Sankashti Chaturthi 2023: ದಿನಾಂಕ, ಶುಭಮುಹೂರ್ತ, ಪೂಜಾ ವಿಧಾನ

By Suvarna NewsFirst Published Apr 8, 2023, 11:32 AM IST
Highlights

ಸಂಕಷ್ಟ ಚತುರ್ಥಿಯ ದಿನದಂದು ಗಣಪತಿಯನ್ನು ಪೂರ್ಣ ಭಕ್ತಿಯಿಂದ ಪೂಜಿಸಲಾಗುತ್ತದೆ. ಈ ದಿನ ಜನರು ತಮ್ಮ ದುಃಖಗಳನ್ನು ತೊಡೆದು ಹಾಕಲು ಗಣೇಶನನ್ನು ಪೂಜಿಸುತ್ತಾರೆ. ಏಪ್ರಿಲ್ ತಿಂಗಳ ಸಂಕಷ್ಟಿ ಮುಹೂರ್ತ, ಪೂಜಾ ವಿಧಾನ ಇಲ್ಲಿದೆ..

ಯಾವುದೇ ಶುಭ ಕಾರ್ಯದ ಮೊದಲು ಗಣಪತಿಯನ್ನು ಪೂಜಿಸಲಾಗುತ್ತದೆ. ಗಣಪತಿ ವಿಘ್ನ ನಿವಾರಕನಾಗಿದ್ದು, ಆತನನ್ನು ಮೊದಲು ಪೂಜಿಸುವುದರಿಂದ ಕಾರ್ಯಗಳಲ್ಲಿ ವಿಘ್ನಗಳು ಉಂಟಾಗುವುದಿಲ್ಲ ಎಂಬ ನಂಬಿಕೆ ಇದೆ. ಭಗವಾನ್ ಗಣೇಶನು ಬುದ್ಧಿವಂತಿಕೆ, ಶಕ್ತಿ ಮತ್ತು ವಿವೇಚನೆಯ ದೇವರು. ಸಂಕಷ್ಟಿ ಚತುರ್ಥಿ ಉಪವಾಸವು ಗಣೇಶನನ್ನು ಮೆಚ್ಚಿಸಲು ಬಹಳ ಉತ್ತಮ ವಿಧಾನವಾಗಿದ್ದು, ಈ ತಿಂಗಳ ಸಂಕಷ್ಟಿ ಚತುರ್ಥಿ ಏಪ್ರಿಲ್ 9ರಂದು ಬರಲಿದೆ. 

ಸಂಕಷ್ಟಿ ಚತುರ್ಥಿ ಎಂದರೆ ಬಿಕ್ಕಟ್ಟನ್ನು ಸೋಲಿಸುವ ಚತುರ್ಥಿ. ಈ ದಿನ ಜನರು ತಮ್ಮ ದುಃಖಗಳನ್ನು ತೊಡೆದು ಹಾಕಲು ಗಣಪತಿಯನ್ನು ಪೂರ್ಣ ಭಕ್ತಿಯಿಂದ ಪೂಜಿಸುತ್ತಾರೆ. ಪುರಾಣಗಳ ಪ್ರಕಾರ ಚತುರ್ಥಿಯ ದಿನದಂದು ಗಣಪತಿಯನ್ನು ಪೂಜಿಸುವುದು ಅತ್ಯಂತ ಫಲಪ್ರದವಾಗಿದೆ. ಈ ದಿನದಂದು ಜನರು ಸೂರ್ಯೋದಯದಿಂದ ಚಂದ್ರನ ಉದಯದವರೆಗೆ ಉಪವಾಸ ಮಾಡುತ್ತಾರೆ. ಸಂಕಷ್ಟಿ ಚತುರ್ಥಿಯ ದಿನದಂದು ಶುಭ ಮುಹೂರ್ತದಲ್ಲಿ ಪೂಜಿಸುವುದರಿಂದ ವಿಶೇಷ ಲಾಭ ದೊರೆಯುತ್ತದೆ.

