾರಿ ಆಷಾಢ ಶುಕ್ರವಾರದಂದು ಬೆಟ್ಟಕ್ಕೆ ತೆರಳಲು ಕೊಡುತ್ತಿದ್ದ ವಾಹನ ಪಾಸ್ ರದ್ದು ಮಾಡಲು ಮೈಸೂರು ಜಿಲ್ಲಾಡಳಿತ ಚಿಂತನೆ ನಡೆಸಿದೆ. ವಾಹನ ಪಾಸ್ ಗಳಿಂದ ಕಳೆದ ಭಾರಿ  ದೊಡ್ಡ ಮಟ್ಟದ ಗೊಂದಲ ಉಂಟಾಗಿತ್ತು. ಈ ಹಿನ್ನಲೆಯಲ್ಲಿ ಪಾಸ್ ರದ್ದತಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ ಮಹದೇವಪ್ಪ ನೇತೃತ್ವದ ಸಭೆಯಲ್ಲಿ ಗಂಭೀರ ಚರ್ಚೆ ನಡೆದಿದೆ. 

ನಾಡ ಅಧಿದೇವತೆ ಶ್ರೀ ಚಾಮುಂಡೇಶ್ವರಿಯು 'ದೇವಿ ಮಹಾತ್ಮೆ' ಪುರಾಣದ ಪ್ರಮುಖ ದೇವತೆಯಾಗಿದ್ದಾಳೆ. ಆಕೆ ಮಹಿಷಾಸುರನನ್ನು ಮರ್ಧಿಸಿದವಳು. ಯದು ಕುಲದ ದೇವತೆಯಾಗಿ ಬೆಳೆದು ಬಂದಿರುವ ಶ್ರೀ ಚಾಮುಂಡೇಶ್ವರಿ ಸನನ್ನಿಧಾನಕ್ಕೆ ಮೈಸೂರು ಅರಮನೆಯಿಂದ 13 ಕಿಲೋಮೀಟರ್ ದೂರ. 

Latest Videos

undefined

ಸತಿಯ ಕೇಶ ಬಿದ್ದ ಶಕ್ತಿಪೀಠ
ರಾಜ ದಕ್ಷನ ಮಗಳು, ಬ್ರಹ್ಮನ ಮೊಮ್ಮಗಳು ಸತಿ, ತನ್ನ ತಂದೆಯ ಇಚ್ಛೆಗೆ ವಿರುದ್ಧವಾಗಿ ಶಿವನನ್ನು ಮದುವೆಯಾದಳು. ಇದರಿಂದ ದಕ್ಷನಿಗೆ ಮಗಳ ಮೇಲೆ ಇನ್ನಿಲ್ಲದ ಕೋಪವಿತ್ತು. ಒಮ್ಮೆ ದಕ್ಷ ಪ್ರಜಾಪತಿಯು ದೊಡ್ಡ ಯಜ್ಞವನ್ನು ಏರ್ಪಡಿಸಿದನು. ಅದಕ್ಕೆ ಶಿವ ಸತಿಯ ಹೊರತಾಗಿ ಎಲ್ಲರಿಗೂ ಆಹ್ವಾನ ಹೋಯಿತು. ಈ ಸಂದರ್ಭದಲ್ಲಿ ಸತಿಗೂ ತವರಿನಲ್ಲಿ ನಡೆವ ಮಹಾಯಜ್ಞದಲ್ಲಿ ಭಾಗವಹಿಸುವ ಬಯಕೆಯಾಯಿತು ಶಿವನು ಎಷ್ಟೇ ಬೇಡವೆಂದರೂ ಕೇಳದೆ ಅವಳು ಯಜ್ಞದಲ್ಲಿ ಪಾಲ್ಗೊಳ್ಳಲು ಹೋದಳು. ಅಲ್ಲಿ ಆಕೆಯ ತಂದೆ ಅವಳನ್ನು ಹಾಗೂ ಅವಳ ಪತಿಯನ್ನು ಇನ್ನಿಲ್ಲದಂತೆ ಅವಮಾನಿಸಿದನು. ಅವಮಾನ, ಅಗೌರದಿಂದ ನೊಂದಳು. ತಂದೆಯಿಂದಾದ ನೋವಿಗೆ, ಪತಿಯ ಮಾತನ್ನು ಧಿಕ್ಕರಿಸಿದ ಕಾರಣಕ್ಕೆ ತನ್ನನ್ನು ತಾನೇ ದೂಷಿಸಿಕೊಂಡು ಬೆಂಕಿಗೆ ಜಿಗಿದಳು. 

ಬೆಳ್ಳುಳ್ಳಿಯ ಈ ಕ್ರಮಗಳು 5 ಪ್ರಮುಖ ಸಮಸ್ಯೆಗಳಿಂದ ನಿಮ್ಮನ್ನು ಬಚಾವ್ ಮಾಡುತ್ತವೆ!