Latest Videos

ಸಂಕಷ್ಟಿ ಚತುರ್ಥಿಯ ಶುಭ ಸಮಯ
ಗಣಪತಿ ಪೂಜೆ ಬೆಳಿಗ್ಗೆ ಮುಹೂರ್ತ - ಬೆಳಿಗ್ಗೆ 09:13 - ಬೆಳಿಗ್ಗೆ 10:48
ಗಣಪತಿ ಪೂಜೆ ಸಂಜೆ ಮುಹೂರ್ತ - ಸಂಜೆ 06.43 - ರಾತ್ರಿ 09.33
ಚಂದ್ರೋದಯ ಸಮಯ - ರಾತ್ರಿ 10.02

Guru Uday 2023: ಮೇಷದಲ್ಲಿ ಗುರು ಉದಯ; 5 ರಾಶಿಗಳ ಅಭ್ಯುದಯ

ಸಂಕಷ್ಟ ಚತುರ್ಥಿಯ ಪೂಜಾ ವಿಧಾನ
ಗಣಪತಿಯ ಮೇಲೆ ನಂಬಿಕೆಯುಳ್ಳವರು ಆತನನ್ನು ಮೆಚ್ಚಿಸಲು ಈ ದಿನ ಉಪವಾಸವನ್ನು ಮಾಡುತ್ತಾರೆ. ಈ ದಿನ ನೀವು ಸೂರ್ಯೋದಯಕ್ಕೆ ಮುಂಚಿತವಾಗಿ ಬೆಳಿಗ್ಗೆ ಬೇಗನೆ ಎದ್ದು ಸ್ನಾನ ಮಾಡಬೇಕು. ಈ ದಿನ ಕೆಂಪು ಬಣ್ಣದ ಬಟ್ಟೆಗಳನ್ನು ಧರಿಸುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಗಣಪತಿಯನ್ನು ಪೂಜಿಸುವಾಗ ನಿಮ್ಮ ಮುಖವನ್ನು ಪೂರ್ವ ಅಥವಾ ಉತ್ತರ ದಿಕ್ಕಿಗೆ ಇಡಬೇಕು. ಗಣಪತಿಯ ವಿಗ್ರಹವನ್ನು ಹೂವಿನಿಂದ ಚೆನ್ನಾಗಿ ಅಲಂಕರಿಸಿ. ಎಳ್ಳು, ಬೆಲ್ಲ, ಲಡ್ಡುಗಳು, ಹೂವುಗಳು, ನೀರು, ಧೂಪದ್ರವ್ಯ, ಶ್ರೀಗಂಧ ಮತ್ತು ಬಾಳೆಹಣ್ಣು ಅಥವಾ ತೆಂಗಿನಕಾಯಿಯನ್ನು ತಾಮ್ರದ ಪಾತ್ರೆಯಲ್ಲಿ ಪ್ರಸಾದವಾಗಿ ಇರಿಸಿ.

ಗಣಪತಿಗೆ ಹೂವುಗಳು ಮತ್ತು ನೀರನ್ನು ಅರ್ಪಿಸಿ. ಸಂಕಷ್ಟಿಯ ದಿನ ಗಣಪತಿಗೆ ಲಡ್ಡು, ಮೋದಕ ಅರ್ಪಿಸಿ. ಪೂಜೆಯ ನಂತರ ಹಣ್ಣುಗಳು, ಕಡಲೆಕಾಯಿ ಮಾತ್ರ ಸೇವಿಸಿ. ಸಂಜೆ ಚಂದ್ರೋದಯವಾಗುವ ಮೊದಲು ಗಣಪತಿಯನ್ನು ಪೂಜಿಸಿ ಸಂಕಷ್ಟ ವ್ರತ ಕಥಾ ಪಠಿಸಿ. ಪೂಜೆ ಮುಗಿದ ನಂತರ, ಪ್ರಸಾದವನ್ನು ವಿತರಿಸಿ ಮತ್ತು ರಾತ್ರಿ ಚಂದ್ರನನ್ನು ನೋಡಿದ ನಂತರ ನಿಮ್ಮ ಉಪವಾಸವನ್ನು ಮುರಿಯಿರಿ.