ಸತಿಯ ಸಾವಿನ ಸುದ್ದಿ ಕೇಳಿ ಶಿವನು ಕೋಪದಿಂದ ಕೆಂಡಾಮಂಡಲನಾಗಿ ಆಕೆಯ ಸುಟ್ಟ ದೇಹವನ್ನು ಹೊತ್ತುಕೊಂಡು ತಾಂಡವ ನೃತ್ಯ ಪ್ರಾರಂಭಿಸಿದನು. ಶಿವ ತಾಂಡವ ಆಡಿದರೆ ವಿಶ್ವವೇ ವಿನಾಶವಾಗುತ್ತದೆ ಎಂದು ದೇವತೆಗಳು ಭಯ ಬಿದ್ದರು. ಶಿವನನ್ನು ಸಹಜ ಸ್ಥಿತಿಗೆ ಕರೆ ತರಲು ಕೋರಿ ವಿಷ್ಣುವಿಗೆ ಮನವಿ ಮಾಡಿದರು.

ಆಗ ಭಗವಾನ್ ವಿಷ್ಣುವು ಮಧ್ಯ ಪ್ರವೇಶಿಸಿ, ತನ್ನ ಚಕ್ರದಿಂದ ಸತಿಯ ದೇಹವನ್ನು ಅನೇಕ ತುಂಡುಗಳಾಗಿ ಕತ್ತರಿಸಿದನು. ಸತಿಯ ದೇಹದ ಭಾಗಗಳು ಭೂಮಿಯ ಮೇಲೆ ಹಲವಾರು ಸ್ಥಳಗಳಲ್ಲಿ ಬಿದ್ದವು. ಮತ್ತು ಆಕೆಯ ದೇಹದ ಭಾಗಗಳು ಎಲ್ಲೆಲ್ಲಿ ಬಿದ್ದವೋ, ಆ ಸ್ಥಳಗಳನ್ನು ಭಕ್ತರು ಶಕ್ತಿ ಪೀಠಗಳೆಂದು ಆರಾಧಿಸತೊಡಗಿದರು. 

ಚಾಮುಂಡೇಶ್ವರಿ ದೇವಸ್ಥಾನವು ಕೂಡಾ 18 ಮಹಾ ಶಕ್ತಿಪೀಠಗಳಲ್ಲಿ ಒಂದಾಗಿದೆ. ಕೋಪ ಮತ್ತು ಸಂಕಟದಿಂದ ಕೋಪಗೊಂಡ ಶಿವ ತನ್ನ ಸುಟ್ಟ ದೇಹವನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡಾಗ ಸತಿದೇವಿಯ ತಲೆ ಕೂದಲು ಇಲ್ಲಿ ಬಿದ್ದಿದೆ ಎಂದು ನಂಬಲಾಗಿದೆ. ಚಾಮುಂಡೇಶ್ವರಿ ದೇವಿ ಶಕ್ತಿಪೀಠವನ್ನು ಕ್ರೌಂಚ ಪೀಠ ಎಂದು ಕರೆಯಲಾಗುತ್ತದೆ. ಹಿಂದಿನ ಕಾಲದಲ್ಲಿ ಈ ಸ್ಥಳವನ್ನು ಕ್ರೌಂಚ ಪುರಿ ಎಂದು ಕರೆಯಲಾಗುತ್ತಿತ್ತು.

Vastu Tips: ಈ ಸ್ಥಳಗಳಲ್ಲಿ ಪೂಜಾ ಕೋಣೆ ನಿರ್ಮಿಸಿದ್ರೆ ಕುಟುಂಬಕ್ಕೆ ವಿಪತ್ತು ತಪ್ಪಿದ್ದಲ್ಲ!

ಚಾಮುಂಡೇಶ್ವರಿ ದೇವಾಲಯ
12 ನೇ ಶತಮಾನದಲ್ಲಿ ಹೊಯ್ಸಳ ದೊರೆಗಳು ಚಾಮುಂಡಿ ಬೆಟ್ಟದ ಮೇಲೆ ಚಾಮುಂಡೇಶ್ವರಿ ದೇವಾಲಯವನ್ನು ನಿರ್ಮಿಸಿದರು. ದೇವಾಲಯದ ವಾಸ್ತುಶಿಲ್ಪವು ದ್ರಾವಿಡ ಶೈಲಿಗೆ ಅನುಗುಣವಾಗಿದ್ದು,  ಚತುರ್ಭುಜ ಕಟ್ಟಡವನ್ನು ಹೊಂದಿದೆ. ಈ 3000 ಅಡಿ ಎತ್ತರದ ಬೆಟ್ಟ ತಲುಪಲು 1000 ಮೆಟ್ಟಿಲುಗಳಿವೆ. 700 ನೇ ಮೆಟ್ಟಿಲಲ್ಲಿ, ನೀವು ಶಿವ ದೇವಾಲಯದ ಮುಂಭಾಗದಲ್ಲಿ ನಂದಿಯನ್ನು ಕಾಣಬಹುದು. ಈ ನಂದಿಯ ಮೂರ್ತಿಯು ಭಾರತದಲ್ಲಿಯೇ ಅತಿ ದೊಡ್ಡ ನಂದಿಯಾಗಿದೆ. 

click me!