ಸಂಕಷ್ಟಿ ಚತುರ್ಥಿ ವ್ರತಕತೆ
ದಂತಕಥೆಯ ಪ್ರಕಾರ, ಒಮ್ಮೆ ದೊಡ್ಡ ಬಿಕ್ಕಟ್ಟು ಎಲ್ಲಾ ದೇವರು ಮತ್ತು ದೇವತೆಗಳ ಮೇಲೆ ಬಂದಿತು. ಆ ಬಿಕ್ಕಟ್ಟಿಗೆ ತಾವಾಗಿಯೇ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗದಿದ್ದಾಗ, ಶಿವನ ಮೊರೆ ಹೋಗಿ ಸಹಾಯ ಕೇಳಿದರು. ಬಿಕ್ಕಟ್ಟನ್ನು ಪರಿಹರಿಸಲು ಶಿವನು ಗಣೇಶ ಮತ್ತು ಕಾರ್ತಿಕೇಯರಿಗೆ ಜವಾಬ್ದಾರಿ ವಹಿಸಿದಾಗ ಇಬ್ಬರೂ ತಾನು ತಾನೆಂದು ಜಗಳವಾಡಿದರು. ಆಗ ಶಿವ ಈ ಭೂಮಿಯನ್ನು ಸುತ್ತಿದ ನಂತರ ಮೊದಲು ನನ್ನ ಬಳಿಗೆ ಬರುವವನು ಅದನ್ನು ಪರಿಹರಿಸುತ್ತಾನೆ ಎಂದ.

Marriage Mantra: ವಿವಾಹ ತಡವಾಗ್ತಿದೆಯಾ? ಶೀಘ್ರ ವಿವಾಹವಾಗಲು ಈ ಮಂತ್ರ ಹೇಳಿಕೊಳ್ಳಿ..

ತಡಮಾಡದೆ ಕಾರ್ತಿಕೇಯನು ತನ್ನ ವಾಹನವಾದ ನವಿಲಿನ ಮೇಲೆ ಸವಾರಿ ಮಾಡುತ್ತಾ ಭೂಮಿಯನ್ನು ಪ್ರದಕ್ಷಿಣೆ ಮಾಡಲು ಹೊರಟನು. ಆದರೆ ಗಣೇಶನ ವಾಹನ ಇಲಿಯಾಗಿತ್ತು. ಅದರಿಂದ ಭೂಮಿ ಸುತ್ತುವುದು ಸಾಧ್ಯವಿರಲಿಲ್ಲ.  ಹಾಗಾಗಿ, ಆತ ತನ್ನ ಪೋಷಕರಾದ ಶಿವ ಪಾರ್ವತಿಗೆ 7 ಸುತ್ತು ಬಂದನು. ಹೀಗೇಕೆ ಮಾಡಿದೆ ಎಂದು ಕೇಳಿದಾಗ, ಇಡೀ ಜಗತ್ತೇ ನೀವಿಬ್ಬರಲ್ಲವೇ ಎಂದನು. 
ಈ ಉತ್ತರವನ್ನು ಕೇಳಿ ಭಗವಾನ್ ಶಿವ ಮತ್ತು ತಾಯಿ ಪಾರ್ವತಿ ಬಹಳ ಸಂತೋಷಪಟ್ಟರು ಮತ್ತು ಅವರು ದೇವತೆಗಳ ಬಿಕ್ಕಟ್ಟನ್ನು ಹೋಗಲಾಡಿಸಲು ಗಣೇಶನನ್ನು ಆಯ್ಕೆ ಮಾಡಿದರು. ಇದರೊಂದಿಗೆ ಚತುರ್ಥಿಯ ದಿನದಂದು ಯಾರು ಗಣಪತಿಯನ್ನು ಪೂಜಿಸಿ ಚಂದ್ರನಿಗೆ ಜಲವನ್ನು ಅರ್ಪಿಸುತ್ತಾರೋ ಅವರ ಎಲ್ಲಾ ದುಃಖಗಳು ದೂರವಾಗುತ್ತವೆ ಎಂದು ಶಿವನು ಗಣೇಶನಿಗೆ ಅನುಗ್ರಹಿಸಿದನು. 

click me!